ಹೆಬ್ರಿ:ಟಾಯ್ಲೆಟ್‌ನಲ್ಲಿ ಕ್ಯಾಮರಾ ಇಟ್ಟು ಯುವತಿಯರಿಗೆ ಬ್ಲ್ಯಾಕ್ಮೇಲ್‌

ಕಾಮುಕನ ವಿರುದ್ದ ದೂರು: ಆರೋಪಿ ಪುಷ್ಪರಾಜ್ ಪರಾರಿ

ಹೆಬ್ರಿ: ಹೆಬ್ರಿಯ ಗೇರು ಬೀಜ ಕಾರ್ಖನೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಯ ಅರೆನಗ್ನ ವಿಡಿಯೋ ಮಾಡಿ ಬ್ಯ್ಲಾಕ್‌ ಮೇಲ್‌ ಮಾಡುತ್ತಿದ್ದ ಮ್ಯಾನೇಜ್‌ ಒಬ್ಬನ ವಿರುದ್ದ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾನು ಮ್ಯಾನೇಜ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಖನೆಯ ಟಾಯ್ಲೆಟ್‌ನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು, ಅಲ್ಲಿ ಕೆಲಸ ಮಾಡುವ ಯುವತಿಯೋರ್ವಳು ಬಟ್ಟೆ ಬದಲಾಯಿಸುವಾಗ ಅವರ ಅರೆ ನಗ್ನ ಫೋಟೊಗಳನ್ನ ತೆಗೆದು, ಬ್ಲಾಕ್ ಮಾಡುತ್ತಿದ್ದ ಎಂದು ದೂರು ನೀಡಲಾಗಿದೆ.

ಘಟನೆಯ ವಿವರ:

ಹೆಬ್ರಿಯ ವಿನಾಯಕ ಗೇರು ಬೀಜ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪುಷ್ಪರಾಜ್‌ ಈ ಕುಕೃತ್ಯ ನಡೆಸಿದ್ದು, ಕಳೆದ ಎರಡು ವರುಷಗಳ ಹಿಂದೆ ಆತ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ಯುವತಿಯೋರ್ವಳ ಫೋಟೊ ಹಾಗೂ ವಿಡಿಯೋ ಅವಳ ಅರಿವಿಲ್ಲದೇ ತೆಗೆದಿದ್ದ. ನಂತರ ಆಕೆಗೆ ಈ ಫೋಟೊಗಳನ್ನ ತೋರಿಸಿ ತನ್ನ ಜೊತೆ ವಾಟ್ಸ್ ಅಪ್ ನಲ್ಲಿ ಪ್ರತಿದಿನ ಚಾಟ್ ಮಾಡುವಂತೆಯೂ ಒತ್ತಾಯಿಸುತ್ತಿದ್ದ. ಮರ್ಯಾದೆಗೆ ಅಂಜಿದ ಆ ಯುವತಿ ಈತನೊಂದಿಗೆ ಅನಿವಾರ್ಯವಾಗಿ ಚಾಟ್ ಮಾಡುತ್ತಿದ್ದಳು. ತದನಂತರ ಈತ ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡುವುದರೊಂದಿಗೆ ತನ್ನೊಂದಿಗೆ ಬರುವಂತೆಯೂ ಒತ್ತಾಯಿಸತೊಡಗಿದ. ಇವನಿಂದಾಗುತ್ತಿರುವ ಹಿಂಸೆಯನ್ನು ಕುಟುಂಬಸ್ಥರಲ್ಲಿ ಹೇಳಿದಾಗ ಅವನನ್ನು ಕರೆಯಿಸಿ ಬುದ್ದಿವಾದವನನ್ನು ತಿಳಿಸಿ ಮದುವೆಯಾಗುವುದಾದರೆ ಮಾಡಿ ಕೊಡವುದಾಗಿ ತಿಳಿಸಿದ್ದರು. ಆದರೆ ಇದಕ್ಕೆ ಒಪ್ಪದ ಆರೋಪಿ ಹುಡುಗಿಯ ತಂಟೆಗೆ ಬರುವುದಿಲ್ಲ ಎಂದು ಮೌಖಿಕವಾಗಿ ತಿಳಸಿ ಆಕೆಯ ಫೋಟೊಗಳನ್ನು ಡಿಲಿಟ್‌ ಮಾಡುವುದಾಗಿ ತಿಳಿಸಿ ಹೋಗಿದ್ದ . ಆದರೆ ಯುವತಿಗೆ ಬೇರೋಂದು ಸಂಬಂಧ ನಿಶ್ಷಯವಾದ ಬಳಿಕ ಆರೋಪಿ ಪುಷ್ಪರಾಜ್‌ ನಿಶ್ಚಯವಾದ ಯುವಕನೊಂದಿಗೆ ಫೆಸ್‌ಬುಕ್‌ ಮೂಲಕ ಸಂಪರ್ಕಿಸಿ ಸ್ನೇಹ ಸಂಪಾದಿಸುತ್ತಾನೆ. ಬಳಿಕ ಯುವತಿಗೆ ಕರೆ ಮಾಡಿ ನೀನು ಮದುವೆಯಾಗುವ ಹುಡುಗ ನನ್ನ ಸ್ನೇಹಿತ. ನಿನ್ನ ಈ ಫೋಟೋಗಳನ್ನು ಅವನಿಗೆ ತೋರಿಸುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡತೊಡಗಿದ. ಅಲ್ಲದೆ ಮೂರು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಆದರೂ ಸಾಲಸೋಲ ಮಾಡಿ ಯುವತಿ ಮನೆಯವರು ಹಣ ತಂದು ಕೊಟ್ಟರೆ; ಆರೋಪಿ ವರನಿಗೆ ನೀನು ಮದುವೆಯಾಗುವ ಹುಡುಗಿಯ ಫೋಟೋಗಳು ನನ್ನ ಬಳಿ ಇದೆ ಎಂದು ಹೇಳಿದ್ದಾನೆ. ಇದರಿಂದ ಕುಪಿತಗೊಂಡ ವರನ ಕಡೆಯವರು ಮದುವೆಯನ್ನು ಮುರಿದುಕೊಂಡು ಹೋಗಿದ್ದಾರೆ.

ಆತ್ಮಹತ್ಯೆಗೆ ಯತ್ನ

ಇವನ ಚೆಲ್ಲಾಟದಿಂದ ರೋಸಿ ಹೋದ ಯುವತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ತತ್‌ಕ್ಷಣ ಸ್ಥಳಕ್ಕೆ ಯುವತಿಯ ಅಣ್ಣ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಇಷ್ಟಾದರೂ ಬಿಡದ ಆರೋಪಿ ಪುಷ್ಪರಾಜ್‌ ಯುವತಿಗೆ ಕರೆ ಮಾಡಿ ನಿನಗೆ ಯಾರೊಂದಿಗೂ ಮದುವೆಯಾಗಲು ನಾನು ಬಿಡುವುದಿಲ್ಲ. ನೀನು ನಾನು ಕರೆದಲ್ಲಿಗೆ ಬರಬೇಕು ಎಂದು ಬೆದರಿಕೆ ಹಾಕಿದ್ದು, ಅಲ್ಲದೆ ಮನೆಯವರಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಪುಷ್ಪರಾಜ್‌ನಿಂದ ಯುವತಿಗೆ ಆಗುತ್ತಿರುವ ಅನ್ಯಾಯವನ್ನು ಕಂಡು ಸ್ಥಳೀಯರು ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ. ಚಾರ ಗ್ರಾಮ ಪಂಚಾಯಿತಿ ಸದಸ್ಯೆಯ ಪುತ್ರನಾಗಿರುವ ಆರೋಪಿಗೆ ರಾಜಕೀಯ ನಾಯಕರ ಬೆಂಬಲದೊಂದಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲವೂ ಇದೆ.!  ದೂರು ದಾಖಲಾಗುವ ಅರಿವು ಸಿಗುತ್ತಿದ್ದಂತೆ ತನ್ನ ರಾಜಕೀಯ ಪುಡಾರಿಗಳ ಬೆಂಬಲದೊಂದಿಗೆ ಪೊಲೀಸರಿಗ ಒತ್ತಡ ಹಾಕುವ ಕೆಲಸಕ್ಕೂ ಕೈ ಹಾಕಿದ್ದಾನೆ. ಅದ್ರೆ ಹೆಣ್ಣುಮಗಳೊಬ್ಬಳ ಜೀವನದೊಂದಿಗೆ ಪುಷ್ಪರಾಜ್ ಆಟವಾಡಿರುವ ಹಿನ್ನೆಲೆ ಪೊಲೀಸರು ಯಾವುದೇ ಒತ್ತಡಗಳಿಗೆ ಮಣಿಯದೇ ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು ಪೊಲೀಸರು ಅವನ ಹುಡುಕಾಟದಲ್ಲಿದ್ದಾರೆ.

ಹೆಣ್ಮಕ್ಕಳನ್ನ ಬ್ಲಾಕ್ ಮೇಲ್ ಮಾಡುವುದೇ ದಂಧೆ. ?

ಈ ಕಾಮಿ ಪುಷ್ಪರಾಜನ ಮೇಲೆ ಈ ಹಿಂದೆಯೂ ಹಲವು ದೂರುಗಳು ಕೇಳಿ ಬಂದಿದೆ. ವಿದ್ಯಾವಂತನಾಗಿರುವ ಪುಷ್ಪರಾಜ್ ಮಾತಿನ ಮೋಡಿಗಾರ. ಫ್ಯಾಕ್ಟರಿಗೆ ಬರುವ ಹೆಣ್ಣು ಮಕ್ಕಳನ್ನ ಮಾತುಗಳಿಂದಲೇ ಮೋಡಿ ಮಾಡಿ ಮರಳು ಮಾಡುತ್ತಾನೆ . ! ಫ್ಯಾಕ್ಟರಿಯಲ್ಲಿ ಬಟ್ಟೆ ಬದಲಾಯಿಸುವ ಜಾಗಗಳಲ್ಲಿ ಮೊಬೈಲ್ ಫೋನ್ ಇಟ್ಟು ಹಲವು ಮಂದಿಯನ್ನ ಇದೇ ತರಹ ಬ್ಲಾಕ್ ಮೈಲ್ ಮಾಡಿರುವ ಆರೋಪ ಇತನ ಮೇಲಿದೆ. ಈ ಕೆಲಸಕ್ಕೆಂದೆ ಈತನದ್ದೇ ಆದ ಯುವಕರ ಪಡೆ ಇದ್ದು , ಅವರ ಸಹಕಾರದಿಂದ ಇದನ್ನ ಮಾಡುತ್ತಿದ್ದ ಅನ್ನುವುದು ಸ್ಥಳೀಯರ ಆರೋಪ. ಹಲವು ಯುವತಿಯರೊಂದಿಗೆ ಸಂಪರ್ಕ ಹೊಂದಿರುವ ಈತ ಬ್ಲಾಕ್ ಮೇಲ್ನಿಂದಲೇ ಸಾಕಷ್ಟು ಹಣ ಸಂಪಾದಿಸಿದ್ದಾನೆ. ಇದೀಗ ಹೆಬ್ರಿ ಠಾಣೆ ಪೊಲೀಸರು ಇತನಿಗಾಗಿ ಬಲೆ ಬೀಸಿದ್ದು, ಇವನ ಬಂಧನದ ಬಳಿಕ ಇನಷ್ಟು ಕೃತ್ಯಗಳು ಹೊರಬೀಳಬೇಕಿದೆ.

Leave a Comment