ಮನೋರಂಜನೆ ಮನೋವಿಕಾಸಕ್ಕೂ ಪ್ರೇರಣೆಯಾಗಲಿ : ಮಿಜಾರುಗುತ್ತು ಆನಂದ ಆಳ್ವ

ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ (ರಿ,) ಆಶ್ರಯದಲ್ಲಿ ನಡೆಯುವ ಅಭಿಮತ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಶತಾಯುಷಿ, ಹಿರಿಯ ಕೃಷಿಕರೂ ಆದ ಮಿಜಾರುಗುತ್ತ್ರು ಆನಂದ ಆಳ್ವರು ’ಉತ್ಸವ, ಸಂಭ್ರಮ, ಮಹೋತ್ಸವಗಳಲ್ಲಿ ಏರ್ಪಡಿಸುವ ಸಾಂಸ್ಕೃತಿಕ ವೈಭವಗಳು ಕೇವಲ ಮನೋರಂಜನಗಷ್ಟೇ ಸೀಮಿತವಾಗಿರದೆ ಮನೋವಿಕಾಸಕ್ಕೂ ಪ್ರೇರಣೆಯಾಗಬೇಕು. ಮೊದಲು ದಣಿವ ಮರೆಯಲು ಮನೋರಂಜನೆಗಾಗಿ ಜನಪದ ನಡೆಗಳು ಸಾಗಿ ಬಂದವು, ಅದರಲ್ಲಿ ನೈತಿಕ ಶಿಕ್ಷಣವೂ ಅಂತರ್ಗತವಾಗಿದ್ದವು. ಇಂದು ಅದರ ಮೂಲ ಗಂಧವನ್ನ ಉಳಿಸಿಕೊಂಡು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾದ ಅಗತ್ಯ, ಅನಿವಾರ್ಯತೆ ಇದೆ ಎಂದರು. ಫೆಬ್ರವರಿ 8ನೇ ತಾರೀಕಿನಂದು ನಡೆಯುವ ಅಭಿಮತ ಸಂಭ್ರಮದಲ್ಲಿ ಚಿತ್ರನಿರ್ದೇಶಕ ಯೋಗರಾಜ್ ಭಟ್ ರಿಗೆ ಕೀರ್ತಿಕಳಶ ಪುರಸ್ಕಾರ ಮತ್ತು ಶ್ರಮಜೀವಿ ಕೂಸ ಪೂಜಾರಿ, ಕ್ರೀಡಾ ಸಾಧಕ ಸೀತಾರಾಮ ಶೆಟ್ಟಿ, ಕರಕುಶಲ ಕಲೆಯ ಸಾಧಕಿ ಲಲಿತಾ ಪೂಜಾರಿ ಯವರಿಗೆ ಯಶೋಗಾಥೆ ಗೌರವಾರ್ಪಣೆ ನಡೆಯಲಿದ್ದು ಆ ಸಂಧರ್ಭದಲ್ಲಿ ಆಳ್ವಾಸ್ ವಿಧ್ಯಾರ್ಥಿಗಳ ಸಾಂಸ್ಕೃತಿಕ ವೈಭವ, ಜೀವನ್ ರಾಮ್ ಸುಳ್ಯ ನಿರ್ದೇಶನದ ರಾಷ್ಟ್ರೀಯ ರಂಗಪುರಸ್ಕಾರ ವಿಜೇತ ’ಅಭಿವೃದ್ದಿ’ ಕಿರು ನಾಟಕ, ಪಟ್ಲ ಸತೀಶ್ ಶೆಟ್ಟಿ ಮತ್ತು ಜನ್ಸಾಲೆ ರಾಘವೇಂದ್ರ ಆಚಾರ್ಯರ ಗಾನವೈಭವ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷ ಕೊತ್ತಾಡಿ ಸಂತೋಷ್ ಕುಮಾರ್ ಶೆಟ್ಟಿ ಅಭಿಮತ ಸಂಭ್ರಮದ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಉಳ್ತೂರ್, ಅಭಿಮತ ಸಂಭ್ರಮದ ಸಂಚಾಲಕ ಪ್ರವೀಣ್ ಯಕ್ಷಿಮಠ, ಆಳ್ವಾಸ್ ಶಿಕ್ಷಣ ಸಂಸ್ಥೆಯ ನಿಧೀಶ್ ತೋಳಾರ್, ಜನಸೇವಾ ಟ್ರಸ್ಟಿನ ಕಾರ್ಯದರ್ಶಿ ಅಶೋಕ್ ಬನ್ನಾಡಿ, ವಿನಯ್ ಪುತ್ರನ್, ಅರುಣ್ ಪೂಜಾರಿ, ಶಶಿಕಾಂತ್ ಶೆಟ್ಟಿ ಕಾರ್ಕಳ, ಸಫಲ್ ಶೆಟ್ಟಿ ಐರೋಡಿ ಮುಂತಾದವರು ಉಪಸ್ಥಿತರಿದ್ದರು. ಕಿರಣ್ ಆಚಾರ್ಯ ಸ್ವಾಗತಿಸಿ ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.

Leave a Comment