ದೇವಲೋಕದಿ ಇಳಿದ ಅಪ್ಸರೆಯ ಚಂದ ಕೆಂಪೇರಿದ ತುಟಿಗಳಲಿ ಇಣುಕುವ ಮುಗುಳ್ನಗೆಯ ಅಂದ ಗುಳಿಕೆನ್ನೆಯ ಬೆಡಗಿ, ನಾಗರ ಜಡೆಯ ಸುಂದರಿ ಕೋಲ್ಮಿಂಚಿನ ತೀಕ್ಷ್ಣತೆಯ ನಿನ್ನ ಕಣ್ಣೋಟಕ್ಕೆ ಸೋತೆ… ಸುಗಂಧಿನಿಯೇ ತಾಳ್ಮೆಯೇ ನಿನಗೆ ಆಭರಣ ಮಾತು ಕತ್ತಿಯ ಅಲಗು ಅದರೊಳಗಿದೆ ಪ್ರೀತಿಯ ಸೆರಗು ನಿಷ್ಠುರಿ ನೀನು… ಆದರೂ ಮಮತೆಯ ಮಡಿಲು. ಮಂದಸ್ಮಿತ ಹೃದಯೇಶ್ವರೀ.. ನನ್ನಾಳುವ ರೂಪಸಿ ಮಾಯಕದ ನೋಟ ಬೀರಿ ಕ್ಷಣ ಕ್ಷಣಕ್ಕೂ ಮಾಯವಾಗುವ ಮಾಯೆ ಆದರೂ ಮನಸಿಗೆ ಮುದ ನೀಡುವ ರೂಪದರಸಿ -ಹರೀಶ್ ಕಿರಣ್ ತುಂಗ
Read MoreDay: January 24, 2019
ಬಳ್ಳಾರಿ ಧೂಳು ಆಡಿದ ಆಟಗಳೇನು ಕಡಿಮೆ ಲೆಕ್ಕದ್ದಾ..??
ಅವತ್ತು ಬಳ್ಳಾರಿ ಸುದ್ದಿಯಾಯಿತು..!! ಈ ಸೋನಿಯಾ ಗಾಂಧಿ ಯುಪಿ ಬಿಟ್ಟು ಬಳ್ಳಾರಿಯ ತನಕ ಬಂದು ಎಲೆಕ್ಷನ್ನಿಗೆ ನಿಂತಿದ್ದಳು, ಬಳ್ಳಾರಿಯ ಜನ ‘ಇಂದ್ರಾ ಗಾಂಧಿ ಬಂದಾಳಲೇ’ ಎಂದು ಕೇಕೆ ಹಾಕಿಕೊಂಡು ಹಿಂಡುಗಟ್ಟಲೇ ಸೇರಿ ಆಕೆಯ ಬೆನ್ನಹಿಂದೆ ಓಡಾಡಿದರು…!!ಅವತ್ತಿಗೆಲ್ಲಾ ಬಳ್ಳಾರಿ ಕೈಪಕ್ಷದ ಭದ್ರಕೋಟೆ.ಮತದಾನ ಮುಗಿದು ರಿಸಲ್ಟು ಬಂದಾಗ ಎದುರಿಗೆ ನಿಂತಿದ್ದ ಸುಷ್ಮಾ ಸ್ವರಾಜು ಸೋತು ಹೋಗಿದ್ದಳು,ಅಂದು ಅಸೆಂಬ್ಲಿ ಸೀಟಿಗೂ ಒಟ್ಟಿಗೆ ಎಲೆಕ್ಷನ್ನು ನಡೆದಿತ್ತಲ್ಲಾ, ವಿಧಾನಸಭೆಗೆ ನಿಂತಿದ್ದ ಈ ಶ್ರೀರಾಮುಲು ಕೂಡ ಸೋತು ಹೋಗಿದ್ದ..!! ಆ ಕಾಲಕ್ಕೆ ಬಳ್ಳಾರಿಯೊಳಗೆ ಈ ಬಿಜೆಪಿಗೆ ದಿಕ್ಕು ಅಂತ ಇದ್ದಿದ್ದು ಇವರೇ..ರೆಡ್ಡಿಗಳು!! ಅದಕ್ಕೂ ಮುಂಚೆ ನಲವತ್ತೇಳು ಡಿಗ್ರಿ ಬಿರುಬಿಸಿಲಿನಲ್ಲಿ ಸೈಕಲ್ ತುಳಿದು ಪಕ್ಷ ಕಟ್ಟಿದ ಸಂಘದ ಹಿರಿಯರನ್ನೆಲ್ಲಾ ಹಚಾ ಎಂದು ಎಬ್ಬಿದ ರೆಡ್ಡಿಗಳು ಮತ್ತವರ ಪಟಾಲಂ ಬಳ್ಳಾರಿ ಬಿಜೆಪಿಯೊಳಗೆ ಕಾಲುಚಾಚಿಕೊಂಡು ಕುಳಿತಿದ್ದರು, ಅದಕ್ಕೂ ಮುಂಚೆಗೆ ಈ ಶ್ರೀರಾಮುಲು ಕಾಂಗ್ರೇಸಿನಲ್ಲಿದ್ದ,ಅವನ ಭಾವ ರೈಲ್ವೆ ಬಾಬು ಕೂಡ ಕಾಂಗ್ರೇಸಿನಿಂದ…
Read More