ಕೋಟ ಡಬ್ಬಲ್ ಮರ್ಡರ್: ಶಿರಾದಲ್ಲಿ ಆರೋಪಿಗಳ ಬಂಧನ!

ಕೋಟ: ಅವಳಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಕೋಟ ಬಾಳೆಬೆಟ್ಟಿನ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.

ಎರಡು ದಿನಗಳ ಹಿಂದೆಯ ಉಡುಪಿ ಜಿಲ್ಲಾ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದ್ದು, ಇನ್ನಿತರ ಆರೋಪಿಗಳಿಗಾಗಿ ತೀವ್ರ ಶೋಧ ನಡೆದಿದೆ ಎಂದು ನಿಖರ ಮೂಲಗಳ ಮಾಹಿತಿ ಲಭಿಸಿದೆ.

ಬಂಧಿತ ಆರೋಪಿಗಳಲ್ಲಿ ನಟೋರಿಯಸ್ ಪಾತಕಿ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ ಹಾಗೂ ಇನ್ನಿಬ್ಬರು ಸಹಚರರು ಎಂದು ‘ನಿಮ್ಮ ಅಭಿಮತಕ್ಕೆ ಮೂಲಗಳು ತಿಳಿಸಿವೆ.


ಟಾಯ್ಲೆಟ್ ಪಿಟ್ ವಿವಾದಕ್ಕೆ ಸಂಭಂದಿಸಿದಂತೆ ಜ. 26 ರ ರಾತ್ರಿ ಕೋಟದ ಮಣೂರು
ಬಾಳೆಬೆಟ್ಟಿನ ರಾಜಲಕ್ಷ್ಮಿ ಸಭಾಭವನದ ಎದುರಿನ ರಸ್ತೆಯಲ್ಲಿರುವ ಲೋಹಿತ್ ಪೂಜಾರಿಯ ಮನೆ ಅಂಗಳದಲ್ಲಿ ಭರತ್ ಹಾಗೂ ಯತೀಶ್ ಎನ್ನುವ ಇಬ್ಬರು ಯುವಕರ ಬರ್ಬರ ಹತ್ಯೆ ನಡೆದಿತ್ತು.

ಎರಡು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಈ ಕೊಲೆ ಪ್ರಕರಣದಲ್ಲಿ ಕೊಲೆ ನಡೆದ ಕೆಲವೆ ಕ್ಷಣಗಳಲ್ಲಿ ಪರಾರಿಯಾಗಿದ್ದ ಹಂತಕರು, ವಿವಿಧೆಡೆ ಅಡಗಿ ಕುಳಿತಿದ್ದರು. ಉಡುಪಿ ಎಸ್ಪಿ ಲಕ್ಷಣ ಬ. ನಿಂಬರಗಿ ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಜೈಶಂಕರ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳ ಜಾಡು ಹಿಡಿದ್ದಿದ್ದರು. ಇದೀಗ ಉಡುಪಿ ಜಿಲ್ಲಾ ಪೊಲೀಸರು ನಟೋರಿಯಸ್ ಪಾತಕ ಹಿನ್ನಲೆಯ ಈ ಹಂತಕರನ್ನು ವಾರದಲ್ಲಿಯೇ ಬಂಧಿಸಿದ್ದಾರೆ. ಆರೋಪಿಗಳ ಬಂಧನ ಮಾಡಿದ ಜಿಲ್ಲಾ ಪೊಲೀಸರಿಗೆ ನಾಗರಿಕರು ಅಭಿನಂದಿಸಿದ್ದಾರೆ.

ನಿಮ್ಮ ಅಭಿಮತ ನ್ಯೂಸ್ ಬ್ಯೂರೋ.

Leave a Comment