ಈ ನೆಲದ ಆಧ್ಯಾತ್ಮ ಇಡೀ ಜಗತ್ತಿಗೆ ಧಾರೆಯೂ ದಾರಿಯೂ ಆದದ್ದು..

ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ಒಂದಷ್ಟು ಪುಸ್ತಕವನ್ನ ಬಿಟ್ಟೂ ಬಿಡದೆ ಓದುತ್ತಿದ್ದೇನೆ.. ತೀರ್ಥರಾಮ ವಳಲಂಬೆ ಬರೆದಿರುವ ಅವಿಷ್ಟೂ ಪುಸ್ತಕಗಳು ಹೊಸ ಹೊಳಹಿನೊಂದಿಗೆ ಆಧ್ಯಾತ್ಮಿಕ ಜಗಕ್ಕೆ ಪ್ರವೇಶವನ್ನ ಕೊಡುತ್ತದೆ..  ನಿನ್ನೆಯಷ್ಟೇ  ’ದಿ ಹಾರ್ಟ್ ಫುಲ್ ನೆಸ್ ವೇ ’ ನನ್ನ ಬಂದು ತಲುಪಿದೆ.. ಹಿಮಾಲಯದ ಗುರುವಿನ ಗರಡಿಯಲ್ಲಿ, ಯೋಗಿಯ ಆತ್ಮಕಥೆ, ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ನಾನಿನ್ನೂ ಓದಿರಲೇ ಇಲ್ಲ! ಈ ನಡುವೆ ಒಕಾವ ಬರೆಯುವ ಪುಸ್ತಕಗಳು ಇಷ್ಟವಾಗುತ್ತಿವೆ.. ನಿಮಗೆ ಓಂ ಸ್ವಾಮಿ ಗೊತ್ತಿರಲಿಕ್ಕೆ ಸಾಕು ಅವರ ಪುಸ್ತಕಗಳು, ರೇಣು ಮಹತಾನಿಯ ಪುಸ್ತಕ ಹೀಗೆ ನನ್ನ ಆಸಕ್ತಿ ಆಧ್ಯಾತ್ಮಿಕವಾಗಿ ಬದಲಾಗುತ್ತಿದೆ. ಮೊದಲಿಂದಲೂ ನಾನು ಆ ಬಗ್ಗೆ ಆಸಕ್ತನೇ.. ಕೆಲವು ಮಂತ್ರಗಳ ಬಗ್ಗೆಲ್ಲ ಭ್ರಮೆಗಳಿದ್ದಿದ್ದವು. ಆದರೆ ಮಂತ್ರಗಳೂ ಅದರದ್ದೇ ಆದ ಸ್ವರ ತರಂಗಗಳ ಮೂಲಕ ಪಠಿಸಿದರೆ ನಿಜಕ್ಕೂ ಅದ್ಭುತ ಪ್ರಭಾವಗಳನ್ನ ಬೀರಲಿವೆ..  ಹಿಂದೆದೋ ವೇದ ಹೇಳಿದ್ದನ್ನ ಇಂದು ಸೈಂಟಿಸ್ಟುಗಳು ಹೇಳುತ್ತಿದ್ದಾರೆ.. ವಿಷ್ಣು ಸಹಸ್ರನಾಮವನ್ನ ಸರಿಯಾಗಿ ಹೇಳಿದರೆ ಎಂಥಾ ರೋಗವನ್ನ ಬೇಕಿದ್ದರೂ ಗುಣಪಡಿಸಿಕೊಳ್ಳಬಹುದು ಎನ್ನುವುದಕ್ಕೆ…

Read More

ಉಮೇಶ್ ಶೆಟ್ಟಿ ಕಲ್ಗದ್ದೆಗೆ ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನ ಸಾಧ್ಯತೆ…

ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಎರಡೂವರೆ ವರ್ಷದ ಅವಧಿ ಈಗಾಗಲೇ ಮುಗಿದಿದ್ದು ಈ ಹಿಂದೆ ಅಧ್ಯಕ್ಷರಾಗಿದ್ದ ಜಯಶ್ರೀ ಮತ್ತು ಉಪಾಧ್ಯಕ್ಷರಾಗಿದ್ದ ಪ್ರವೀಣ್ ಶೆಟ್ಟಿ ತಮ್ಮ ಹುದ್ದೆಗೆ ರಾಜಿನಾಮೆಯನ್ನ ಕೊಟ್ಟಾಗಿದೆ. ಇನ್ನು ಮುಂದಿನ ಎರಡೂವರೆ ವರ್ಷದ ಅವಧಿಗೆ ಕೋಟೇಶ್ವರದ ರೂಪ ಪೈ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣದ ಉಮೇಶ್ ಶೆಟ್ಟಿ ಕಲ್ಗದ್ದೆ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.. ಉಮೇಶ್ ಶೆಟ್ಟಿ ಕಲ್ಗದ್ದೆ ರಾಜಕೀಯವಾಗಿಯೂ, ಸಾಮಾಜಿಕವಾಗಿಯೂ ಅತ್ಯಂತ ಕ್ರಿಯಾಶೀಲ ಯುವರಾಜಕಾರಣಿಯಾಗಿದ್ದು ತೀರ ಇತ್ತೀಚೆಗಷ್ಟೇ ಶಂಕರನಾರಾಯಣದ ಅತ್ಯಂತ ಬಡ ಮಹಿಳೆ ಸಾಂತು ಬಾಯಿಗೆ ಸೂರು ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಪಬ್ಲಿಕ್ ಹೀರೋ ಅಂತಲೇ ಗುರುತಿಸಿಕೊಂಡವರು.  ಇದರ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಉಮೇಶ್ ಶೆಟ್ಟರು ’ಶಾಸಕರಾದ ಬಿ.ಎಮ್. ಸುಕುಮಾರ್ ಶೆಟ್ಟರ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟರ ನಿರ್ದೇಶನಕ್ಕೆ ಸರ್ವತಾ ನಾವೆಲ್ಲ ಬದ್ಧರಿದ್ದೇವೆ.. ಒಂದು…

Read More

ಸಕ್ಕರೆ ಕಾರ್ಖಾನೆ ಆರಂಭಗೊಂಡರೆ ಅದು ಎರಡು ಜಿಲ್ಲೆಗೂ ವರದಾನವಾಗುತ್ತದೆ ಸರ್ಕಾರದಿಂದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿ ;ಹಾಲಾಡಿ ಶ್ರೀನಿವಾಸ ಶೆಟ್ಟಿ

ದಕ್ಷಿಣಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯಾದ ಹಾಲಾಡಿಯ ಸ್ವಾತಂತ್ರ್ಯಹೋರಾಟಗಾರರ ಮನೆತನದಲ್ಲಿ ಹುಟ್ಟಿದ ಹಾಲಾಡಿ ಶ್ರೀನಿವಾಸ ಶೆಟ್ಟರು ಮೂಲತಃ ಕೃಷಿಕರು.. ದಕ್ಷಿಣಕನ್ನಡ ಜಿಲ್ಲೆ ವಿಭಜನೆ ಆಗುವುದಕ್ಕೂ ಮೊದಲೇ ಹಾಲಾಡಿ ಶ್ರೀನಿವಾಸ ಶೆಟ್ಟರು ಜಿಲ್ಲೆಯಾಧ್ಯಂತ ಕಿಂಗ್ ಮೇಕರ್ ಆಗಿ ಗುರುತಿಸಿಕೊಂಡವರು. ಆಗ ನಡೆಯುತ್ತಿದ್ದ ಸರ್ವಕಾಲೇಜು ವಿಧ್ಯಾರ್ಥಿ ಸಂಘದ ವಿಧ್ಯಾರ್ಥಿ ನಾಯಕನ ಆಯ್ಕೆಯ ಚುನಾವಣೆಗಳಲ್ಲಿ ಸದಾ ಕಾಲ ಮೆಲುಗೈ ಸಾಧಿಸುತ್ತಲೇ ಬಂದ ಹಾಲಾಡಿಯವರು  ತನ್ನ ನಾಯಕತ್ವದ ಶಕ್ತಿಯನ್ನ ದಕ್ಷಿಣಕನ್ನಡ ಜಿಲ್ಲೆಯಾಧ್ಯಂತ ಸ್ಪಷ್ಟವಾಗಿ ದಾಖಲಿಸಿದವರು.. ತನ್ನ ಮಾವ ಆನಂದ ಕುಂದ ಹೆಗ್ಡೆಯರು ಆಗಿನ ಬ್ರಹ್ಮಾವರ ವಿಧಾನಸಭ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ತನ್ನ ಯುವಶಕ್ತಿಯ ಮಿಂಚಿನ ಸಂಪರ್ಕದಲ್ಲಿ ರಾಜಕಾರಣದಲ್ಲಿನ ತನ್ನ ಚಾಣಕ್ಷತೆಗೆ ಖ್ಯಾತರಾದವರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಶಿಕ್ಷಣವನ್ನ ಮುಗಿಸಿ, ಮೈಸೂರು ವಿಶ್ವವಿಧ್ಯಾಲಯದಲ್ಲಿ ಬಿ.ಎಸ್ಸಿ ಪದವಿಧರರಾದ ಶ್ರೀನಿವಾಸ ಶೆಟ್ಟರು ತನ್ನ ಜನಪರ ನಿಲುವಿನಿಂದಾಗಿ, ಸರಳ, ಸಜ್ಜನಿಕೆಯ ಕಾರಣದಿಂದಾಗಿ ಜನಸಾಮಾನ್ಯರ ಒಡನಾಡಿಯಾಗಿ, ತನ್ಮೂಲಕ ಜನನಾಯಕನಾಗಿ ಬೆಳೆದು…

Read More