ಕರ್ನಾಟಕ ಸಿಂಗಮ್ ರವಿ ಚನ್ನಣ್ಣನವರ್ ಮೂಡುಗಿಳಿಯಾರಿಗೆ . . .!!!

ರವಿ ಚನ್ನಣ್ಣನವರ್ IPS. ಬೆಂಗಳೂರಿನಲ್ಲೀಗ ಅವರು DCP. ಅವರು ಕರ್ನಾಟಕದ ಮತ್ತೊಬ್ಬ ಸಿಂಗಮ್! ಲಕ್ಷಾಂತರ ಜನರ ಬದುಕಿನಲ್ಲಿ ಪ್ರೇರಣೆಯನ್ನ ಉಂಟು ಮಾಡಿದ ಮಹಾನ್ ಮಾತಿನ ಮಾಂತ್ರಿಕ.. ಅಷ್ಟು ಎತ್ತರದ ಹುದ್ದೆಯಲ್ಲಿರುವ ವ್ಯಕ್ತಿ ಆಪಾಟಿ ಅಭಿಮಾನಿಗಳನ್ನ ಹೊಂದಿರುವ ವ್ಯಕ್ತಿ ಅಷ್ಟೊಂದು ಸರಳತೆಯಲ್ಲಿದ್ದಾರೆ ಎಂದರೆ ನನಗಂತೂ ನಂಬಲಾಗಲಿಲ್ಲ! ಈಗಷ್ಟೇ ನಾನು ಮತ್ತು ಗೆಳೆಯ ಹರ್ಷವರ್ಧನ ಶೆಟ್ಟರು ಚನ್ನಣ್ಣನವರನ್ನ ಭೇಟಿ ಮಾಡಿ ಬಂದೆವು.. ಮಾರ್ಚ್ ತಿಂಗಳ 23ನೇ ತಾರೀಕಿನಂದು ಚನ್ನಣ್ಣನವರ್ ಮೂಡುಗಿಳಿಯಾರಿನ “ಅಭಿಮತ ಸಂಭ್ರಮ” ವೇದಿಕೆಯಲ್ಲಿರುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೇ ಚನ್ನಣ್ಣನವರ್ ಮೊತ್ತ ಮೊದಲ ಸಾರಿ ಆಗಮಿಸಲಿದ್ದಾರೆ.. ಅವತ್ತು ಇಡೀ ಗಿಳಿಯಾರು ಸಂಭ್ರಮದಲ್ಲಿರುತ್ತದೆ.. ಇನ್ನಷ್ಟು ವಿವರಗಳನ್ನ ಮತ್ತೆ ನೀಡಲಿದ್ದೇವೆ.. ಇನ್ನು ನೀವೆಲ್ಲ ಬಂದೇ ಬರುತ್ತೀರಿ ಎನ್ನುವ ಖಾತ್ರಿ ನಮಗೆಲ್ಲರಿಗೂ ಇದ್ದೇ ಇದೆ..“ಬನ್ನಿ ಗಿಳಿಯಾರಿಗೆ; ತೀರ ನಿಮ್ಮದೆನಿಸುವ ಊರಿಗೆ!” -ಟೀಮ್ ಅಭಿಮತ

Read More