ಸಾಸ್ತಾನದ ಅಕ್ಷತಾ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಸಾಧನೆ

ಬ್ರಹ್ಮಾವರ: ಸಾಸ್ತಾನ ಯಕ್ಷಿಮಠ ಗುಂಡ್ಮಿಯ ದಿನಾಕರ ಪೂಜಾರಿ ಮತ್ತು ಗೀತಾ ಪೂಜಾರಿ ದಂಪತಿಗಳ ಮಗಳಾದ ಅಕ್ಷತಾ ಪೂಜಾರಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆ ಯಲ್ಲಿ ಶೇ. 96.17 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಗಮನಾರ್ಹ ಸಾಧನೆ ಮಾಡಿರುವ ಅಕ್ಷತಾ, ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಿದ್ಯಾರ್ಥಿನಿ.

Read More

ಗಲ್ಲು ಶಿಕ್ಷೆಗೆ ಗುರಿಯಾದ ಹಂತಕ ಗಳಗಳನೆ ಅತ್ತಾಗ ಜನರು ಸಂಭ್ರಮಿಸುತ್ತಿದ್ದರು!  

ಇದು ಕರಾವಳಿಯನ್ನ ಬೆಚ್ಚಿ ಬೀಳಿಸಿದ ಅಪರಾಧ ಪ್ರಕರಣ ಅರಬ್ಬಿ ಕಡಲು ಆರುತಿಂಗಳ ಗರ್ಭಿಣಿ ಹೆಣ್ಣಿನ ಮರಣ ಚೀತ್ಕಾರವನ್ನ ಜೀರ್ಣಿಸಿಕೊಂಡ ಕರುಣಾಜನಕ ಕಥೆಯೊಂದನ್ನ ನಿಮಗೆ ಹೇಳುತ್ತೇನೆ ಕೇಳಿ. ♦ವಸಂತ್ ಗಿಳಿಯಾರ್ ನಿಮಗೆ ನೆನಪಿರಬಹುದು ಈಗ್ಗೆ ಐದು ವರ್ಷದ ಹಿಂದೆ ಆರುತಿಂಗಳ ಬಸುರಿ ಹೆಣ್ಣು ಇಂದಿರಾಳನ್ನ ತನ್ನ  ದೇಹದಾಯಕ್ಕೆ ಬಳಸಿಕೊಂಡು ಅತಿನೀಚ ಬಯಕೆಗಾಗಿ ಆಕೆಯ ಬದುಕನ್ನೇ ಆಹುತಿಯಾಗಿಸಿಕೊಂಡು ಪಾಪಿಗಳ ಪುಸ್ತಕದ ಸರಕಾದ ಪಾತಕಿಯೊಬ್ಬನ ಕಥೆ! ಆ ನತದೃಷ್ಟ ಹೆಣ್ಣಿನ ದುರಂತ ಕಥೆಯನ್ನ ಮತ್ತೇಕೆ ಬರೆಯಬೇಕು ಎಂದು ನಿಮಗೂ ಅನ್ನಿಸಿರಬೇಕು..  ಐದು  ವರ್ಷದ ಹಿಂದೆ ಈ ವರದಿ ಬರೆಯುವಾಗ ಮನದ ತುಂಬಾ ತುಂಬು ಆಕ್ರೋಶವಿದ್ದರೆ ಈಗ ಒಂದಷ್ಟು ಸಮಾಧಾನವಿದೆ.. ಸತ್ತ ಇಂದಿರಾ ಮತ್ತು ಆಕೆಯ ಒಡಲಲ್ಲೇ ಮಿಸುಕಾಡಿ ಉಸಿರು ನೀಗಿಕೊಂಡ ಆರು ತಿಂಗಳ ಬ್ರೂಣ ಮತ್ತೆ ಬದುಕಿ ಬರಲಾರರು ಹೌದಾದರೂ ಆ ಎರಡು ಅಮಾಯಕ ಜೀವವನ್ನ ಕೊಂದ ಪಾತಕಿಯನ್ನ ಬದುಕಗೊಡಬೇಡಿ ಎಂಬುದಾಗಿ ಕುಂದಾಪುರದಲ್ಲಿನ…

Read More

ಉಡುಪಿ ಜಿಲ್ಲೆಯಲ್ಲಿ ಇಂದು ಕೊರೋನಾ ೧೮ ಪ್ರಕರಣ:- ಇದರಲ್ಲಿ ಮೂವರು ಪೊಲೀಸರು.

ಉಡುಪಿ ಜಿಲ್ಲೆಯ ಇಂದಿನ ಕೊರೋನಾ ಪ್ರಕರಣಗಳ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದೆ. ಈ ೧೮ ಪ್ರಕರಣಗಳಲ್ಲಿ 14 ಪ್ರಕರಣಗಳ ಮೂಲ ಮಹಾರಾಷ್ಟ್ರವಾದರೆ ಇನ್ನುಳಿದಂತೆ ನಾಲ್ಕು ಪ್ರಕರಣಗಳಲ್ಲಿ ಓರ್ವ ಗರ್ಭಿಣಿ ಮಹಿಳೆ ಮತ್ತು 1 ಎಎಸ್‌ಐ ಮತ್ತುಳಿದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳಾಗಿದ್ದು, ಕಾರ್ಕಳದ ಅಜೆಕಾರು, ಗ್ರಾಮಾಂತರ ಮತ್ತು ಬ್ರಹ್ಮಾವರ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಾಗಿದ್ದಾರೆ. ಮುಂದಿನ ೪೮ ಗಂಟೆಗಳ ಕಾಲ ಈ ಮೂರು ಠಾಣೆಗಳನ್ನು ಬಂದ್ ಮಾಡಿ, ಇಲ್ಲಿನ ಸಿಬ್ಬಂದಿಗಳಿಗೆ ಕ್ವಾರಂಟೈನ್‌ಗೆ ನೀಡಲಾಗಿದೆ.  

Read More

ಬ್ರಹ್ಮಾವರ ಪೊಲೀಸ್ ಸಿಬ್ಬಂಧಿಗೆ ಕೊರೋನಾ ಶಂಕೆ! ಬೆಚ್ಚಿ ಬೀಳುವ ವರದಿ!

ಪೋಲಿಸ್ ಸಿಬ್ಬಂಧಿಗಳೇ ಕೊರೋನಾ ಶಂಕಿತರು! ಬ್ರಹ್ಮಾವರ ಮತ್ತು ಕಾರ್ಕಳದ ಅಜೆಕಾರು ಪೊಲೀಸ್ ಠಾಣೆ ಶೀಲ್ ಡೌನ್! ಉಡುಪಿ ಜಿಲ್ಲೆಯ ಪೊಲೀಸರ ನೆತ್ತಿಯ ಮೇಲೆ ಕೊರೋನಾ ಕರಿ ನೆರಳು! ವೃತ್ತಿ ಕಾರಣಕ್ಕೆ ಅವರ ಸಂಪರ್ಕಕ್ಕೆ ಬಂದ ಸಾವಿರಾರು ಸಾರ್ವಜನಿಕರು ಇದೀಗ ಆತಂಕಿತರಾಗಿದ್ದಾರೆ! ಕೊರೋನಾದ ನಿಜವಾದ ವಿರಾಟ್ ದರ್ಶನದ ಮೊದಲ ಹಂತ ಇದೀಗ ಚಾಲನೆ ಕಂಡುಕೊಳ್ಳುತ್ತಿದೆ. ಬ್ರಹ್ಮಾವರದ ಪೊಲೀಸ್ ಕಾನ್ಸ್ಟೇಬರ್ ಒಬ್ಬರು ಕೊರೋನಾ ಶಂಕಿತರು ಎನ್ನಲಾಗಿದ್ದು ಪೂರ್ತಿ ಬ್ರಹ್ಮಾವರ ಪೊಲೀಸ್ ಠಾಣೆಯನ್ನೇ ಶೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಬ್ರಹ್ಮಾವರ ಪೋಲೀಸರು ಸಾಸ್ತಾನ ಟೋಲ್ ಪ್ಲಾಝಾದಲ್ಲಿಯೂ ಪರಿಶೀಲನಾ ಕಾರ್ಯ ನಡೆಸುತ್ತಿದ್ದರು ಎನ್ನುವ ಅಂಶವೇ ಆತಂಕಕ್ಕೆ ಕಾರಣವಾಗಿದೆ.

Read More

ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ ಯತ್ನ: ಆರೋಪಿ ಬಂಧನ

ಬ್ರಹ್ಮಾವರ: ಬೆಳ್ಳಂಬೆಳಗ್ಗೆ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಳಿಗನೂರು ನಿವಾಸಿ ಹೊನ್ನಪ್ಪ ೩೪ ಬಂಧಿತ ಆರೋಪಿಯಾಗಿದ್ದು, ಪ್ರಸ್ತುತ ಐರೋಡಿ ಗ್ರಾಮದ ಮಾಬುಕಳದ ಅಲ್ಸೆಬೆಟ್ಟು ಮಹಾಕಾಳಿ ದೇವಸ್ಥಾನದ ಬಳಿ ವಾಸಿಸುತ್ತಿದ್ದ. ಸಂತೆಕಟ್ಟೆಯ ನವಮಿ ಬೇಕರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಬಂಧಿಸುವಲ್ಲಿ ಯಶ ಕಂಡಿದ್ದಾರೆ. ಘಟನೆ ಹಿನ್ನೆಲೆ ಬ್ರಹ್ಮಾವರದ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕೆಲಸಕ್ಕಿದ್ದ ಕಾಪು ಮೂಲದ ಮಹಿಳೆ ವಾಪಾಸು ಕಾಪುವಿಗೆ ಹೋಗುವ ಸಂದರ್ಭ ಡ್ರಾಪ್ ಕೊಡುವ ನೆಪದಲ್ಲಿ ಮಾರ್ಗ ಬದಲಿಸಿ ನೀಲಾವರದ ಸಮೀಪ ಅತ್ಯಾಚಾರಕ್ಕೆ ಯತ್ನಿಸಿದ್ದ. ಶ್ಯಾಮಿಲಿ ಶನಾಯದ ಬಳಿ ಆರೋಪಿ ಮಹಿಳೆಯನ್ನು ಹತ್ತಿಸಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರಲ್ಲಿ ಆರೋಪಿಯ ನೀಲಿ ಬಣ್ಣದ ಪ್ಲಾಟಿನಾ ಗಾಡಿಯನ್ನು ಬಳಸಿದ್ದ. ಇದರ ಆಧಾರದ ಮೇಲೆ…

Read More

ಮಕಾಡೆ ಮಲಗುತ್ತಿದೆ ಹೊಟೆಲ್ ಉದ್ಯಮ. ದಿಕ್ಕೆಲ್ಲಿ? ದೆಸೆಯೆಲ್ಲಿ? ಆತಂಕದಲ್ಲಿದೆ, ಅನ್ನದಾತರ ಬದುಕು !!

ನಮ್ಮ ಊರು ಬೆಳೆದದ್ದು, ಇಲ್ಲಿನ ದೈವಗಳ ಮನೆಯ ಮೇಲೆ ಹೊಸ ಹೆಂಚು, ಕೊನೆಗೆ ಟೆರೇಸು ಕಂಡದ್ದು, ನಮ್ಮ ಊರ ದೇವಸ್ಥಾನಗಳ ಪ್ರಾಂಗಣಗಳು ಶಿಲಾಮಯವಾಗಿ ತಂಪಾದದ್ದು ದೇವಳದ ಮಾಡಿಗೆ ಹಿತ್ತಾಳೆ, ತಾಮ್ರಗಳ ಹೊಡೆಸಿ ಮೆರುಗು ಕೊಟ್ಟಿದ್ದು, ದೇವರ ಮೈಮೇಲೆ ತರಹಾವರಿ ಆಭರಣಗಳು ಮಿನುಗಿದ್ದು, ಊರೂರುಗಳಲ್ಲಿಯೂ ನಾಗಮಂಡಲವಾದದ್ದು, ಹರಕೆಯಾಟದ ಹೆಸರಲ್ಲಿ ಕಲಾವಿದರ ಬದುಕು ನಕ್ಕಿದ್ದು, ಕೋಲ ಕಟ್ಟುವ ಪಾಣಾರನ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದು ಹೀಗೆ ನಮ್ಮ ಕರಾವಳಿ ಒಟ್ಟಾರೆಯಾಗಿ ಬೆಳೆದದ್ದು ಅನ್ನದಾತರ ಕರುಣೆಯಿಂದ ಅರ್ಥಾತ್ ಹೊಟೇಲು ಉದ್ಯಮದಿಂದ. ಊರು ಬಿಟ್ಟು ನಗರ ಸೇರಿ ಹೋಟೇಲುಗಳಲ್ಲಿ ದುಡಿದು ಹೊಟೇಲು ಕಟ್ಟಿದ ಅವರು ಊರಿನ ಕಾಗದ ತಲುಪಿದಾಗಲೆಲ್ಲಾ ಹಣವನ್ನ ಮನಿಯಾರ್ಡರ್ ಮಾಡಿದರು. ತಂಗಿಯರ, ಅಕ್ಕಂದಿರ ಮದುವೆ ಮಾಡಿಸಿ ತಾವು ಮದುವೆಯಾಗುವಾಗ ಪ್ರಾಯವಾದರೂ ಊರಲ್ಲಿ ಅವರೆಲ್ಲ ನೆಮ್ಮದಿಯಾದರಲ್ಲ ಎಂದು ನಿಟ್ಟುಸಿರು ಬಿಟ್ಟರು. ಮಾರಾಟದ ಬಿಚ್ಚಾಳಿ ಹಾಕಿಕೊಂಡೇ ಬದುಕಿಡೀ ಬದುಕಿದ…

Read More

ಸಾಲಿಗ್ರಾಮ ಪಟ್ಟಣ ಪಂಚಾಯತ್: ಅಧ್ಯಕ್ಷ ಉಪಾಧ್ಯಕ್ಷ ಪಟ್ಟ ಯಾರಿಗೆ??

ಅಂತೂ ಕಾಲ ಕೂಡಿ ಬಂದಿದೆ,ಚುನಾವಣೆ ನಡೆದು ಸುಮಾರು ಒಂದುವರೆ ವರುಷಗಳ ನಂತರ ಉಡುಪಿ ಜಿಲ್ಲೆಯ ಏಕೈಕ ಪಟ್ಟಣ ಪಂಚಾಯತ್ ಎನಿಸಿಕೊಂಡ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಆಡಳಿತ ಯಂತ್ರಕ್ಕೆ ಜೀವ ಬರುವ ಭವ್ಯ ಲಕ್ಷಣಗಳು ಎದ್ದು ಕಾಣಿಸುತ್ತಿದೆ.. ಎರಡು ಸಾವಿರದ ಹದಿನೆಂಟರ ಸೆಪ್ಟೆಂಬರ್ ತಿಂಗಳಲ್ಲಿ ಘೋಷಣೆಗೊಂಡ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣಾ ಫಲಿತಾಂಶದ ನಂತರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯ ಗೊಂದಲಗಳು ಮುಗಿದು ಹೋಗಲು ಒಂದುವರೆ ವರುಷಗಳಷ್ಟು ಸಮಯ ತೆಗೆದು ಕೊಂಡು ಇದೀಗ ಪುನಃ ಮೀಸಲಾತಿ ಪ್ರಕಟಣೆ ಹೊರಬಿದ್ದಿದೆ, ಹಾಗೆ ರಾಜಪತ್ರ ಹೊರಬೀಳುತ್ತಲೆ ಅಧ್ಯಕ್ಷ ಉಪಾದ್ಯಕ್ಷ ಗಾದಿಗೆ ಏರಲು ಕಸರತ್ತುಗಳು ಸರ್ವ ದಿಕ್ಕಿನಿಂದಲೂ ಆರಂಭಗೊಂಡಿದೆ. ಹದಿನಾರು ವಾರ್ಡುಗಳ ಪೈಕಿ ಹತ್ತು ಬಿಜೆಪಿ, ಐದು ಕಾಂಗ್ರೇಸ್ ಹಾಗೂ ಏಕೈಕ ಪಕ್ಷೇತರ ಸದಸ್ಯರಿರುವ ಈ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಡಸಾಲೆ ಒಳಗೆ ಇಣುಕಿ ನೋಡಿದರೆ ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದಲೇ ನಾಲ್ಕು…

Read More

ಪಡುಕರೆ ಕಳಪೆ ಕಾಮಗಾರಿಗೆ ಕಾರಣ ಯಾವುದು?

ಕೋಟ ಪಡುಕರೆ ಕಾಲೇಜಿನ ಮುಂಬಾಗದಿಂದ ಕೊಮೆ ಕಡೆ ಹೋಗುವ ರಸ್ತೆ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಕಾಂಕ್ರೀಟಿಕರಣ ರಸ್ತೆಯು ಈಗಾಗಲೇ ಬಿರುಕು ಬಿಟ್ಟಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ತೀವ್ರವಾದ ಆಕ್ಷೇಪವನ್ನ ವ್ಯಕ್ತಪಡಿಸಿ ಗುತ್ತಿಗೆದಾರರನ್ನ ಮತ್ತು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಗ್ರಾಮಸ್ಥರ ಮತ್ತು ಸ್ಥಳೀಯ ಯುವಕರ ಕಾಳಜಿಯ ಕಾರಣಕ್ಕೆ ಬ್ರೇಕ್ ಆದ ಕಾಂಕ್ರೀಟಿಕರಣದ ರಸ್ತೆಯ ವಿಡಿಯೋ ತುಣುಕೂ ವೈರಲ್ ಆಗಿದ್ದು ಸ್ಥಳಕ್ಕೆ AEE ಜಗಧೀಶ್ ಭಟ್ ಕೂಡ ಭೇಟಿ ಕೊಟ್ಟು ಕೋರ್ ತೆಗೆದು ಪರಿಶೀಲನೆಗೆ ಕಳುಹಿಸಿದ್ದಲ್ಲದೆ, ರಸ್ತೆ ಕಾಮಗಾರಿ ಹಂತದಲ್ಲೇ ಇರುವಾಗ ಇದು ತಿಳಿದು ಬಂದಿರುವುದರಿಂದಾಗಿ ಎಲ್ಲಿ ಸಮಸ್ಯೆಯಾಗಿದೆ ಎಂದು ತಕ್ಷಣವೇ ನೋಡಿ ರಸ್ತೆಯನ್ನ ಅತ್ಯಂತ ಗುಣಮಟ್ಟದ ರಸ್ತೆಯನ್ನಾಗಿ ಮಾಡುತ್ತೇವೆ ಎಂದು ಅಭಿಮತಕ್ಕೆ ತಿಳಿಸಿದರು. ನಾಲ್ಕು ಕೋಟಿ ವೆಚ್ಚದ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟವನ್ನ ಪರಿಶೀಲನೆ ನಡೆಸುವ ಅಧಿಕಾರಿಗಳು ಅಲ್ಲೆಲ್ಲೋ ಕುಳಿತು…

Read More

ಭಾರತದ ಬಾಗಿಲಲ್ಲೆ ಕರೋನ ಆದರೂ ಹೇಗೆ ಈ ವೈರಸ್ನಿಂದ ದೂರ.

ಕರೋನ ವೈರಸ್ ಪ್ರಕರಣಗಳು ಸುಮಾರು 50 ದೇಶಗಳು ಮತ್ತು ಪ್ರಾಂತ್ಯಗಳಿಗೆ ಹರಡಿದ್ದು, ವೈರಸ್ ಈಗ ಚೀನಾದ ಹೊರಗೆ ಹೆಚ್ಚು ಹೆಚ್ಚು ಜನರನ್ನು ಬಾಧಿಸುತ್ತಿದೆ. ಜಾಗತಿಕವಾಗಿ, 80,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಭಾರತದಲ್ಲಿ, ಕೇರಳದ ಮೂರು ಪ್ರಕರಣಗಳನ್ನು ಹೊರತುಪಡಿಸಿ, ಹೊಸ ಕೊರೋನವೈರಸ್ ಪ್ರಕರಣಗಳ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. ವೈರಸ್ ಸೋಂಕಿಗೆ ಒಳಗಾದ ಮೂವರನ್ನು ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಭಾರತದಲ್ಲಿ ಪ್ರಸ್ತುತ ಕರೋನವೈರಸ್ ಪ್ರಕರಣಗಳು ಶೂನ್ಯಕ್ಕೆ ತರುತ್ತವೆ. ಆದಾಗ್ಯೂ, ಹೊಸ ಪ್ರದೇಶಗಳಿಗೆ ಕರೋನವೈರಸ್ ವೇಗವಾಗಿ ಹರಡುವುದನ್ನು ಗಮನಿಸಿದಾಗ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಈಗಾಗಲೇ ಯಾವುದೇ ದೇಶವು ಕ‌ಕರೋನವೈರಸ್ (COVID-19) ನಿಂದ ಹಿಟ್ ಆಗುವುದಿಲ್ಲ ಎಂದು ಭಾವಿಸುವುದು ತಪ್ಪು ಎಂದು ಎಚ್ಚರಿಸಿದೆ. ಭಾರತವು ಚೀನಾ ಮತ್ತು ಪಾಕಿಸ್ತಾನದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದ್ದರೂ ಸಹ, ದೇಶದಲ್ಲಿ (ಕೇರಳ) ಕೇವಲ ಮೂರು ಕರೋನವೈರಸ್ ಪ್ರಕರಣಗಳು ದಾಖಲಾಗಿವೆ.…

Read More

ಮನೋರಂಜನೆ ಮನೋವಿಕಾಸಕ್ಕೂ ಪ್ರೇರಣೆಯಾಗಲಿ : ಮಿಜಾರುಗುತ್ತು ಆನಂದ ಆಳ್ವ

ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ (ರಿ,) ಆಶ್ರಯದಲ್ಲಿ ನಡೆಯುವ ಅಭಿಮತ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಶತಾಯುಷಿ, ಹಿರಿಯ ಕೃಷಿಕರೂ ಆದ ಮಿಜಾರುಗುತ್ತ್ರು ಆನಂದ ಆಳ್ವರು ’ಉತ್ಸವ, ಸಂಭ್ರಮ, ಮಹೋತ್ಸವಗಳಲ್ಲಿ ಏರ್ಪಡಿಸುವ ಸಾಂಸ್ಕೃತಿಕ ವೈಭವಗಳು ಕೇವಲ ಮನೋರಂಜನಗಷ್ಟೇ ಸೀಮಿತವಾಗಿರದೆ ಮನೋವಿಕಾಸಕ್ಕೂ ಪ್ರೇರಣೆಯಾಗಬೇಕು. ಮೊದಲು ದಣಿವ ಮರೆಯಲು ಮನೋರಂಜನೆಗಾಗಿ ಜನಪದ ನಡೆಗಳು ಸಾಗಿ ಬಂದವು, ಅದರಲ್ಲಿ ನೈತಿಕ ಶಿಕ್ಷಣವೂ ಅಂತರ್ಗತವಾಗಿದ್ದವು. ಇಂದು ಅದರ ಮೂಲ ಗಂಧವನ್ನ ಉಳಿಸಿಕೊಂಡು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾದ ಅಗತ್ಯ, ಅನಿವಾರ್ಯತೆ ಇದೆ ಎಂದರು. ಫೆಬ್ರವರಿ 8ನೇ ತಾರೀಕಿನಂದು ನಡೆಯುವ ಅಭಿಮತ ಸಂಭ್ರಮದಲ್ಲಿ ಚಿತ್ರನಿರ್ದೇಶಕ ಯೋಗರಾಜ್ ಭಟ್ ರಿಗೆ ಕೀರ್ತಿಕಳಶ ಪುರಸ್ಕಾರ ಮತ್ತು ಶ್ರಮಜೀವಿ ಕೂಸ ಪೂಜಾರಿ, ಕ್ರೀಡಾ ಸಾಧಕ ಸೀತಾರಾಮ ಶೆಟ್ಟಿ, ಕರಕುಶಲ ಕಲೆಯ ಸಾಧಕಿ ಲಲಿತಾ ಪೂಜಾರಿ ಯವರಿಗೆ ಯಶೋಗಾಥೆ ಗೌರವಾರ್ಪಣೆ ನಡೆಯಲಿದ್ದು ಆ ಸಂಧರ್ಭದಲ್ಲಿ ಆಳ್ವಾಸ್ ವಿಧ್ಯಾರ್ಥಿಗಳ ಸಾಂಸ್ಕೃತಿಕ…

Read More