ಗಲ್ಲು ಶಿಕ್ಷೆಗೆ ಗುರಿಯಾದ ಹಂತಕ ಗಳಗಳನೆ ಅತ್ತಾಗ ಜನರು ಸಂಭ್ರಮಿಸುತ್ತಿದ್ದರು!  

ಇದು ಕರಾವಳಿಯನ್ನ ಬೆಚ್ಚಿ ಬೀಳಿಸಿದ ಅಪರಾಧ ಪ್ರಕರಣ ಅರಬ್ಬಿ ಕಡಲು ಆರುತಿಂಗಳ ಗರ್ಭಿಣಿ ಹೆಣ್ಣಿನ ಮರಣ ಚೀತ್ಕಾರವನ್ನ ಜೀರ್ಣಿಸಿಕೊಂಡ ಕರುಣಾಜನಕ ಕಥೆಯೊಂದನ್ನ ನಿಮಗೆ ಹೇಳುತ್ತೇನೆ ಕೇಳಿ. ♦ವಸಂತ್ ಗಿಳಿಯಾರ್ ನಿಮಗೆ ನೆನಪಿರಬಹುದು ಈಗ್ಗೆ ಐದು ವರ್ಷದ ಹಿಂದೆ ಆರುತಿಂಗಳ ಬಸುರಿ ಹೆಣ್ಣು ಇಂದಿರಾಳನ್ನ ತನ್ನ  ದೇಹದಾಯಕ್ಕೆ ಬಳಸಿಕೊಂಡು ಅತಿನೀಚ ಬಯಕೆಗಾಗಿ ಆಕೆಯ ಬದುಕನ್ನೇ ಆಹುತಿಯಾಗಿಸಿಕೊಂಡು ಪಾಪಿಗಳ ಪುಸ್ತಕದ ಸರಕಾದ ಪಾತಕಿಯೊಬ್ಬನ ಕಥೆ! ಆ ನತದೃಷ್ಟ ಹೆಣ್ಣಿನ ದುರಂತ ಕಥೆಯನ್ನ ಮತ್ತೇಕೆ ಬರೆಯಬೇಕು ಎಂದು ನಿಮಗೂ ಅನ್ನಿಸಿರಬೇಕು..  ಐದು  ವರ್ಷದ ಹಿಂದೆ ಈ ವರದಿ ಬರೆಯುವಾಗ ಮನದ ತುಂಬಾ ತುಂಬು ಆಕ್ರೋಶವಿದ್ದರೆ ಈಗ ಒಂದಷ್ಟು ಸಮಾಧಾನವಿದೆ.. ಸತ್ತ ಇಂದಿರಾ ಮತ್ತು ಆಕೆಯ ಒಡಲಲ್ಲೇ ಮಿಸುಕಾಡಿ ಉಸಿರು ನೀಗಿಕೊಂಡ ಆರು ತಿಂಗಳ ಬ್ರೂಣ ಮತ್ತೆ ಬದುಕಿ ಬರಲಾರರು ಹೌದಾದರೂ ಆ ಎರಡು ಅಮಾಯಕ ಜೀವವನ್ನ ಕೊಂದ ಪಾತಕಿಯನ್ನ ಬದುಕಗೊಡಬೇಡಿ ಎಂಬುದಾಗಿ ಕುಂದಾಪುರದಲ್ಲಿನ…

Read More

ನನ್ನ ವಿರುದ್ಧ ಎಂಥಹ ದುಷ್ಟ ಸಂಚೊಂದು ತಯಾರಾಗಿತ್ತು ಗೊತ್ತಾ?

ಮೊನ್ನೆ ಸಡನ್ ಆಗಿ ಆ ಹುಡುಗ ನೆನಪಾದ! ಏನವನ ಹೆಸರು? ಮರೆತಿದ್ದೇನೆ. ನಾನಾಗ ಮಾನಂಬಳ್ಳಿ ಮನೆಯಲ್ಲಿರುತ್ತಿದ್ದೆ. ಅಭಿಮತ ಶುರುವಾದ ಹೊಸತಿನಲ್ಲಿ. ಅಲ್ಲಿಗೆ ಯಾರೆಲ್ಲ ಬಂದು ಇದ್ದು ಹೋಗುತ್ತಿದ್ದರು ಎಂಬುದೇ ನಿಗೂಢ! ದೂರದೂರಿನ ಗೆಳೆಯರು ಬಂದು ಇರುತ್ತಿದ್ದರು. ಯಾರು ಬಂದರು ಯಾರು ಹೋದರು ಎಂಬುದೇ ಗೊತ್ತಾಗುತ್ತಿರಲಿಲ್ಲ. ಗೆಳೆಯರು ಹಿಂಡುಗಟ್ಟಲೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ರಾತ್ರಿಯಾಯಿತೆಂದರೆ ಆ ಮನೆಯಲ್ಲಿ ಮತ್ತೊಂದು ಸುತ್ತಿನ ಅಬ್ಬರ ಶುರುವಾಗಿ ಬಿಡುತ್ತಿತ್ತು. ಆ ಮೆನೆಯೆಂಬೋ ಆಫೀಸಿಗೆ ಅವತ್ತೊಂದು ದಿನ ಕಾಳಾವರದ ಜಾತ್ರೆಯಲ್ಲಿ ಹೆಂಗಸರ ಸರಗಳ್ಳತನ ಮಾಡಿದ ಹುಡುಗರ ಪೈಕಿ ಒಬ್ಬ ಹುಡುಗ ಬಂದು ರೋಧಿಸಿದ್ದ! ಪೊಲೀಸರಿಂದ ಬಚಾವ್ ಮಾಡಿ ಎಂದು. ಪತ್ರಿಕೆಗೆ ಜಾಹಿರಾತು ಸಂಗ್ರಾಹಕ್ಕೆ ಎಂದು ಒಬ್ಬ ಹುಡುಗನನ್ನ ಸ್ನೇಹಿತರೊಬ್ಬರು ಪರಿಚಯ ಮಾಡಿ ಕೊಟ್ಟಿದ್ದರು. ಸಣ್ಣ ಪತ್ರಿಕೆಗಳು ಬದುಕುವುದೇ ಜಾಹಿರಾತಿನಲ್ಲಿ. ಹುಡುಗ ನೋಡಿದ ತಕ್ಷಣ ಶ್ರಮಜೀವಿ ಅಂತನ್ನಿಸಿತು. ಕೆಲಸಕ್ಕೆ ಸೇರಿಸಿಕೊಂಡೆ. ಆದರೆ ಅವನಿಗೆ ಇನ್ನೊಬ್ಬ…

Read More

ಬಿದಿರು ತಳದಿಂದ ಏರಿ ಹೊಸಮನೆ ಬೆಟ್ಟದ ನೆತ್ತಿ ತಲುಪಿದಾಗ….

ಬಿದಿರು ತಳ! ಆ ಹೆಸರೇ ಒಂದು ಚೆಂದ.. ಎಲ್ಲೆಲ್ಲೂ ಪೇರಲೆ ಗಿಡಗಳೇ ತುಂಬಿಕೊಂಡಿರುವ ಬಿದಿರು ತಳದಲ್ಲಿ ಮೊದಲು ಏಳು ಮನೆಗಳಿದ್ದಿದ್ದವು.ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಹೋದರೆ ಎಡಕ್ಕೊಂದು ಕಾಲುದಾರಿಯಂತಹ ರಸ್ತೆತೆರೆದುಕೊಳ್ಳುತ್ತದೆ.. ರಸ್ತೆಯೋ, ಬೆಟ್ಟವೋ? ಯಾವುದೋ? ಎಂದು ನೀವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಷ್ಟರಲ್ಲಿ ಅದನ್ನ ಏರಲುತೊಡಗಿದಾಗಲೇ ಹಿಂಬಾಲಿಸಿರುತ್ತದೆ ಏದುಸಿರು. ಆದರೆ ಆ ಬಿದಿರು ತಳದ ಎರಡು ಮೂರು ಮನೆಯವರು ಅಲ್ಲಿ ನಿತ್ಯಸಂಚಾರಿಗಳು.. ಬಿದಿರು ತಳದಲ್ಲಿ ಏಲಕ್ಕಿ ಬೆಳೆಯುತ್ತಾರೆ, ಲಾವಂಚದ ಬೇರು, ಅಡಿಕೆ,ತೆಂಗು, ಭತ್ತ ಹೀಗೆ ನಾನಾ ಬೆಳೆ ಬೆಳೆಯುತ್ತಾರೆ. ಆದರೀಗ ಆ ಗ್ರಾಮವೇ ವಲಸೆಹೋಗಿದೆ. ಗ್ರಾಮವೆನ್ನಲಿಕ್ಕೆ ಅಲ್ಲಿ ಹಿಂದೆ ಇದ್ದದ್ದೂ ಕೆಲವೇ ಮನೆಗಳು. ಅದರಲ್ಲಿ ಇಂದು ಉಳಿದವು ಎರಡೋ ಮೂರೋ ಮಾತ್ರವೆ. ಆಕಾಲುದಾರಿಯಂತಹ ದಾರಿಯಲ್ಲಿ ನಾಲ್ಕಾರು ಕಿಲೋಮೀಟರ್ ನಡೆದು ಸಾಗಿದಾಗ, ಆಗಷ್ಟೇ ಪ್ರಿಜ್ಜಿನಿಂದ ಹೊರಗೆ ತೆಗೆದಷ್ಟೇ ತಣ್ಣಗಿರುವ ನೀರಿನಪುಟ್ಟದೊಂದು ತೊರೆ ದಾಟಿದರೆ ನೀವು ಮೀನಾಕ್ಷಮ್ಮನ ಮನೆಯ ಅಂಗಳದಲ್ಲಿರುತ್ತೀರಿ.. ಅವರ ಮನೆಯ ಪಾಪದ ನಾಯಿ ನಿಮ್ಮನ್ನಇದಿರುಗೊಳ್ಳುತ್ತದೆ.. ಮೀನಾಕ್ಷಮ್ಮ ಹೊರಗೆ ಬಂದು ಮನೆಗೆ ಬಂದ ನೆಂಟರೇನೋ ಎಂಬಂತೆ ನಕ್ಕು ಸ್ವಾಗತಿಸುತ್ತಾರೆ.. ನಡೆದು ನಡೆದು ದಣಿದವರಿಗೆತಣ್ಣನೆಯ ನೀರು ಕೊಡುತ್ತಾರೆ. ಅವರ ಮನೆಯ ಅಂಗಳದಲ್ಲಿ ಬೆಳೆದ ಪೇರಲೆ ಗಿಡಗಳ ಹಣ್ಣು ದಣಿವಾರಿಸುತ್ತದೆ.. ಹೊಳ್ಳರ ಧ್ವನಿ ಅಡಗಿಸುವ ಸಂಚು! ಬಿದಿರು ತಳ ತಲುಪುವುದೇ ಒಂದು ಹಂತದ ಚಾರಣ.. ಅಲ್ಲಿಂದ ಮತ್ತೆ ಆರಂಭಗೊಳ್ಳುವುದು ಮಗದೊಂದು ಪೊಗದಸ್ತಾದ ಯಾನ.. ಆನೆಗಳಅಬ್ಬರಕ್ಕೆ, ಚಿರತೆಗಳ ಅಟ್ಟಹಾಸಕ್ಕೆ ಆ ಗ್ರಾಮ ನಲುಗಿ ಹೋಗಿದೆ. ಅಲ್ಲಿನ ತೋಟಗಳಿಗೆ ನುಗ್ಗುವ ಸಲಗಗಳು ಇಡೀ ತೊಟಕ್ಕೆ ತೋಟವನ್ನೇಧ್ವಂಸಿಸಿಯೇ ಹೋಗುತ್ತದೆ.. ಕದಳಿಯೊಳು ಮದ್ದಾನೆ ನುಗ್ಗಿದರೆ ಏನಾದೀತು? ಹಾಗೇ ಆ ಬಿದಿರು ತಳ ಕಂಪಿಸಿ ಹೋಗುತ್ತದೆ.. ಮೀನಾಕ್ಷಮ್ಮನಮನೆಯ ಹಿಂದೇ ಗಿರಿಜಮ್ಮನ ಮನೆಯಿದೆ. ಅವರ ಒಬ್ಬ ಮಗ ಸಂದೇಶ್ ಕೋಲಾದಲ್ಲಿದ್ದರೆ ಮತ್ತೊಬ್ಬ ಮಗ ಸುಂದ್ರೇಶ್ ಊರಲ್ಲೇ ಇದ್ದಾರೆ.. ಅವರಮನೆಯ ಅಂಗಳ ದಾಟಿ ನಡೆದರೆ ಆರಂಭ ಕಾಣುತ್ತದೆ ನಮ್ಮ ಚಾರಣ ಮುಂದೆ  ಸಹ್ಯಾದ್ರಿ ಸಂಚಯನದ ದಿನೇಶ್ ಹೊಳ್ಳರು ತನಗೆ ತೀರಾ ಪರಿಚಿತ ದಾರಿಯಲ್ಲಿ ಸಾಗಿ ಹೋಗುತ್ತಿದ್ದರೆ ದಿನೇಶ್ ಹೊಳ್ಳರಲೇಖನಗಳಿಂದಾಗಿಯೇ ಚಾರಣದ ಆಸಕ್ತಿದಾಯಕ ಕಥಾನಕಗಳ ಕೇಳಿದ ನನ್ನಂಥವರು ಹೇಗಪ್ಪಾ ಬೆಟ್ಟ ತಲುಪೋದು ಎನ್ನುವ ಚಿಂತೆಯಲ್ಲೇಸಾಗುವಂತಾಗುತ್ತದೆ. ದಿನೇಶ್ ಹೊಳ್ಳ ಒಬ್ಬ ಪರಿಸರತಪಸ್ವಿ.. ಕಾಡು ನಡುವಲ್ಲೆಲ್ಲೋ ಬಂದೂಕಿನ ಸಪ್ಪಳ ಕೇಳಿದರೆ ಬರಿದಾಗುವ ಜೀವಿಗಳ ಬದುಕಿನಬಗ್ಗೆ ವ್ಯಥಿಸುತ್ತಾರೆ.. ಸಹ್ಯಾದ್ರಿ ಉಳಿಸಿ ಎನ್ನುವ ಆಂದೋಲನ ಕಟ್ಟಿದ ಹೊಳ್ಳರದೇ ಬದುಕನ್ನು ಮುಗಿಸಲು ಕಾದ ಮಾಫಿಯಾದವರಿದ್ದಾರೆ. ಎತ್ತಿನಹೊಳೆ ಯೋಜನೆ ವಿರುದ್ದ ಧ್ವನಿ ಎತ್ತಿದ್ದ ಹೊಳ್ಳರ ಧ್ವನಿ ಅಡಗಿಸುವ ಸಂಚು ಇಂದಿಗೂ ಯಥಾವತ್ತು ನಡೆಯುತ್ತಲೇ ಇದೆ.. ಅಂದು ಹೊಳ್ಳರಮಾರ್ಗದರ್ಶನದಲ್ಲಿ ನಾವು ಹೊರಟಿದ್ದು ಹೊಸಮನೆ ಬೆಟ್ಟಕ್ಕೆ.. ಸಮುದ್ರ ಮಟ್ಟದಿಂದ ಅಂದಾಜು ನಾಲ್ಕುಸಾವಿರ ಎತ್ತರದಲ್ಲಿರುವ ಹೊಸಮನೆಬೆಟ್ಟದ ನೆತ್ತಿ ತಲುಪುವಷ್ಟರಲ್ಲಿ ಚಾರಣದ ಅಮಲು ನೆತ್ತಿಗೇರಿರುತ್ತದೆ.. ಅರವತ್ತರ ಗಡಿ ದಾಟಿರುವ ರಮೇಶ್ ಕಾಮತರ ಎಡೆಬಿಡದ ಜೋಕುಗಳೇದಣಿವನ್ನ ತಣಿಸುತ್ತಿದ್ದವು… ಡೇಸಾರ ಸಾಹಸಮಯ ಬದುಕು!  ಅಂದು ನಮಗೆ ಇನ್ನೊಬ್ಬ ಚಾರಣಿಗ ಡೇಸಾ ಜೊತೆಯಾಗಿದ್ದರು. ಡೇಸಾರ ಸಂಸಾರ ಇರೋದು ಮುಂಬೈನಲ್ಲಿ.. ಇವರ ಬದುಕು ಕಾಂಡ್ಲಾ ಕಾಡಿನನಡುವೆ.. ದೇಶದ ಬಹುತೇಕ ಎತ್ತರಗಳನ್ನ ತಲುಪಿ ಬಂದ ಡೇಸಾ ಕುಂದಾಪುರದ ಮೂಡಲಕಟ್ಟೆಯ ರೈಲ್ವೇ ನಿಲ್ದಾಣದ ಮಗ್ಗುಲಲ್ಲೊಂದು ಬೀಡುಕಟ್ಟಿಕೊಂಡಿದ್ದಾರೆ.. ಪುಟ್ಟದೊಂದು ಕಾಂಡ್ಲವನ ಬೆಳೆಸಿದ್ದಾರೆ.. ತನ್ನದೊಂದು ದೋಣಿ ಇಟ್ಟುಕೊಂಡಿದ್ದಾರೆ.. ಪ್ರಕೃತಿ ವೀಕ್ಷಣೆಗೊಂದು ಟ್ರೀ ಹೌಸ್ಮಾಡಿಕೊಂಡಿದ್ದಾರೆ.. ಡೇಸಾ ಚಾರಣದ ಅನುಭವಗಳೇ ಅಧ್ಬುತ! ಹೊರಟು ಬಿಡಬೇಕು ಅಂತನಿಸಿದ ತಕ್ಷಣ ಎದ್ದು ಒಂಟಿಯಾಗಿಯೇ ಹೊರಟುಬಿಡುವ ಡೇಸಾ ಪರಿಸರವನ್ನ ಪ್ರೀತಿಸುವ ಭಾವ ಜೀವಿ.. ಇಳಿಪ್ರಾಯವಾದರೂ ಏರುವ ಉತ್ಸಾಹ.. ಪತ್ರಿಕೋದ್ಯೋಗಿ ವೃಷಾಂಕ್ ಖಾಂಡಿಲ್ಕರ್ಶಿಶಿಲದ ಬೆಟ್ಟಗಳ ಬಗ್ಗೆ ವಿವರಿಸುತ್ತಿದ್ದರೆ ಯಾವಾಗ ಹೋಗಲಿ ಶಿಶಿಲಕ್ಕೆ ಅಂತನ್ನಿಸಿತು.. ಕಂಡದ್ದೆಲ್ಲವನ್ನೂ ದೃಶ್ಯಕಾವ್ಯವಾಗಿಸುವ ತವಕದ ಚಿತ್ರಮತ್ತು ವರ್ಣಕಲಾವಿಧೆ ಉಪ್ಪಿನಂಗಡಿಯ ಸೌಮ್ಯ ಭಟ್ ಉತ್ಸಾಹ ನೋಡಿ ಬೆಟ್ಟ ಏರುವ ಧೈರ್ಯ ಬಂದದ್ದು ಸತ್ಯ!.. ಉಡುಪಿಯಿಂದನಾನೂ,ಗೆಳೆಯ ಅರುಣ್ ಗಿಳಿಯಾರು ಅಭಿಜಿತ್ ವಡ್ಡರ್ಸೆ ಮತ್ತು ಹೀಗಿನ ಹಲವು ಚಾರಣಗಳ ಬಲ್ಲ ಕಾರ್ಕಳದ ಶಶಿಕಾಂತ್ ಶೆಟ್ಟಿ ಹೊರಟಿದ್ದೆವು.ಉಜಿರೆಯಲ್ಲಿ ದಿನೇಶ್ ಹೊಳ್ಳರ ಟೀಮ್ ಕೂಡಿಕೊಂಡೆವು.. ಬರಡಾಗುತ್ತಿದೆ ಶೋಲಾವನ!! ಬೆಟ್ಟದುದ್ದಕ್ಕೂ ಹಬ್ಬಿಕೊಂಡಿರುವ ಶೋಲಾವನದ ನಡುವೆ ಹಾದು ಹೋಗುವ ತೊರೆಗಳು ಬತ್ತಿರುವುದನ್ನ ಕಾರುಣ್ಯಭಾವದಿಂದ ನೋಡುತ್ತಾಹೊಳ್ಳರು ಆತಂಕದಿಂದ ವಿವರಿಸುತ್ತಿದ್ದರು ’ನೋಡಿ, ಇದೇ ನಮ್ಮ ಜೀವಸೆಲೆ, ಇದೆಲ್ಲ ಇಂದು ಬತ್ತಿ ಹೋಗಿದೆ ಎಂದರೆ ಭಾರೀ ಗಂಡಾಂತರವೊಂದುಕಾದಿದೆ ಅಂತಲೇ ಅರ್ಥ.. ಇದೆಲ್ಲ ವರ್ಷವಿಡೀ ಜೀವಜಲವನ್ನ ಜಿನುಗಿಸುತ್ತಲೇ ಇರುತ್ತಿದ್ದವು.. ಈ ತೊರೆಗಳೆಲ್ಲ ಬತ್ತಿದರೆ ಕಾಡಲ್ಲಿರುವ ಪ್ರಾಣಿಗಳಿಗೆಕುಡಿಯುವ ನೀರೆಲ್ಲೆ? ಸಾಹ್ಯಾದ್ರಿ ಒಣಗುತ್ತಿದೆ. ಕಾಡ್ಗಿಚ್ಚು ಹಬ್ಬಿದರೆ ಗತಿ ಯಾರು? ನೊಡಿ ಆ ಹುಲ್ಲುಗಳೆಲ್ಲಾ ಒಣಗಿ ಈಗಲೇ ಕೆಂಪಾಗಿದ್ದಾವಲ್ಲಾ?ನನ್ನ ಇಪ್ಪತ್ತನಾಲ್ಕು ವರ್ಷದ ಚಾರಣದ ಅನುಭವದಲ್ಲೇ ಇದೇ ಮೊದಲು. ಅದೆಲ್ಲ ಮಾರ್ಚ್ ತಿಂಗಳಲ್ಲೂ ಹಚ್ಚ ಹಸಿರಾಗಿರುತ್ತಿದ್ದವು. ಈಗಲೇಒಣಗಿವೆ ಎಂದರೆ ಭಯವಾಗುತ್ತಿದೆ.. ಶೋಲಾ ಕಾಡಿನ ತಳದ, ಜಲಸಂರಕ್ಷಕ ಪಾದೆಗಳೆಲ್ಲವೂ ಸ್ಪೋಟಿಸಿ ನೀರೆಲ್ಲವೂ ಆವಿಯಾಗಿದೆ ಅಂತನ್ನಿಸುತ್ತಿದೆ..ಮಡಿಕೇರಿಯಲ್ಲಿ ಆದ ದುರಂತದ ಸಮಯದಲ್ಲೇ ನಮ್ಮಲ್ಲಿಯೂ ಭೂ ಕುಸಿತಗಳಾಗಿವೆ. ಅದೆಲ್ಲ ಒಂದಕ್ಕೊಂದು ತಳುಕಿದೆ. ಎತ್ತಿನ ಹೊಳೆ ಯೋಜನೆಸಹ್ಯಾದ್ರಿಯನ್ನೇ ಬರಡಾಗುವಂತೆ ಮಾಡುತ್ತದೆ….’ ಹೀಗೆ ದಿನೇಶ್ ಹೊಳ್ಳ ಮಾತನಾಡುತ್ತಲೇ ಹೋದಾಗ ಭವಿಷ್ಯದಲ್ಲಿ ನಾವು ಎದುರಿಸುವಅಪಾಯದ ಅರಿವಾಗುತ್ತಲೇ ಹೋಯಿತು.. ಹೀಗೆ ಮಾತನಾಡುತ್ತಲೇ ಒಂದು ಬೆಟ್ಟವನ್ನ ಏರಿ ಕೊಂಚ ವಿಶ್ರಮಿಸಿಕೊಂಡೆವು, ದೇಹದಲಿ ಏನೆಲ್ಲ ಇವೆಯೋ ಅದೆಲ್ಲವೂ ಅನುಭವಕ್ಕೆಬರುತ್ತಿತ್ತಾದರೂ ಆ ದಣಿವನ್ನೂ ಮೀರಿಸುವ ತಣ್ಣನೆಯ ಗಾಳಿ ಮನಸ್ಸಿಗೆ ಆಹ್ಲಾದವನ್ನೀಯುತ್ತದೆ.. ಥೇಟು ಹಾವೊಂದು ಹರಿದು ಹೋದಂತೆ! ಒಂದು ಬೆಟ್ಟವನ್ನ ತಲುಪುವ ತನಕ ಅದೇ ಎತ್ತರ ಅಂತನ್ನಿಸಿದರೆ ಅದರ ಎತ್ತರ ತಲುಪಿದ ಮೇಲೆ ಅದಕೂ ಮಿಗಿಲೆತ್ತರದ ಬೆಟ್ಟ ಗೋಚರಿಸುತ್ತಿತ್ತು..ಬೆಟ್ಟ ಏರುವಾಗಲೇ ಸುತ್ತಲೂ ಇರುವ ಕೊಡೆಕಲ್ಲು, ಜೇನುಕಲ್ಲು, ಮಿಂಚುಕಲ್ಲು, ಬಾಳೆಕಲ್ಲು, ದೂರದಲ್ಲಿ ಕಾಣುವ ಬಳ್ಳಾಲ ರಾಯನ ದುರ್ಗ,ಇದರ ಬಗ್ಗೆಲ್ಲಾ ಮಾಹಿತಿಯನ್ನ ನೀಡುತ್ತಲೇ ಹೋದರು ಹೊಳ್ಳ

Read More

ಗುಂಡ್ಮಿಯ ಒಂಟಿ ಬಂಗಲೆಯಲ್ಲಿ ನಾನೊಬ್ಬನೇ ಅಮವಾಸೆಯ ದಿವಸ.

ಯಾಕೋ ಹಾಗನ್ನಿಸಿ ಬಿಟ್ಟಿದೆ ಇತ್ತೀಚೆಗೆ ಬರಹ ಬತ್ತಿ ಹೋಗಿದೆ ಅನ್ನಿಸಿದೆ.!.ಏನು ಬರೆಯಲು ಹೊರಟರೂ ಮನಸ್ಸು ಕೈ ಕೊಡುತ್ತದೆ. ಹಳೆ ದಿನಗಳಪ್ರೇಯಸಿಯರ ನೆನಪಿಸಿಕೊಂಡು ಕವಿತೆ ಬರೆಯಲು ಹೊರಟರೂ ನನಗದನ್ನು ಬರೆಯಲಾಗದು. ! ಬರಹವೇ ಹಾಗೆ ಬರೆಯುವ ಲಿಂಕ್ ತಪ್ಪಿಹೋಯಿತೆಂದರೆ ನಾನು ಅಪ್ಪನಾಣೆಗೂ ಒಂದಕ್ಷರವನ್ನೂಬರೆಯುವುದಿಲ್ಲ. ನೀವು ಬೇಕಾದರೆ ನನ್ನನ್ನ ಮೂಡಿ ಎಂದು ಕರೆಯಿರಿ ಆದರೆ ನಾನು ಈ ಮೂಡ್ ಗಳನ್ನೆಲ್ಲ ನಂಬುವುದಿಲ್ಲವಾದರೂ ಒಂದೊಂದು ಸಾರಿ ಎಲ್ಲಾ ಬಿಟ್ಟು ಎಲ್ಲಾದರು ದೂರದೂರಿಗೆ ಹೋಗಿಯಾರಿಗೂ ಗೊತ್ತಿಲ್ಲದಂತೆ ಇದ್ದು ಬಿಡಬೇಕು.. ಪರಿಚಿತರೆ ಇಲ್ಲದ ಅಪರಿಚಿತ ನಗರದ ಬೃಹತ್ ಹೆದ್ದಾರಿಗಳಲ್ಲಿ ಅನಾಥನಂತೆ ಅಲೆಯಬೇಕು ಅಂತನ್ನಿಸುತ್ತದೆ.. ಅದೆಲ್ಲಿಯದೋ ಕ್ಯಾಂಟೀನಿನ ಬನ್ನು,ಟಿ.. ಇನ್ನೆಲ್ಲಿಯದ್ದೋ ಚಿತ್ರಾನ್ನ ಮತ್ತೆ ಸಂಜೆಗೊಂದಷ್ಟು ಅನ್ನ ಸಾಂಬರ್.. ಇಷ್ಟಿದ್ದು ಬಿಟ್ಟರೆ ಸಾಕು ನನ್ನ ಬದುಕು ಹೂವಿನ ಹೆದ್ದಾರಿ..  ಕಳೆದು ಹೋದ ಹುಡುಗಿಗೆ ಪ್ರೇಮ ಪತ್ರವನ್ನ ಬರೆದು, ಗೊತ್ತಿಲ್ಲದ ವಿಳಾಸವನ್ನ ಹಾಗೆ ಕಾಲಿಬಿಟ್ಟು, ಕೆಂಪು ಅಂಚೆ ಡಬ್ಬಿಗೆ…

Read More