ಕೊರವಡಿ ಲಲಿತಾ ಪೂಜಾರಿ ಗೆ ಯಶೋಗಾಥೆ ಪುರಸ್ಕಾರ

“ನನ್ನ ಒಡಲಾಳದ ನೋವುಗಳೇ ನನ್ನ ಸಾಧನೆಗೆ ಸ್ಪೂರ್ತಿ” ಎಂದು ಈಕೆ ಹೇಳುವಾಗ ಯಾರ ಕೊರಳ ಸೆರೆಯಾದರೂ ಉಬ್ಬಿ ಬರುತ್ತದೆ! ಮಾತು ಮೂಖವಾಗುತ್ತದೆ! ಕಂಗಳು ತೇವಗೊಳ್ಳುತ್ತದೆ. ಈಕೆ ಅಸಾಮಾನ್ಯ ಸಾಧಕಿ. ತೀರ ಮೊನ್ನೆ ಮೊನ್ನೆ ಉಡುಪಿ ಜಿಲ್ಲೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ಲಲಿತರನ್ನ ಪುರಸ್ಕರಿಸಿದಾಗ   ’ನನ್ನ  ಬದುಕನ್ನೂ ಗಮನಿಸುವವರಿದ್ದಾರಲ್ಲಾ? ಇಷ್ಟು ಸಾಕು, ಇಷ್ಟೇ ಸಾಕು’ ಎಂದೆನಿಸಿತಂತೆ. ಕುಂಭಾಶಿಯ ಮಹಾಗಣಪತಿ ಕಣ್ಣುಬಿಟ್ಟರೆ ಈಕೆಯ ಮನೆಯ ನೇರಕ್ಕೆ ದೃಷ್ಠಿ ಹರಿದೀತು! ಅದೇ  ಕುಂಭಾಶಿಯ ಕೊರವಡಿ ಗ್ರಾಮದ  ಕೃಷಿಕ ಕುಟುಂಬದ ಮಹಾಬಲ ಪೂಜಾರಿ ಮತ್ತು ಗುಲಾಬಿ ಪೂಜಾರಿಯವರ  ಐವರು ಮಕ್ಕಳ ತುಂಬು ಸಂಸಾರಕ್ಕೆ ನಾಲ್ಕು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ. ಮಿಕ್ಕೆಲ್ಲಾ ಮಕ್ಕಳೂ ಮದುವೆಯಾಗಿ ಅವರವರ ಬದುಕು ಕಂಡುಕೊಂಡು ಸೌಖ್ಯದಲ್ಲಿದ್ದಾರೆ ಎಂಬ ಸಂತೃಪ್ತಿಈ ಕುಟುಂಬಕ್ಕಿದೆ. ಕೊರವಡಿಯ ಹೊಳೆಸಾಲಿನಿಂದ ಹದಿನಾರು ಹೆಜ್ಜೆ ಮುಂದೆ ಹೋದರೆ ಬಲಬಾಗದ ಬಯಲಿನಲ್ಲಿ ಇವರ ಮನೆಯಿದೆ. ಮನೆಯ ಹೆಸರು ಸೂರ್ಯ. …

Read More

ಬಡತನವನ್ನೂ ಮೀರಿ ಬೆಳೆದ ಸೀತಾರಾಮ್ ಶೆಟ್ಟಿಯ ಯಶೋಗಾಥೆ!

ಸಾಧನೆ ಮಾಡಲು ಹೊರಡುವವರಿಗಿಂತ ಸಾದ್ನಿ ಮಾಡುವವರೇ ಈಗ ಹೆಚ್ಚು! ಇವನು ನೋಡಿ ನಮ್ಮ ಸೀತರಾಮ. ನಮ್ಮದೇ ಮೂಡುಗಿಳಿಯಾರು ಶಾಲೆಯಲ್ಲಿ ಓದಿದ ಹುಡುಗ. ಮನೆಯಲ್ಲಿ ತುಂಬು ಬಡತನವಿತ್ತು. ಆದರೂ ಸ್ವಾಭಿಮಾನಿ ಕುಟುಂಬ. ಗುಳ್ಳಾಡಿಯ ಟ್ಯಾಲೆಂಟ್ ಫ್ರೆಂಡ್ಸ್ ಇವನ ಜೊತೆಗಾರರು. ಸುತ್ತ ಮುತ್ತಲಿನ ಹತ್ತೂರಿನಲ್ಲಿಯೂ ಸೀತಾರಾಮನಿಗೆ ಗೆಳೆಯರಿದ್ದಾರೆ. ಇಂಥಾ ಸೀತಾರಾಮ ಪ್ರಾಯದ ಎಲ್ಲಾ ಹುಡುಗರಂತೆ ತಾನೂ ಜಿಮ್ಮಿಗೆ ಸೇರುತ್ತಾನೆ, ದೇಹ ದಂಡಿಸುತ್ತಾನೆ, ಕಸರತ್ತು ಮಾಡುತ್ತಾನೆ ಅಲ್ಲಿಂದ ಹೊರಟವನು ಹೊಟೇಲ್ ಒಂದರಲ್ಲಿ ಮೈ ಮುರಿಯೆ ದುಡಿಯುತ್ತಾನೆ. ಹೀಗೆ ಹೋಟೇಲಿನಲ್ಲಿ ದುಡಿಯುತ್ತಲೇ ತನ್ನ ದೇಹವನ್ನೂ ದಷ್ಟಪುಷ್ಟವಾಗಿ ಇರಿಸಿಕೊಂಡು ಬದುಕಿದ್ದರೆ ನಾನಿಲ್ಲಿ ಸೀತಾರಾಮನ ಬಗ್ಗೆ ಯಾಕಾದರು ಬರೆದೇನು ಹೇಳಿ? ಇವನು ಅಸಾಧಾರಣ ಪ್ರತಿಭೆ. ನಿಮಗೂ ಗೊತ್ತಿದೆ. ನಾವಿಂದು ಸಿನೇಮಾದಲ್ಲಿ ನೋಡುವ ನಾಯಕರುಗಳ ದಷ್ಟಪುಷ್ಟ ದೇಹವಿದೆಯಲ್ಲಾ? ಅದು ಸುಮ್ಮನೆ ಬರುವುದಿಲ್ಲ. ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ, ಅವರಿಗೇ ಪ್ರತ್ಯೇಕವಾದ ಟ್ರೈನರುಗಳಿರುತ್ತಾರೆ, ಇಂತಿಷ್ಟು ಹೊತ್ತಿಗೆ ಇಂತಿಷ್ಟೇ ತಿನ್ನಬೇಕು ಎಂದು…

Read More

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಬರ್ಗಿಯವರಿಗೊಂದು All The Best ಹೇಳುತ್ತಾ…

-ವಸಂತ್ ಗಿಳಿಯಾರ್ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ಬಿ. ನಿಂಬರ್ಗಿಯವರಿಗೆ ಧಿಡೀರ್ ವರ್ಗಾವಣೆ ಆದೇಶ ಬಂದಿದೆ. ಉಡುಪಿ ಜಿಲ್ಲೆ ನೋಡಿದ ಕೆಲವೇ ಕೆಲವು ಶ್ರೇಷ್ಠ ಪೊಲೀಸ್ ವರಿಷ್ಠಾಧಿಕಾರಿಗಳ ಸಾಲಿನಲ್ಲಿ ನಿಂಬರ್ಗಿಯವರೂ ಓರ್ವರು.. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನ ಹತೋಟಿಯಲ್ಲಿಡುವಲ್ಲಿ ನಿಂಬರ್ಗಿಯವರ ಪರಿಶ್ರಮವನ್ನ ಬಹಳ ಸೂಕ್ಷ್ಮವಾಗಿಯೇ ಗಮನಿಸುತ್ತಲೇ ಬಂದವನು ನಾನು. ಅವತ್ತು ಮಧುಕರ್ ಶೆಟ್ಟರ ಮರಣ ವಾರ್ತೆ ತಲುಪುವಾಗ ನಿಂಬರ್ಗಿಯವರು ತನ್ನ ಪತ್ನಿಯ ಜೊತೆ ಊರಿಗೆ ಹೊರಟಿದ್ದರು. ಬಸ್ಸು ಕುಂದಾಪುರದ ಸನಿಹವಿದ್ದಾಗ ಮಧುಕರ್ ಶೆಟ್ಟರ ಸಾವಿನ ಸುದ್ದಿ ತಲುಪುತ್ತದೆ! ತಕ್ಷಣವೇ ಅಲ್ಲೇ ಬಸ್ಸಿನಿಂದ ಇಳಿದು ಊರಿಗೆ ಹೋಗುವುದನ್ನ ಕ್ಯಾನ್ಸಲ್ ಮಾಡಿದ ಎಸ್.ಪಿ. ಮನೆಗೆ ತೆರಳಿದ್ದಲ್ಲ! ನೇರವಾಗಿ ವಡ್ಡರ್ಸೆ ರಘುರಾಮ ಶೆಟ್ಟರ ಮನೆಗೆ ಹೋಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಡಬೇಕಾದ ಕೆಲಸವನ್ನ ಅವರ ಮನೆಯಲ್ಲೇ ರಾತ್ರಿ ಹನ್ನೆರಡು ಗಂಟೆಯ ತನಕವೂ ಕುಳಿತು ನಿರ್ವಹಿಸಿ ಮತ್ತೆ ಮನೆಗೆ ಹೋಗಿ ಮಲಗಿದ್ದರು. ಶೀರೂರು…

Read More

ಬಿಗ್ ಬ್ರೇಕಿಂಗ್ ನ್ಯೂಸ್: ಸಾಮಾಜಿಕ ಕಾರ್ಯಕರ್ತ ಅಜಿತ್ ಕಿರಾಡಿ ಬಂಧನ!!

ಸಾಮಾಜಿಕ ಹೋರಾಟಗಾರ, ಜೈ ಭಾರ್ಗವ ಬಳಗದ ರಾಜ್ಯ ಸಂಚಾಲಕ ಹತ್ತಾರು ಜನಪರ ಹೋರಾಟಗಳ ರೂಪಿಸಿದ ಜನನಾಯಕ ಅಜಿತ್ ಶೆಟ್ಟಿ ಕಿರಾಡಿಯವರು ಇಂದು ಬಂಧನಕ್ಕೊಳಗಾಗಿದ್ದಾರೆ. ಕುಂದಾಪುರ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ತ್ರಾಸಿಯ ಮೋವಾಡಿಯ ಪ್ರತಿಮಾ ಕುಮಾರಿಯೊಂದಿಗೆ ವಿವಾಹ ಬಂಧನಕ್ಕೊಳಪಟ್ಟ ಇವರ ಈ ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Read More

ಪಾಂಡೇಶ್ವರದ ಸಾಂಪ್ರದಾಯಿಕ ಕೃಷಿ ಸಂತ – ಮೋಹನ್ ಪೂಜಾರಿ

ನಮ್ಮೂರು ಸಾಸ್ತಾನ.. ಈ ಸಾಸ್ತಾನ ಸಾಧಕರನ್ನು ಹಾಗೂ ಉದ್ಯಮಿ, ಕೃಷಿಕರನ್ನು    ಸೃಷ್ಟಿಸಿದ ಊರು . ಇಂದಿನ ಅಂಕಣ ದಲ್ಲಿ ನಮ್ಮೂರಿನ ಪಾಂಡೇಶ್ವರ ಸಾಸ್ತಾನ ದ ಮೂಡಹಡು ಗ್ರಾಮದ  ಪ್ರಗತಿಪರ ಸಾಂಪ್ರದಾಯಿಕ ಕೃಷಿಕ ಮೋಹನ ಪೂಜಾರಿಯವರ ಕುರಿತು ಬರೆಯುತ್ತಿದ್ದೇನೆ. ಮೂಡಹಡು ಪರಿಸರದ ಬಡ ಕುಟುಂಬದ ದಂಪತಿಗಳಾದ ಬಡಿಯ ಹಾಗೂ ಸರ್ವ ಪೂಜಾರ್ತಿಯ ದ್ವಿತೀಯ ಪುತ್ರನಾಗಿ ಜನಿಸಿದ ಇವರು ಮೂಲ ಶಿಕ್ಷಣ ವನ್ನು ಮೂಡಹಡು 3ನೇ ತರಗತಿ ತನಕ ಓದಿದರು.. ಮತ್ತೆ ಹೋಗಿದ್ದು ತಂದೆಯ ಜೊತೆಗೆ ಗದ್ದೆಯಲ್ಲಿ ಕೃಷಿಗೆ. ಆ ಕಾಲದಲ್ಲಿ ತೀರ ಬಡತನವಾದ  ಕುಟುಂಬ ಅವಲಂಬಿಸಿದ್ದು ಕೃಷಿ ಯನ್ನ. ಮೂರನೇ ಕ್ಲಾಸಿಗೆ ಶಾಲೆ ಬಿಟ್ಟ ಮೋಹನ,  ತಂದೆಯ ಎರಡು ಮುದ್ದಾದ ಕೋಣಗಳ ಲಾಲನೆ ಪೋಷಣೆ ಜತೆ ತಂದೆಯೊಂದಿಗೆ ದುಡಿದರು. ಅಂದಿನಿಂದಲೂ ಇಂದಿನವರೆಗೂ ಸಾಂಪ್ರದಾಯಿಕ ಕೃಷಿಕನಾಗಿ ಬೆಳೆದುಬಂದವವರು ಮೋಹನ್‍ ಪೂಜಾರಿ. ಎಲ್ಲ ಕೃಷಿಯ ಗದ್ದೆಗಳ ದಶ ದಿಕ್ಕುಗಳಲ್ಲಿ ವೈಜ್ಞಾನಿಕ…

Read More