ಮನೆಯಲ್ಲಿ ಸೀನಿದರೂ ಬರುತ್ತಾರೆ ಪಕ್ಕದ್ಮನೆ ವಾರಿಯರ‍್ಸ: ಲಘುಬರಹ

ಮಧ್ವರಾಜ್‌ ಭಟ್‌ ಅರೇ ಇದೇನಿದು, ಹೊಸ ಶಬ್ಧ. ನನಗೂ ಗೊತ್ತಿರ್ಲಿಲ್ಲ ಕಣ್ರಿ. ಡಿಸೆಂಬರ್ ನಲ್ಲಿ ಪೇಪರ್ ನಲ್ಲಿ ನೋಡಿದ ನೆನೆಪು. ಆದರೆ 2020ರ ಮಾರ್ಚ್ ಬಂತು ನೋಡಿ. ಇದರ ಹವಾ ಜೋರಾಯಿತು. ಅಲ್ಲಿಂದ ಈ ಶಬ್ಧ ಜನರಲ್ಲಿ ನಡುಕ ಹುಟ್ಟಿಸಿದ್ದು ಸುಳ್ಲಲ್ಲ. ಕೊರೋನ ಸಲುವಾಗಿ ಪ್ರಧಾನಿ ಮೋದಿಯವರು ರಾತ್ರಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿದ ಮೇಲೆ ಜನರು ಕಂಗಾಲಾದದ್ದು ಅಷ್ಟಿಟ್ಟಲ್ಲ. ಇದರ ಗುಣ ಲಕ್ಷಣ ನಾನು ನಿಮಗೆ ಬೇರೆ ಹೇಳಬೇಕೆಂದಿನಿಲ್ಲ, ಅದೇ ಶೀತ, ಜ್ವರ. ಜ್ವರ ಜೊರಾಗಿ ಕೊನೆಗೆ ಸಾಯುವ ವರೆಗೂ ಹೋಗುತ್ತದೆ. ಈ ವರ್ಷದಲ್ಲಿ ಅತೀ ಬಳಕೆಯಾದ ಶಬ್ಧಗಳು ಅಂದರೆ ಒಂದು ಶಂಕಿತ, ಸೋಂಕಿತ, ಲಾಕ್ ಡೌನ್, ಸೀಲ್ ಡೌನ್, ಮಾಸ್ಕ್, ಸ್ಯಾನಿಟೈಸರ್. ಜನರಲ್ಲಿ ಬಾಯಿ ಪಾಠ ವಾಗಿದೆ. ಅಯ್ಯೋ ಇದೇನಿದು ಹಾಸ್ಯ ಅಂತ ಹೇಳಿ ಕಥೆ ಬರೆಯುತ್ತಿದ್ದಾರಲ್ಲಾ ಅಂತ ಯೋಚಿಸ ಬೇಡಿ. ಮುಂದೆ ಇದೆ…

Read More

ಸಾಸ್ತಾನದ ಅಕ್ಷತಾ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಸಾಧನೆ

ಬ್ರಹ್ಮಾವರ: ಸಾಸ್ತಾನ ಯಕ್ಷಿಮಠ ಗುಂಡ್ಮಿಯ ದಿನಾಕರ ಪೂಜಾರಿ ಮತ್ತು ಗೀತಾ ಪೂಜಾರಿ ದಂಪತಿಗಳ ಮಗಳಾದ ಅಕ್ಷತಾ ಪೂಜಾರಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆ ಯಲ್ಲಿ ಶೇ. 96.17 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಗಮನಾರ್ಹ ಸಾಧನೆ ಮಾಡಿರುವ ಅಕ್ಷತಾ, ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಿದ್ಯಾರ್ಥಿನಿ.

Read More

ಗಲ್ಲು ಶಿಕ್ಷೆಗೆ ಗುರಿಯಾದ ಹಂತಕ ಗಳಗಳನೆ ಅತ್ತಾಗ ಜನರು ಸಂಭ್ರಮಿಸುತ್ತಿದ್ದರು!  

ಇದು ಕರಾವಳಿಯನ್ನ ಬೆಚ್ಚಿ ಬೀಳಿಸಿದ ಅಪರಾಧ ಪ್ರಕರಣ ಅರಬ್ಬಿ ಕಡಲು ಆರುತಿಂಗಳ ಗರ್ಭಿಣಿ ಹೆಣ್ಣಿನ ಮರಣ ಚೀತ್ಕಾರವನ್ನ ಜೀರ್ಣಿಸಿಕೊಂಡ ಕರುಣಾಜನಕ ಕಥೆಯೊಂದನ್ನ ನಿಮಗೆ ಹೇಳುತ್ತೇನೆ ಕೇಳಿ. ♦ವಸಂತ್ ಗಿಳಿಯಾರ್ ನಿಮಗೆ ನೆನಪಿರಬಹುದು ಈಗ್ಗೆ ಐದು ವರ್ಷದ ಹಿಂದೆ ಆರುತಿಂಗಳ ಬಸುರಿ ಹೆಣ್ಣು ಇಂದಿರಾಳನ್ನ ತನ್ನ  ದೇಹದಾಯಕ್ಕೆ ಬಳಸಿಕೊಂಡು ಅತಿನೀಚ ಬಯಕೆಗಾಗಿ ಆಕೆಯ ಬದುಕನ್ನೇ ಆಹುತಿಯಾಗಿಸಿಕೊಂಡು ಪಾಪಿಗಳ ಪುಸ್ತಕದ ಸರಕಾದ ಪಾತಕಿಯೊಬ್ಬನ ಕಥೆ! ಆ ನತದೃಷ್ಟ ಹೆಣ್ಣಿನ ದುರಂತ ಕಥೆಯನ್ನ ಮತ್ತೇಕೆ ಬರೆಯಬೇಕು ಎಂದು ನಿಮಗೂ ಅನ್ನಿಸಿರಬೇಕು..  ಐದು  ವರ್ಷದ ಹಿಂದೆ ಈ ವರದಿ ಬರೆಯುವಾಗ ಮನದ ತುಂಬಾ ತುಂಬು ಆಕ್ರೋಶವಿದ್ದರೆ ಈಗ ಒಂದಷ್ಟು ಸಮಾಧಾನವಿದೆ.. ಸತ್ತ ಇಂದಿರಾ ಮತ್ತು ಆಕೆಯ ಒಡಲಲ್ಲೇ ಮಿಸುಕಾಡಿ ಉಸಿರು ನೀಗಿಕೊಂಡ ಆರು ತಿಂಗಳ ಬ್ರೂಣ ಮತ್ತೆ ಬದುಕಿ ಬರಲಾರರು ಹೌದಾದರೂ ಆ ಎರಡು ಅಮಾಯಕ ಜೀವವನ್ನ ಕೊಂದ ಪಾತಕಿಯನ್ನ ಬದುಕಗೊಡಬೇಡಿ ಎಂಬುದಾಗಿ ಕುಂದಾಪುರದಲ್ಲಿನ…

Read More

ಉಡುಪಿ ಜಿಲ್ಲೆಯಲ್ಲಿ ಇಂದು ಕೊರೋನಾ ೧೮ ಪ್ರಕರಣ:- ಇದರಲ್ಲಿ ಮೂವರು ಪೊಲೀಸರು.

ಉಡುಪಿ ಜಿಲ್ಲೆಯ ಇಂದಿನ ಕೊರೋನಾ ಪ್ರಕರಣಗಳ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದೆ. ಈ ೧೮ ಪ್ರಕರಣಗಳಲ್ಲಿ 14 ಪ್ರಕರಣಗಳ ಮೂಲ ಮಹಾರಾಷ್ಟ್ರವಾದರೆ ಇನ್ನುಳಿದಂತೆ ನಾಲ್ಕು ಪ್ರಕರಣಗಳಲ್ಲಿ ಓರ್ವ ಗರ್ಭಿಣಿ ಮಹಿಳೆ ಮತ್ತು 1 ಎಎಸ್‌ಐ ಮತ್ತುಳಿದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿದ್ದು, ಕಾರ್ಕಳದ ಅಜೆಕಾರು, ಗ್ರಾಮಾಂತರ ಮತ್ತು ಬ್ರಹ್ಮಾವರ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ. ಮುಂದಿನ ೪೮ ಗಂಟೆಗಳ ಕಾಲ ಈ ಮೂರು ಠಾಣೆಗಳನ್ನು ಬಂದ್ ಮಾಡಿ, ಇಲ್ಲಿನ ಸಿಬ್ಬಂದಿಗಳಿಗೆ ಕ್ವಾರಂಟೈನ್‌ಗೆ ನೀಡಲಾಗಿದೆ.  

Read More

ಬ್ರಹ್ಮಾವರ ಪೊಲೀಸ್ ಸಿಬ್ಬಂಧಿಗೆ ಕೊರೋನಾ ಶಂಕೆ! ಬೆಚ್ಚಿ ಬೀಳುವ ವರದಿ!

ಪೋಲಿಸ್ ಸಿಬ್ಬಂಧಿಗಳೇ ಕೊರೋನಾ ಶಂಕಿತರು! ಬ್ರಹ್ಮಾವರ ಮತ್ತು ಕಾರ್ಕಳದ ಅಜೆಕಾರು ಪೊಲೀಸ್ ಠಾಣೆ ಶೀಲ್ ಡೌನ್! ಉಡುಪಿ ಜಿಲ್ಲೆಯ ಪೊಲೀಸರ ನೆತ್ತಿಯ ಮೇಲೆ ಕೊರೋನಾ ಕರಿ ನೆರಳು! ವೃತ್ತಿ ಕಾರಣಕ್ಕೆ ಅವರ ಸಂಪರ್ಕಕ್ಕೆ ಬಂದ ಸಾವಿರಾರು ಸಾರ್ವಜನಿಕರು ಇದೀಗ ಆತಂಕಿತರಾಗಿದ್ದಾರೆ! ಕೊರೋನಾದ ನಿಜವಾದ ವಿರಾಟ್ ದರ್ಶನದ ಮೊದಲ ಹಂತ ಇದೀಗ ಚಾಲನೆ ಕಂಡುಕೊಳ್ಳುತ್ತಿದೆ. ಬ್ರಹ್ಮಾವರದ ಪೊಲೀಸ್ ಕಾನ್ಸ್ಟೇಬರ್ ಒಬ್ಬರು ಕೊರೋನಾ ಶಂಕಿತರು ಎನ್ನಲಾಗಿದ್ದು ಪೂರ್ತಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನೇ ಶೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಬ್ರಹ್ಮಾವರ ಪೋಲೀಸರು ಸಾಸ್ತಾನ ಟೋಲ್ ಪ್ಲಾಝಾದಲ್ಲಿಯೂ ಪರಿಶೀಲನಾ ಕಾರ್ಯ ನಡೆಸುತ್ತಿದ್ದರು ಎನ್ನುವ ಅಂಶವೇ ಆತಂಕಕ್ಕೆ ಕಾರಣವಾಗಿದೆ.

Read More

ಕೊರೋನಾ, ಕಂಪ್ಯೂಟರ್ ಮತ್ತು ಕಣ್ಣಿನ ಆರೋಗ್ಯ

♦ ಡಾ. ಶ್ರೀಕಾಂತ್ ಶೆಟ್ಟಿ,  ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ. ಕೊರೋನಾ ಸಾಂಕ್ರಾಮಿಕವು ನಮ್ಮೆಲ್ಲರ ಜೀವನಶೈಲಿಯನ್ನು ಮಾರ್ಪಾಡು ಮಾಡಿದೆ. ಮನೆಯಿಂದ ಕೆಲಸ (work from home) ಮತ್ತು ಆನ್‌ಲೈನ್ ಸಭೆಗಳು , ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಜನಸಂಖ್ಯೆಯಲ್ಲಿನ ಉಲ್ಬಣ, ತುರ್ತು ಸಂದರ್ಭಗಳಲ್ಲಿ ಕಡಿಮೆ ಸಾರಿಗೆ ಸೌಲಭ್ಯ, ವೈದ್ಯರ ಲಭ್ಯತೆ ಇತ್ಯಾದಿ. ಸಾಂಕ್ರಾಮಿಕ ರೋಗವನ್ನು ಎದುರಿಸಲು ನಾವು ಜೀವನಶೈಲಿಯ ಬದಲಾವಣೆಗಳ ‌ ಒಳನೋಟವನ್ನು ತಿಳಿದಿರಬೇಕು ಮತ್ತು ಹೊಸ ಜೀವನಶೈಲಿ ಕಾರ್ಯಗಳನ್ನು ನಿರ್ವಹಿಸಲು ಉತ್ತಮ ದೃಷ್ಟಿಯನ್ನು ಹೊಂದಿರಬೇಕು. ಅತಿಯಾದ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುವುದರಿಂದ ಅನೇಕ ಜನರ ಕಣ್ಣಿನ ಮೇಲೆ , ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು- ಕಣ್ಣಿನ ಅಸ್ವಸ್ಥತೆ, ತಲೆನೋವು, ದೃಷ್ಟಿ ತೊಂದರೆಗಳು, ಕಣ್ಣಿನ ಸೆಳೆತ ಮತ್ತು ಕೆಂಪು ಕಣ್ಣುಗಳು ಇತ್ಯಾದಿ. ಇವೆಲ್ಲವನ್ನು ಒಟ್ಟಾಗಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಎನ್ನುತ್ತಾರೆ. ಆನ್‌ಲೈನ್ ತರಗತಿಗಳು…

Read More

ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ ಯತ್ನ: ಆರೋಪಿ ಬಂಧನ

ಬ್ರಹ್ಮಾವರ: ಬೆಳ್ಳಂಬೆಳಗ್ಗೆ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಳಿಗನೂರು ನಿವಾಸಿ ಹೊನ್ನಪ್ಪ ೩೪ ಬಂಧಿತ ಆರೋಪಿಯಾಗಿದ್ದು, ಪ್ರಸ್ತುತ ಐರೋಡಿ ಗ್ರಾಮದ ಮಾಬುಕಳದ ಅಲ್ಸೆಬೆಟ್ಟು ಮಹಾಕಾಳಿ ದೇವಸ್ಥಾನದ ಬಳಿ ವಾಸಿಸುತ್ತಿದ್ದ. ಸಂತೆಕಟ್ಟೆಯ ನವಮಿ ಬೇಕರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಬಂಧಿಸುವಲ್ಲಿ ಯಶ ಕಂಡಿದ್ದಾರೆ. ಘಟನೆ ಹಿನ್ನೆಲೆ ಬ್ರಹ್ಮಾವರದ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೆಲಸಕ್ಕಿದ್ದ ಕಾಪು ಮೂಲದ ಮಹಿಳೆ ವಾಪಾಸು ಕಾಪುವಿಗೆ ಹೋಗುವ ಸಂದರ್ಭ ಡ್ರಾಪ್ ಕೊಡುವ ನೆಪದಲ್ಲಿ ಮಾರ್ಗ ಬದಲಿಸಿ ನೀಲಾವರದ ಸಮೀಪ ಅತ್ಯಾಚಾರಕ್ಕೆ ಯತ್ನಿಸಿದ್ದ. ಶ್ಯಾಮಿಲಿ ಶನಾಯದ ಬಳಿ ಆರೋಪಿ ಮಹಿಳೆಯನ್ನು ಹತ್ತಿಸಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರಲ್ಲಿ ಆರೋಪಿಯ ನೀಲಿ ಬಣ್ಣದ ಪ್ಲಾಟಿನಾ ಗಾಡಿಯನ್ನು ಬಳಸಿದ್ದ. ಇದರ ಆಧಾರದ ಮೇಲೆ…

Read More

ಮಕಾಡೆ ಮಲಗುತ್ತಿದೆ ಹೊಟೆಲ್ ಉದ್ಯಮ. ದಿಕ್ಕೆಲ್ಲಿ? ದೆಸೆಯೆಲ್ಲಿ? ಆತಂಕದಲ್ಲಿದೆ, ಅನ್ನದಾತರ ಬದುಕು !!

ನಮ್ಮ ಊರು ಬೆಳೆದದ್ದು, ಇಲ್ಲಿನ ದೈವಗಳ ಮನೆಯ ಮೇಲೆ ಹೊಸ ಹೆಂಚು, ಕೊನೆಗೆ ಟೆರೇಸು ಕಂಡದ್ದು, ನಮ್ಮ ಊರ ದೇವಸ್ಥಾನಗಳ ಪ್ರಾಂಗಣಗಳು ಶಿಲಾಮಯವಾಗಿ ತಂಪಾದದ್ದು ದೇವಳದ ಮಾಡಿಗೆ ಹಿತ್ತಾಳೆ, ತಾಮ್ರಗಳ ಹೊಡೆಸಿ ಮೆರುಗು ಕೊಟ್ಟಿದ್ದು, ದೇವರ ಮೈಮೇಲೆ ತರಹಾವರಿ ಆಭರಣಗಳು ಮಿನುಗಿದ್ದು, ಊರೂರುಗಳಲ್ಲಿಯೂ ನಾಗಮಂಡಲವಾದದ್ದು, ಹರಕೆಯಾಟದ ಹೆಸರಲ್ಲಿ ಕಲಾವಿದರ ಬದುಕು ನಕ್ಕಿದ್ದು, ಕೋಲ ಕಟ್ಟುವ ಪಾಣಾರನ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದು ಹೀಗೆ ನಮ್ಮ ಕರಾವಳಿ ಒಟ್ಟಾರೆಯಾಗಿ ಬೆಳೆದದ್ದು ಅನ್ನದಾತರ ಕರುಣೆಯಿಂದ ಅರ್ಥಾತ್ ಹೊಟೇಲು ಉದ್ಯಮದಿಂದ. ಊರು ಬಿಟ್ಟು ನಗರ ಸೇರಿ ಹೋಟೇಲುಗಳಲ್ಲಿ ದುಡಿದು ಹೊಟೇಲು ಕಟ್ಟಿದ ಅವರು ಊರಿನ ಕಾಗದ ತಲುಪಿದಾಗಲೆಲ್ಲಾ ಹಣವನ್ನ ಮನಿಯಾರ್ಡರ್ ಮಾಡಿದರು. ತಂಗಿಯರ, ಅಕ್ಕಂದಿರ ಮದುವೆ ಮಾಡಿಸಿ ತಾವು ಮದುವೆಯಾಗುವಾಗ ಪ್ರಾಯವಾದರೂ ಊರಲ್ಲಿ ಅವರೆಲ್ಲ ನೆಮ್ಮದಿಯಾದರಲ್ಲ ಎಂದು ನಿಟ್ಟುಸಿರು ಬಿಟ್ಟರು. ಮಾರಾಟದ ಬಿಚ್ಚಾಳಿ ಹಾಕಿಕೊಂಡೇ ಬದುಕಿಡೀ ಬದುಕಿದ…

Read More

ಮಲೆನಾಡಿಗರ ಪ್ರಾಣಹಿಂಡುವ ಮಂಗನ ಕಾಯಿಲೆಗೆ ಔಷಧ ಎಲ್ಲಿದೆ?

♦ ಶ್ರೀನಾಥ್ ಅಂಬ್ಲಾಡಿ ನಮ್ಮ ತಂತ್ರಜ್ಞಾನಗಳು, ವೈಜ್ಞಾನಿಕತೆಯ ಆವಿಷ್ಕಾರಗಳು ಇವೆಲ್ಲ ಕಾಡಿನ ಕಂದರಗಳಲ್ಲಿ ಬದುಕುವ ಜನರು ಸಾಯುವಾಗ ಎಲ್ಲಿ ಹೋಗುತ್ತದೋ ಗೊತ್ತಿಲ್ಲ. ನಮ್ಮೊಳಗಿನ ಮೇದಾವಿಗಳು, ವಿಜ್ಞಾನಿಗಳು, ಸಂಶೋಧಕರು, ರಾಜಕಾರಣಿಗಳು, ಸರ್ಕಾರದ ವ್ಯವಸ್ಥೆಗಳು, ಬುದ್ಧಿಜೀವಿಗಳು ಎನಿಸಿಕೊಂಡವರು, ಕಾಯಿಲೆಗೆ ಔಷಧಿ ಕಂಡುಹಿಡಿಯಬೇಕಾದಂತವರೆಲ್ಲಾ ಎಲ್ಲಿ ‘ದಿಂಡುರುಳು ಸೇವೆ’ ಮಾಡುತ್ತಿರುತ್ತಾರೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನು ಒಳಗೊಂಡ ಐದು ರಾಜ್ಯಗಳಲ್ಲಿನ ಕಾಡನ್ನೆ ನಂಬಿಕೊಂಡು ಬದುಕುತ್ತಿರುವವರ ಬದುಕುಗಳು ‘ಲಗಾಟಿ’ ಹೊಡೆಯುತ್ತಿವೆ. ಪ್ರತಿ ಬಾರಿಯೂ ಸರ್ಕಾರಗಳು ಮಂಗನಕಾಯಿಲೆಯ ವಿಚಾರವಾಗಿ ಜನರೆದುರು ಇಲ್ಲ ಸಲ್ಲದ ವಿಚಾರಗಳನ್ನೆತ್ತಿ ‘ಭೋಂಗು’ ಬಿಡುತ್ತಲೆ ಇವೆ. ಇದುವರೆಗೂ ಕೆಎಫ್ ಡಿ ವೈರಸನ್ನು ಸಾಯಿಸುವ ಸಂಶೋಧನೆಗಳಾವುದು ಅವರ ಬತ್ತಳಿಕೆಯಿಂದ ಬಂದಿಲ್ಲ ಅನ್ನುವುದೇ ದುರಂತ. ಈಗಾಗಲೆ ಮಂಗನಕಾಯಿಲೆಯ ನೋವನ್ನು ಸಾಕಷ್ಟು ಕುಟುಂಬಗಳು ತಿನ್ನುತ್ತಿವೆ. ಈ ಮಲೆನಾಡಿನ ಜನರ ಮೇಲೆ ಸರ್ಕಾರಗಳಿಗಿರುವ ನಿರ್ಲಕ್ಷ್ಯತನದ ಪರಮಾವಧಿಗೆ, ಬೇಜಾವಾಬ್ದಾರಿತನಕ್ಕೆ ಇದು ಮತ್ತೊಂದು ಉದಾಹರಣೆಯಾ? ಗೊತ್ತಿಲ್ಲ.   ಅದು…

Read More

ನನ್ನ ವಿರುದ್ಧ ಎಂಥಹ ದುಷ್ಟ ಸಂಚೊಂದು ತಯಾರಾಗಿತ್ತು ಗೊತ್ತಾ?

ಮೊನ್ನೆ ಸಡನ್ ಆಗಿ ಆ ಹುಡುಗ ನೆನಪಾದ! ಏನವನ ಹೆಸರು? ಮರೆತಿದ್ದೇನೆ. ನಾನಾಗ ಮಾನಂಬಳ್ಳಿ ಮನೆಯಲ್ಲಿರುತ್ತಿದ್ದೆ. ಅಭಿಮತ ಶುರುವಾದ ಹೊಸತಿನಲ್ಲಿ. ಅಲ್ಲಿಗೆ ಯಾರೆಲ್ಲ ಬಂದು ಇದ್ದು ಹೋಗುತ್ತಿದ್ದರು ಎಂಬುದೇ ನಿಗೂಢ! ದೂರದೂರಿನ ಗೆಳೆಯರು ಬಂದು ಇರುತ್ತಿದ್ದರು. ಯಾರು ಬಂದರು ಯಾರು ಹೋದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ಗೆಳೆಯರು ಹಿಂಡುಗಟ್ಟಲೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ರಾತ್ರಿಯಾಯಿತೆಂದರೆ ಆ ಮನೆಯಲ್ಲಿ ಮತ್ತೊಂದು ಸುತ್ತಿನ ಅಬ್ಬರ ಶುರುವಾಗಿ ಬಿಡುತ್ತಿತ್ತು. ಆ ಮೆನೆಯೆಂಬೋ ಆಫೀಸಿಗೆ ಅವತ್ತೊಂದು ದಿನ ಕಾಳಾವರದ ಜಾತ್ರೆಯಲ್ಲಿ ಹೆಂಗಸರ ಸರಗಳ್ಳತನ ಮಾಡಿದ ಹುಡುಗರ ಪೈಕಿ ಒಬ್ಬ ಹುಡುಗ ಬಂದು ರೋಧಿಸಿದ್ದ! ಪೊಲೀಸರಿಂದ ಬಚಾವ್ ಮಾಡಿ ಎಂದು. ಪತ್ರಿಕೆಗೆ ಜಾಹಿರಾತು ಸಂಗ್ರಾಹಕ್ಕೆ ಎಂದು ಒಬ್ಬ ಹುಡುಗನನ್ನ ಸ್ನೇಹಿತರೊಬ್ಬರು ಪರಿಚಯ ಮಾಡಿ ಕೊಟ್ಟಿದ್ದರು. ಸಣ್ಣ ಪತ್ರಿಕೆಗಳು ಬದುಕುವುದೇ ಜಾಹಿರಾತಿನಲ್ಲಿ. ಹುಡುಗ ನೋಡಿದ ತಕ್ಷಣ ಶ್ರಮಜೀವಿ ಅಂತನ್ನಿಸಿತು. ಕೆಲಸಕ್ಕೆ ಸೇರಿಸಿಕೊಂಡೆ. ಆದರೆ ಅವನಿಗೆ ಇನ್ನೊಬ್ಬ…

Read More