ಮನೆಯಲ್ಲಿ ಸೀನಿದರೂ ಬರುತ್ತಾರೆ ಪಕ್ಕದ್ಮನೆ ವಾರಿಯರ‍್ಸ: ಲಘುಬರಹ

ಮಧ್ವರಾಜ್‌ ಭಟ್‌ ಅರೇ ಇದೇನಿದು, ಹೊಸ ಶಬ್ಧ. ನನಗೂ ಗೊತ್ತಿರ್ಲಿಲ್ಲ ಕಣ್ರಿ. ಡಿಸೆಂಬರ್ ನಲ್ಲಿ ಪೇಪರ್ ನಲ್ಲಿ ನೋಡಿದ ನೆನೆಪು. ಆದರೆ 2020ರ ಮಾರ್ಚ್ ಬಂತು ನೋಡಿ. ಇದರ ಹವಾ ಜೋರಾಯಿತು. ಅಲ್ಲಿಂದ ಈ ಶಬ್ಧ ಜನರಲ್ಲಿ ನಡುಕ ಹುಟ್ಟಿಸಿದ್ದು ಸುಳ್ಲಲ್ಲ. ಕೊರೋನ ಸಲುವಾಗಿ ಪ್ರಧಾನಿ ಮೋದಿಯವರು ರಾತ್ರಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿದ ಮೇಲೆ ಜನರು ಕಂಗಾಲಾದದ್ದು ಅಷ್ಟಿಟ್ಟಲ್ಲ. ಇದರ ಗುಣ ಲಕ್ಷಣ ನಾನು ನಿಮಗೆ ಬೇರೆ ಹೇಳಬೇಕೆಂದಿನಿಲ್ಲ, ಅದೇ ಶೀತ, ಜ್ವರ. ಜ್ವರ ಜೊರಾಗಿ ಕೊನೆಗೆ ಸಾಯುವ ವರೆಗೂ ಹೋಗುತ್ತದೆ. ಈ ವರ್ಷದಲ್ಲಿ ಅತೀ ಬಳಕೆಯಾದ ಶಬ್ಧಗಳು ಅಂದರೆ ಒಂದು ಶಂಕಿತ, ಸೋಂಕಿತ, ಲಾಕ್ ಡೌನ್, ಸೀಲ್ ಡೌನ್, ಮಾಸ್ಕ್, ಸ್ಯಾನಿಟೈಸರ್. ಜನರಲ್ಲಿ ಬಾಯಿ ಪಾಠ ವಾಗಿದೆ. ಅಯ್ಯೋ ಇದೇನಿದು ಹಾಸ್ಯ ಅಂತ ಹೇಳಿ ಕಥೆ ಬರೆಯುತ್ತಿದ್ದಾರಲ್ಲಾ ಅಂತ ಯೋಚಿಸ ಬೇಡಿ. ಮುಂದೆ ಇದೆ…

Read More