ಸುನಿಲ್ ಕುಮಾರ್ ಮಂತ್ರಿಯಾಗ್ತಾರಾ?!

ನಿಮ್ಮಾಭಿಮತಸುದ್ದಿ: ಸುನಿಲ್ ಕುಮಾರ್ ಮಂತ್ರಿಯಾಗುವ ಧಟ್ಟ ಸಾಧ್ಯತೆಗಳು ರಾಜ್ಯ ರಾಜಕಾರಣವನ್ನ ಹೊಸ ಬೆಳವಣಿಗೆಯ ಕಡೆ ಹೊರಳುವಂತೆ ಮಾಡಿದೆ. ವಿ ಸುನಿಲ್ ಕುಮಾರ್ ಕಾರ್ಕಳ ಶಾಸಕರಾಗಿದ್ದು ಜಿಲ್ಲೆಯ ಹಿರಿಯ ಶಾಸಕರೂ ಸುನಿಲ್ ಕುಮಾರ್ ಗೆ ಸಚಿವ ಪಟ್ಟ ಕೊಡುವಲ್ಲಿ ಗಟ್ಟಿಯಾಗಿ ನಿಂತಿರುವುದಾಗಿ ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಉಡುಪಿ ಜಿಲ್ಲೆಗೆ ಹೊರ ಜಿಲ್ಲೆಯ ಬಸವರಾಜ ಬೊಮ್ಮಾಯಿ ಉಸ್ತುವಾರಿ ಸಚಿವರಾಗಿದ್ದು ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರು ಉಸ್ತುವಾರಿ ಸಚಿವರಾಗಿದ್ದು ಸುನಿಲ್ ಕುಮಾರ್ ಉಡುಪಿ ಜಿಲ್ಲಾ ಕೋಟಾದಲ್ಲಿ ಮಂತ್ರಿಯಾಗುತ್ತಾರೆ ಎನ್ನಲಾಗಿದ್ದು. ರಾಜ್ಯ ರಾಜಕಾರಣದ ಬಗ್ಗೆ ಕರಾವಳಿ ಬಹಳ ಕುತೂಹಲದಿಂದ ಕಾಯುತ್ತಿದೆ ಹಿಂದೂ ಸಂಘಟನೆಯ  ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ಸುನಿಲ್ ಕುಮಾರ್ ಸಂಘಟನ ಚತುರ ಎಂಬ ಖ್ಯಾತಿಗೆ ಒಳಗಾದ ರಾಜಕಾರಣಿ. ಯುವರಾಜಕಾರಣಿಯೂ ಆಗಿರುವ ಸುನಿಲ್ ಕುಮಾರ್ ಬಗ್ಗೆ ಪಕ್ಷದ ಹಿರಿಯ ನಾಯಕರು ಮತ್ತು ಸಂಘದ ಪ್ರಮುಖರೂ ಒಲವು ತೋರಿಸಿರುವುದು, ಸುನಿಲ್ ಕುಮಾರ್…

Read More

ನೇರಳ ಕಟ್ಟೆಯಲ್ಲಿ ಭೀಕರ ಕೊಲೆ!

ನೇರಳಕಟ್ಟೆಯಲ್ಲಿ ಭೀಕರ ಕೊಲೆ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳ ಕಟ್ಟೆಯ ಕರ್ಕುಂಜೆ ಎಂಬ ಗ್ರಾಮದಲ್ಲಿ ನಡೆದ ಘಟನೆ!! ಹಾಡಹಗಲೇ ಬರ್ಬರವಾಗಿ ತಲವಾರುಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು!! ಪೂರ್ವದ್ವೇಶದ ಹಿನ್ನೆಲೆಯಲ್ಲಿ ನಡೆದ ಕೊಲೆ!! ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ವಾಲ್ತೂರು ಜೋಡುಮಕ್ಕಿ ಮೂಲದ ಬಾಬು ಶೆಟ್ಟಿ ಕೊಲೆಯಾದ ವ್ಯಕ್ತಿ. ಉಡುಪಿ ಎಸ್.ಪಿ. ನಿಶಾಜೇಮ್ಸ್ ನಿರ್ದೇಶನದಲ್ಲಿ ಚುರುಕುಗೊಂಡ ತನಿಖೆ. ಕುಂದಾಪುರ ತಾಲೂಕಿನಲ್ಲಿ ಬೆಚ್ಚಿಬೀಳಿಸಿದ ಘಟನೆ!! ಮಧ್ಯಾಹ್ನ ಒಂದು ಗಂಟೆಯ ಸಮಯ ನಡೆದ ಕೊಲೆ!! ಬೈಕಿನಲ್ಲಿ ತೆರಳುತ್ತಿದ್ದ ಬಾಬುಶೆಟ್ಟಿಯನ್ನು ತಡೆದು ಅಟ್ಟಿಸಿಕೊಂಡು ಕಾಡಿನಲ್ಲಿ ಕೊಚ್ಚಿ ಕೊಲೆಗೈದ ಪಾತಕಿಗಳು!! ಕೆಲದಿನಗಳ ಹಿಂದೇ ’ತಲೆ ಗೆತಿತೀವಿ ಎಂದು ಎಚ್ಚರಿಕೆ ಕೊಟ್ಟಿದ್ದ ಹಂತಕರು!!

Read More

ಹಗರಣದ ಸುಳಿಯಲ್ಲಿ ಸಾಸ್ತಾನ ಮೀನು ಮಾರುಕಟ್ಟೆ!

ಅವ್ಯವಸ್ಥೆಯ ಆಗರವಾದ ಸಾಸ್ತಾನ ಮೀನುಮಾರುಕಟ್ಟೆಯ ಕಾಮಗಾರಿಯಲ್ಲಿ ಗೋಲ್ ಮಾಲ್ ಯಾವ ಪರಿ ನಡೆದಿದೆ ಎಂದರೆ, ನೀಲ ನಕ್ಷೆಯಲ್ಲಿದ್ಯಾದಂತೆ ಯಾವುದೂ ಇಲ್ಲಿ ಸರಿಯಾಗಿ ನಡೆದಿಲ್ಲ. ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿ ಕೈತೊಳೆದುಕೊಳ್ಳಲಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ದಿವ್ಯ ಮೌನ ವಹಿಸಿರುವುದು, ಅನುಮಾನ ಮೂಡಿಸುತ್ತಿದೆ. ಈ ಕುರಿತೊಂದು ಸವಿಸ್ತಾರ ವರದಿ ಇಲ್ಲಿದೆ ಓದಿಕೊಳ್ಳಿ ಅಭಿಮತ; ಉಡುಪಿ ಜಿಲ್ಲೆಯಲ್ಲಿ ತಾಜಾ ಹೊಳೆ ಮೀನುಗಳಿಗೆ ಪ್ರಸಿದ್ದಿ ಪಡೆದ ಮೀನುಮಾರುಕಟ್ಟೆ ಎಂದರೆ ಅದು ಸಾಸ್ತಾನ ಮೀನುಮಾರುಕಟ್ಟೆ. ದೂರದ ಊರುಗಳಿಂದ ಹಸಿಮೀನುಪ್ರಿಯರು ಸಾಸ್ತಾನದ ತನಕ ಬಂದು ಹಸಿ ಹಸಿ ಹೊಳೆಮೀನು ಖರೀದಿಸಿ ಹೋಗುತ್ತಾರೆ, ಕೇವಲ ಹೊಳೆ ಮೀನಷ್ಟೇ ಅಲ್ಲದೆ ಸಮುದ್ರದ ವಿವಿಧ ಜಾತಿಯ ಮೀನುಗಳು ಹಾಗೂಒಣಮೀನು ವ್ಯಾಪಾರವೂ ಇಲ್ಲಿ ಬಲು ಜೋರಾಗಿಯೇ ಉಂಟು., ಐರೋಡಿ ಪಂಚಾಯತ್ ವ್ಯಾಪ್ತಿಗೆ ಬರುವ ಈಮೀನು ಮಾರುಕಟ್ಟೆಯನ್ನು ಹೈಟೆಕ್ ಮೀನು ಮಾರುಕಟ್ಟೆಯನ್ನಾಗಿಸಲು ಮೂರು ವರುಷದ ಹಿಂದೆ ಎರಡುಕೋಟಿಯಷ್ಟು ದೊಡ್ಡ ಮೊತ್ತ ಮಂಜೂರಾಗಿತ್ತು, 2016 ರ ಇಸವಿಯಲ್ಲಿ ಆರಂಭಗೊಂಡ ಕಾಮಗಾರಿ ಕುಂಟುತ್ತಾ ಸಾಗಿಕೊನೆಗೆ ತೆವಳಿ ತೆವಳಿ ಇದೀಗ ಅಂತಿಮ ಹಂತಕ್ಕೇನೋಬಂದು ನಿಂತಿದೆ.. ಸುಣ್ಣ ಬಣ್ಣದ ಲೆವೆಲ್ಲಿಗೆ ಬಂದು ನಿಂತ ಈಮೀನುಮಾರುಕಟ್ಟೆಯ ಒಳಹೊಕ್ಕು ನೋಡಿದರೆ ಎರಡುಕೋಟಿಯಷ್ಟು ದೊಡ್ಡ ಮೊತ್ತದಲ್ಲಿ ಅರ್ಧಕ್ಕರ್ಧ ದುಡ್ಡು ಗುಳುಂ ಸ್ವಾಹ ಆದ ದಟ್ಟ ಸಾದ್ಯತೆಗಳೇ ವಿಶ್ವಪ್ರಸಿದ್ದ ಮೀನುಮಾರ್ಕೇಟಿನ ದಶದಿಕ್ಕುಗಳಿಂದಲೂ ಎದ್ದು ಕಾಣಿಸುತ್ತಿದೆ.!!  ಹತ್ತು ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿಗೆ ನಾಲ್ಕುವರ್ಷ ರಾಷ್ಟ್ರೀಯ ಮೀನುಗಾರಿಕಾ ಮಂಡಳಿ ಹೈದರಾಬಾದಿನ ಒಂದು ಕೋಟಿ ಅನುದಾನ ಹಾಗೂ ನಬಾರ್ಡಿನ 95 ಲಕ್ಷರೂಪಾಯಿ ಸಾಲ ಹಾಗೂ ರಾಜ್ಯ ಸರಕಾರದ ಐದು ಲಕ್ಷರೂಪಾಯಿಗಳ ಅನುದಾನವನ್ನು ಸೇರಿಸಿ ಒಟ್ಟು ಎರಡುಕೋಟಿ ರೂಪಾಯಿ ಮೊತ್ತದಲ್ಲಿ ಮೂರು ವರುಷದ ಹಿಂದೆ ಆರಂಭಗೊಂಡ ಕಾಮಗಾರಿ ಕೇವಲ ಹತ್ತು ತಿಂಗಳಲ್ಲಿಮುಗಿಸಬೇಕೆಂಬ ಕರಾರಿದ್ದರೂ  ನಾನಾ ನೆಪವೊಡ್ಡಿ  ಮೂರುವರುಷದ ತನಕ ಕುಂಟುತ್ತಾ ಸಾಗಿ ಬಂತು ಈ ಮೀನುಮಾರುಕಟ್ಟೆ, ಮಾರ್ಕೇಟಿನ ಕಾಮಗಾರಿ ವಹಿಸಿ ಕೊಂಡ ‘ಉಡುಪಿ ನಿರ್ಮಿತಿ ಕೇಂದ್ರ, ಸಾಸ್ತಾನದ ಸುರೇಶ್ ಶೆಟ್ಟಿ ಎನ್ನುವ ಗುತ್ತಿಗೆದಾರನಿಗೆ ಇದರತುಂಡು ಗುತ್ತಿಗೆಯನ್ನು ನೀಡಿತು,  ಅದರ ಗುತ್ತಿಗೆ ಕರಾರಿನಲ್ಲಿ ಇರುವ ಬಾವಿ, ಅಂಡರ್ ಗ್ರೌಂಡಟ್ಯಾಂಕ್, ಸೆಪ್ಟಿಕ್ ಟ್ಯಾಂಕ್, ಕೊಳಚೆ ನೀರಿನ ಶುದ್ದೀಕರಣಘಟಕ, ಗಳ್ಯಾವುದೂ ಸದ್ಯಕ್ಕಿಲ್ಲಿ ನಿರ್ಮಿಸಿದ ಕುರುಹುಕಾಣಿಸುತ್ತಿಲ್ಲ, ಮೀನು ಶೀತಲಿಕರಣ ಘಟಕದ (500 ಕೆಜಿಸಾಮರ್ಥ್ಯ) ನಿರ್ಮಾಣ ಮಾಡಬೇಕಾದ ಕಡೆ ಒಂದು ಸಣ್ಣ ಎಸಿ ಅಳವಡಿಸಲಾಗಿದೆ,  ಎರಡು ಕೋಟಿಯಷ್ಟು ದುಡ್ಡು ನುಂಗಿ ನೀರು ಕುಡಿಯಲೆಂದೇ ಮೀನು ಮಾರುಕಟ್ಟೆಯ ಕಾಮಗಾರಿ ನಡೆಸಿದ ಹಾಗೇ ಕಾಣಿಸುತ್ತಿದ್ದು, ಕೊಳಚೆ ನೀರು ಹರಿಯಲು ಬೇಕಾದಮೋರಿಯಾಗಲಿ, ಮತ್ತೊಂದಾಗಲಿ ಇಲ್ಲಿ ಕಾಣಿಸುತ್ತಿಲ್ಲ,  ಮೀನುಗಾರಿಕಾ ಇಲಾಖೆ ದುಡ್ಡು, ಐರೋಡಿ ಪಂಚಾಯತ್ ಯಜಮಾನಿಕೆ ಸರಕಾರದ ಸುಪರ್ದಿಯ ಜಾಗದಲ್ಲಿ ಇದ್ದ ಮೀನು ಮಾರ್ಕೇಟಿನ ಆಡಳಿತ ನಿರ್ವಹಣೆಯನ್ನು ಇದುವರೆಗೆ ಐರೋಡಿ ಪಂಚಾಯತ್ ನಿರ್ವಹಿಸುತ್ತಿತ್ತು, ಹದಿನಾಲ್ಕು ಅಂಗಡಿ ಕೋಣೆ ಸಹಿತವಿದ್ದ ಮೀನುಮಾರುಕಟ್ಟೆಯನ್ನು ಏಲಂ ಮಾಡಿ ಒಂದಷ್ಟು ಆದಾಯ ಗಳಿಸಿದರೂ ಗಬ್ಬೆದ್ದುನಾರುತ್ತಿದ್ದ ಮೀನುಮಾರ್ಕೇಟಿನ ಸರಿಯಾದ ನಿರ್ವಹಣೆಮಾಡದೇ ಇದ್ದ ಐರೋಡಿ ಪಂಚಾಯತ್, ಹರಾಜದ ದುಡ್ಡಿಗಿಂತ ಕಡಿಮೆ ದುಡ್ಡಿಗೆ ಅಂಗಡಿ ಕೋಣೆಗಳನ್ನು ಬಾಡಿಗೆಗೆ ನೀಡಿ ಅಡ್ಜಸ್ಟ್‌ಮೆಂಟ್ ಮಾಡಿಕೊಂಡು ವ್ಯಾಪಕಜನಾಕ್ರೋಶಕ್ಕೆ ತುತ್ತಾಗಿತ್ತು. ಇದೀಗ ಹೊಸ ಮೀನು ಮಾರುಕಟ್ಟೆ ಹಾಗೂ ಮೇಲ್ಮಹಡಿಯ ಅಂಗಡಿಕೋಣೆಗಳನ್ನು ಕಬ್ಜಕ್ಕೆ ತೆಗೆದು ಕೊಳ್ಳುವ ಹುನ್ನಾರ ಐರೋಡಿ ಪಂಚಾಯತ್‌ಗಿದೆ. ಹಸಿ ಮೀನು ಮಾರಾಟಗಾರರ ಸಂಘ, ಅಥವಾ ಮೀನುಗಾರಿಕಾ ಫೆಡರೇಷನ್‌  ಈ ಮೀನುಮಾರುಕಟ್ಟೆಯ ನಿರ್ವಹಣೆಗೆ ಹಕ್ಕು ಕೇಳುವ ಸಾದ್ಯತೆಯೂ ಇಲ್ಲದಿಲ್ಲ. ರಸ್ತೆಗೆ ಕಾಣುವಂತೆ ಮಾತ್ರಾ ಗಾರೆ, ಸುಣ್ಣ ಬಣ್ಣ ಬಿಟ್ಟರೆ ಇನ್ನೊಂದು ದಿಕ್ಕಿಗೆ ಗಾರೆಯನ್ನೂ ಸರಿಯಾಗಿ ಮಾಡಿಲ್ಲ ಎಂದರೆ…

Read More

ಪ್ರಥ್ವಿ ಪೂಜಾರಿ ನಿಗೂಢ ಸಾವು ಪ್ರಕರಣ ಆರೋಪಿ ಮಿಸ್ಪಾನ್ ಖುಲಾಸೆ!

ಅಭಿಮತ ಡೆಸ್ಕ್; ರಾಜ್ಯದಾದ್ಯಂತ ದೊಡ್ಡ ಮಟ್ಟದ ಸಂಚಲವನ್ನೇ ಸೃಷ್ಠಿಸಿದ್ದ ಬ್ರಹ್ಮಾವರದ ಕ್ರೀಡಾ ಪ್ರತಿಭೆ ಪ್ರಥ್ವಿ ಪೂಜಾರಿ ಅಂಪಾರು ಸಾವಿನ ಪ್ರಕರಣದ ಆರೋಪಿ ದೋಶಮುಕ್ತಿಯಾಗಿದೆ! ಎಂಟು ವರ್ಷದ ಹಿಂದೆ ಬ್ರಹ್ಮಾವರದ ಕಾಲೇಜಿನ ಹಾಸ್ಟೇಲಿನಲ್ಲಿ ಆತ್ಮಹತ್ಯೆಗೆ ಶರಾಣಾಗಿದ್ದಳು. ಆಗ ಆಕೆಗಿನ್ನೂ ಹದಿನೇಳು ವರ್ಷ ಪ್ರಾಯ. ಆಕೆ ರಾಷ್ಟ್ರೀಯ ಮಟ್ಟದ ಕ್ರೀಡಾ ಪ್ರತಿಭೆಯಾಗಿದ್ದಳು. 2012 ರ ಸೆಪ್ಟೆಂಬರ್ 27 ರಂದು ಪ್ರಥ್ವಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಪ್ರಥ್ವಿ ಶವದ ಬಳಿ ಸಾಂಧರ್ಭಿಕ ಸಾಕ್ಷಿಯಾಗಿ ದೊರಕಿದ ಡೆತ್ ನೋಟಿನಲ್ಲಿ ಬ್ರಹ್ಮಾವರದ ಆಕಾಶವಾಣಿ ಸಮೀಪದ ಮಿಸ್ಪಾನ್ ಎಂಬಾತನ ಹೆಸರು ಉಲ್ಲೆಖಿಸಿ ಪ್ರಥ್ವಿ ಪತ್ರವನ್ನ ಬರೆದಿರುತ್ತಾಳೆ. ಆತ ನನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಾನೆ. ನನಗೆ ಬೇರೆ ಬೇರೆ ರೀತಿಯಲ್ಲಿ ಹಿಂಸೆಯನ್ನೂ ನಿಡುತ್ತಿದ್ದಾನೆ. ನನ್ನ ಸಾವಿಗೆ ಆತನೇ ಕಾರಣ ಎಂಬಂತೆ ಆಕೆ ಬರೆದಿದ್ದಳು ಎನ್ನಲಾಗಿತ್ತು. ಈ ಪ್ರಕರಣ ಬ್ರಹ್ಮಾವರ ಠಾಣೆಯಲ್ಲಿ ದಾಖಲಾಗಿತ್ತು. ಆ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಪೋಲೀಸ್ ಅಧೀಕ್ಷಕರಾಗಿದ್ದ ರಾಮ್ ನಿವಾಸ್…

Read More

ಪುತ್ತೂರು ಕಾಲೇಜು ಹುಡುಗಿಯ ಅತ್ಯಾಚಾರದ ಪ್ರಕರಣ; ಆರೋಪಿಗೆ ಜಾಮೀನು !

ಅಭಿಮತ ಡೆಸ್ಕ್ ಪುತ್ತೂರು; ಯುವತಿಯೋರ್ವಳನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಅದರ ವಿಡಿಯೋ ಚಿತ್ರಿಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಪ್ರಕರಣದಲ್ಲಿ ಜೊತೆಗೆ ದಲಿತ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಪುತ್ತೂರಿನ ಕಾಲೇಜೊಂದರ ಐವರು ಯುವಕರ ಪೈಕಿ ಓರ್ವನಿ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣವಾದ ಪುತ್ತೂರಿನ ಪ್ರತಿಷ್ಠಿತ ಕಾಲೇಜು ವಿಧ್ಯಾರ್ಥಿನಿಯನ್ನು ನಶೆಯ ಅಮಲಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಪ್ರಕರಣ ದೇಶದಾಧ್ಯಂತ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಬಜತ್ತೂರು ಗ್ರಾಮದ ಗುರುನಂದನ್, ಕಿಶನ್, ಸುನಿಲ್, ಮತ್ತು ಬಂಟ್ವಾಳದ ಪ್ರಖ್ಯಾತ್, ಪೆರ್ನೆಯ ಪ್ರಜ್ವಲ್ ಎಂಬ ಐದು ಯುವಕರನ್ನ ಆರೋಪದಡಿ ಬಂಧಿಸಲಾಗಿದ್ದು ಈ ಪೈಕಿ ಪ್ರಜ್ವಲ್ ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ವಿಧ್ಯಾರ್ಥಿನಿಯನ್ನು ಮನೆಗೆ ಡ್ರಾಪ್ ನೀಡುವುದಾಗಿ ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿತ್ತು. ಸಂತೃಸ್ತ…

Read More

ಪಟ್ಲರಿಗೆ ನ್ಯಾಯಕ್ಕಾಗಿ ಅಭಿಮಾನಿಗಳ ಆಗ್ರಹ

ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳು ಮತ್ತಿತರ ಸಂಘ ಸಂಸ್ಥೆಗಳು ಸೇರಿ ಆಯೋಜಿಸಿದ ಬೆಂಗಳೂರಿನ ಟೌನ್ ಹಾಲ್ ಮುಂದಿನ ’ನ್ಯಾಯಕ್ಕಾಗಿ ಆಗ್ರಹ’ ಪ್ರತಿಭಟನ ಸಭೆ ಯಶಸ್ವಿಗೊಂಡಿತು. ಕಟೀಲು ದುರ್ಗಾಪರಮೇಶ್ವರಿ ಯಕ್ಷಾಗಾನ ಮೇಳದ ಪ್ರಧಾನ ಭಾಗವತರಾರ ಪಟ್ಲ ಸತೀಶ್ ಶೆಟ್ಟಿಯವರಿಗೆ ಅವಮಾನ ಮಾಡಿ ರಂಗಸ್ಥಳದಿಂದ ಕೆಳಕ್ಕಿಳಿಸಿದ ಪ್ರಕರಣ ಯಕ್ಷಗಾನ ಮತ್ತು ಪಟ್ಲರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಟ್ಲ ಅಭಿಮಾನಿಗಳು ಒಂದಾಗಿ ಮಂಗಳೂರಿನ ನೆಹರೂ ಮೈದಾನದಲ್ಲಿ ಕೂಡ ಈ ಹಿಂದೆ ಪ್ರತಿಭಟಿಸಿದ್ದರು. ಇವತ್ತು ಬೆಂಗಳೂರಿನಲ್ಲಿರುವ ಪಟ್ಲ ಅಭಿಮಾನಿಗಳು ನಗರದ ಟೌನ್ ಹಾಲ್ ಮುಂದೆ ಪ್ರತಿಭಟಿಸಿ ಪಟ್ಲರಿಗೆ ನ್ಯಾಯ ಸಲ್ಲಲೇ ಬೇಕು ಎಂದು ಆಗ್ರಹಿಸಿದ್ದಲ್ಲದೆ ’ಬೇಕೆ ಬೇಕು ಕಟೀಲು ಮೇಳಕ್ಕೆ ಪಟ್ಲ ಬೇಕು, ಎಂಬಂತೆ ಘೋಷಣೆಯನ್ನ ಕೂಗಿದರು. ವಾರದ ನಡುವಿನ ದಿನವಾದರೂ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿರುವುದು ಎಲ್ಲರ ಗಮನ ಸೆಳೆಯಿತು. ಕರ್ನಾಟಕ ರಕ್ಷಣಾ ವೇದಿಕೆಯ…

Read More

ಭಟ್ಟರ ಮುಡಿಗೆ ಅಭಿಮತ ಕೀರ್ತಿಕಳಶ ಪುರಸ್ಕಾರ

ಅಭಿಮತ ಡೆಸ್ಕ್; ಜನಸೇವಾ ಟ್ರಸ್ಟ್ (ರಿ,) ಮೂಡುಗಿಳಿಯಾರು ಇವರ ಪ್ರಸ್ತುತಿಯಲ್ಲಿ ಅಭಿಮತ ಸಂಭ್ರಮ 2020 ಕಾರ್ಯಕ್ರಮ ಫೆಬ್ರವರಿ ತಿಂಗಳ 8 ರಂದು ಮೂಡುಗಿಳಿಯಾರಿನಲ್ಲಿ ಜರುಗಲಿದ್ದು ಈ ವರ್ಷದ ಕೀರ್ತಿಕಳಶ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ರವರಿಗೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯ ಮಂದಾರ್ಥಿ ಮೂಲದವರಾದ ಯೋಗರಾಜ್ ಭಟ್ ಕನ್ನಡ ಚಲನಚಿತ್ರರಂಗದಲ್ಲಿ ಹೊಸ ಅಲೆಯ ಸಿನೇಮಾಗಳ ಸೃಷ್ಠಿಗೆ ನಾಂದಿ ಹಾಡಿ ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದವರು. ಚಿತ್ರನಿರ್ದೇಶಕರಾಗಿಯಷ್ಟೇ ಅಲ್ಲದೆ ಸಾಹಿತ್ಯ ರಚೆನೆಯಲ್ಲಿಯೂ ಯಶಸ್ಸನ್ನ ಕಂಡವರು ಭಟ್. ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಶ್ರೀಯುತರ ಜೀವಮಾನದ ಸಾಧನೆಯನ್ನು ಗುರುತಿಸಿ ಅವರ ತವರು ನೆಲದಲ್ಲಿ ಕೀರ್ತಿಕಳಶ ಪುರಸ್ಕಾರವನ್ನ ನೀಡಿ ಗೌರವಿಸಲಾಗುತ್ತಿದೆ ಎಂದು ಅಭಿಮತ ಸಂಭ್ರಮದ ಅಧ್ಯಕ್ಷರಾದ ಉಳ್ತೂರು ಅರುಣ್ ಕುಮಾರ್ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಈ ಸಂದರ್ಭ ಟೀಮ್ ಅಭಿಮತದ ಸಂಚಾಲಕರಾದ ಪ್ರವೀಣ್ ಯಕ್ಷಿಮಠ,…

Read More

ಈ ಭೂಪ ತನ್ನ ಹದಿನೈದು ಹೆಂಡಿರಿಗೆ ಕೊಡಿಸಿದ ಕಾರು ಯಾವುದು ಗೊತ್ತಾ?

ನಿಮಗೆ ಎಸ್ವಟಿನಿ ಗೊತ್ತಾ? ಬಹುಷಃ ಗೊತ್ತಿರಲಿಕ್ಕಿಲ್ಲ! ನಂಬಿ! ಅದು ಜಗತ್ತಿನ ಅತ್ಯಂತ ಬಡತನದಲ್ಲಿರುವ ಸಣ್ಣ ದೇಶಗಳಲ್ಲಿ ಒಂದು. ಅದಕ್ಕೊಬ್ಬ ರಾಜನಿದ್ದಾನೆ. 1986 ರಲ್ಲೇ ಆ ದೇಶದ ರಾಜನಾಗಿ ಆತ ಆಯ್ಕೆಯಾಗುತ್ತಾನೆ. ಆಗ ಅವನಿಗೆ ಕೇವಲ ಹದಿನೆಂಟೇ ವರ್ಷ ವಯಸ್ಸು! ಅತೀ ಚಿಕ್ಕ ವಯಸ್ಸಿನಲ್ಲೇ ಬಡ ದೇಶದ ರಾಜನಾದ ಈತನ ಬಗ್ಗೆ ಬಹಳ ವಿಶ್ವಾಸವಿದ್ದಿತ್ತು. ಆದರೆ ಪ್ರಜೆಗಳ ನಂಬಿಕೆ ಸುಳ್ಳಾಗಿದೆ. ಎಸ್ವಟಿನಿಯ ರಾಜನ ಹೆಸರು ಮಸ್ವಾಟಿ. ಆತನಿಗೆ ಹದಿನೈದು ಜನ ಅಧಿಕೃತ ಪತ್ನಿಯರಿದ್ದಾರೆ! ರಾಜಾ ಬಹುಪತ್ನಿ ವಲ್ಲಭ ಅಂತ ಸುಮ್ನೆ ಹೇಳಿದ್ದಾರೆ ಅಂದ್ಕೊಂಡ್ರಾ? ಅವನು ಅತ್ಯಂತ ಐಶಾರಾಮಿ ಜೀವನ ಜೀವಿಸುವ ಮಹರಾಜ! ಅವನದ್ದೇ ಸ್ವಂತ ಜೆಟ್ ವಿಮಾನವಿದೆ. ಅವನೇ ಒಂದು ವಿಮಾನ ನಿಲ್ದಾಣವನ್ನೂ ಮಾಡಿಕೊಂಡಿದ್ದಾನೆ. ತನ್ನ ಕುಟುಂಬದ ಇಪ್ಪತ್ತಮೂರು ಮಕ್ಕಳಿಗೆ ಆತ ದುಬಾರಿ ಬೆಲೆಯ ಬಿ.ಎಂ. ಡಬ್ಲ್ಯೂ ಮತ್ತು ಎಸ್.ಯು.ವಿ ಕಾರುಗಳನ್ನ ಕೊಡಿಸಿದ್ದಾನೆ. ಈ ಮಸ್ವಾಟೆ ಬಳಿ ಒಟ್ಟು…

Read More

ಕೋಟ ಜೋಡಿ ಕೊಲೆ ಪ್ರಕರಣ ಐವರಿಗೆ ಜಾಮೀನು!

ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೋಟದ ಭರತ್-ಯತೀಶ್ ಜೋಡಿಕೊಲೆಯ ಆರೋಪಿಗಳ ಪೈಕಿ ಐವರಿಗೆ ಜಾಮೀನು ಮಂಜೂರಾಗಿದ್ದು ಪ್ರಕರಣದ ಒಂಬತ್ತನೆ ಆರೋಪಿ ಎಂದು ಆಪಾದಿಸಲಾದ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಗೆ ಈಗಾಗಲೇ ಜಾಮೀನು ಮಂಜೂರಾಗಿದ್ದು. ಇಂದು ಮಿಕ್ಕ ಐವರಿಗೂ ಕೂಡ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4-11-2019 ರಂದು ಶರತ್ತುಬಧ್ಧ ಜಾಮೀನು ಮಂಜೂರು ಮಾಡಿದೆ. ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು ಆಶ್ರಯ ನೀಡಿದ್ದ ವಿಚಾರವಾಗಿ ಆರೋಪ ಹೊತ್ತು ಬಂಧನದಲ್ಲಿದ್ದ ಪೊಲೀಸ್ ಸಿಬ್ಬಂಧಿಗಳಾದ ಪವನ್ ಅಮೀನ್, ವೀರೆಂದ್ರ ಆಚಾರ್ಯ, ಹಾಗೆಯೇ ಕಾಲೇಜು ವಿಧಾರ್ಥಿ ಪ್ರಣವ್ ರಾವ್, ಮಹಮ್ಮದ್ ತೌಫಿಕ್ ಹಾಗೆಯೇ ಸಂತೋಷ್ ಕುಂದರ್ ಇವರುಗಳಿಗೆ ಜಾಮೀನು ಮಂಜೂರಾಗಿದೆ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 212 ರ ಕೆಳಗೆ ಆರೋಪ ಮಾಡಲಾಗಿದ್ದು ಎಲ್ಲರೂ ಹಿರಿಯಡ್ಕ ಜೈಲಿನಲ್ಲಿದ್ದರು. ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ಅಭಿಯೋಜನೆಯು…

Read More

ತೀವ್ರ ಮಳೆ: ಎಲ್ಲಾ ಶಾಲೆ ಕಾಲೇಜುಗಳಿಗೆ ಇಂದು ರಜೆ

ಉಡುಪಿ: ತೀವ್ರ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ( ಅ.25) ಜಿಲ್ಲಾಧಿಕಾರಿ ಜಗದೀಶ್ ರಜೆ ಘೋಷಿಸಿದ್ದಾರೆ.

Read More