ಡಾನ್ ಪೂಜಾರಿ ಹೋಟೆಲ್ ನಡೆಸುತ್ತಿದ್ದ!!

ರವಿ ಪೂಜಾರಿಯನ್ನ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲು ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ..ಪಣಿಯೂರು ಸಾಧು ಶೆಟ್ಟಿ ಗ್ಯಾಂಗಿನಿಂದ ಛೋಟಾ ರಾಜನ್ ಸಂಪರ್ಕಕ್ಕೆ ಬಂದಿದ್ದ ರವಿ ಪೂಜಾರಿ ಮುತ್ತಪ್ಪ ರೈ ನಂತರ ಹಿಂದೂ ಡಾನ್ ಎನ್ನುವ ಬ್ಯಾಕ್ ಲೈನ್ ಇಟ್ಟುಕೊಂಡೇ ಭೂಗತ ಲೋಕವನ್ನ ಆಳತೊಡಗಿದ್ದ

ಪೂಜಾರಿ ಮೂಲತಃ ಕಡೆಕಾರಿನವನು.. ಪಶ್ಚಿಮ ಆಫ್ರಿಕಾದ ಸೆನಗಲ್ ಮೂಲದ ಪೊಲೀಸರು ಗುರುವಾರವೇ ರವಿ ಪೂಜಾರಿಯನ್ನ ಬಂಧಿಸಿದ್ದರು..

ಆಫ್ರಿಕಾದ ಬುರ್ಕಿನಾ ಫಾಸೋ ಎಂಬಲ್ಲಿ ಅಡಗಿದ್ದ ರವಿ ಪೂಜಾರಿ.. ದಾಕರ್ ಎಂಬಲ್ಲಿ ನಮಸ್ತೆ ಇಂಡಿಯಾ ಎಂಬ ಹೋಟೇಲನ್ನೂ ನಡೆಸುತ್ತಿದ್ದ ರವಿ ಪೂಜಾರಿ ಅಂತೋನಿ ಫರ್ನಾಂಡೀಸ್ ಎಂಬ ಹೆಸರಿನಲ್ಲಿ ಪಾಸ್ ಪೋರ್ಟ್ ಹೊಂದಿದ್ದು ಆ ಹೆಸರಿನ ಮೂಲಕವೇ ಸಂಚರಿಸುತ್ತಿದ್ದ ಎನ್ನಲಾಗಿದೆ!

ಈ ನಡುವೆ ರವಿ ಪೂಜಾರಿಯ ಪ್ರಮುಖ ಸಹಚರ ಬ್ರಹ್ಮಾವರ ಮೂಲದ ಆಕಾಶ್ ಶೆಟ್ಟಿ ಮತ್ತು ವಿಲಿಯಮ್ ರೋಡ್ರಿಕ್ಸ್ ಎಂಬಾತನನ್ನ ಮುಂಬೈ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳು ಮಂಗಳೂರಿನಲ್ಲಿ ಬಂಧಿಸಿದ್ದರು..

-ಅಭಿಮತ ನ್ಯೂಸ್ ರೂಮ್

Leave a Comment