ಬೈಂದೂರಿನಲ್ಲಿ ಲಘು ಭೂಕಂಪನ‌ ಅನುಭವ!

ಬೈಂದೂರು:ನಿನ್ನೆ ರಾತ್ರಿ ಒಂಬತ್ತು ಘಂಟೆ ಸುಮಾರಿಗೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಸಣ್ಣಗೆ ಭೂಮಿಕಂಪಿಸಿದ ಅನುಭವವಾಗಿದ್ದು ತಾಲೂಕಿನ ಜನ ಬೆಚ್ಚಿಬಿದ್ದಿದ್ದಾರೆ.

ಎಲ್ಲಿಯೂ ಯಾವುದೇ ಪ್ರಾಣಾಪಾಯವಾಗಲಿ, ಇನ್ಯಾವುದೇ ಹಾನಿ ಸಂಭವಿಸಿಲ್ಲವಾದರೂ ಬೈಂದೂರಿನಾದ್ಯಂತ ಅನೇಕ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

ಬೈಂದೂರಿನ ಗಂಗನಾಡು ಸುತ್ತಮುತ್ತ ಪ್ರದೇಶಗಳಾದ ಅತ್ಯಾಡಿ, ಕ್ಯಾರ್ತೂರು ಗಳಲ್ಲಿ ಕಂಪನದ ಅನುಭವಗಳಾಗಿದೆ.

ಹೆದ್ದಾರಿ ಕಾಮಾಗಾರಿಗಾಗಿ ಒತ್ತಿನೆಣೆ ಬೆಟ್ಟ ಕಡಿದು ನೆಲಸಮ ಮಾಡಿರುವುದು ಭೂಕಂಪನ ಕ್ಕೆ ಕಾರಣ ಎಂದು ಸದ್ಯ ಜನ ಮಾತಾನಾಡುತ್ತಿದ್ದಾರೆ.

Leave a Comment