ಯಾಕೋ ಹಾಗನ್ನಿಸಿ ಬಿಟ್ಟಿದೆ ಇತ್ತೀಚೆಗೆ ಬರಹ ಬತ್ತಿ ಹೋಗಿದೆ ಅನ್ನಿಸಿದೆ.!.ಏನು ಬರೆಯಲು ಹೊರಟರೂ ಮನಸ್ಸು ಕೈ ಕೊಡುತ್ತದೆ. ಹಳೆ ದಿನಗಳಪ್ರೇಯಸಿಯರ ನೆನಪಿಸಿಕೊಂಡು ಕವಿತೆ ಬರೆಯಲು ಹೊರಟರೂ ನನಗದನ್ನು ಬರೆಯಲಾಗದು. ! ಬರಹವೇ ಹಾಗೆ ಬರೆಯುವ ಲಿಂಕ್ ತಪ್ಪಿಹೋಯಿತೆಂದರೆ ನಾನು ಅಪ್ಪನಾಣೆಗೂ ಒಂದಕ್ಷರವನ್ನೂಬರೆಯುವುದಿಲ್ಲ. ನೀವು ಬೇಕಾದರೆ ನನ್ನನ್ನ ಮೂಡಿ ಎಂದು ಕರೆಯಿರಿ ಆದರೆ ನಾನು ಈ ಮೂಡ್ ಗಳನ್ನೆಲ್ಲ ನಂಬುವುದಿಲ್ಲವಾದರೂ ಒಂದೊಂದು ಸಾರಿ ಎಲ್ಲಾ ಬಿಟ್ಟು ಎಲ್ಲಾದರು ದೂರದೂರಿಗೆ ಹೋಗಿಯಾರಿಗೂ ಗೊತ್ತಿಲ್ಲದಂತೆ ಇದ್ದು ಬಿಡಬೇಕು.. ಪರಿಚಿತರೆ ಇಲ್ಲದ ಅಪರಿಚಿತ ನಗರದ ಬೃಹತ್ ಹೆದ್ದಾರಿಗಳಲ್ಲಿ ಅನಾಥನಂತೆ ಅಲೆಯಬೇಕು ಅಂತನ್ನಿಸುತ್ತದೆ.. ಅದೆಲ್ಲಿಯದೋ ಕ್ಯಾಂಟೀನಿನ ಬನ್ನು,ಟಿ.. ಇನ್ನೆಲ್ಲಿಯದ್ದೋ ಚಿತ್ರಾನ್ನ ಮತ್ತೆ ಸಂಜೆಗೊಂದಷ್ಟು ಅನ್ನ ಸಾಂಬರ್.. ಇಷ್ಟಿದ್ದು ಬಿಟ್ಟರೆ ಸಾಕು ನನ್ನ ಬದುಕು ಹೂವಿನ ಹೆದ್ದಾರಿ.. ಕಳೆದು ಹೋದ ಹುಡುಗಿಗೆ ಪ್ರೇಮ ಪತ್ರವನ್ನ ಬರೆದು, ಗೊತ್ತಿಲ್ಲದ ವಿಳಾಸವನ್ನ ಹಾಗೆ ಕಾಲಿಬಿಟ್ಟು, ಕೆಂಪು ಅಂಚೆ ಡಬ್ಬಿಗೆ…
Read MoreDay: January 8, 2019
ವಿಶೇಷ ಮಕ್ಕಳಿಗೆ ನವಧಾನ್ಯ
ಕೋಟ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ್ ಸಿ ಕುಂದರ್ ಅವರ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ನಡೆಸಿದ ನವಧಾನ್ಯ ತುಲಾಭಾರದ ನವಧಾನ್ಯವನ್ನು ವಿಶೇಷ ಮಕ್ಕಳ ಶಾಲೆ ಮಾನಸ ಜ್ಯೋತಿ -ಕೋಣಿ ಕುಂದಾಪುರ ಇಲ್ಲಿಗೆ ಹಸ್ತಾಂತರಿಸಲಾಯಿತು.
Read Moreಪಾಂಡೇಶ್ವರದ ಸಾಂಪ್ರದಾಯಿಕ ಕೃಷಿ ಸಂತ – ಮೋಹನ್ ಪೂಜಾರಿ
ನಮ್ಮೂರು ಸಾಸ್ತಾನ.. ಈ ಸಾಸ್ತಾನ ಸಾಧಕರನ್ನು ಹಾಗೂ ಉದ್ಯಮಿ, ಕೃಷಿಕರನ್ನು ಸೃಷ್ಟಿಸಿದ ಊರು . ಇಂದಿನ ಅಂಕಣ ದಲ್ಲಿ ನಮ್ಮೂರಿನ ಪಾಂಡೇಶ್ವರ ಸಾಸ್ತಾನ ದ ಮೂಡಹಡು ಗ್ರಾಮದ ಪ್ರಗತಿಪರ ಸಾಂಪ್ರದಾಯಿಕ ಕೃಷಿಕ ಮೋಹನ ಪೂಜಾರಿಯವರ ಕುರಿತು ಬರೆಯುತ್ತಿದ್ದೇನೆ. ಮೂಡಹಡು ಪರಿಸರದ ಬಡ ಕುಟುಂಬದ ದಂಪತಿಗಳಾದ ಬಡಿಯ ಹಾಗೂ ಸರ್ವ ಪೂಜಾರ್ತಿಯ ದ್ವಿತೀಯ ಪುತ್ರನಾಗಿ ಜನಿಸಿದ ಇವರು ಮೂಲ ಶಿಕ್ಷಣ ವನ್ನು ಮೂಡಹಡು 3ನೇ ತರಗತಿ ತನಕ ಓದಿದರು.. ಮತ್ತೆ ಹೋಗಿದ್ದು ತಂದೆಯ ಜೊತೆಗೆ ಗದ್ದೆಯಲ್ಲಿ ಕೃಷಿಗೆ. ಆ ಕಾಲದಲ್ಲಿ ತೀರ ಬಡತನವಾದ ಕುಟುಂಬ ಅವಲಂಬಿಸಿದ್ದು ಕೃಷಿ ಯನ್ನ. ಮೂರನೇ ಕ್ಲಾಸಿಗೆ ಶಾಲೆ ಬಿಟ್ಟ ಮೋಹನ, ತಂದೆಯ ಎರಡು ಮುದ್ದಾದ ಕೋಣಗಳ ಲಾಲನೆ ಪೋಷಣೆ ಜತೆ ತಂದೆಯೊಂದಿಗೆ ದುಡಿದರು. ಅಂದಿನಿಂದಲೂ ಇಂದಿನವರೆಗೂ ಸಾಂಪ್ರದಾಯಿಕ ಕೃಷಿಕನಾಗಿ ಬೆಳೆದುಬಂದವವರು ಮೋಹನ್ ಪೂಜಾರಿ. ಎಲ್ಲ ಕೃಷಿಯ ಗದ್ದೆಗಳ ದಶ ದಿಕ್ಕುಗಳಲ್ಲಿ ವೈಜ್ಞಾನಿಕ…
Read Moreಒಮ್ಮೊಮ್ಮೆ ಸೋತು ಬಿಡುತ್ತೇನೆ
ಈಗೆಲ್ಲ ನಾನು ಸೋತುಬಿಡುವುದನ್ನು ಕಲಿತಿದ್ದೇನೆ ಗೆದ್ದೇನು ಮಾಡಲಿ ಹೇಳಿ..? ಗೆಲ್ಲುವ ಅವಕಾಶಗಳೆಲ್ಲವೂ ನನ್ನೆಡೆಗೇ ಇದ್ದರೂ ಗೆಲುವು ಬೇಕೆನಿಸುವುದೇ ಇಲ್ಲ ಈ ಸೋಲು ಹಾಯಾಗಿದೆ.. ಸುಮ್ಮನೆ ಸೋತುಬಿಡುತ್ತೇನೆ.. ಯಾರಿಗೂ ಹೇಳಬೇಡಿ. ಮೊದಲೆಲ್ಲ ಭಾರಿ ಪೈಪೋಟಿಗಿಳಿಯುವುದಿದ್ದಿತ್ತು.. ಗೆಲ್ಲಲೇಬೇಕೆಂಬ ಹಟವೊಂದು ಮನದಲ್ಲಿ ಮನೆಮಾಡಿತ್ತು.. ಈಗ ಕೇಳಿ..ಕಾಲ ಬದಲಾಗಿದೆ ಎಂಬ ಉವಾಚ. ಹೌದು, ಇಷ್ಟಕ್ಕೂ ಗೆದ್ದೇನು ಮಾಡುವುದು ಹೇಳಿ..? ಈ ಸೋಲು ಹಾಯಾಗಿದೆ.. ಸುಮ್ಮನೆ ಸೋತುಬಿಡುತ್ತೇನೆ.. ಯಾರಿಗೂ ಹೇಳಬೇಡಿ. ಈ ಬದುಕ ಸತತ ಹೋರಾಟದಲ್ಲಿ ಗೆದ್ದವರೂ ಸೋತರು ಹಾಗೂ ಸೋತವರೂ ಗೆದ್ದರು.. ಮತ್ತದೇ ಕಾಲನ ಉವಾಚ, ಕೇಳಿ.. ಸೋತುಬಿಡುವುದರಲ್ಲಿದ್ದಷ್ಟು ಖುಷಿ ಗೆದ್ದಾಗ ಸಿಗುತ್ತಿಲ್ಲ..ಕೇಳಿ ಇಲ್ಲಿ ಕೇಳಿ ಒಮ್ಮೆ..ಈ ಸೋಲು ಹಾಯಾಗಿದೆ.. ಸುಮ್ಮನೆ ಸೋತುಬಿಡುತ್ತೇನೆ.. ಯಾರಿಗೂ ಹೇಳಬೇಡಿ. ಬದುಕ ಓಟದಲ್ಲಿ ಗೆದ್ದವರ ಹಿಂದೆ ಎಲ್ಲರೂ ಇರುವಾಗ ಸೋತವರದು ಎಂದಿಗೂ ಏಕಾಂಗಿ ಬದುಕೇ ಈ ಏಕಾಂಗಿತನ ಯಾಕೋ ಇತ್ತೀಚೆಗೆ ಇಷ್ಟ ಸೋತ ಬದುಕ ಗಮನಿಸುವವರೇ ಇಲ್ಲದೆ…
Read Moreಇಂತಹ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪದೇ ಮಿಸ್ ಮಾಡದೇ ಸೇವಿಸಿ
ಚಳಿಗಾಲ ಬಂತೆಂದರೆ ಕೆಲವು ಖರ್ಚುಗಳು ಅರಿವಿಲ್ಲದೇ ಬರುತ್ತವೆ. ಚಳಿಗಾಲದ ಬಟ್ಟೆಗಳ ಜೊತೆಗೇ ಕೋಣೆಯನ್ನು ಬಿಸಿಯಾಗಿಸಲು ಬಳಸುವ ಹೀಟರ್ ನಿಂದಾಗಿ ವಿದ್ಯುತ್ ವೆಚ್ಚ ಬೇರೆ! ಇದೇ ರೀತಿಯಾಗಿ ನಮ್ಮ ದೇಹವೂ ಚಲಿಗಾಲದಲ್ಲಿ ಕೆಲವಾರು ಬದಲಾವಣೆಗೊಳಪಡುತ್ತದೆ. ವಿಶೇಷವಾಗಿ ಚಳಿಯನ್ನು ಎದುರಿಸಲು ದೇಹದ ತಾಪಮಾನವನ್ನೂ ಏರಿಸಲು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಬೇಕಾಗುತ್ತದೆ ಹಾಗೂ ನಮಗೆ ಈ ಸಮಯದಲ್ಲಿ ಕೆಲವು ವಿಶೇಷ ಆಹಾರಗಳನ್ನೂ ಸೇವಿಸಲು ಮನಸ್ಸಾಗುತ್ತದೆ. ಕೊರೆಯುವ ಚಳಿಯಲ್ಲಿ ಬೆಳಗ್ಗೆದ್ದು ವ್ಯಾಯಾಮ ಮಾಡಲು ಯಾರಿಗಾದರೂ ಮನಸ್ಸಾಗುತ್ತದೆ? ಬೆಚ್ಚನೆ ಹೊದ್ದು ತಡವಾಗಿ ಏಳುವುದನ್ನೇ ಎಲ್ಲರೂ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ವ್ಯಾಯಾಮ ಆಟೋಟಗಳಿಗೆ ರಜೆ ಬೀಳುವ ಜೊತೆಗೇ ಅನಾರೋಗ್ಯಕರ ಆಹಾರದತ್ತ ಒಲವು ತೋರುವುದು ಸಹಾ ಕೆಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಬೇಸಿಗೆ ಬಂತೆಂದರೆ ಐಸ್ ಕ್ರೀಂ ತಿನ್ನುವುದು ಇಷ್ಟವಾದರೂ ಇದನ್ನು ಹೆಚ್ಚಾಗಿ ತಿನ್ನಬಾರದು, ಅಂತೆಯೇ ಚಳಿಗಾಲದಲ್ಲಿಯೂ ಮನಸ್ಸಾದ ಎಲ್ಲಾ ಆಹಾರಗಳನ್ನು, ಉದಾಹರಣೆಗೆ ಬಿಸಿ ಚಾಕಲೇಟ್ ಅಥವಾ ಕುಕ್ಕೀಸ್ ತಿನ್ನುವ…
Read Moreಲವ್ ಕಾಲಂ…
ಪ್ರೀತಿ ಹುಡುಗಿ, ಜಗತ್ತಿಗೆ ರಜೆಯಿದೆ ಎನ್ನುವಷ್ಟು ನನ್ನನ್ನಾವರಿಸುತ್ತಿದ್ದ ನಿದ್ರೆ ನೀ ವಾಕಿಂಗು ಬರುತ್ತೀ ಎಂದು ತಿಳಿದ ತರುವಾಯ ರಜಾ ಹಾಕಿ ಹೊರಟು ಹೋಯಿತು ..!! ಅದು ಅರ್ಜಿ ಕೊಟ್ಟು ರಜೆಯ ಮಂಜೂರು ಮಾಡಿಸಿಕೊಳ್ಳುವ ಕಾಮನ್ ಸೆನ್ಸು ಕೂಡ ತೋರಿಸಲಿಲ್ಲ..!! ನಿದಿರೆ ಎಂಬುದು ಹಾಗೆ ಹೊರುಟು ಹೋದುದಕ್ಕೊ ಏನೋ,ಇದೀಗ ನನ್ನ ಮುಂಜಾವುಗಳು ಬೇಗನೆ ತೆರದು ಕೊಳ್ಳುತ್ತವೆ, ಬ್ರಿಡ್ಜು ಸುವರ್ಣೆಯ ಮೇಲೆ ಉದ್ದಕ್ಕೂ ಹಾದು ಹೋದ ದಾರಿಯಲ್ಲಿ ಚುಮು ಚುಮು ಚಳಿಯೊಂದಿಗೆ ಮೆಲ್ಲಗೆ ವಾಕಿಂಗು ಹೊರಡುತ್ತೇನೆ, ಕಡುಕಪ್ಪು ಸ್ವೆಟರ್ರು ತಲೆಗೊಂದು ಮಂಕಿ ಕ್ಯಾಪು ಸಿಕ್ಕಿಸಿಕೊಂಡು ದಡಬಡಿಸಿಕೊಂಡು ನೀನು ಬರುತ್ತಿದ್ದರೆ ನನ್ನವೂ ಹೆಜ್ಜೆಗಳು ಕಳ್ಳ ಬೀಳುತ್ತವೆ, ಹೆಣ್ಣೇ ನೀನು ಥೇಟು ಕಿರಿಕ್ ಪಾರ್ಟಿಯ ರಶ್ಮಿಕಾ!! ನಾನು ಕರ್ಣ!! ಆ ರಭಸದ ನಡಿಗೆಯ ಎದುರುಸಿರಿನ ನಡುವೆಯೂ ಸಿಂಗಲ್ ನಗುವ ಬಿಸಾಕುವ ದಯೆ ತೋರಿಸದೇ ಹೊರಟು ಹೋಗುವ ನಿನ್ನ ಅಹಂಕಾರವೇ ನನ್ನ ಮೊದಲ ಶತ್ರು…
Read Moreಬಂದ್ ಕುರಿತು ಅಂಗಡಿ ಮಾಲೀಕನ ಪ್ರತಿಕ್ರಿಯೇ ಈಗ ವೈರಲ್
ಕುಂದಾಪುರ: ಕಾರ್ಮಿಕ ಸಂಘಟನೆಗಳ ಒಕ್ಕೂಟ ಭಾರತ ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ, ಬಲವಂತವಾಗಿ ಅಂಗಡಿಯನ್ನು ಬಂದ್ ಮಾಡುವಂತೆ ಮುಂದಾದಾಗ ಗುಜ್ಜಾಡಿಯ ವ್ಯಾಪಾರಿಯೊಬ್ಬರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ Created by Codegena.
Read Moreಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಇಂಗ್ಲಿಷ್ ಶಿಕ್ಷಣಕ್ಕೆ ಒತ್ತು ನೀಡಬೇಕು: ಕೋಟ
ಬ್ರಹ್ಮಾವರ: ಕನ್ನಡ ಶಾಲೆಗಳಿಗೆ ಬಲ ನೀಡಬೇಕಾದರೆ ಈ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಬೇಕು. ಈ ಬಗ್ಗೆ ಸದನದಲ್ಲೇ ಮುಖ್ಯಮಂತ್ರಿಗಳ ಗಮನಸೆಳೆದಿದ್ದೇನೆ. ಅಗತ್ಯ ಸೌಕರ್ಯಗಳನ್ನು ನೀಡಿದರೆ ಸರಕಾರಿ ಶಾಲೆಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಜ.೫ರಂದು ನಡೆದ ಸಾಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು, ನಿವೃತ್ತ ಯೋಧ ವಿಜಯ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೀನ (ಜೋಜ ಪಾಣ) ನಿವೃತ್ತ ಶಿಕ್ಷಕಿ ಭವಾನಿ, ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆಗಳಾದ ಶ್ರೀನಿವಾಸ್, ನಿಖಿತಾ ಅವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ದಾನಿಗಳಾದ ಅಶೋಕ್ ಕಿಣಿಯವರ ಸಹಕಾರದಲ್ಲಿ ನಿರ್ಮಿಸಿದ ಶಾಲೆ ಊಟದ ಸಭಾಂಗಣವನ್ನು ಉದ್ಯಮಿ ಎಂ. ಉಪೇಂದ್ರ ಕಿಣಿ ಉದ್ಘಾಟಿಸಿದರು. ಗರಿಕೆಮಠ ಅರ್ಕಗಣಪತಿ ಕ್ಷೇತ್ರದ ಮುಖ್ಯಸ್ಥ ವೇ| ಮೂ| ರಾಮಪ್ರಸಾದ್ ಅಡಿಗ ಆಶೀವರ್ಚನ ನೀಡಿದರು ಹಾಗೂ ಜಿ.ಪಂ.…
Read Moreವಿರೋಧ ಪಕ್ಷ ಕೂಡ ಸರಕಾರದ ಭಾಗವೇ: ಕೋಟ
ಬ್ರಹ್ಮಾವರ: ಸರಕಾರ ಎಂದರೆ ಆಡಳಿತ ಪಕ್ಷ ಮಾತ್ರವಲ್ಲ ವಿರೋಧ ಪಕ್ಷ ಕೂಡ ಸರಕಾರದ ಭಾಗವೇ. ಜನರಿಂದ ಆಯ್ಕೆಯಾದ ಎಲ್ಲ ಜನಪ್ರತಿನಿಗಳು ಕೂಡ ಸರಕಾರದ ಭಾಗವಾಗುತ್ತಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಸಾಬ್ರಕಟ್ಟೆಯಲ್ಲಿ ಡಿಸಿಸಿ ಬ್ಯಾಂಕ್ನ ಸ್ಥಳಾಂತರಗೊಂಡ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ಸರಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಿದಾಗ ಹಲವಾರು ಮಂದಿ ಹಲವು ಮಾತುಗಳನ್ನು ಆಡಿದ್ದರು. ಆದರೆ ನಾನು ಅಂದಿನ ಮುಖ್ಯಮಂತ್ರಿಯನ್ನು ಅಭಿನಂದಿಸಿದ್ದೆ. ಏಕೆಂದರೆ ರಾಜ್ಯದ ಹಲವು ಭಾಗದಲ್ಲಿ ಇಂದಿಗೂ ತುತ್ತು ಅನ್ನಕ್ಕೆ ಪರದಾಡುವ ಮಂದಿ ಇದ್ದಾರೆ. ಈ ಯೋಜನೆ ಹಲವು ಮಂದಿಯ ಹಸಿವನ್ನು ತಣಿಸುತ್ತದೆ ಎಂದು ಅಭಿನಂದಿಸಿದೆ. ಆದರೆ ಅನುಷ್ಠಾನದಲ್ಲಿ ಆಗುವ ಲೋಪವನ್ನು ವಿರೋಧ ಪಕ್ಷವಾಗಿ ನಾವು ಕಣ್ಗಾವಲನ್ನೂ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆ. ಕ್ರಾಂತಿಕಾರಿ ಯೋಜನೆಗಳು ಎಲ್ಲ ಸರಕಾರಗಳು ಜಾರಿಗೆ ತಂದಿದೆ. ಆದರೆ ದೇಶದ ೨೦ರಷ್ಟು ಮಂದಿಗೆ ಸರಿಯಾದ ಸೂರಿಲ್ಲ, ೩೦…
Read Moreಹೃಷಿಕೇಷ ಬಾಯಿರಿಗೆ ಸಮ್ಮಾನ
ಬ್ರಹ್ಮಾವರ : ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ವತಿಯಿಂದ ವೇ.ಮೂ ಹ್ರಷೀಕೇಶ ಬಾಯಿರಿ ಇವರನ್ನು ಗೌರವಿಸಲಾಯಿತು. ದೇವಸ್ಥಾನದ ಅರ್ಚಕ ಅನಂತಪದ್ಮನಾಭ, ಪುತ್ತೂರು ವಿವೇಕಾನಂದ ತಾಂತ್ರಿಕ ವಿದ್ಯಾಲಯದ ಪ್ರೋ. ಚಂದ್ರಕುಮಾರ, ಸಾಲಿಗ್ರಾಮ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್, ಬಿ. ಸೀತಾರಾಮ ಶಾಸ್ತ್ರಿ ಉಪಸ್ಥಿತರಿದ್ದರು.
Read More