ನ್ಯೂಸ್ ಡೆಸ್ಕ್: ಶ್ರೀನಗರದ ನೌಶೇರಾದಲ್ಲಿ ಉಗ್ರರು ಸ್ಪೋಟಿಸಿದ ಸುಧಾರಿತ ಐಇಡಿ ಬಾಂಬ್ ದಾಳಿಯಲ್ಲಿ ಮೇಜರ್, ಸೈನಿಕ ಹುತಾತ್ಮರಾಗಿದ್ದು, ಜ್ಯೂನಿಯರ್ ಕಮಿಷನ್ಡ್ ಆಫೀಸರ್ ಹಾಗೂ ಓರ್ವ ಯೋಧ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಬಾಂಬ್ ಸ್ಪೋಟಗೊಳಿಸಿದ್ದು, ಭಾರತೀಯ ಸೇನಾ ಪಡೆ ಗಸ್ತು ತಿರುಗುವ ಸ್ಥಳಗಳಲ್ಲಿ ಉಗ್ರರು ಬಾಂಬ್ ಇಟ್ಟಿದ್ದರು ಎಂದು ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಮ್(BATs)ನ ಕೃತ್ಯವೆನ್ನಲಾಗಿದ್ದು, ಎಲ್ಇಡಿ ಹಾಗೂ ಇನ್ನಿತರ ಸ್ಫೋಟಕ ಬಳಸಿ ದಾಳಿ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪೂಂಚ್ ಜಿಲ್ಲೆಗಳಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದಾರೆ.
Read MoreDay: January 11, 2019
ಕಿರುಕಥೆ: ಸೀತಾರಾಮನ ವಾಲಗ
ಸೀತಾರಾಮನ ಮದುವೆ ವಾಲಗ ಲಕ್ಷ್ಮೀದೇವಿ ಮಂಟಪದಲ್ಲಿ ಭರ್ಜರಿ ಸದ್ದು ಮಾಡಿತು..!! ಸೀತಾರಾಮ ಭಾರೀ ಭಯಂಕರ ಖುಷಿಯಲ್ಲಿದ್ದ!! ಮದುವೆಯಲ್ಲಿ ಹೊಟ್ಟೆ ಬಿರಿಯೇ ಉಂಡವರೆಲ್ಲ ಖುಷಿಯಾಗಿ ಊಟವನ್ನು ಹೊಗಳಿ ಸೀತಾರಾಮನ ಕೈ ಕುಲುಕಿ ಹೋಗುತ್ತಿದ್ದರು; ಭುಜಕ್ಕೆ ಭುಜ ತಾಗಿಸಿ ವಯ್ಯಾರದ ಪೋಸು ಕೊಡುತ್ತಿದ್ದ ತನ್ನ ಅರ್ಧಾಂಗಿಯನ್ನು ಕಂಡಷ್ಟೂ ಸೀತಾರಾಮ ಒಳಗೊಳಗೆ ಪುಳಕಿತನಾಗುತ್ತಿದ್ದ!! ಮನಸ್ಸಿನೊಳಗೆ ಸೇರುಗಟ್ಟಲೆ ಮಂಡಕ್ಕಿ ಮೇಯುತ್ತಲೇ ಮದುವೆಗಂಡು ಬಂದವರಿಗೆಲ್ಲಾ ಕೃತಕವಾಗಿ ಕಿರುನಗೆ ಬೀರುತ್ತಿದ್ದ! ಎದುರು ಸಾಲಿನಲ್ಲಿ ಕುಳಿತ ಒಂದಷ್ಟು ಹೆಂಗಸರು ಮದುವೆ ಹೆಣ್ಣಿನ ಕುತ್ತಿಗೆಯಲ್ಲಿದ್ದ ಆಭರಣಗಳ ತೂಕವನ್ನು ಕಣ್ಣಿನಲ್ಲೇ ಅಳೆದು ತೂಗಿ ಲೆಕ್ಕ ಹಾಕುದರಲ್ಲಿ ಮಗ್ನವಾಗಿದ್ದರು!! ಆದರೆ ಹೆಣ್ಣುಕೊಟ್ಟ ಮಾವನ ಮುಖ ಮಾತ್ರ ಕಪ್ಪೇರತೊಡಗಿತ್ತು! ಏಕೆಂದರೆ ಊಟದ ಚಪ್ಪರವೆಂಬುದು ತುಂಬಿತುಳುಕುತ್ತಿತ್ತು; ಸೀತಾರಾಮನ ಅಪ್ಪ ನೆರೆದಿದ್ದ ಜನಸ್ತೋಮ ನೋಡಿ ಹೆಮ್ಮೆಯಿಂದ ಬೀಗುತ್ತಾ ಪಂಚೆ ಬಿಗಿದು ಕಟ್ಟುತ್ತಿದ್ದರೆ, ಒಂದುವರೆ ಸಾವಿರ ಜನ ಉಂಡು ಬಾಳೆಲೆ ಮಡಚಿ ಎದ್ದು ಹೋಗಿದ್ದರೂ ಉಣ್ಣಲು ಬಾಕಿ…
Read Moreಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿರುವ ಕೆಜಿಎಫ್
ಸಿನಿಡೆಸ್ಕ್: ರಾಷ್ಟ್ರಾಧ್ಯಂತ ಸದ್ದು ಮಾಡಿದ ಕೆಜಿಎಫ್ ಇದೀಗ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಸದ್ದು ಮಾಡಲಾರಂಭಿಸಿದೆ. ವಿಶ್ವಾದ್ಯಂತ ಸದ್ದು ಮಾಡಿದ ದಕ್ಷಿಣ ಭಾರತ ಮೂಲದ ಸಿನಿಮಾಗಳೆಂದರೆ ರೋಬೋಟ್, ಬಾಹುಬಲಿ ಮತ್ತು ಬಾಹುಬಲಿ -2 ಆ ಬಳಿಕ ವಿಶ್ವಾದ್ಯಂತ ಭಾರಿ ಸದ್ದು ಮಾಡಿದ ಚಿತ್ರವೆಂದರೆ ಕನ್ನಡದ ಯಶ್ ಅಭಿನಯದ ಕೆಜಿಎಫ್. ಈ ಚಿತ್ರ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಭರ್ಜರಿಯಾಗಿ ಓಡುತ್ತಿದ್ದು. ಕೆಜಿಎಫ್ನ ಹಿಂದಿ ಅವತರಣಿಕೆ ಇದೀಗ ಪಾಕಿಸ್ತಾನದಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
Read Moreಜ.19: ವಂಡ್ಸೆಯಲ್ಲಿ ಆಟ ಕೆಸರಾಟ
ವಂಡ್ಸೆ: ಚಿತ್ತೂರು ನೈಕಂಬ್ಳಿಯ ಪ್ರೇರಣಾ ಯುವ ವೇದಿಕೆಯ ಆರನೇ ವಾರ್ಷಿಕೋತ್ಸವದ ಅಂಗವಾಗಿ ವಂಡ್ಸೆ ಹೋಬಳಿ ಮಟ್ಟದ ಪ್ರೌಡಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ “ಆಟ ಕೆಸರಾಟ” ಜ.19ರ ಬೆಳಿಗ್ಗೆ ನೈಕಂಬ್ಳಿ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾಗಿದೆ. ಐದುನೂರಕ್ಕೂ ಹೆಚ್ಚು ಶಾಲಾ ಮಕ್ಕಳು , ಎಂಟು ವೈವಿಧ್ಯಮಯ ಕ್ರೀಡೆಗಳು , ಪ್ರತ್ಯೇಕ ಬಹುಮಾನಗಳು, ಸಮಗ್ರ ಪ್ರಶಸ್ತಿಗಳು , ಪ್ರಥಮ ಹಾಗೂ ದ್ವಿತೀಯ ಶಾಲೆಗಳು , ವಿಜೇತರಿಗೆ ನಗದು ಬಹುಮಾನಗಳು, ಶಾಶ್ವತ ಫಲಕಗಳು ಕೂಡ ಇರುತ್ತದೆ. ಸವೆದು ಹೋಗುವ ಬದುಕಲ್ಲಿ ಸಾಗುವ ಸಮಾಜಕ್ಕೆ ಸಹಾಯಕವಾಗುವ ತುಡಿತದಿ ಹುಟ್ಟಿಕೊಂಡ ಈ ಸಂಘಕ್ಕೆ ಆರನೇ ವರ್ಷ ಪೂರ್ಣಗೊಂಡಿದ್ದು, ಇನ್ನೂ ನೂರಾರು ಯೋಚನೆ, ಯೋಜನೆಗಳು ಜಾರಿಗೊಳಿಸಲು ಇದೆ. ನಮ್ಮೇಲ್ಲರ ಯೋಜನೆಗಳು ಸಾಕಾರಗೊಳ್ಳುಲು ಎಲ್ಲರು ನಮ್ಮ ಜತೆಯಲ್ಲಿರಬೇಕು ಎಂದು ಸಂಘದ ಅಧ್ಯಕ್ಷರು ಮತ್ತು ಸವ್ ಸದಸ್ಯರು ವಿನಂತಿಸಿಕೊಂಡಿದ್ದಾರೆ.
Read Moreಸಮಾನತೆಯಲ್ಲಿ ಏಕತೆ ಕಂಡ ಸಮುದಾಯ ಜಿ.ಎಸ್.ಬಿ.
ಸಾವಿರಾರು ಕೋಟಿ ಶ್ರೀಮಂತನೂ ನೂರು ರೂಪಾಯಿ ದುಡಿಯುವ ಬಡವನೂ ಸಮಾನತೆಯಲ್ಲಿ ಇರುವ ಏಕೈಕ ಜನಾಂಗ ಒಂದನ್ನು ನೋಡಿದ್ದರೆ ಅದು ಜಿ.ಎಸ್.ಬಿ. ಜನಾಂಗ ಮಾತ್ರ.” -ವಸಂತ್ ಗಿಳಿಯಾರ್ ಈ ಮಣ್ಣಿನಲ್ಲಿ ಅಂದು ಹರಿದಿದ್ದ ಇಂದು ಮರೆಯಾಗಿ ಇತಿಹಾಸದೊಳಗೆ ಹುದುಗಿ ಹೋದ ಸರಸ್ವತಿ ನದಿ ತಟದಲ್ಲಿ ಉಗಮಿಸಿದ ನಾಗರೀಕತೆಯ ಅವಿಛ್ಛಿನ್ನ ಪ್ರವಾಹದ ಪರಂಪರೆಯುಳ್ಳ ಆ ಜನಾಂಗದವರ ಬಗ್ಗೆ ನನಗೆ ಸದಾ ಗೌರವವಿದೆ.. ಅವರನ್ನ ಜಿ.ಎಸ್.ಬಿ. ಎಂದು ಕರೆಯುತ್ತೇವೆ. ಅಂದರೆ “ಗೌಡ ಸಾರಸ್ವತ ಬ್ರಾಹ್ಮಣ” ಪೋರ್ಚುಗೀಸರ ಧಬ್ಬಾಳಿಕೆಗೆ ಬಲಿದಾನದ ಉತ್ತರಕೊಟ್ಟು ತಮ್ಮ ಧರ್ಮವನ್ನ ಉಳಿಸಿಕೊಳ್ಳಲೋಸುಗ “ಬೈಬಲ್ ಒಪ್ಪಿಕೋ ಅಥವ ಕತ್ತಿಗೆ ಕತ್ತು ಕೊಡು” ಎನ್ನುವ ಮತಾಂತರದ ಹುನ್ನಾರವನ್ನ ಧಿಕ್ಕರಿಸಿ ಪ್ರತಿಭಟಿಸಿದವರು ಅವರು. ಸತ್ತು ಮಲಗುವುದಕ್ಕೂ ಸಿದ್ದ ಸೋತು ಶರಣಾಗಲಾರೆವು ಎಂದು ಬಲವಾಗಿ ಬಡಿದಾಡಿದವರು ಜಿ.ಎಸ್.ಬಿ. ಜನಾಂಗದವರು. ತಮ್ಮ ಬದುಕಿನುದ್ದಕ್ಕೂ ವಲಸೆಗೊಳ್ಳುತ್ತಲೇ ಬಂದರೂ ಎಲ್ಲಿ ತಲುಪಿದರೋ ಅಲ್ಲಿಂದಲೇ ಚಿಗುರೊಡೆದು, ಕುಡಿಯೊಡೆದು ಎದ್ದು ನಿಂತವರು.. …
Read Moreಎಲ್ಲಿಯೂ ನಿಲ್ಲದ ಒಂಟಿ ಯಾತ್ರಿಕ ನಾನು
ನನ್ನ ಕೆಂಡ ಸಂಪಿಗೆಯೇ ನಿನ್ನ ಪ್ರೀತಿಯ ಯಾಚಿಸಿ, ಹಂಬಲಿಸಿ ದುಂಬಾಲು ಬಿದ್ದು ಹಪಹಪಿಸಿ ಕೊನೆಗೂ ಧಕ್ಕಿಸಿಕೊಂಡು ಅಹಂಕಾರದಲ್ಲಿ ಎದೆಯುಬ್ಬಿಸಿ ಕನಸಿನ ಕೋಟೆ ಕಟ್ಟಿ ಒಲವ ಗಾನದ ಯಾನಿಯಾಗಿ ಇದೀಗ ವಿದಾಯದ ಕವಿತೆ ಬರೆಯುತ್ತಿರುವೆ
Read More