ಈ ನೆಲದ ಆಧ್ಯಾತ್ಮ ಇಡೀ ಜಗತ್ತಿಗೆ ಧಾರೆಯೂ ದಾರಿಯೂ ಆದದ್ದು..

ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ಒಂದಷ್ಟು ಪುಸ್ತಕವನ್ನ ಬಿಟ್ಟೂ ಬಿಡದೆ ಓದುತ್ತಿದ್ದೇನೆ.. ತೀರ್ಥರಾಮ ವಳಲಂಬೆ ಬರೆದಿರುವ ಅವಿಷ್ಟೂ ಪುಸ್ತಕಗಳು ಹೊಸ ಹೊಳಹಿನೊಂದಿಗೆ ಆಧ್ಯಾತ್ಮಿಕ ಜಗಕ್ಕೆ ಪ್ರವೇಶವನ್ನ ಕೊಡುತ್ತದೆ..  ನಿನ್ನೆಯಷ್ಟೇ  ’ದಿ ಹಾರ್ಟ್ ಫುಲ್ ನೆಸ್ ವೇ ’ ನನ್ನ ಬಂದು ತಲುಪಿದೆ.. ಹಿಮಾಲಯದ ಗುರುವಿನ ಗರಡಿಯಲ್ಲಿ, ಯೋಗಿಯ ಆತ್ಮಕಥೆ, ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ನಾನಿನ್ನೂ ಓದಿರಲೇ ಇಲ್ಲ! ಈ ನಡುವೆ ಒಕಾವ ಬರೆಯುವ ಪುಸ್ತಕಗಳು ಇಷ್ಟವಾಗುತ್ತಿವೆ.. ನಿಮಗೆ ಓಂ ಸ್ವಾಮಿ ಗೊತ್ತಿರಲಿಕ್ಕೆ ಸಾಕು ಅವರ ಪುಸ್ತಕಗಳು, ರೇಣು ಮಹತಾನಿಯ ಪುಸ್ತಕ ಹೀಗೆ ನನ್ನ ಆಸಕ್ತಿ ಆಧ್ಯಾತ್ಮಿಕವಾಗಿ ಬದಲಾಗುತ್ತಿದೆ. ಮೊದಲಿಂದಲೂ ನಾನು ಆ ಬಗ್ಗೆ ಆಸಕ್ತನೇ.. ಕೆಲವು ಮಂತ್ರಗಳ ಬಗ್ಗೆಲ್ಲ ಭ್ರಮೆಗಳಿದ್ದಿದ್ದವು. ಆದರೆ ಮಂತ್ರಗಳೂ ಅದರದ್ದೇ ಆದ ಸ್ವರ ತರಂಗಗಳ ಮೂಲಕ ಪಠಿಸಿದರೆ ನಿಜಕ್ಕೂ ಅದ್ಭುತ ಪ್ರಭಾವಗಳನ್ನ ಬೀರಲಿವೆ..  ಹಿಂದೆದೋ ವೇದ ಹೇಳಿದ್ದನ್ನ ಇಂದು ಸೈಂಟಿಸ್ಟುಗಳು ಹೇಳುತ್ತಿದ್ದಾರೆ.. ವಿಷ್ಣು ಸಹಸ್ರನಾಮವನ್ನ ಸರಿಯಾಗಿ ಹೇಳಿದರೆ ಎಂಥಾ ರೋಗವನ್ನ ಬೇಕಿದ್ದರೂ ಗುಣಪಡಿಸಿಕೊಳ್ಳಬಹುದು ಎನ್ನುವುದಕ್ಕೆ…

Read More