ಮಕಾಡೆ ಮಲಗುತ್ತಿದೆ ಹೊಟೆಲ್ ಉದ್ಯಮ. ದಿಕ್ಕೆಲ್ಲಿ? ದೆಸೆಯೆಲ್ಲಿ? ಆತಂಕದಲ್ಲಿದೆ, ಅನ್ನದಾತರ ಬದುಕು !!

ನಮ್ಮ ಊರು ಬೆಳೆದದ್ದು, ಇಲ್ಲಿನ ದೈವಗಳ ಮನೆಯ ಮೇಲೆ ಹೊಸ ಹೆಂಚು, ಕೊನೆಗೆ ಟೆರೇಸು ಕಂಡದ್ದು, ನಮ್ಮ ಊರ ದೇವಸ್ಥಾನಗಳ ಪ್ರಾಂಗಣಗಳು ಶಿಲಾಮಯವಾಗಿ ತಂಪಾದದ್ದು ದೇವಳದ ಮಾಡಿಗೆ ಹಿತ್ತಾಳೆ, ತಾಮ್ರಗಳ ಹೊಡೆಸಿ ಮೆರುಗು ಕೊಟ್ಟಿದ್ದು, ದೇವರ ಮೈಮೇಲೆ ತರಹಾವರಿ ಆಭರಣಗಳು ಮಿನುಗಿದ್ದು, ಊರೂರುಗಳಲ್ಲಿಯೂ ನಾಗಮಂಡಲವಾದದ್ದು, ಹರಕೆಯಾಟದ ಹೆಸರಲ್ಲಿ ಕಲಾವಿದರ ಬದುಕು ನಕ್ಕಿದ್ದು, ಕೋಲ ಕಟ್ಟುವ ಪಾಣಾರನ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದು ಹೀಗೆ ನಮ್ಮ ಕರಾವಳಿ ಒಟ್ಟಾರೆಯಾಗಿ ಬೆಳೆದದ್ದು ಅನ್ನದಾತರ ಕರುಣೆಯಿಂದ ಅರ್ಥಾತ್ ಹೊಟೇಲು ಉದ್ಯಮದಿಂದ. ಊರು ಬಿಟ್ಟು ನಗರ ಸೇರಿ ಹೋಟೇಲುಗಳಲ್ಲಿ ದುಡಿದು ಹೊಟೇಲು ಕಟ್ಟಿದ ಅವರು ಊರಿನ ಕಾಗದ ತಲುಪಿದಾಗಲೆಲ್ಲಾ ಹಣವನ್ನ ಮನಿಯಾರ್ಡರ್ ಮಾಡಿದರು. ತಂಗಿಯರ, ಅಕ್ಕಂದಿರ ಮದುವೆ ಮಾಡಿಸಿ ತಾವು ಮದುವೆಯಾಗುವಾಗ ಪ್ರಾಯವಾದರೂ ಊರಲ್ಲಿ ಅವರೆಲ್ಲ ನೆಮ್ಮದಿಯಾದರಲ್ಲ ಎಂದು ನಿಟ್ಟುಸಿರು ಬಿಟ್ಟರು. ಮಾರಾಟದ ಬಿಚ್ಚಾಳಿ ಹಾಕಿಕೊಂಡೇ ಬದುಕಿಡೀ ಬದುಕಿದ…

Read More

ಮಲೆನಾಡಿಗರ ಪ್ರಾಣಹಿಂಡುವ ಮಂಗನ ಕಾಯಿಲೆಗೆ ಔಷಧ ಎಲ್ಲಿದೆ?

♦ ಶ್ರೀನಾಥ್ ಅಂಬ್ಲಾಡಿ ನಮ್ಮ ತಂತ್ರಜ್ಞಾನಗಳು, ವೈಜ್ಞಾನಿಕತೆಯ ಆವಿಷ್ಕಾರಗಳು ಇವೆಲ್ಲ ಕಾಡಿನ ಕಂದರಗಳಲ್ಲಿ ಬದುಕುವ ಜನರು ಸಾಯುವಾಗ ಎಲ್ಲಿ ಹೋಗುತ್ತದೋ ಗೊತ್ತಿಲ್ಲ. ನಮ್ಮೊಳಗಿನ ಮೇದಾವಿಗಳು, ವಿಜ್ಞಾನಿಗಳು, ಸಂಶೋಧಕರು, ರಾಜಕಾರಣಿಗಳು, ಸರ್ಕಾರದ ವ್ಯವಸ್ಥೆಗಳು, ಬುದ್ಧಿಜೀವಿಗಳು ಎನಿಸಿಕೊಂಡವರು, ಕಾಯಿಲೆಗೆ ಔಷಧಿ ಕಂಡುಹಿಡಿಯಬೇಕಾದಂತವರೆಲ್ಲಾ ಎಲ್ಲಿ ‘ದಿಂಡುರುಳು ಸೇವೆ’ ಮಾಡುತ್ತಿರುತ್ತಾರೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನು ಒಳಗೊಂಡ ಐದು ರಾಜ್ಯಗಳಲ್ಲಿನ ಕಾಡನ್ನೆ ನಂಬಿಕೊಂಡು ಬದುಕುತ್ತಿರುವವರ ಬದುಕುಗಳು ‘ಲಗಾಟಿ’ ಹೊಡೆಯುತ್ತಿವೆ. ಪ್ರತಿ ಬಾರಿಯೂ ಸರ್ಕಾರಗಳು ಮಂಗನಕಾಯಿಲೆಯ ವಿಚಾರವಾಗಿ ಜನರೆದುರು ಇಲ್ಲ ಸಲ್ಲದ ವಿಚಾರಗಳನ್ನೆತ್ತಿ ‘ಭೋಂಗು’ ಬಿಡುತ್ತಲೆ ಇವೆ. ಇದುವರೆಗೂ ಕೆಎಫ್ ಡಿ ವೈರಸನ್ನು ಸಾಯಿಸುವ ಸಂಶೋಧನೆಗಳಾವುದು ಅವರ ಬತ್ತಳಿಕೆಯಿಂದ ಬಂದಿಲ್ಲ ಅನ್ನುವುದೇ ದುರಂತ. ಈಗಾಗಲೆ ಮಂಗನಕಾಯಿಲೆಯ ನೋವನ್ನು ಸಾಕಷ್ಟು ಕುಟುಂಬಗಳು ತಿನ್ನುತ್ತಿವೆ. ಈ ಮಲೆನಾಡಿನ ಜನರ ಮೇಲೆ ಸರ್ಕಾರಗಳಿಗಿರುವ ನಿರ್ಲಕ್ಷ್ಯತನದ ಪರಮಾವಧಿಗೆ, ಬೇಜಾವಾಬ್ದಾರಿತನಕ್ಕೆ ಇದು ಮತ್ತೊಂದು ಉದಾಹರಣೆಯಾ? ಗೊತ್ತಿಲ್ಲ.   ಅದು…

Read More