ಎಚ್ಚರ ಅಳುಪ ಉತ್ಸವದಲ್ಲಿ ಅವ್ಯವಹಾರವಾಗದಿರಲಿ

ಬಾರ್ಕೂರು ಉತ್ಸವದ ಬಗ್ಗೆ ಒಂದಷ್ಟು ಎಚ್ಚರಿಕೆಯ ಅಗತ್ಯವಿದೆ.. ಪುರಾತತ್ವ ಇಲಾಖೆಯ ಅಧೀನದಲ್ಲಿದ್ದ ಬಾರ್ಕೂರಿನ ಚಾರಿತ್ರಿಕ ಸ್ಥಳವನ್ನ ಪ್ರವಾಸೋದ್ಯಮ ಇಲಾಖೆಯ ಅಡಿ ತರುವಲ್ಲಿ ಪ್ರಭಾವ ಬೀರಿದವರು ಯಾರು? ಈಗಾಗಾಲೆ ಬಾರ್ಕೂರಿನ ಕೋಟೆಯೊಳಗಿನ  ಕಲ್ಯಾಣಿಯನ್ನು ಉತ್ಖನನ ಮಾಡಿರುವುದು ಕಾನೂನು ಬಾಹೀರವಲ್ಲವೆ? ಪುರಾತತ್ವ ಇಲಾಖೆಯ ಅಧೀನದಲ್ಲಿದ್ದಾಗ ಅಲ್ಲಿ ಯಾವುದೇ ತರಹದ ಮಾರ್ಪಾಡು ಮಾಡಲು ಸಾಧ್ಯವಿಲ್ಲ. ಇದನ್ನ ಅರಿತೇ ಅದನ್ನು ಪ್ರವಾಸೋದ್ಯಮ ಇಲಾಖೆಯೆ ಅಡಿ ಬರುವಂತೆ ಮಾಡಿರುವ ಅನುಮಾನವಿದೆ. ಇದರಲ್ಲಿ ಕೈಯಾಡಿಸುತ್ತಿರುವ ಪ್ರಭಾವಿಗಳು ಯಾರು? ಇತ್ತೀಚೆಗಷ್ಟೇ ಇಲ್ಲಿ ನಿರ್ಮಾಣಗೊಂಡ ಮಠ ಎಂದು ಕರೆಯಲ್ಪಡುವ ಕಟ್ಟಡಕ್ಕೆ ಸಂಬಂಧಪಟ್ಟವರಿಗೂ ಬಾರ್ಕೂರಿನ ಐತಿಹ್ಯಕ್ಕೂ ಯಾವುದೇ ಸಂಬಧ ಇಲ್ಲದಿದ್ದಾಗ್ಯೂ ಆ ವ್ಯಕ್ತಿಯನ್ನು ಮುಂಚೂಣಿಯಲ್ಲಿ ಬಿಡುವ ಹಿಂದಿನ ಹುನ್ನಾರವೇನು? ಬಾರ್ಕೂರಿಗೆ ಸಂಬಂಧಪಟ್ಟಂತಹ ರಾಜ ಮನೆತನಗಳು ಇರುವಾಗಲೇ ಅನ್ಯ ವ್ಯಕ್ತಿಗಳಿಗೆ ವೇದಿಕೆ ನಿರ್ಮಾಣ ಮಾಡುವ ನಿಲುವುಗಳನ್ನ ತಳೆಯಲು ಇವರಿಗೆಲ್ಲ ಅಧಿಕಾರ ಕೊಟ್ಟವರು ಯಾರು? ಬಾರ್ಕೂರು ಯಾರ ಸ್ವಂತ ಸೊತ್ತಲ್ಲ ಎನ್ನುವುದನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಮನಗಾಣಲಿ.. ಬಾರ್ಕೂರು ಉತ್ಸವದ ಅಥವಾ ಅಳುಪ ಉತ್ಸವದ ಹೆಸರಲ್ಲಿ ಹಣದ ಲೂಟಿಯಾಗುವುದರ ವಿರುದ್ದ ಅಭಿಮತ ಜನಜಾಗೃತಿಯ ಧ್ವನಿಯಾಗಲಿದೆ..

-ವಸಂತ್ ಗಿಳಿಯಾರ್

Leave a Comment