ಶ್ರೀನಗರ: ಉಗ್ರರ ದಾಳಿಗೆ ಮೇಜರ್‌, ಸೈನಿಕ ಹುತಾತ್ಮ

ನ್ಯೂಸ್‌ ಡೆಸ್ಕ್‌:  ಶ್ರೀನಗರದ ನೌಶೇರಾದಲ್ಲಿ ಉಗ್ರರು ಸ್ಪೋಟಿಸಿದ ಸುಧಾರಿತ ಐಇಡಿ ಬಾಂಬ್‌ ದಾಳಿಯಲ್ಲಿ ಮೇಜರ್‌, ಸೈನಿಕ ಹುತಾತ್ಮರಾಗಿದ್ದು,
ಜ್ಯೂನಿಯರ್​ ಕಮಿಷನ್ಡ್​ ಆಫೀಸರ್​ ಹಾಗೂ ಓರ್ವ ಯೋಧ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಬಾಂಬ್‌ ಸ್ಪೋಟಗೊಳಿಸಿದ್ದು, ಭಾರತೀಯ ಸೇನಾ ಪಡೆ ಗಸ್ತು ತಿರುಗುವ ಸ್ಥಳಗಳಲ್ಲಿ ಉಗ್ರರು ಬಾಂಬ್​ ಇಟ್ಟಿದ್ದರು ಎಂದು ರಕ್ಷಣಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್​ ಟೀಮ್​(BATs)ನ ಕೃತ್ಯವೆನ್ನಲಾಗಿದ್ದು, ಎಲ್‌ಇಡಿ ಹಾಗೂ ಇನ್ನಿತರ ಸ್ಫೋಟಕ ಬಳಸಿ ದಾಳಿ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪೂಂಚ್ ಜಿಲ್ಲೆಗಳಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದಾರೆ.

Leave a Comment