ಮಧ್ವರಾಜ್ ಭಟ್ ಅರೇ ಇದೇನಿದು, ಹೊಸ ಶಬ್ಧ. ನನಗೂ ಗೊತ್ತಿರ್ಲಿಲ್ಲ ಕಣ್ರಿ. ಡಿಸೆಂಬರ್ ನಲ್ಲಿ ಪೇಪರ್ ನಲ್ಲಿ ನೋಡಿದ ನೆನೆಪು. ಆದರೆ 2020ರ ಮಾರ್ಚ್ ಬಂತು ನೋಡಿ. ಇದರ ಹವಾ ಜೋರಾಯಿತು. ಅಲ್ಲಿಂದ ಈ ಶಬ್ಧ ಜನರಲ್ಲಿ ನಡುಕ ಹುಟ್ಟಿಸಿದ್ದು ಸುಳ್ಲಲ್ಲ. ಕೊರೋನ ಸಲುವಾಗಿ ಪ್ರಧಾನಿ ಮೋದಿಯವರು ರಾತ್ರಿ ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಿಸಿದ ಮೇಲೆ ಜನರು ಕಂಗಾಲಾದದ್ದು ಅಷ್ಟಿಟ್ಟಲ್ಲ. ಇದರ ಗುಣ ಲಕ್ಷಣ ನಾನು ನಿಮಗೆ ಬೇರೆ ಹೇಳಬೇಕೆಂದಿನಿಲ್ಲ, ಅದೇ ಶೀತ, ಜ್ವರ. ಜ್ವರ ಜೊರಾಗಿ ಕೊನೆಗೆ ಸಾಯುವ ವರೆಗೂ ಹೋಗುತ್ತದೆ. ಈ ವರ್ಷದಲ್ಲಿ ಅತೀ ಬಳಕೆಯಾದ ಶಬ್ಧಗಳು ಅಂದರೆ ಒಂದು ಶಂಕಿತ, ಸೋಂಕಿತ, ಲಾಕ್ ಡೌನ್, ಸೀಲ್ ಡೌನ್, ಮಾಸ್ಕ್, ಸ್ಯಾನಿಟೈಸರ್. ಜನರಲ್ಲಿ ಬಾಯಿ ಪಾಠ ವಾಗಿದೆ. ಅಯ್ಯೋ ಇದೇನಿದು ಹಾಸ್ಯ ಅಂತ ಹೇಳಿ ಕಥೆ ಬರೆಯುತ್ತಿದ್ದಾರಲ್ಲಾ ಅಂತ ಯೋಚಿಸ ಬೇಡಿ. ಮುಂದೆ ಇದೆ…
Read MoreCategory: ಅಂಕಣ
ಕೊರೋನಾ, ಕಂಪ್ಯೂಟರ್ ಮತ್ತು ಕಣ್ಣಿನ ಆರೋಗ್ಯ
♦ ಡಾ. ಶ್ರೀಕಾಂತ್ ಶೆಟ್ಟಿ, ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ. ಕೊರೋನಾ ಸಾಂಕ್ರಾಮಿಕವು ನಮ್ಮೆಲ್ಲರ ಜೀವನಶೈಲಿಯನ್ನು ಮಾರ್ಪಾಡು ಮಾಡಿದೆ. ಮನೆಯಿಂದ ಕೆಲಸ (work from home) ಮತ್ತು ಆನ್ಲೈನ್ ಸಭೆಗಳು , ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಜನಸಂಖ್ಯೆಯಲ್ಲಿನ ಉಲ್ಬಣ, ತುರ್ತು ಸಂದರ್ಭಗಳಲ್ಲಿ ಕಡಿಮೆ ಸಾರಿಗೆ ಸೌಲಭ್ಯ, ವೈದ್ಯರ ಲಭ್ಯತೆ ಇತ್ಯಾದಿ. ಸಾಂಕ್ರಾಮಿಕ ರೋಗವನ್ನು ಎದುರಿಸಲು ನಾವು ಜೀವನಶೈಲಿಯ ಬದಲಾವಣೆಗಳ ಒಳನೋಟವನ್ನು ತಿಳಿದಿರಬೇಕು ಮತ್ತು ಹೊಸ ಜೀವನಶೈಲಿ ಕಾರ್ಯಗಳನ್ನು ನಿರ್ವಹಿಸಲು ಉತ್ತಮ ದೃಷ್ಟಿಯನ್ನು ಹೊಂದಿರಬೇಕು. ಅತಿಯಾದ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುವುದರಿಂದ ಅನೇಕ ಜನರ ಕಣ್ಣಿನ ಮೇಲೆ , ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು- ಕಣ್ಣಿನ ಅಸ್ವಸ್ಥತೆ, ತಲೆನೋವು, ದೃಷ್ಟಿ ತೊಂದರೆಗಳು, ಕಣ್ಣಿನ ಸೆಳೆತ ಮತ್ತು ಕೆಂಪು ಕಣ್ಣುಗಳು ಇತ್ಯಾದಿ. ಇವೆಲ್ಲವನ್ನು ಒಟ್ಟಾಗಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಎನ್ನುತ್ತಾರೆ. ಆನ್ಲೈನ್ ತರಗತಿಗಳು…
Read Moreಮಲೆನಾಡಿಗರ ಪ್ರಾಣಹಿಂಡುವ ಮಂಗನ ಕಾಯಿಲೆಗೆ ಔಷಧ ಎಲ್ಲಿದೆ?
♦ ಶ್ರೀನಾಥ್ ಅಂಬ್ಲಾಡಿ ನಮ್ಮ ತಂತ್ರಜ್ಞಾನಗಳು, ವೈಜ್ಞಾನಿಕತೆಯ ಆವಿಷ್ಕಾರಗಳು ಇವೆಲ್ಲ ಕಾಡಿನ ಕಂದರಗಳಲ್ಲಿ ಬದುಕುವ ಜನರು ಸಾಯುವಾಗ ಎಲ್ಲಿ ಹೋಗುತ್ತದೋ ಗೊತ್ತಿಲ್ಲ. ನಮ್ಮೊಳಗಿನ ಮೇದಾವಿಗಳು, ವಿಜ್ಞಾನಿಗಳು, ಸಂಶೋಧಕರು, ರಾಜಕಾರಣಿಗಳು, ಸರ್ಕಾರದ ವ್ಯವಸ್ಥೆಗಳು, ಬುದ್ಧಿಜೀವಿಗಳು ಎನಿಸಿಕೊಂಡವರು, ಕಾಯಿಲೆಗೆ ಔಷಧಿ ಕಂಡುಹಿಡಿಯಬೇಕಾದಂತವರೆಲ್ಲಾ ಎಲ್ಲಿ ‘ದಿಂಡುರುಳು ಸೇವೆ’ ಮಾಡುತ್ತಿರುತ್ತಾರೋ ಅದೂ ಗೊತ್ತಿಲ್ಲ. ಒಟ್ಟಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನು ಒಳಗೊಂಡ ಐದು ರಾಜ್ಯಗಳಲ್ಲಿನ ಕಾಡನ್ನೆ ನಂಬಿಕೊಂಡು ಬದುಕುತ್ತಿರುವವರ ಬದುಕುಗಳು ‘ಲಗಾಟಿ’ ಹೊಡೆಯುತ್ತಿವೆ. ಪ್ರತಿ ಬಾರಿಯೂ ಸರ್ಕಾರಗಳು ಮಂಗನಕಾಯಿಲೆಯ ವಿಚಾರವಾಗಿ ಜನರೆದುರು ಇಲ್ಲ ಸಲ್ಲದ ವಿಚಾರಗಳನ್ನೆತ್ತಿ ‘ಭೋಂಗು’ ಬಿಡುತ್ತಲೆ ಇವೆ. ಇದುವರೆಗೂ ಕೆಎಫ್ ಡಿ ವೈರಸನ್ನು ಸಾಯಿಸುವ ಸಂಶೋಧನೆಗಳಾವುದು ಅವರ ಬತ್ತಳಿಕೆಯಿಂದ ಬಂದಿಲ್ಲ ಅನ್ನುವುದೇ ದುರಂತ. ಈಗಾಗಲೆ ಮಂಗನಕಾಯಿಲೆಯ ನೋವನ್ನು ಸಾಕಷ್ಟು ಕುಟುಂಬಗಳು ತಿನ್ನುತ್ತಿವೆ. ಈ ಮಲೆನಾಡಿನ ಜನರ ಮೇಲೆ ಸರ್ಕಾರಗಳಿಗಿರುವ ನಿರ್ಲಕ್ಷ್ಯತನದ ಪರಮಾವಧಿಗೆ, ಬೇಜಾವಾಬ್ದಾರಿತನಕ್ಕೆ ಇದು ಮತ್ತೊಂದು ಉದಾಹರಣೆಯಾ? ಗೊತ್ತಿಲ್ಲ. ಅದು…
Read Moreಅಂತಹ ಯಶಸ್ವಿಯಾದವರ ಹಲವರ ಅಂಗೈಯಲ್ಲಿ ಈ ಒಂದು ಗೆರೆ ಇದೆ……..!
ರವಿಬೆಳಗೆರೆ ಅಂದರೇ ಒಂದು ದೊಡ್ಡ ಆತ್ಮವಿಶ್ವಾಸ” ಅಂದರು ಗೆಳೆಯ ವಸಂತ್ ಗಿಳಿಯಾರ್. ನಮ್ಮಿಬ್ಬರ ಭೇಟಿಯಲ್ಲಿ ಆರ್.ಬಿ ವಿಷಯ ಯಾವಾಗಲೂ ಅಂತರ್ಗತವಾಗಿರುತ್ತದೆ. ಇಬ್ಬರೂ ಅವರನ್ನೇ ಓದಿಕೊಂಡವರು. ಅದೊಂದು ದಿನ ಗಿಳಿಯಾರ್ ರೂಮಿನೊಳಗೆ ಹೊಕ್ಕವನಿಗೆ ಸಿಕ್ಕಿದ್ದು ಗಿಳಿಯಾರ್ ನಡೆಸುತ್ತಿದ್ದ ಚಿತ್ರಲೇಖ ಪತ್ರಿಕೆ. ಅದರ ತುಂಬೆಲ್ಲಾ ರವಿಬೆಳಗೆರೆಯವರ ಪತ್ರಿಕೋದ್ಯಮದ ಸಾಹಸವೇ ಬರೆದಿತ್ತು. ನಾನೇ ಅಂದರೆ ನನಗಿಂತಲೂ ಗಿಳಿಯಾರಿಗೇ ಅತಿ ಹೆಚ್ಚು ಪ್ರಭಾವ ಬೀರಿದ್ದಾರೆ ಬೆಳಗೆರೆ ಅಂದುಕೊಂಡೆ. ಗಿಳಿಯಾರ್ ಇವರನ್ನೇ ಧ್ಯಾನಿಸಿ ಗೆದ್ದವರು. ನಮ್ಮ ಬೆರಗೇ ಆರ್.ಬಿ. ಯವರು!! ಅವರು ಬೆಳೆದ ಪರಿ ಅಂತಹದು. ಬಳ್ಳಾರಿಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದರು. ಪತ್ರಿಕೆ ನಡೆಸಿ, ಪ್ರಾರ್ಥನಾ ಶಾಲೆ ಕಟ್ಟಿ ಯಶಸ್ವಿನ ಉತ್ತುಂಗಕ್ಕೇರಿದ್ದು, ಕಳೆದೆರಡು ದಶಕಗಳಲ್ಲೆ. ಹಾಲು ಮಾರಿದರು, ದಿನ ಪತ್ರಿಕೆ ಹಂಚಿದರು, ಮೆಡಿಕಲ್ ರೆಪ್ರೆಸೆಂಟೇಟಿವ್ ಆದರು, ಸಿನೆಮಾ ಥಿಯೇಟರನಲ್ಲಿ ಕೆಲಸ ಮಾಡಿದರು. ಇತಿಹಾಸ ಉಪನ್ಯಾಸಕರಾದರು. ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ತನ್ನ ಸಾರಥ್ಯದಲ್ಲೇ…
Read Moreಧೋ ಎಂಬ ಮಳೆ ಸುರಿಯುತ್ತಿರುವಾಗಲೆ ನಾವೆಲ್ಲ ಆ ಸುದ್ದಿ ಕೇಳಿದ್ದು…
ಜೋರು ಮಳೆ. ಮನೆಯಿಂದ ಹೊರಗಡೆ ಹೋಗಲಾಗುವುದಿಲ್ಲ. ಆ ಪಡು ದಿಕ್ಕಿನಲ್ಲಿ ನೋಡಿದರೆ ಯಾರೂ ಕಾಣಿಸುತ್ತಿಲ್ಲ. ದಟ್ಟ ಮಂಜು ಕಟ್ಟಿಕೊಂಡಂತಿದೆ.. ಮನೆಯ ಒಳಗಡೆ ಮಬ್ಬುಗತ್ತಲು, ಕರೆಂಟ್ ಇದ್ದಿರಲಿಲ್ಲ. ಖಾಲಿ ಪಾತ್ರೆಗಳೆ ತುಂಬಿರುವ ಅಡುಗೆ ಮನೆಗೆ ಹೋದರೆ, ಕೆಟ್ಟ ಹಸಿವು. ಆ ಬ್ರಾಹ್ಮಣರ ಮನೆಯಲ್ಲಿ ಮಾಡಿದ ತಿಂಡಿಯ ಪರಿಮಳ ಮೂಗಿಗೆ ಬಡಿದಂತೆ! ಮನೆಯ ಒಳಗೂ ಹೊರಗೂ ಒಡಾಡುವುದು, ಅದೆನನ್ನೋ ಯೋಚಿಸುವುದು. ಅಮ್ಮನನ್ನು ನೆನೆಯುವುದು.ದೂರದಲ್ಲಿ ಕಾಣುವ ಬಯಲಿನ ಕಡೆಗೆ ನೋಡಿ, ಅಲ್ಲಿ ಅಮ್ಮನ ಸೀರೆ ಕಂಡರೆ ಸಮಾಧಾನ ಪಟ್ಟುಕೊಳ್ಳುವುದು.. ಮಳೆ ಬಂತೆಂದರೆ ಬಾಲ್ಯದ ಆಟ, ತುಂಟಾಟಗಳ ಮೆರವಣಿಗೆ. ಬಹುಷಃ ಇಷ್ಟೆ ಮಳೆಯಿದ್ದಿರಬಹುದು. ಪಡುಹೊಳೆ ತುಂಬಿ ಹರಿಯುತ್ತಿತ್ತು. ಧೋ..ಎಂಬ ಮಳೆ ಸುರಿಯುತ್ತಿರುವಾಗಲೆ ನಾವೆಲ್ಲಾ ಆ ಸುದ್ದಿ ಕೇಳಿದ್ದು!! ಹೊಳೆಯಲ್ಲಿ ಮುಳುಗಿ ಹೋದರಂತೆ! ಜೀವವೇ ಹೋಯಿತಂತೆ!! ನಮ್ಮ ಮನೆಯ ಹಿಂಬದಿಯಲ್ಲಿ ಸಾಗಿದರೆ ದೂರಕ್ಕೆ ಕಾಣ ಸಿಗುವ ಆ ಹೆಂಚಿನ ಮನೆಯ ತಾಯಿಯೆ, ಇನ್ನಿಲ್ಲವಾದದ್ದು! ಅವರ…
Read Moreಮಳೆಗಾಲದಲ್ಲಿ ವಾಹನ ಚಾಲನೆಯಲ್ಲಿ ಎಚ್ಚರಿಕೆ:ನಿಮ್ಮ ಮನೆಯಲ್ಲಿ ನಿಮ್ಮನ್ನು ಕಾಯುವವರಿದ್ದಾರೆ!
-ವಸಂತ್ ಗಿಳಿಯಾರ್ ಮುಂಗಾರು ಪೂರ್ವ ಮಳೆ ಕೈ ಕೊಟ್ಟರೂ ಮುಂಗಾರು ಶುಭಾರಂಭಗೊಂಡಿದೆ. ಮಳೆಗಾಲವೆಂದರೆ ಇಳೆ ತಂಪಾಗಿ ಜೀವ ಜಲ ಸಂಮೃದ್ದವಾಗುವ ಕಾಲ. ಗುಡುಗು ಸಿಡಿಲುಗಳ ಆರ್ಭಟದ ಜೊತೆಗೆ ನೆರೆಯ ಭೀತಿಯೂ ಮಳೆಗಾಲದಿಂದ ಹೊರತಾಗಿಲ್ಲ. ಮುಖ್ಯವಾಗಿ ಮಳೆಗಾಲದಲ್ಲಿ ಎಚ್ಚರಿಕೆಯಲ್ಲಿರಬೇಕಾದವರು ವಾಹನ ಸವಾರರು. ಅದರಲ್ಲಿಯೂ ಬೈಕ್ ಸವಾರರು. ನಿಮ್ಮ ಮನೆಯಲ್ಲಿ ಬೈಕ್ ಕ್ರೇಝ್ ಇರುವ ಮಕ್ಕಳಿದ್ದರೆ ಅವರನ್ನ ಕರೆದು ಇಂದೇ ತಿಳಿಹೇಳಿರಿ, ಮಳೆಗಾಲದಲ್ಲಿ ರಸ್ತೆ ಜಾರುತ್ತಿರುತ್ತದೆ. ವಾಹನಗಳ ಓಡಾಟದಿಂದಾಗಿ ಲೀಕೇಜ್ ಆಗುವ ಪ್ಯೂಯಲ್, ವಾಹನಗಳು ಹೊರಬಿಡುವ ಹೊಗೆಯ ಕಾರಣಕ್ಕೆ ಎಣ್ಣೆಯಂತೆ ಜಾರುವ ಅಂಶಗಳು ರಸ್ತೆಯಲ್ಲಿರುತ್ತವೆ. ಹಾಗಾಗಿ ಮಳೆಗಾಲದಲ್ಲಿ ಬೈಕ್ ಸ್ಕಿಡ್ ಆಗಿ ಅಪಘಾತಗಳಾಗುವ ಸಂಭವ ಅತೀ ಹೆಚ್ಚು. ವಾಹನಗಳ ಬ್ರೇಕ್ ನಿರೀಕ್ಷೆಯಂತೆ ಕೆಲಸ ಮಾಡುವುದಿಲ್ಲ! ಕೆಲವು ರಸ್ತೆಗಳು ಹೊಂಡಗಳಿಂದ ಕೂಡಿರುತ್ತವೆ ಎಲ್ಲೆಲ್ಲಿ ಹೊಂಡಗಳಿವೆ, ಮ್ಯಾನ್ ಹೋಲುಗಳಿವೆ? ಚರಂಡಿ ಓಪನ್ ಆಗಿದೆ ಎನ್ನುವುದನ್ನ ಊಹಿಸುವುದೂ ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯ ಕಣ್ಣೊಂದು ಆ…
Read Moreಊಂಡು ಹೋದ ಕೊಂಡು ಹೋದ
ವಿಶು ಶೆಟ್ಟಿ ಹೇಳಿದ ಕಥೆ -ಅವಿನಾಶ್ ಕಾಮತ್ ಸುಮಾರು 8 ವರ್ಷಗಳ ಹಿಂದಿರಬಹುದು. ಅಂಬಲಪಾಡಿಯಲ್ಲಿ ಕಾರು – ಬೈಕ್ ನಡುವೆ ಅಪಘಾತವಾಗುತ್ತದೆ. ಘಟನೆ ಸಂಭವಿಸಿದ ಕೂಡಲೇ ಅಲ್ಲೇ ಇದ್ದ ಇವರ ಜತೆ ಒಂದಿಷ್ಟು ಮಂದಿ ಧಾವಿಸಿ ಬರುತ್ತಾರೆ. ಆ ಬೈಕ್ ಸವಾರ, ಯುವಕ ಯದ್ವಾ ತದ್ವಾ ಬೈಕ್ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷ ಕಂಡವರು ಹೇಳುತ್ತಾರೆ. ರಸ್ತೆ ಮೇಲೆ ಬಿದ್ದುಕೊಂಡಿದ್ದ ಯುವಕ ತನ್ನ ಬೈಕ್ ನಜ್ಜುಗುಜ್ಜಾಗಿದ್ದನ್ನೇ ಗೊಣಗುತ್ತ ‘ ಅಯ್ಯೋ ನನ್ನ ಅಣ್ಣನ ಬೈಕ್ ಇದು, ಮನೆ ಒಳಗೆ ಬಿಡುವುದಿಲ್ಲ,ನನ್ನನ್ನು ಅವ ಸಾಯಿಸ್ತಾನೆ’ ಎಂದೆಲ್ಲಾ ತನಗಾದ ಪೆಟ್ಟನ್ನೂ ಅಷ್ಟಾಗಿ ಲೆಕ್ಕಿಸದೆ ಒಂದೇ ಸಮನೆ ಅಣ್ಣನ ಕುರಿತೇ ಬೊಬ್ಬಿಡುತ್ತಿದ್ದನಂತೆ! ಇದನ್ನು ಗಮನಿಸಿದ ಶೆಟ್ಟರು ‘ ಬೈಕ್ ಬಗ್ಗೆ ಚಿಂತೆ ಬಿಡು, ನಿನಗೆ ತಲೆಗೆ, ಕಾಲಿಗೆ ಪೆಟ್ಟಾಗಿದೆ, ಆಸ್ಪತ್ರೆಗೆ ಹೋಗೋಣ, ನಿನ್ನ ಬೈಕ್ ಬಗ್ಗೆ ಏನೇ ಆದರು ನಾನು…
Read Moreಹೀಗಿನ ರಾಜಕಾರಣಿಗಳನ್ನ ದೊಡ್ಡ ಎತ್ತರದಲ್ಲಿ ಕಾಣ ಬಯಸುತ್ತೇನೆ
–ವಸಂತ್ ಗಿಳಿಯಾರ್ ಬೆಂಗಳೂರಿನಲ್ಲಿ ನನ್ನ ತವರು ಮನೆ ಅಂತನ್ನಿಸುವುದು ರಾಜಾಜಿ ನಗರ ಆದ್ದರಿಂದ ಸುರೇಶ್ ಕುಮಾರ್ ರವರನ್ನ ತೀರ ಹತ್ತಿರದಿಂದ ನೋಡುವ, ಚರ್ಚಿಸುವ ಅವಕಾಶ ನನಗಿತ್ತು.. ಶಾಸಕರ ಭವನದಲ್ಲಿದ್ದಾಗಲೂ ಆಗಾಗ ಸುರೇಶ್ ಸರ್ ಸಿಗುತ್ತಿದ್ದರು. ಮಂತ್ರಿಯಾದಾಗಲೂ, ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಅವರನ್ನ ತೀರ ಸನಿಹದಲ್ಲೇ ಗಮನಿಸಿದ್ದೆ. ಬೆಂಗಳೂರಿನಲ್ಲಿ ವಿಜಯ್ ಕುಮಾರ್ ಮತ್ತು ಸುರೇಶ್ ಕುಮಾರ್ ಇವರಿಬ್ಬರೂ ನಾನು ಹೆಚ್ಚು ಗೌರವಿಸುವ ರಾಜಕಾರಣಿಗಳು. ಬಾಜಪ ಕಛೇರಿಯಿಂದ ಹೊರಡುತ್ತಿರುವ ’ಧ್ಯೇಯ ಕಮಲ’ ಎನ್ನುವ ಪತ್ರಿಕೆಯ ಸಂಪಾದಕರೂ ಸುರೇಶ್ ಕುಮಾರ್. ಸದಾ ಸರಳಾತಿ ಸರಳ ನಡಾವಳಿಯ, ಯಾರೇ ಸಿಕ್ಕರೂ ತೀರ ಪ್ರೀತಿಯಿಂದಲೇ ಮಾತಾಗುವ, ಒಂದಿನಿತೂ ಅಹಂಕಾರವಿಲ್ಲದೆ, ಯಾವ ಹಿಂಬಾಲಕರ ನಿರೀಕ್ಷೆಯೂ ಇಲ್ಲದೆ ಕೆಲವೊಮ್ಮೆ ತನ್ನ ಹಳೇ ಬೈಕಿನಲ್ಲೇ ಪಕ್ಷದ ಸಭೆಗೆ ಬಂದು ಬಿಡುವ ಸುರೇಶ್ ಕುಮಾರ್ ಹಾಗಿನ ರಾಜಕಾರಣಿಗಳು ಇಂದಿಗೂ ಇದ್ದಾರೆ ಎನ್ನುವುದೇ ರಾಜಕಾರಣದೆಡೆಗಿನ ಆಸಕ್ತಿಯನ್ನ ಹೆಚ್ಚಿಸುತ್ತದೆ. ಇಂತಿಪ್ಪ ಸುರೇಶ್ ಕುಮಾರ್…
Read Moreಸುಮಲತಾ ಮೇಲೆ ತಮ್ಮ ಕ್ಷುಧ್ರ ರಾಜನೀತಿಯ ಪ್ರಯೋಗಕ್ಕಿಳಿದ ಕುಮಾರ ಸ್ವಾಮಿ
ಪುತ್ರವಾತ್ಸಲ್ಯದಿಂದಾಗಿಯೇ ದೊಡ್ಡ ಮಟ್ಟದಲ್ಲಿ ಅವಮಾನಕ್ಕೆ ಈಡಾಗಲಿದ್ದಾರೆ. –ವಸಂತ್ ಗಿಳಿಯಾರ್ ಮಂಡ್ಯ ಲೋಕಸಭಾ ಕ್ಷೇತ್ರವೊಂದರ ಕಾರಣಕ್ಕೇ ಕುಮಾರ ಸ್ವಾಮಿಯವರಿಗೆ ರಾಜ್ಯದಾಧ್ಯಂತ ವರ್ಚಸ್ಸು ಕ್ಷೀಣಿಸಿದೆ ಮತ್ತು ಕ್ಷೀಣಿಸುತ್ತಲೇ ಇದೆ.. ಕುಟುಂಬ ರಾಜಕಾರಣದ ಆರೋಪ ಅಷ್ಟೇನು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತಿತ್ತು ಎನ್ನಲಾಗದು, ಆದರೆ ಆ ಹೆಣ್ಣುಮಗಳು ಸುಮಲತಾ ವಿರುದ್ದ ದೊಡ್ಡಗೌಡರ ಪಡೆ ಮಾಡುವ ಆರೋಪಗಳು, ಅದೊಂದು ಕ್ಷೇತ್ರದ ಬಗ್ಗೆಯೇ ಹೆಚ್ಚು ಪೋಕಸ್ ಮಾಡುತ್ತಿರುವ ಮಾಧ್ಯಮಗಳು ಈ ಬೆಳವಣಿಗೆಗೆ ಕಾರಣ.. ಸುಮಲತಾ ಹಿಂದೆ ಯಾರಿದ್ದಾರೋ ಗೊತ್ತಿಲ್ಲ, ಆದರೆ ಆಕೆಯ ಮಾತುಗಳೆಲ್ಲವನ್ನ ಗಮನಿಸುತ್ತಲೇ ಬಂದಾಗ ತೀರ ತಾಳ್ಮೆ, ಸಮಚಿತ್ತಭಾವ, ಪ್ರಬುದ್ಧ ಪ್ರತ್ಯುತ್ತರಗಳು ಆಕೆಯ ಕುರಿತಾದ ಗೌರವವನ್ನ ವರ್ಧಿಸಿವೆ. ಈ ಕಡೆ ಕುಮಾರ ಸ್ವಾಮಿಯ ಬೆಟಾಲಿಯನ್ನು ಹತಾಶೆಗೆ ಬಿದ್ದಂತೆ ಮಾತಾಡುತ್ತಿರುವುದನ್ನ, ಹೆಣ್ಣುಮಗಳ ಬಗ್ಗೆ ತೀರ ವ್ಯಂಗ್ಯವಾಗಿಯೇ ಆಡಿಕೊಳ್ಳುತ್ತಿರುವುದನ್ನ ಇಡೀ ರಾಜ್ಯದ ಜನತೆಯೂ ಗಮನಿಸುತ್ತಿದ್ದಾರೆ ಆದ್ದರಿಂದ ರಾಜ್ಯಮಟ್ಟದಲ್ಲೇ ಕುಮಾರ ಸ್ವಾಮಿಯವರ ವರ್ಚಸ್ಸಿಗೆ ಅದು ಧಕ್ಕೆ ತಂದಿದೆ..…
Read Moreಪ್ರಿಯಾಂಕ ಗಾಂಧಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದಲೇ ಅಭ್ಯರ್ಥಿ??!!
ಯಾವ ಇಂದಿರಮ್ಮಳನ್ನ ದುರ್ಗೆ ಎಂದು ದೇಶವಾಸಿಗಳು ಕರೆದಿದ್ದರೋ ಅದೇ ಇಂದಿರಾಗಾಂಧಿಯ ವಿರುದ್ದವೇ ಚಲೇಜಾವ್ ಕೂಗೊಂದು ದೇಶದಾಧ್ಯಂತ ಹಬ್ಬಿ ಹರಡಿ ಬಿಟ್ಟಿತ್ತು.. ಅದು ಸಾವಿರದ ಒಂಬೈನೂರ ಎಪ್ಪತ್ತೇಳು ನಿಮಗೂ ಗೊತ್ತಿರಲೇ ಬೇಕು ಇಂದಿರಮ್ಮ ದೇಶದಾದ್ಯಂತ ತುರ್ತುಪರಿಸ್ಥಿತಿ ಹೇರಿ ಬಿಟ್ಟಳು.. ಚಳವಳಿಗಳಾದವು ಜನ ದಂಗೆಗೆದ್ದರು ಆ ಕಾರಣಕ್ಕಾಗಿಯೇ ರಾಷ್ಟ್ರದ ಮೂಲೆ ಮೂಲೆಯಲ್ಲಿಯೂ ಸಾವಿರಾರು ನಾಯಕರುಗಳು ರೂಪುತಳೆದರು. ದೇಶದ ಜೈಲುಕೋಣೆಗಳು ಚಿಂತಕರ ಛಾವಡಿಯಾದವು. ಇಂದಿರಮ್ಮನ ವಿರುದ್ದ ಭುಗಿಲೆದ್ದಿದ್ದ ಆಕ್ರೋಶ ಆಕೆಯನ್ನ ರಾಯ್ ಬರೇಲಿಯಲ್ಲಿ ಅದೇ ವರ್ಷದ ಲೋಕಸಭಾ ಚುನಾವಣೆಯಲ್ಲಿ ಅಕ್ಷರಶಃ ಕೆಡೆದು ಮಲಗಿಸಿಯೇ ಬಿಟ್ಟಿತು ಇಂದಿರಾ ವಿರುದ್ದ ರಾಜ್ ನಾರಾಯಣ್ ಗೆದ್ದು ಬಿಟ್ಟಿದ್ದರು.. ರಾಜಕೀಯ ಮರುಜನ್ಮ ಹಾಗೆ ಸೋತ ಇಂದಿರಮ್ಮನಿಗೆ ರಾಜಕೀಯವಾಗಿ ಮತ್ತೆ ಮರುಜನ್ಮ ನೀಡಿದ ನಾಡು ಕಾಫಿನಾಡು. ಚಿಕ್ಕಮಗಳೂರಿನಲ್ಲಿ ಆಗ ಡಿ.ಬಿ. ಚಂದ್ರೆಗೌಡರು ಸಂಸದರಾಗಿದ್ದರೂ ಇಂದಿರಗಾಂಧಿಗಾಗಿ ತನ್ನ ಸ್ಥಾನವನ್ನ ತ್ಯಾಗ ಮಾಡಿದರು.. ೧೯೭೮ ರಲ್ಲಿ ನಡೆದ ಈ ಉಪ ಚುನಾವಣೆಯಲ್ಲಿ…
Read More