ದಿನಕರ ಕೊಠಾರಿ ಪ್ರಶಸ್ತಿಗೆ ಈಜುಪಟು ಗೋಪಾಲ ಖಾರ್ವಿ ಆಯ್ಕೆ!

ಮಹಾಲಿಂಗೇಶ್ವರ ಯುವಕ‌ ಮಂಡಲ‌ ರಿ ಉಳ್ತೂರು ಇವರ ವತಿಯಿಂದ ದಿನಕರ ಕೊಠಾರಿಯವರ ಸವಿನೆನಪಿನ ನೆನಪು ಪ್ರಶಸ್ತಿಗೆ ಗೋಪಾಲ ಖಾರ್ವಿ ಆಯ್ಕೆಯಾಗಿದ್ದಾರೆ. ಪ್ರತೀ ವರ್ಷ ಕ್ರೀಡೆ, ಸಂಸ್ಕೃತಿ, ಕಲೆ,ಸಮಾಜ ಸೇವೆ, ಕೃಷಿ ಹೀಗೆ ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕೈ ಕಾಲುಗಳಿಗೆ ಸಂಕೋಲೆ ತೊಟ್ಟುಕೊಂಡು ಅರಬ್ಬೀ ಸಮುದ್ರದಲ್ಲಿ 3.7 ಕಿ ಮಿ ದೂರ ಈಜಿ ಗಿನ್ನೆಸ್ ದಾಖಲೆ ನಿರ್ಮಿಸಿದ ಗೋಪಾಲ‌ ಖಾರ್ವಿ ಅವರಿಗೆ ದಿನಾಂಕ 16 ಪೆಬ್ರವರಿ 2019 ರಂದು ನಡೆಯುವ “ನೆನಪು 2019” ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು..

ಇದೇ ವೇದಿಕೆಯಲ್ಲಿ ಯುವ ಭಾಗವತ ವಿಶ್ವನಾಥ ಶೆಟ್ಟಿ ಉಳ್ತೂರುಹಾಗೂ ಸಂಜೀವ‌ ದೇವಾಡಿಗ ಕದ್ರಿಕಟ್ಟು ಅವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಶಕ್ತರಿಗೆ ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮ ನಡೆಯಲಿದೆ.
ಸಂಜೆ ಯುವ ಭಾಗವತ ವಿನಯ್ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ಉಳ್ತೂರು ಇವರಿಂದ ದ್ವಂದ್ವ ಯಕ್ಷಗಾಯನ, ಶಿವಾನಿ‌ ಮ್ಯೂಸಿಕಲ್ಸ್ ಮಂಗಳೂರು ತಂಡದವರಿಂದ ಅದ್ದೂರಿಯ ರಸಮಂಜರಿ ಕಾರ್ಯಕ್ರಮ, ಪ್ರಸಿದ್ದ ನೃತ್ಯ ತಂಡಗಳಿಂದ ಅದ್ದೂರಿಯ ನೃತ್ಯ ಪ್ರದರ್ಶನ, ನಾಗರಾಜ ತೆಕ್ಕಟ್ಟೆ ತಂಡದಿಂದ ನಕ್ಕು ನಗಿಸುವ ನಗೆಕೊಪ್ಪರಿಗೆ ಕಾರ್ಯಕ್ರಮ ಮೂಡಿಬರಲಿದೆ. ಅದ್ದೂರಿಯ ವೇದಿಕೆ ಸಂಭ್ರಮದ ಕಾರ್ಯಕ್ರಮಗಳಿಗೆ ಮಹಾಲಿಂಗೇಶ್ವರ ಯುವಕ‌ ಮಂಡಲ ತಮ್ಮೆಲ್ಲರನ್ನ ಅತ್ಮೀಯವಾಗಿ ಸ್ವಾಗತಿಸುತ್ತಿದೆ.

.

Leave a Comment