ಉಡುಪಿ ಜಿಲ್ಲೆಯಲ್ಲಿ ಇಂದು ಕೊರೋನಾ ೧೮ ಪ್ರಕರಣ:- ಇದರಲ್ಲಿ ಮೂವರು ಪೊಲೀಸರು.

ಉಡುಪಿ ಜಿಲ್ಲೆಯ ಇಂದಿನ ಕೊರೋನಾ ಪ್ರಕರಣಗಳ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದೆ. ಈ ೧೮ ಪ್ರಕರಣಗಳಲ್ಲಿ 14 ಪ್ರಕರಣಗಳ ಮೂಲ ಮಹಾರಾಷ್ಟ್ರವಾದರೆ ಇನ್ನುಳಿದಂತೆ ನಾಲ್ಕು ಪ್ರಕರಣಗಳಲ್ಲಿ ಓರ್ವ ಗರ್ಭಿಣಿ ಮಹಿಳೆ ಮತ್ತು 1 ಎಎಸ್‌ಐ ಮತ್ತುಳಿದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿದ್ದು, ಕಾರ್ಕಳದ ಅಜೆಕಾರು, ಗ್ರಾಮಾಂತರ ಮತ್ತು ಬ್ರಹ್ಮಾವರ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ. ಮುಂದಿನ ೪೮ ಗಂಟೆಗಳ ಕಾಲ ಈ ಮೂರು ಠಾಣೆಗಳನ್ನು ಬಂದ್ ಮಾಡಿ, ಇಲ್ಲಿನ ಸಿಬ್ಬಂದಿಗಳಿಗೆ ಕ್ವಾರಂಟೈನ್‌ಗೆ ನೀಡಲಾಗಿದೆ.  

Read More

ಬ್ರಹ್ಮಾವರ ಪೊಲೀಸ್ ಸಿಬ್ಬಂಧಿಗೆ ಕೊರೋನಾ ಶಂಕೆ! ಬೆಚ್ಚಿ ಬೀಳುವ ವರದಿ!

ಪೋಲಿಸ್ ಸಿಬ್ಬಂಧಿಗಳೇ ಕೊರೋನಾ ಶಂಕಿತರು! ಬ್ರಹ್ಮಾವರ ಮತ್ತು ಕಾರ್ಕಳದ ಅಜೆಕಾರು ಪೊಲೀಸ್ ಠಾಣೆ ಶೀಲ್ ಡೌನ್! ಉಡುಪಿ ಜಿಲ್ಲೆಯ ಪೊಲೀಸರ ನೆತ್ತಿಯ ಮೇಲೆ ಕೊರೋನಾ ಕರಿ ನೆರಳು! ವೃತ್ತಿ ಕಾರಣಕ್ಕೆ ಅವರ ಸಂಪರ್ಕಕ್ಕೆ ಬಂದ ಸಾವಿರಾರು ಸಾರ್ವಜನಿಕರು ಇದೀಗ ಆತಂಕಿತರಾಗಿದ್ದಾರೆ! ಕೊರೋನಾದ ನಿಜವಾದ ವಿರಾಟ್ ದರ್ಶನದ ಮೊದಲ ಹಂತ ಇದೀಗ ಚಾಲನೆ ಕಂಡುಕೊಳ್ಳುತ್ತಿದೆ. ಬ್ರಹ್ಮಾವರದ ಪೊಲೀಸ್ ಕಾನ್ಸ್ಟೇಬರ್ ಒಬ್ಬರು ಕೊರೋನಾ ಶಂಕಿತರು ಎನ್ನಲಾಗಿದ್ದು ಪೂರ್ತಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನೇ ಶೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಬ್ರಹ್ಮಾವರ ಪೋಲೀಸರು ಸಾಸ್ತಾನ ಟೋಲ್ ಪ್ಲಾಝಾದಲ್ಲಿಯೂ ಪರಿಶೀಲನಾ ಕಾರ್ಯ ನಡೆಸುತ್ತಿದ್ದರು ಎನ್ನುವ ಅಂಶವೇ ಆತಂಕಕ್ಕೆ ಕಾರಣವಾಗಿದೆ.

Read More