ಸಾಲಿಗ್ರಾಮದಿಂದ ಕೋಟದ ತನಕ ಬೆಳಗಲಿದೆ ಅಯ್ಯಪ್ಪ ಜ್ಯೋತಿ

ಸಾಲಿಗ್ರಾಮ: ನಾಡಿದ್ದು ಶಬರಿಮಲೆಯಲ್ಲಿ ಮಕರಜ್ಯೋತಿ ಬೆಳಗುವ ಸಮಯಕ್ಕೆ ಸರಿಯಾಗಿ ಕೋಟ ಅಮೃತೇಶ್ವರಿ ದೇವಸ್ಥಾನದಿಂದ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತನಕ ಅಯ್ಯಪ್ಪ ಭಕ್ತರೆಲ್ಲರೂ ಸೇರಿ ಬೃಹತ್ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮವನ್ನು ಆಯೋಜಿಸಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ಸಂಜೆ 6:30ಕ್ಕೆ ವಿವಿಧ ಸಂಘಸಂಸ್ಥೆಗಳು ಹಾಗೂ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ ಅಯ್ಯಪ್ಪ ಜ್ಯೋತಿ ಕೈಯಲ್ಲಿ ಹಿಡಿದು ಶಬರಿಮಲೆ ಪಾವಿತ್ರ್ಯತೆ ಕಾಪಾಡುವಂತೆ ಆಗ್ರಹಿಸಲು ಹಾಗೂ ಹಿಂದೂ ದೇವಾಲಯಗಳ ಮೇಲೆ ಸಮಾನತೆ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಸಲುವಾಗಿ ಈ ಅಯ್ಯಪ್ಪ ಜ್ಯೋತಿ ಬೆಳಗಲಿದೆ,ಈಗಾಗಲೇ ಅಯ್ಯಪ್ಪ ಜ್ಯೋತಿ ಸಮಿತಿ ಈ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿದ್ದು ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುವ ಸಂಭವವಿದೆ.

ಅಭಿಮತ ನ್ಯೂಸ್ ಬ್ಯೂರೋ.

Leave a Comment