ಅಂತಹ ಯಶಸ್ವಿಯಾದವರ ಹಲವರ ಅಂಗೈಯಲ್ಲಿ ಈ ಒಂದು ಗೆರೆ ಇದೆ……..!

ರವಿಬೆಳಗೆರೆ ಅಂದರೇ ಒಂದು ದೊಡ್ಡ ಆತ್ಮವಿಶ್ವಾಸ” ಅಂದರು ಗೆಳೆಯ ವಸಂತ್ ಗಿಳಿಯಾರ್. ನಮ್ಮಿಬ್ಬರ ಭೇಟಿಯಲ್ಲಿ ಆರ್.ಬಿ ವಿಷಯ ಯಾವಾಗಲೂ ಅಂತರ್ಗತವಾಗಿರುತ್ತದೆ. ಇಬ್ಬರೂ ಅವರನ್ನೇ ಓದಿಕೊಂಡವರು. ಅದೊಂದು ದಿನ ಗಿಳಿಯಾರ್ ರೂಮಿನೊಳಗೆ ಹೊಕ್ಕವನಿಗೆ ಸಿಕ್ಕಿದ್ದು ಗಿಳಿಯಾರ್ ನಡೆಸುತ್ತಿದ್ದ ಚಿತ್ರಲೇಖ ಪತ್ರಿಕೆ. ಅದರ ತುಂಬೆಲ್ಲಾ ರವಿಬೆಳಗೆರೆಯವರ ಪತ್ರಿಕೋದ್ಯಮದ ಸಾಹಸವೇ ಬರೆದಿತ್ತು. ನಾನೇ ಅಂದರೆ ನನಗಿಂತಲೂ ಗಿಳಿಯಾರಿಗೇ ಅತಿ ಹೆಚ್ಚು ಪ್ರಭಾವ ಬೀರಿದ್ದಾರೆ ಬೆಳಗೆರೆ ಅಂದುಕೊಂಡೆ. ಗಿಳಿಯಾರ್ ಇವರನ್ನೇ ಧ್ಯಾನಿಸಿ ಗೆದ್ದವರು. ನಮ್ಮ ಬೆರಗೇ ಆರ್‌.ಬಿ. ಯವರು!! ಅವರು ಬೆಳೆದ ಪರಿ ಅಂತಹದು. ಬಳ್ಳಾರಿಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರು. ಪತ್ರಿಕೆ ನಡೆಸಿ, ಪ್ರಾರ್ಥನಾ ಶಾಲೆ ಕಟ್ಟಿ ಯಶಸ್ವಿನ ಉತ್ತುಂಗಕ್ಕೇರಿದ್ದು, ಕಳೆದೆರಡು ದಶಕಗಳಲ್ಲೆ. ಹಾಲು ಮಾರಿದರು, ದಿನ ಪತ್ರಿಕೆ ಹಂಚಿದರು, ಮೆಡಿಕಲ್ ರೆಪ್ರೆಸೆಂಟೇಟಿವ್ ಆದರು, ಸಿನೆಮಾ ಥಿಯೇಟರನಲ್ಲಿ ಕೆಲಸ ಮಾಡಿದರು. ಇತಿಹಾಸ ಉಪನ್ಯಾಸಕರಾದರು. ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ತನ್ನ ಸಾರಥ್ಯದಲ್ಲೇ…

Read More

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಚಂದ್ರಶೇಖರ್ ಪಾಲೆತ್ತಾಡಿ ಆಯ್ಕೆ; ಆ.೪ರಂದು ಬ್ರಹ್ಮಾವರದಲ್ಲಿ ಪ್ರಶಸ್ತಿ ಪ್ರದಾನ

ಬ್ರಹ್ಮಾವರ: ಇಲ್ಲಿನ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೊಡಮಾಡುವ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಮುಂಬನ ಪ್ರತಿಷ್ಠಿತ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ ಆಯ್ಕೆಯಾಗಿದ್ದಾರೆ ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದಕ್ಷಿಣಕನ್ನಡ ಜಿಲ್ಲೆಯ ಮಲೆನಾಡು ಪುತ್ತೂರಿನ ಬಜತ್ತೂರು ಗ್ರಾಮದವರಾದ ಚಂದ್ರಶೇಖರ್ ಪಾಲೆತ್ತಾಡಿಯವರು ರೈತಪರ ಚಳವಳಿ, ನಾಟಕ,ಯಕ್ಷಗಾನ, ಭಾಷಣ ಹೀಗೆ ನಾನಾ ರೂಪದಲ್ಲಿ ತನ್ನ ಬಹುತ್ವಗಳಲ್ಲಿ ಕಾಣಿಸಿಕೊಂಡವರು. ವಡ್ಡರ್ಸೆ ರಘುರಾಮ ಶೆಟ್ಟರಂತೆಯೇ ಪತ್ರಿಕಾರಂಗದಲ್ಲಿ ಭಿನ್ನ ದೃಷ್ಠಿಕೋನದೊಂದಿಗೆ ಸಾಗಿದ ಇವರು, ಹೊಸದಿಗಂತ, ಮಂಗಳೂರು ಮಿತ್ರ, ಕರ್ನಾಟಕ ಮಲ್ಲ, ಉದಯದೀಪ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಅನಂತರ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದರು. ಮರಾಠಿ ಮಣ್ಣು ಮುಂಬೈನಲ್ಲಿ ಕನ್ನಡದ ಕಂಪನ್ನು ಧಟ್ಟವಾಗಿ ಹಲವಾರು ಸವಾಲುಗಳ ನಡುವೆಯೂ ಪಸರಿಸಿದ ಪಾಲೆತ್ತಾಡಿಯವರು…

Read More