ಹಾಲಾಡಿಗೆ ಒಲಿಯಲಿದೆಯಾ ಮಂತ್ರಿಗಿರಿ…??

ಕುಮಾರಸ್ವಾಮಿ ಸರಕಾರ ಪತನದ ಅಂಚಿಗೆ ತಲುಪಿರುವಾಗಲೇ ಬಿಜೆಪಿ ಸರಕಾರ ರಚಿಸಿಬಿಡಲಿದೆಯಾ ಎನ್ನುವ ಕೂತೂಹಲ ಆರಂಭಗೊಂಡಿದೆ.
ಈಗಾಗಲೇ ತನ್ನ ಅಷ್ಟೂ ಶಾಸಕರನ್ನು ಹರಿಯಾಣದ ಗುರುಗಾಂವ್ ರೆಸಾರ್ಟಿಗೆ ತಂದು ಕೂರಿಸಿರುವ ಕಮಲ ಪಕ್ಷ ಎರಡು ಪಕ್ಷೇತರ ಶಾಸಕರಿಂದ ಸಮ್ಮಿಶ್ರ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಾಸು ಪಡೆಯುವಲ್ಲಿ ಯಶಸ್ವಿಯಾಗಿದೆ. ಅತ್ತ ಕಮಲ ಪಾಳಯದೊಳಗೆ ಗರಿಗೆದರಿದ ಚಟುವಟಿಕೆಗಳು ಆರಂಭ ಗೊಂಡಿರುವಂತೆಯೆ ಇತ್ತ ಕುಂದಾಪುರ ಕ್ಷೇತ್ರದೊಳಗೂ ಮಿಂಚಿನ ಸಂಚಾರ ಆರಂಭಗೊಂಡಿದೆ. ರಾಜ್ಯದಲ್ಲೇ ಐದನೇ ಅತೀ ಹೆಚ್ಚು ಲೀಡು ಪಡೆದು ಗೆದ್ದು(ಬಿಜೆಪಿಯಿಂದ ಎರಡನೇ ಅತೀ ದೊಡ್ಡ ಲೀಡು) ಸತತ ಐದನೇ ಭಾರಿಗೆ ವಿಧಾನಸೌದಕ್ಕೆ ಲಗ್ಗೆ ಹಾಕಿರುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಈ ಭಾರಿ ಮಂತ್ರಿ ಸ್ಥಾನ ದಕ್ಕಿ ಬಿಡಲಿದೆ ಎನ್ನುವ ಗುಮಾನಿ ಹಬ್ಬುತ್ತಲೇ ಕುಂದಾಪುರದ ಬಿಜೆಪಿ ಪಾಳಯದೊಳಗೆ ಹೊಸ ಹುರುಪು ಮತ್ತು ಉಲ್ಲಾಸ ಒಟ್ಟೊಟ್ಟಿಗೆ ಕಾಣಿಸತೊಡಗಿದೆ. ಈ ಭಾರಿ ಅಸೆಂಬ್ಲಿ ಎಲೆಕ್ಷನ್ಮು ಮುಗಿದ ತರುವಾಯ ಕುಂದಾಪುರ ಕ್ಷೇತ್ರಕ್ಕೆ ಭಂಪರ್ ಲಾಭವೇ ಆದಂತಿದೆ. ಮೊದಲಿಗೆ ಕೋಟ ಶ್ರೀನಿವಾಸ ಪೂಜಾರಿ ಪರಿಷತ್ತಿನ ವಿಪಕ್ಷ ನಾಯಕನಾಗಿ ಕ್ಷೇತ್ರದೊಳಗೆ ನಡೆದು ಬಂದಿದ್ದರು. ಅದಾಗಿ ಕೆಲ ತಿಂಗಳಲ್ಲೇ ರಾಜಕೀಯದ ಸಂದ್ಯಾಕಾಲವನ್ನು ಸಮೀಪಿಸುತ್ತಿದ್ದ ಮಾಜಿ ಶಾಸಕ ಕಂ ಹಾಲಿ ಎಮ್ಮೆಲ್ಸಿ ಪ್ರತಾಪಚಂದ್ರ ಶೆಟ್ಟರು ಪರಿಷತ್ತ್ ಸಭಾಪತಿ ಹುದ್ದೆಗೇರಿ ಸಂಚಲನ ಮೂಡಿಸಿ ಬಿಟ್ಟರು. ಇದೀಗ ಬಿಜೆಪಿ ಸರಕಾರ ರಚನೆಗೆ ಕಸರತ್ತು ಆರಂಭಿಸಿರುವ ಬೆನ್ನಿಗೆ ಹಿರಿತನದ ಆಧಾರದಲ್ಲಿ ಹಾಲಾಡಿಗೆ ಮಂತ್ರಿ ಪದವಿ ಸಿಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ… ಇದೆಲ್ಲದರ ನಡುವೆ ಕಮಲಪಕ್ಷದಿಂದ ಜೆಪಿ ಹೆಗ್ಡೆ ಎಂಪಿ ಅಭ್ಯರ್ಥಿಯಾಗಿ ಬಿಡಲಿ ಎನ್ನುವ ಕೂಗೂ ಕುಂದಾಪುರ ತುದಿಯಿಂದ ಬೀಸಿಕೊಂಡು ಬರುತ್ತಿರುವುದು ಸುಳ್ಳಲ್ಲ…ಇದೆಲ್ಲವೂ ಸಾದ್ಯವಾಗಿ ಕುಂದಾಪುರ ಮತ್ತಷ್ಟೂ ಅಭಿವ್ರದ್ದಿಯ ದಿಕ್ಕಿನೆಡೆಗೆ ಹೊರಳಿಕೊಳ್ಳಲಿ ಅಲ್ವಾ..??

ಪ್ರವೀಣ್ ಯಕ್ಷಿಮಠ.

One Thought to “ಹಾಲಾಡಿಗೆ ಒಲಿಯಲಿದೆಯಾ ಮಂತ್ರಿಗಿರಿ…??”

  1. Santosh kumar Shetty

    Very good

Leave a Comment