ಈ ಭೂಪ ತನ್ನ ಹದಿನೈದು ಹೆಂಡಿರಿಗೆ ಕೊಡಿಸಿದ ಕಾರು ಯಾವುದು ಗೊತ್ತಾ?

ನಿಮಗೆ ಎಸ್ವಟಿನಿ ಗೊತ್ತಾ? ಬಹುಷಃ ಗೊತ್ತಿರಲಿಕ್ಕಿಲ್ಲ! ನಂಬಿ! ಅದು ಜಗತ್ತಿನ ಅತ್ಯಂತ ಬಡತನದಲ್ಲಿರುವ ಸಣ್ಣ ದೇಶಗಳಲ್ಲಿ ಒಂದು. ಅದಕ್ಕೊಬ್ಬ ರಾಜನಿದ್ದಾನೆ. 1986 ರಲ್ಲೇ ಆ ದೇಶದ ರಾಜನಾಗಿ ಆತ ಆಯ್ಕೆಯಾಗುತ್ತಾನೆ. ಆಗ ಅವನಿಗೆ ಕೇವಲ ಹದಿನೆಂಟೇ ವರ್ಷ ವಯಸ್ಸು! ಅತೀ ಚಿಕ್ಕ ವಯಸ್ಸಿನಲ್ಲೇ ಬಡ ದೇಶದ ರಾಜನಾದ ಈತನ ಬಗ್ಗೆ ಬಹಳ ವಿಶ್ವಾಸವಿದ್ದಿತ್ತು.ಆದರೆ ಪ್ರಜೆಗಳ ನಂಬಿಕೆ ಸುಳ್ಳಾಗಿದೆ. ಎಸ್ವಟಿನಿಯ ರಾಜನ ಹೆಸರು ಮಸ್ವಾಟಿ. ಆತನಿಗೆ ಹದಿನೈದು ಜನ ಅಧಿಕೃತ ಪತ್ನಿಯರಿದ್ದಾರೆ! ರಾಜಾ ಬಹುಪತ್ನಿ ವಲ್ಲಭ ಅಂತ ಸುಮ್ನೆ ಹೇಳಿದ್ದಾರೆ ಅಂದ್ಕೊಂಡ್ರಾ? ಅವನು ಅತ್ಯಂತ ಐಶಾರಾಮಿ ಜೀವನ ಜೀವಿಸುವ ಮಹರಾಜ! ಅವನದ್ದೇ ಸ್ವಂತ ಜೆಟ್ ವಿಮಾನವಿದೆ. ಅವನೇ ಒಂದು ವಿಮಾನ ನಿಲ್ದಾಣವನ್ನೂ ಮಾಡಿಕೊಂಡಿದ್ದಾನೆ. ತನ್ನ ಕುಟುಂಬದ ಇಪ್ಪತ್ತಮೂರು ಮಕ್ಕಳಿಗೆ ಆತ ದುಬಾರಿ ಬೆಲೆಯ ಬಿ.ಎಂ. ಡಬ್ಲ್ಯೂ ಮತ್ತು ಎಸ್.ಯು.ವಿ ಕಾರುಗಳನ್ನ ಕೊಡಿಸಿದ್ದಾನೆ.ಈ ಮಸ್ವಾಟೆ ಬಳಿ ಒಟ್ಟು ಇಪ್ಪತ್ತು ಮರ್ಸಿಡಿಸ್, ಮೇಬ್ಯಾಕ್ ಪುಲ್ ಮನ್, ಮೇ ಬ್ಯಾಕ್ 62, ಬಿ.ಎಂ.ಡಬ್ಲ್ಯೂ ಎಸ್ ಸಿಕ್ಸ್ ನಂತಹ ಕಾರುಗಳಿವೆ. ಇವನ ಲೇಟೆಸ್ಟ್ ಸುದ್ದಿ ಏನು ಗೊತ್ತಾ? ಈತನ ಹದಿನೈದು ಹೆಂಡತಿಯರಿಗೆ ಒಟ್ಟು ಹತ್ತೊಂಬತ್ತು ರೋಲ್ಸ್ ರಾಯ್ಸ್ ಕಾರುಗಳನ್ನ ಕೊಡಿಸಿದ್ದಾನೆ. ಅದರ ಒಟ್ಟು ಬೆಲೆ ನೂರಾ ಎಪ್ಪತ್ತೈದು ಕೋಟಿ ರೂಪಾಯಿಗಳಂತೆ! ಜಗತ್ತಿನ ಅತೀ ಬಡತನದಲ್ಲಿರುವ ಅತೀ ಚಿಕ್ಕ ದೇಶದ ರಾಜನೊಬ್ಬ ಎಂಥಾ ವಿಲಾಸಿ ಬದುಕು ಬದುಕುತ್ತಿದ್ದಾನಲ್ಲವೆ?
ಪಾಪ ಎಸ್ವಟಿನಿಯ ಪ್ರಜೆಗಳು

-ಅಭಿಮತ ಡೆಸ್ಕ್

Leave a Comment