ಎಚ್ಚರ!! ದುಡ್ಡಿಗಾಗಿ ಹೊಟ್ಟೆ ಕುಯ್ಯುವ ಡಾಕ್ಟ್ರು ಬ್ರಹ್ಮಾವರದಲ್ಲಿದ್ದಾರೆ.

ಬ್ರಹ್ಮಾವರ: ಹೊಟ್ಟೆ ನೋವು ಎಂದು ಬ್ರಹ್ಮಾವರದ ಆಸ್ಪತ್ರೆಯೊಂದಕ್ಕೆ ಚೆಕಪ್ಪಿಗೆ ಹೋದ ರೋಗಿಯೊಬ್ಬರಿಗೆ ಅಪೆಂಡಿಸ್ ಕಾಯಿಲೆ ಇದೆ ಆಪರೇಷನ್ ಮಾಡಬೇಕು ಇಪ್ಪತೈದು ಸಾವಿರ ಖರ್ಚಾಗುತ್ತದೆ ಎಂದು ಬೊಗಳೆ ಬಿಟ್ಟ ಡಾಕ್ಟರ್ರೊಬ್ಬರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..

ಹೊಟ್ಟೆ ನೋವಿಗೆ ಒಳಗಾದ ಬಾಲಕನ ಮನೆಯವರು ಪುನಃ ಉಡುಪಿಯ ಮತ್ತೊಂದು ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಅಪೆಂಡಿಸ್ ಆಗದೇ ಇರುವುದು ಬೆಳಕಿಗೆ ಬಂದಿದ್ದು ಮನೆಯವರು ಸುದ್ದಿ ಕೇಳಿ ದಂಗಾಗಿ ಹೋಗಿದ್ದಾರೆ, ಇದರಿಂದ ಕೆರಳಿ ಹೋದ ಬಾಲಕನ ಮನೆಯವರು ಉಡುಪಿಯಲ್ಲಿ ಮಾಡಿಸಿದ ಎಲ್ಲಾ ರಿಪೋರ್ಟ್ ಹಿಡಿದು ಪುನಃ ಬ್ರಹ್ಮಾವರದ ಆಸ್ಪತ್ರೆಯ ವೈದ್ಯರಲ್ಲಿ ಬಂದು ವೈದ್ಯರನ್ನು ತರಾಟೆಗೆ ತೆಗದುಕೊಂಡಿದ್ದಾರೆ, ಆ ಸಂದರ್ಭ ಮಾಡಿರುವ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ದುಡ್ಡಿಗಾಗಿ ಬಡವರ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಡಾಕ್ಟರ್ರುಗಳು ವೈದ್ಯೋ ನಾರಾಯಣಃ ಹರಿ ಎನ್ನುವ ಮಾತಿಗೆ ಅಪವಾದವಾಗಿರುವುದು ದುರಂತವೇ ಸರಿ.

Cನಿಮ್ಮ ಅಭಿಮತ ನ್ಯೂಸ್ ಬ್ಯೂರೋ.

One Thought to “ಎಚ್ಚರ!! ದುಡ್ಡಿಗಾಗಿ ಹೊಟ್ಟೆ ಕುಯ್ಯುವ ಡಾಕ್ಟ್ರು ಬ್ರಹ್ಮಾವರದಲ್ಲಿದ್ದಾರೆ.”

  1. Kirana

    How did you decide that the Doctor in this video has wrongly diagnosed the disease? Just because the second hospital is a big one, it doesn’t mean that hospital in video can be blamed without proper follow-ups.

Leave a Comment