ಮಾಯಕದ ರೂಪಸಿ

ದೇವಲೋಕದಿ ಇಳಿದ ಅಪ್ಸರೆಯ ಚಂದ ಕೆಂಪೇರಿದ ತುಟಿಗಳಲಿ ಇಣುಕುವ ಮುಗುಳ್ನಗೆಯ ಅಂದ ಗುಳಿಕೆನ್ನೆಯ ಬೆಡಗಿ, ನಾಗರ ಜಡೆಯ ಸುಂದರಿ ಕೋಲ್ಮಿಂಚಿನ ತೀಕ್ಷ್ಣತೆಯ ನಿನ್ನ ಕಣ್ಣೋಟಕ್ಕೆ ಸೋತೆ… ಸುಗಂಧಿನಿಯೇ ತಾಳ್ಮೆಯೇ ನಿನಗೆ ಆಭರಣ ಮಾತು ಕತ್ತಿಯ ಅಲಗು ಅದರೊಳಗಿದೆ ಪ್ರೀತಿಯ ಸೆರಗು ನಿಷ್ಠುರಿ ನೀನು…  ಆದರೂ ಮಮತೆಯ ಮಡಿಲು. ಮಂದಸ್ಮಿತ ಹೃದಯೇಶ್ವರೀ.. ನನ್ನಾಳುವ ರೂಪಸಿ ಮಾಯಕದ ನೋಟ ಬೀರಿ ಕ್ಷಣ ಕ್ಷಣಕ್ಕೂ ಮಾಯವಾಗುವ ಮಾಯೆ ಆದರೂ ಮನಸಿಗೆ ಮುದ ನೀಡುವ ರೂಪದರಸಿ -ಹರೀಶ್‌ ಕಿರಣ್‌ ತುಂಗ

Read More

ಲವ್ ಕಾಲಂ.. ಇವುಳೆ ಹುಡುಗಿ!

ನಿನ್ನ ನೆನೆಪು ಉಬುಕಿ ಬರುವಾಗಲೆಲ್ಲಾ ನಾನು ಆಕಾಶದೆಡೆಗೆ ಮುಖ ಮಾಡಿ ನೋಡುತ್ತೇನೆ. ಇವತ್ತು ಮಳೆಯಿಲ್ಲ ಎಂದು ನಕ್ಷತ್ರ ಥಳಕ್ಕನೆ ನಕ್ಕು ಮಿನುಗುತ್ತದೆ..!! ಮೋಡದ ಮರೆಯ ಸರಿಸಿ ಓಡೋಡಿ ಬರುವ ಶಿಶಿರಚಂದ್ರ ಬೆಳ್ಳಿ ಕಿರಣಗಳದ್ದೇ ಬಾಣ ಹೂಡಿ ನಿಲ್ಲುತ್ತಾನೆ ..!! ಮತ್ತೆ ಪುನಃ ದಟ್ಟ ಮಳೆಯ ದಿನದಲ್ಲಿ ನಾವಿಬ್ಬರೂ ಜೊತೆಗಿದ್ದದ್ದು ನೆನಪಾಗುತ್ತದೆ!! ಹೇ ಹುಡುಗಿ…, ಯಾಕೆ ನೀ ಹೀಗೆ ನೆನಪಾಗಿ ಕಾಡುತ್ತೀ ಹೇಳು..?? ಹೆಣ್ಣೇ ನಿನಗೆ ಗೊತ್ತಾ?? ಉತ್ಸವದ ದಿವಸ ದೇವರ ಹೊತ್ತು ತರುವ ಬೆಳ್ಳಿ ರಥದಂತವನು ನಾನಾದರೆ, ನೀನು ಒಳಗೆ ಕುಳಿತಿರುವ ದೇವರು.‌!! ಯಾವಗಲೋ ಖುಷಿಯಲ್ಲಿದ್ದಾಗ ಮುದ್ದು ಹಸುಗೂಸೊಂದು ಹಲ್ಲಿಲ್ಲದ ಬಾಯಿಂದ ಆಡುವ ಬೊಚ್ಚು ನಗುವಿನಂತಹ ನಿನ್ನ ನಗು ನನಗೆ ತುಂಬಾ ಇಷ್ಟ ಕಣೇ..!! ಮಾತುಗಳಿಲ್ಲದ ಗಳಿಗೆಯಲ್ಲಿ ನಮ್ಮವು ನಾಲ್ಕು ಕಂಗಳು ಸೇರಿ ಆರಂಬಿಸುವ ಕನ್ವರ್ಸೇಷನ್ನು ಕೂಡ ನನಗೆ ತಿಂದು ಬಿಡುವಷ್ಟು ಇಷ್ಟ.! ಅಪರೂಪಕ್ಕೆ ನೀನು ನೆರಿಗೆ…

Read More

ಎಲ್ಲಿಯೂ ನಿಲ್ಲದ ಒಂಟಿ ಯಾತ್ರಿಕ ನಾನು

ನನ್ನ ಕೆಂಡ ಸಂಪಿಗೆಯೇ ನಿನ್ನ ಪ್ರೀತಿಯ ಯಾಚಿಸಿ, ಹಂಬಲಿಸಿ ದುಂಬಾಲು ಬಿದ್ದು ಹಪಹಪಿಸಿ ಕೊನೆಗೂ ಧಕ್ಕಿಸಿಕೊಂಡು ಅಹಂಕಾರದಲ್ಲಿ ಎದೆಯುಬ್ಬಿಸಿ ಕನಸಿನ ಕೋಟೆ ಕಟ್ಟಿ ಒಲವ ಗಾನದ ಯಾನಿಯಾಗಿ ಇದೀಗ ವಿದಾಯದ ಕವಿತೆ ಬರೆಯುತ್ತಿರುವೆ

Read More

ಒಮ್ಮೊಮ್ಮೆ ಸೋತು ಬಿಡುತ್ತೇನೆ

ಈಗೆಲ್ಲ ನಾನು ಸೋತುಬಿಡುವುದನ್ನು ಕಲಿತಿದ್ದೇನೆ ಗೆದ್ದೇನು ಮಾಡಲಿ ಹೇಳಿ..? ಗೆಲ್ಲುವ ಅವಕಾಶಗಳೆಲ್ಲವೂ ನನ್ನೆಡೆಗೇ ಇದ್ದರೂ ಗೆಲುವು ಬೇಕೆನಿಸುವುದೇ ಇಲ್ಲ ಈ ಸೋಲು ಹಾಯಾಗಿದೆ.. ಸುಮ್ಮನೆ ಸೋತುಬಿಡುತ್ತೇನೆ.. ಯಾರಿಗೂ ಹೇಳಬೇಡಿ. ಮೊದಲೆಲ್ಲ ಭಾರಿ ಪೈಪೋಟಿಗಿಳಿಯುವುದಿದ್ದಿತ್ತು.. ಗೆಲ್ಲಲೇಬೇಕೆಂಬ ಹಟವೊಂದು ಮನದಲ್ಲಿ ಮನೆಮಾಡಿತ್ತು.. ಈಗ ಕೇಳಿ..ಕಾಲ ಬದಲಾಗಿದೆ ಎಂಬ ಉವಾಚ. ಹೌದು, ಇಷ್ಟಕ್ಕೂ ಗೆದ್ದೇನು ಮಾಡುವುದು ಹೇಳಿ..? ಈ ಸೋಲು ಹಾಯಾಗಿದೆ.. ಸುಮ್ಮನೆ ಸೋತುಬಿಡುತ್ತೇನೆ.. ಯಾರಿಗೂ ಹೇಳಬೇಡಿ. ಈ ಬದುಕ ಸತತ ಹೋರಾಟದಲ್ಲಿ ಗೆದ್ದವರೂ ಸೋತರು ಹಾಗೂ ಸೋತವರೂ ಗೆದ್ದರು.. ಮತ್ತದೇ ಕಾಲನ ಉವಾಚ, ಕೇಳಿ.. ಸೋತುಬಿಡುವುದರಲ್ಲಿದ್ದಷ್ಟು ಖುಷಿ ಗೆದ್ದಾಗ ಸಿಗುತ್ತಿಲ್ಲ..ಕೇಳಿ ಇಲ್ಲಿ ಕೇಳಿ ಒಮ್ಮೆ..ಈ ಸೋಲು ಹಾಯಾಗಿದೆ.. ಸುಮ್ಮನೆ ಸೋತುಬಿಡುತ್ತೇನೆ.. ಯಾರಿಗೂ ಹೇಳಬೇಡಿ. ಬದುಕ ಓಟದಲ್ಲಿ ಗೆದ್ದವರ ಹಿಂದೆ ಎಲ್ಲರೂ ಇರುವಾಗ ಸೋತವರದು ಎಂದಿಗೂ ಏಕಾಂಗಿ ಬದುಕೇ ಈ ಏಕಾಂಗಿತನ ಯಾಕೋ ಇತ್ತೀಚೆಗೆ ಇಷ್ಟ ಸೋತ ಬದುಕ ಗಮನಿಸುವವರೇ ಇಲ್ಲದೆ…

Read More