ಅಭಿಮತ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ

ಬ್ರಹ್ಮಾವರ: ಜನಸೇವಾ ಟ್ರಸ್ಟ್ (ರಿ) ಪ್ರಸ್ತುತಿಯಲ್ಲಿ ಮಾರ್ಚ್ 23 ರ ಶನಿವಾರ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ನಡೆಯುವ ಅಭಿಮತ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಹೈಕಾಡಿ ವಿಜಯ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಹಿರಿಯಡ್ಕ ಸಮೀಪದಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಗುರುವ ಕೊರಗರ ಮನೆಯಲ್ಲಿ ಜರುಗಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಗುರುವ ಕೊರಗರು ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಟಿ‌.ಮಂಜುನಾಥ ಗಿಳಿಯಾರು, ಬೈಂದೂರು ವಲಯ ಸಿ.ಆರ್.ಪಿ. ಸಂತೋಷ್ ಕುಮಾರ್ ಶೆಟ್ಟಿ ಕೊತ್ತಾಡಿ, ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಶೆಟ್ಟಿ ಬನ್ನಾಡಿ, ಶರತ್ ಶೆಟ್ಟಿ ಕೊತ್ತಾಡಿ,ಕಿರಣ್ ಆಚಾರ್ಯ, ಸಿದ್ದಾಪುರ ಚಕ್ರವರ್ತಿ ಬಳಗದ ಉದಯ ಮಡಿವಾಳ, ಗಣೇಶ್ ಶೆಟ್ಟಿ ತೊಂಬಟ್ಟು, ಮತ್ತು ಪ್ರಶಾಂತ್ ಶೆಟ್ಟಿ ಕೊತ್ತಾಡಿ, ಮಂಜುನಾಥ ಶೆಟ್ಟಿ ಕೊತ್ತಾಡಿ, ಪ್ರವೀಣ್ ಯಕ್ಷಿಮಠ, ಸಫಲ್ ಶೆಟ್ಟಿ ಐರೋಡಿ , ಉಪಸ್ಥಿತರಿದ್ದು ಶಶಿಕಾಂತ್ ಶೆಟ್ಟಿ ಎಣ್ಣೆಹೊಳೆ ಸ್ವಾಗತಿಸಿ ಅಭಿಜಿತ್ ಪಾಂಡೇಶ್ವರ್ ಕಾರ್ಯಕ್ರಮ ನಿರೂಪಿಸಿದರು

Leave a Comment