ಕೊರೋನಾ, ಕಂಪ್ಯೂಟರ್ ಮತ್ತು ಕಣ್ಣಿನ ಆರೋಗ್ಯ

♦ ಡಾ. ಶ್ರೀಕಾಂತ್ ಶೆಟ್ಟಿ,  ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ. ಕೊರೋನಾ ಸಾಂಕ್ರಾಮಿಕವು ನಮ್ಮೆಲ್ಲರ ಜೀವನಶೈಲಿಯನ್ನು ಮಾರ್ಪಾಡು ಮಾಡಿದೆ. ಮನೆಯಿಂದ ಕೆಲಸ (work from home) ಮತ್ತು ಆನ್‌ಲೈನ್ ಸಭೆಗಳು , ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಜನಸಂಖ್ಯೆಯಲ್ಲಿನ ಉಲ್ಬಣ, ತುರ್ತು ಸಂದರ್ಭಗಳಲ್ಲಿ ಕಡಿಮೆ ಸಾರಿಗೆ ಸೌಲಭ್ಯ, ವೈದ್ಯರ ಲಭ್ಯತೆ ಇತ್ಯಾದಿ. ಸಾಂಕ್ರಾಮಿಕ ರೋಗವನ್ನು ಎದುರಿಸಲು ನಾವು ಜೀವನಶೈಲಿಯ ಬದಲಾವಣೆಗಳ ‌ ಒಳನೋಟವನ್ನು ತಿಳಿದಿರಬೇಕು ಮತ್ತು ಹೊಸ ಜೀವನಶೈಲಿ ಕಾರ್ಯಗಳನ್ನು ನಿರ್ವಹಿಸಲು ಉತ್ತಮ ದೃಷ್ಟಿಯನ್ನು ಹೊಂದಿರಬೇಕು. ಅತಿಯಾದ ಕಂಪ್ಯೂಟರ್ ಅಥವಾ ಮೊಬೈಲ್ ಬಳಸುವುದರಿಂದ ಅನೇಕ ಜನರ ಕಣ್ಣಿನ ಮೇಲೆ , ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು- ಕಣ್ಣಿನ ಅಸ್ವಸ್ಥತೆ, ತಲೆನೋವು, ದೃಷ್ಟಿ ತೊಂದರೆಗಳು, ಕಣ್ಣಿನ ಸೆಳೆತ ಮತ್ತು ಕೆಂಪು ಕಣ್ಣುಗಳು ಇತ್ಯಾದಿ. ಇವೆಲ್ಲವನ್ನು ಒಟ್ಟಾಗಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಎನ್ನುತ್ತಾರೆ. ಆನ್‌ಲೈನ್ ತರಗತಿಗಳು…

Read More

ಇಂತಹ ಆಹಾರಗಳನ್ನು ಚಳಿಗಾಲದಲ್ಲಿ ತಪ್ಪದೇ ಮಿಸ್ ಮಾಡದೇ ಸೇವಿಸಿ

ಚಳಿಗಾಲ ಬಂತೆಂದರೆ ಕೆಲವು ಖರ್ಚುಗಳು ಅರಿವಿಲ್ಲದೇ ಬರುತ್ತವೆ. ಚಳಿಗಾಲದ ಬಟ್ಟೆಗಳ ಜೊತೆಗೇ ಕೋಣೆಯನ್ನು ಬಿಸಿಯಾಗಿಸಲು ಬಳಸುವ ಹೀಟರ್ ನಿಂದಾಗಿ ವಿದ್ಯುತ್ ವೆಚ್ಚ ಬೇರೆ! ಇದೇ ರೀತಿಯಾಗಿ ನಮ್ಮ ದೇಹವೂ ಚಲಿಗಾಲದಲ್ಲಿ ಕೆಲವಾರು ಬದಲಾವಣೆಗೊಳಪಡುತ್ತದೆ. ವಿಶೇಷವಾಗಿ ಚಳಿಯನ್ನು ಎದುರಿಸಲು ದೇಹದ ತಾಪಮಾನವನ್ನೂ ಏರಿಸಲು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಬೇಕಾಗುತ್ತದೆ ಹಾಗೂ ನಮಗೆ ಈ ಸಮಯದಲ್ಲಿ ಕೆಲವು ವಿಶೇಷ ಆಹಾರಗಳನ್ನೂ ಸೇವಿಸಲು ಮನಸ್ಸಾಗುತ್ತದೆ. ಕೊರೆಯುವ ಚಳಿಯಲ್ಲಿ ಬೆಳಗ್ಗೆದ್ದು ವ್ಯಾಯಾಮ ಮಾಡಲು ಯಾರಿಗಾದರೂ ಮನಸ್ಸಾಗುತ್ತದೆ? ಬೆಚ್ಚನೆ ಹೊದ್ದು ತಡವಾಗಿ ಏಳುವುದನ್ನೇ ಎಲ್ಲರೂ ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ವ್ಯಾಯಾಮ ಆಟೋಟಗಳಿಗೆ ರಜೆ ಬೀಳುವ ಜೊತೆಗೇ ಅನಾರೋಗ್ಯಕರ ಆಹಾರದತ್ತ ಒಲವು ತೋರುವುದು ಸಹಾ ಕೆಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಬೇಸಿಗೆ ಬಂತೆಂದರೆ ಐಸ್ ಕ್ರೀಂ ತಿನ್ನುವುದು ಇಷ್ಟವಾದರೂ ಇದನ್ನು ಹೆಚ್ಚಾಗಿ ತಿನ್ನಬಾರದು, ಅಂತೆಯೇ ಚಳಿಗಾಲದಲ್ಲಿಯೂ ಮನಸ್ಸಾದ ಎಲ್ಲಾ ಆಹಾರಗಳನ್ನು, ಉದಾಹರಣೆಗೆ ಬಿಸಿ ಚಾಕಲೇಟ್ ಅಥವಾ ಕುಕ್ಕೀಸ್ ತಿನ್ನುವ…

Read More