ಬಾರ್ಕೂರು ಉತ್ಸವದ ಬಗ್ಗೆ ಒಂದಷ್ಟು ಎಚ್ಚರಿಕೆಯ ಅಗತ್ಯವಿದೆ.. ಪುರಾತತ್ವ ಇಲಾಖೆಯ ಅಧೀನದಲ್ಲಿದ್ದ ಬಾರ್ಕೂರಿನ ಚಾರಿತ್ರಿಕ ಸ್ಥಳವನ್ನ ಪ್ರವಾಸೋದ್ಯಮ ಇಲಾಖೆಯ ಅಡಿ ತರುವಲ್ಲಿ ಪ್ರಭಾವ ಬೀರಿದವರು ಯಾರು? ಈಗಾಗಾಲೆ ಬಾರ್ಕೂರಿನ ಕೋಟೆಯೊಳಗಿನ ಕಲ್ಯಾಣಿಯನ್ನು ಉತ್ಖನನ ಮಾಡಿರುವುದು ಕಾನೂನು ಬಾಹೀರವಲ್ಲವೆ? ಪುರಾತತ್ವ ಇಲಾಖೆಯ ಅಧೀನದಲ್ಲಿದ್ದಾಗ ಅಲ್ಲಿ ಯಾವುದೇ ತರಹದ ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಇದನ್ನ ಅರಿತೇ ಅದನ್ನು ಪ್ರವಾಸೋದ್ಯಮ ಇಲಾಖೆಯೆ ಅಡಿ ಬರುವಂತೆ ಮಾಡಿರುವ ಅನುಮಾನವಿದೆ. ಇದರಲ್ಲಿ ಕೈಯಾಡಿಸುತ್ತಿರುವ ಪ್ರಭಾವಿಗಳು ಯಾರು? ಇತ್ತೀಚೆಗಷ್ಟೇ ಇಲ್ಲಿ ನಿರ್ಮಾಣಗೊಂಡ ಮಠ ಎಂದು ಕರೆಯಲ್ಪಡುವ ಕಟ್ಟಡಕ್ಕೆ ಸಂಬಂಧಪಟ್ಟವರಿಗೂ ಬಾರ್ಕೂರಿನ ಐತಿಹ್ಯಕ್ಕೂ ಯಾವುದೇ ಸಂಬಧ ಇಲ್ಲದಿದ್ದಾಗ್ಯೂ ಆ ವ್ಯಕ್ತಿಯನ್ನು ಮುಂಚೂಣಿಯಲ್ಲಿ ಬಿಡುವ ಹಿಂದಿನ ಹುನ್ನಾರವೇನು? ಬಾರ್ಕೂರಿಗೆ ಸಂಬಂಧಪಟ್ಟಂತಹ ರಾಜ ಮನೆತನಗಳು ಇರುವಾಗಲೇ ಅನ್ಯ ವ್ಯಕ್ತಿಗಳಿಗೆ ವೇದಿಕೆ ನಿರ್ಮಾಣ ಮಾಡುವ ನಿಲುವುಗಳನ್ನ ತಳೆಯಲು ಇವರಿಗೆಲ್ಲ ಅಧಿಕಾರ ಕೊಟ್ಟವರು ಯಾರು? ಬಾರ್ಕೂರು ಯಾರ ಸ್ವಂತ ಸೊತ್ತಲ್ಲ ಎನ್ನುವುದನ್ನು ಸರ್ಕಾರ…
Read MoreDay: January 16, 2019
ಕಂಬಿಕಲ್ಲು : ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ
ಅಭಿಮತ ನ್ಯೂಸ್ ರೂಮ್: ಕಕ್ಕುಂಜೆಯ ಕಂಬಿಕಲ್ಲು ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತಊರ ಹಾಗು ಪರ ಊರ ಭಕ್ತಾಧಿಗಳಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಸಾಂಗಾವಾಗಿ ನೆರವೇರಿತು.. ಈ ಸಂದರ್ಭದಲ್ಲಿ ದೇವಳದ ಜೀರ್ಣೋಧ್ದಾರ ಸಮೀತಿಯ ಗೌರವಾಧ್ಯಕ್ಷರಾದ ಸುರೇಶ್ ಬಿ ಶೆಟ್ಟಿ ಮತ್ತು ಕೆ ವಿಜಯ್ ಕುಮಾರ್ ಅಡಿಗ ಅಧ್ಯಕ್ಷ ಹೆಚ್ ಶಂಕರ್ ಶೆಟ್ಟಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಗೈನಾಡಿ, ಪ್ರಸನ್ನ ಕುಮಾರ್ ಶೆಟ್ಟಿ ಅರ್ಚಕ ಮತ್ತು ಕಾರ್ಯದರ್ಶಿಗಳಾದ ವೇದಮೂರ್ತಿ ಶ್ರೀಪತಿ ಭಟ್ ಕೋಶಾಧಿಕಾರಿ ನರೇಂದ್ರ ಶೆಟ್ಟಿ.ಜೊತೆ ಕೋಶಾಧಿಕಾರಿ ಶಿವರಾಮ ಶೆಟ್ಟಿ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದು ದೇವಳದ ಬಲಭಾಗದಲ್ಲಿರು ಉಗ್ರಾಣದಲ್ಲಿ ಹೊರ ಕಾಣಿಕೆಯನ್ನು ಸ್ವೀಕರಿಸಲಾಯಿತು..
Read More” ಕರ್ಜೆ ಕ್ಷೇತ್ರ ಮಹಾತ್ಮೆ ” ಪ್ರಸಂಗ ಬಿಡುಗಡೆ
ಕರ್ಜೆ: ಇತಿಹಾಸ ಪ್ರಸಿದ್ಧ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುರಾಣವನ್ನು ಸಾರುವ ” ಕರ್ಜೆ ಕ್ಷೇತ್ರ ಮಹಾತ್ಮೆ ” ಪ್ರಸಂಗ ಬಿಡುಗಡೆ ಮತ್ತು ಯಕ್ಷಗಾನ ಪ್ರದರ್ಶನ ಜರಗಿತು. ಸಭಾ ಕಾರ್ಯಕ್ರಮದ ಮುಂಚಿತವಾಗಿ ಶ್ರೀ ಮಹಾಲಿಂಗೇಶ್ವರನಿಗೆ ಮಹಾ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಜರಗಿತು. ಸುಮಾರು 2 ಸಾವಿರ ಭಕ್ತಾದಿಗಳು ಅನ್ನದಾನವನ್ನು ಸ್ವೀಕರಿಸಿದರು. ರಾತ್ರಿ 9.00 ಗಂಟೆಗೆ ನೆಡೆದ ಸಭಾ ಕಾರ್ಯಕ್ರಮದಲ್ಲಿ ಕರ್ಜೆ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತು.ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ರವರನ್ನು ಸನ್ಮಾನಿಲಾಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿಯವರು ಮಾತನಾಡಿ ಕರ್ಜೆ ದೇವಸ್ಥಾನಕ್ಕೆ ಹೊರ ಊರಿನಲ್ಲಿ ಒಳ್ಳೆಯ ಹೆಸರಿಸಿದೆ,ಆದರೆ ಇಲ್ಲಿನ ಒಂದು ಮನೆಯವರಿಗೆ ಕೆಲವು ಜನ ಬೆಂಬಲ ನೀಡಿ ದೇವಸ್ಥಾನದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ದೇವಸ್ಥಾನದಹತ್ತಿರ ಸಮುದಾಯ ಭವನ ನಿರ್ಮಾಣ ಮಾಡಿ ಬಡ ಜನರ ಮದುವೆ…
Read Moreಖಾವಂದರ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ ಕಂಬಿಕಲ್ಲು…..
ಅಭಿಮತ ನ್ಯೂಸ್ ರೂಮ್: ಪೂರ್ಣಕುಂಭ ಸ್ವಾಗತ, ಮಂಗಳ ವಾಧ್ಯ, ಕೈರಳಿ ಚಂಡೆ, ತಾಳ ಮೇಳದೊಂದಿಗೆ ವಿಶಿಷ್ಠ ಶೈಲಿಯಲ್ಲಿ ನರ್ತಿಸುತ್ತಲೇ ಸುಮಂಗಳ ಗಾನ ಹಾಡುವ ಯುವಕರ ಭಜನಾ ತಂಡಗಳು.. ಪ್ರತೀ ಮನೆಯ ಅಂಗಳದ ಮುಂದೆ ತಳಿರು ತೋರಣ, ರಂಗು ರಂಗಿನ ರಂಗೋಲಿಯ ಸ್ವಾಗತ.. ಹಬ್ಬದಬ್ಬರ ನೆನಪಿಸುವ ಕೀಲು ಕುದುರೆ ತಟ್ಟಿರಾಯರು.. ಹೌದು; ಮಾತನಾಡುವ ಮಂಜುನಾಥ ಎಂದೇ ಕರೆಯಲ್ಪಡುವ ಪರಮಪೂಜ್ಯ ಖಾವಂದರಾದ ಧರ್ಮಸ್ಥಳ ಶ್ರೀ ಮಂಜುನಾಥ ದೇವಳದ ಧರ್ಮಾಧಿಕಾರಿಗಳು, ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನ ಗೌರವ ಪೂರ್ವಕವಾಗಿ ಸ್ವಾಗತಿಸಿಕೊಳ್ಳಲು ಸಜ್ಜಾಗಿದೆ ಕಕ್ಕುಂಜೆಯ ಕಂಬಿಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನ.. ಉಡುಪಿ ತಾಲೂಕು, ಉಡುಪಿ ಜಿಲ್ಲೆಯ ಕಕ್ಕುಂಜೆ ಎಂಬ ಪುಟ್ಟ ಊರು ಪೂಜ್ಯ ಖಾವಂದರ ಪುಣ್ಯಪಾದ ಸ್ಪರ್ಶದಿಂದ ಪುನೀತವಾಗುವ ಪುಣ್ಯಕಾಲವು ಸನ್ನಿಹಿತವಾಗಿದೆ.. ಕಪ್ಪು ಕಲ್ಲುಗಳು ಕಂಬದಂತೆ ಸಾಲು ಸಾಲಾಗಿ ನಿಂತಿರುವ ಪುರಾಣ ಪ್ರಸಿದ್ದ ಈ ಪುಣ್ಯಕ್ಷೇತ್ರಕ್ಕೆ ಕಂಬಿ ಕಲ್ಲು ಎಂದೇ ಕರೆದರು… ಕಕ್ಕುಂಜೆಯು ಸುತ್ತ…
Read Moreಲವ್ ಕಾಲಂ.. ಇವುಳೆ ಹುಡುಗಿ!
ನಿನ್ನ ನೆನೆಪು ಉಬುಕಿ ಬರುವಾಗಲೆಲ್ಲಾ ನಾನು ಆಕಾಶದೆಡೆಗೆ ಮುಖ ಮಾಡಿ ನೋಡುತ್ತೇನೆ. ಇವತ್ತು ಮಳೆಯಿಲ್ಲ ಎಂದು ನಕ್ಷತ್ರ ಥಳಕ್ಕನೆ ನಕ್ಕು ಮಿನುಗುತ್ತದೆ..!! ಮೋಡದ ಮರೆಯ ಸರಿಸಿ ಓಡೋಡಿ ಬರುವ ಶಿಶಿರಚಂದ್ರ ಬೆಳ್ಳಿ ಕಿರಣಗಳದ್ದೇ ಬಾಣ ಹೂಡಿ ನಿಲ್ಲುತ್ತಾನೆ ..!! ಮತ್ತೆ ಪುನಃ ದಟ್ಟ ಮಳೆಯ ದಿನದಲ್ಲಿ ನಾವಿಬ್ಬರೂ ಜೊತೆಗಿದ್ದದ್ದು ನೆನಪಾಗುತ್ತದೆ!! ಹೇ ಹುಡುಗಿ…, ಯಾಕೆ ನೀ ಹೀಗೆ ನೆನಪಾಗಿ ಕಾಡುತ್ತೀ ಹೇಳು..?? ಹೆಣ್ಣೇ ನಿನಗೆ ಗೊತ್ತಾ?? ಉತ್ಸವದ ದಿವಸ ದೇವರ ಹೊತ್ತು ತರುವ ಬೆಳ್ಳಿ ರಥದಂತವನು ನಾನಾದರೆ, ನೀನು ಒಳಗೆ ಕುಳಿತಿರುವ ದೇವರು.!! ಯಾವಗಲೋ ಖುಷಿಯಲ್ಲಿದ್ದಾಗ ಮುದ್ದು ಹಸುಗೂಸೊಂದು ಹಲ್ಲಿಲ್ಲದ ಬಾಯಿಂದ ಆಡುವ ಬೊಚ್ಚು ನಗುವಿನಂತಹ ನಿನ್ನ ನಗು ನನಗೆ ತುಂಬಾ ಇಷ್ಟ ಕಣೇ..!! ಮಾತುಗಳಿಲ್ಲದ ಗಳಿಗೆಯಲ್ಲಿ ನಮ್ಮವು ನಾಲ್ಕು ಕಂಗಳು ಸೇರಿ ಆರಂಬಿಸುವ ಕನ್ವರ್ಸೇಷನ್ನು ಕೂಡ ನನಗೆ ತಿಂದು ಬಿಡುವಷ್ಟು ಇಷ್ಟ.! ಅಪರೂಪಕ್ಕೆ ನೀನು ನೆರಿಗೆ…
Read Moreಹಾಲಾಡಿಗೆ ಒಲಿಯಲಿದೆಯಾ ಮಂತ್ರಿಗಿರಿ…??
ಕುಮಾರಸ್ವಾಮಿ ಸರಕಾರ ಪತನದ ಅಂಚಿಗೆ ತಲುಪಿರುವಾಗಲೇ ಬಿಜೆಪಿ ಸರಕಾರ ರಚಿಸಿಬಿಡಲಿದೆಯಾ ಎನ್ನುವ ಕೂತೂಹಲ ಆರಂಭಗೊಂಡಿದೆ. ಈಗಾಗಲೇ ತನ್ನ ಅಷ್ಟೂ ಶಾಸಕರನ್ನು ಹರಿಯಾಣದ ಗುರುಗಾಂವ್ ರೆಸಾರ್ಟಿಗೆ ತಂದು ಕೂರಿಸಿರುವ ಕಮಲ ಪಕ್ಷ ಎರಡು ಪಕ್ಷೇತರ ಶಾಸಕರಿಂದ ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆಯುವಲ್ಲಿ ಯಶಸ್ವಿಯಾಗಿದೆ. ಅತ್ತ ಕಮಲ ಪಾಳಯದೊಳಗೆ ಗರಿಗೆದರಿದ ಚಟುವಟಿಕೆಗಳು ಆರಂಭ ಗೊಂಡಿರುವಂತೆಯೆ ಇತ್ತ ಕುಂದಾಪುರ ಕ್ಷೇತ್ರದೊಳಗೂ ಮಿಂಚಿನ ಸಂಚಾರ ಆರಂಭಗೊಂಡಿದೆ. ರಾಜ್ಯದಲ್ಲೇ ಐದನೇ ಅತೀ ಹೆಚ್ಚು ಲೀಡು ಪಡೆದು ಗೆದ್ದು(ಬಿಜೆಪಿಯಿಂದ ಎರಡನೇ ಅತೀ ದೊಡ್ಡ ಲೀಡು) ಸತತ ಐದನೇ ಭಾರಿಗೆ ವಿಧಾನಸೌದಕ್ಕೆ ಲಗ್ಗೆ ಹಾಕಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಈ ಭಾರಿ ಮಂತ್ರಿ ಸ್ಥಾನ ದಕ್ಕಿ ಬಿಡಲಿದೆ ಎನ್ನುವ ಗುಮಾನಿ ಹಬ್ಬುತ್ತಲೇ ಕುಂದಾಪುರದ ಬಿಜೆಪಿ ಪಾಳಯದೊಳಗೆ ಹೊಸ ಹುರುಪು ಮತ್ತು ಉಲ್ಲಾಸ ಒಟ್ಟೊಟ್ಟಿಗೆ ಕಾಣಿಸತೊಡಗಿದೆ. ಈ ಭಾರಿ ಅಸೆಂಬ್ಲಿ ಎಲೆಕ್ಷನ್ಮು ಮುಗಿದ…
Read More