ಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡಬೇಕು: ಕೋಟ

ಬ್ರಹ್ಮಾವರ: ಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಈ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಬೇಕು. ಈ ಬಗ್ಗೆ ಸದನದಲ್ಲೇ ಮುಖ್ಯಮಂತ್ರಿಗಳ ಗಮನಸೆಳೆದಿದ್ದೇನೆ. ಅಗತ್ಯ ಸೌಕರ‍್ಯಗಳನ್ನು ನೀಡಿದರೆ ಸರಕಾರಿ ಶಾಲೆಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಜ.೫ರಂದು ನಡೆದ ಸಾಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು,
ನಿವೃತ್ತ ಯೋಧ ವಿಜಯ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೀನ (ಜೋಜ ಪಾಣ) ನಿವೃತ್ತ ಶಿಕ್ಷಕಿ ಭವಾನಿ, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ ಶ್ರೀನಿವಾಸ್, ನಿಖಿತಾ ಅವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.

ದಾನಿಗಳಾದ ಅಶೋಕ್ ಕಿಣಿಯವರ ಸಹಕಾರದಲ್ಲಿ ನಿರ್ಮಿಸಿದ ಶಾಲೆ ಊಟದ ಸಭಾಂಗಣವನ್ನು ಉದ್ಯಮಿ ಎಂ. ಉಪೇಂದ್ರ ಕಿಣಿ ಉದ್ಘಾಟಿಸಿದರು. ಗರಿಕೆಮಠ ಅರ್ಕಗಣಪತಿ ಕ್ಷೇತ್ರದ ಮುಖ್ಯಸ್ಥ ವೇ| ಮೂ| ರಾಮಪ್ರಸಾದ್ ಅಡಿಗ ಆಶೀವರ್ಚನ ನೀಡಿದರು ಹಾಗೂ ಜಿ.ಪಂ. ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೆಳಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಕೀಲ ಜಯಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಭಾಸ್ಕರ್ ಆಚಾರ್ಯ ಧ್ವಜಾರೋಹಣಗೈದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಪ್ರಭು ಸಾಬ್ರಕಟ್ಟೆ, ತಾ. ಪಂ. ಸದಸ್ಯ ಅರುಣ್ ನಾಯ್ಕ್, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಶಿರಿಯಾರ ಗ್ರಾ.ಪಂ. ಅಧ್ಯಕ್ಷೆ ವಿಶಾಲ, ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ನಾರಾಯಣ ಶೆಟ್ಟಿ, ಉಡುಪಿ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ನಿರಂಜನ್ ಹೆಗ್ಡೆ ಅಲ್ತಾರು, ಶಿರಿಯಾರ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್, ಉದ್ಯಮಿ ಸಂಕಯ್ಯ ಶೆಟ್ಟಿ, ಉದ್ಯಮಿ ಬೆರ್ಮಯ್ಯ, ವಕೀಲರಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ರಮಾನಂದ ಆಚಾರ‍್ಯ, ರವೀಂದ್ರನಾಥ ಕಿಣಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಭಾಸ್ಕರ್ ಆಚಾರ‍್ಯ, ವಿದ್ಯಾರ್ಥಿ ನಾಯಕ ಪ್ರವೀಣ್, ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ದೈ.ಶಿ.ಶಿಕ್ಷಕ ಗಜೇಂದ್ರ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Comment