ಉಳ್ಳಾಲದಲ್ಲಿ ಮತ್ತೊಂದು ಹೆಣ ಕೆಡವಲು ಪಾತಕ ಪಾಳಯ ಸಜ್ಜು ?!!

ಟಾರ್ಗೇಟ್ ಇಲ್ಯಾಸ್ ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಕೊಲೆಗೆ ವ್ಯವಸ್ಥಿತವಾದ ಸಂಚು ನಡೆದಿದೆ ಎನ್ನುವ ಸುದ್ದಿಯೊಂದು ಪಾತಕ ಪ್ರಪಂಚದ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ.              ಉಳ್ಳಾಲದಲ್ಲಿ ಮತ್ತೊಂದು ಹೆಣ ಕೆಡವಲಿದೆಯಾ ಹಂತಕ ಪಡೆ? ಟಾರ್ಗೇಟ್ ಗ್ರೂಪಿನ ಸಂಚಿಗೆ ಯಾರು ಬಲಿಯಾಗಲಿದ್ದಾರೆ? ದಾವೊದ್ ನೆತ್ತಿಯ ಮೇಲೆ ಮರಣದ ತೂಗುಗತ್ತಿ ಇದೆಯಾ? ಹೌದು; ಉಳ್ಳಾಲದ ಟಾರ್ಗೇಟ್ ತಂಡ ಮತ್ತೆ ಅಲರ್ಟ್ ಆಗಿದೆ. ಟಾರ್ಗೆಟ್ ತಂಡದ ನಾಯಕ, ನಟೋರಿಯಸ್ ಕ್ರಿಮಿನಲ್ ಕ್ರಿಮಿ ಇಲ್ಯಾಸ್ ಉಳ್ಳಾಲ್ ಅಸುನೀಗಿ ಒಂದೂ ಚಿಲ್ಲರೆ ವರ್ಷಗಳಾಗಿವೆ. ಇಲ್ಯಾಸ್ ಕೊಲೆಗೆ ರಿವೆಂಜು ಮಾಡಲೆಂದು ಟಾರ್ಗೆಟ್ ತಂಡ ಮತ್ತೆ ಸನ್ನಾಹದಲ್ಲಿದೆ ಎನ್ನುವು ಸುದ್ದಿಯೊಂದು ಪಾಪಿಗಳ ಲೋಕದಲ್ಲಿ ಹರಿದಾಡುತ್ತಿದೆ. ಟಾರ್ಗೆಟ್ ತಂಡದ ಇಲ್ಯಾಸ್ ಉಳ್ಳಾಲ್ ಎಂಥವನು? ಅವನೇಕೆ ಕೊಲೆಯಾದ ಎನ್ನುವುದು ತಿಳಿಯಬೇಕಿದ್ದರೆ ಈ ವರದಿಯನ್ನೊಮ್ಮೆ ಓದಿ ಬಿಡಿ

ದಾವೋದ್

ಅವನು ಟಾರ್ಗೇಟ್ ಇಲ್ಯಾಸ್!

ಟಾರ್ಗೇಟ್ ಇಲ್ಯಾಸ್  ಸೈತಾನನ ಸನ್ನಿಧಾನ ತಲುಪಿ ಒಂದೂವರೆ ವರ್ಷ ಆಗಲೇ ಕಳೆದಿದೆ. ಅದೆಷ್ಟು  ಜನ ಎದೆ ಒಡೆದುಕೊಂಡು ರೋಧಿಸುವಂತೆ ಮಾಡಿದ್ದನೋ ಗೊತ್ತಿಲ್ಲ, 2018 ರ ಜನವರಿ 13 ರ ಶನಿವಾರದ ಮುಂಜಾವು ಆತನೇ ಸಾಕಿದ ಹುಡುಗರು ಬಂದು ಎದೆಗಿರಿದು ಧರೆಗಿಳಿಸಿದ್ದಾರೆ..  ದಾವೋದ್ ಇರಿದ ಬಾಕು ಒಂದೇ ಏಟಿಗೆ ಇಲ್ಯಾಸನ ಎದೆ ಗೂಡೊಳಗಿನ ಗುಂಡಿಗೆ ಸೀಳಿ ಬಿಸಿ ನೆತ್ತರ ಬಸಿದು ಬಿಟ್ಟಿತ್ತು..  ಹೌದು ಕ್ರಿಮಿನಲ್ ಕ್ರಿಮಿ ಟಾರ್ಗೇಟ್ ಇಲ್ಯಾಸ್ ಮಟಾಷ್! ಅವನು ಬದುಕ ಕೂಡದಿತ್ತು ಮತ್ತು ಬದುಕುಳಿಯಲೂ ಇಲ್ಲ.. ಸತ್ತ ಇಲ್ಯಾಸನಿಗೆ ಅನಾಮತ್ತು ಮೊವ್ವತ್ತೊಂದು ವಯಸ್ಸು. ಕುದಿನೆತ್ತರ ವಯಸ್ಸು ಹದಿನೆಂಟರಲ್ಲೇ ಇಲ್ಯಾಸ್ ಪಾತಕ ಪಾಳಯದಲ್ಲಿ ಕಿರಾತಕನಂತೆ ಮೆರೆಯುತ್ತಿದ್ದ. ಒಟ್ಟು ಇಪ್ಪತ್ತೈದಕ್ಕೂ ಹೆಚ್ಚು ಪ್ರಕರಣಗಳು ಇಲ್ಯಾಸನ ಮೇಲಿದ್ದವು, ಕೊಲೆ, ಸುಲಿಗೆ, ಧರೋಡೆ, ರೇಪ್, ಹನಿಟ್ರ್ಯಾಪ್ ಯಾವುದಿಲ್ಲ ಯಾವುದಿದೆ ? ಕೇಳಬೇಡಿ.

ಕಾನೂನಿನ ಸೆಕ್ಷನ್ ಬುಕ್ಕಿನ ಬಹುತೇಕ ಸೆಕ್ಷನ್ನುಗಳ ಕೇಸನ್ನೂ ಹೆಟ್ಟಿಸಿಕೊಂಡವ ಇಲ್ಯಾಸ್.. ಸರಿ ಸುಮಾರು ಹನ್ನೆರಡು ಚಿಲ್ಲರೆ ವರ್ಷಗಳ ಕಾಲ ಪಾತಕ ಪಾಳಯದಲ್ಲಿ ಪಳಗಿದ ಇಲ್ಯಾಸ್ ಇತ್ತೀಚೆಗೆ ಪೊಲಿಟಿಕಲ್ ಲೀಡರ್ ಗೆಟಪ್ಪಿಗೆ ಬಂದಿದ್ದ..  ಮಂತ್ರಿ ಯು.ಟಿ. ಖಾದರ್ ಮತ್ತು ಸುರತ್ಕಲ್ ಮಾಜಿ ಶಾಸಕ ಮೋಯ್ದಿನ್ ಬಾವಾ ಜೊತೆಗೆ ವೇದಿಕೆಯಲ್ಲಿ ಮಿರುಗುತ್ತಿದ್ದ ಪೊಟೋಗಳು ಇತ್ತೀಚೆಗೆ ವಾಟ್ಸಾಪ್ ಗ್ರೂಪುಗಳಲ್ಲಿ ಜೋರಾಗಿ ಓಡಾಡಿಕೊಂಡಿತ್ತು. ಮಾಸ್ತಿ ಕಟ್ಟೆಯ ಸುಂದರಿ ಬಾಗ್ ನಿವಾಸಿಯಾಗಿದ್ದ ಇಲ್ಯಾಸ್ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸಿನ ಉಪಾಧ್ಯಕ್ಷನೂ ಆಗಿದ್ದ. ಅದನ್ನು ಆತನಿಗೆ ದಯಪಲಿಸಿದ್ದು ಯು.ಟಿ. ಖಾದರ್. ರಾಜಕಾರಣದ ರಂಗಸ್ಥಳದಲ್ಲಿ ಇವಾಗಷ್ಟೇ ತಾಲೀಮು ಮಾಡತೊಡಗಿದ್ದ ಇಲ್ಯಾಸ್ ಇಲ್ಲಿ ಹೆಚ್ಚುದಿವಸ ಬಾಳುವ ವಜನ್ನಿನ ಐಟಮ್ಮು ಅಲ್ಲವೇ ಅಲ್ಲ ಎನ್ನುವ ವಿವರವನ್ನ  ಹಿಂದೆಯೇ  ಸಪ್ವಾನ್ ಕೊಲೆಯಾದ ಬಗ್ಗೆ ಬರೆದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೆಕಿಸಲಾಗಿತ್ತು. ಇಲ್ಯಾಸ್ ಹೆಚ್ಚು ಕಾಲ ಬದುಕಲೂ ಇಲ್ಲ ನೋಡಿ ?

 ರಿವೆಂಜ್ ಮಾಡಿದ ದಾವೋದ್!

ಪ್ರಕರಣ ಒಂದಕ್ಕೆ ಸಂಬಂದಿಸಿದಂತೆ ಉಳ್ಳಾಲದ ದಾವೋದ್ ಮತ್ತು ಇಲ್ಯಾಸ್ ನಡುವೆ ವಿವಾದಗಳಿದ್ದಿದ್ದವು.. ಅದರಲ್ಲಿ ಇಲ್ಯಾಸ್ ದಾವೋದ್ ನನ್ನು ಕತ್ತರಿಸಿದ್ದ, ಅದು ಹೆಂಗೋ ಬಛಾವ್ ಆಗಿ ಉಳಿದು ಬಿಟ್ಟ ದಾವೋದ್  ಇಲ್ಯಾಸ್ ವಿರುದ್ದ ಸಂಚು ರೂಪಿಸುತ್ತಲೇ ಬಂದ. ಅದಕ್ಕೆ ಸರಿಯಾಗಿ ಕಿನ್ನಿಗೋಳಿ ಸಪ್ವಾನ್ ಕೂಡ ಇಲ್ಯಾಸನ ಕಥೆ ಮುಗಿಸುವ ಸಂಚು ಹೂಡಿಕೊಂಡಿದ್ದ.. ಕಿನ್ನಿಗೋಳಿ ಸಪ್ವಾನನ್ನು ಇಲ್ಯಾಸ್ ಗೆ ಟಾರ್ಗೆಟ್ ಮಾಡಿದ್ದ, ಸಪ್ವಾನನ ಚಲನ ವಲನಗಳ ಬಗ್ಗೆ ಕಾಟಿಪಳ್ಳ ಸಪ್ವಾನ್ ಇಲ್ಯಾಸನಿಗೆ ಮಾಹಿತಿ ಕೊಡುತ್ತಿದ್ದ ಎನ್ನುವ ಕಾರಣಕ್ಕೇ ಕಾಟಿಪಳ್ಳ ಸಪ್ವಾನನ್ನ ಕಿಡ್ನಾಪ್ ಮಾಡಿ ಕಾರ್ಕಳ.. ಮೂಡಬಿದ್ರೆ ರಸ್ಥೆಯಲ್ಲಿ ಸಿಕ್ಕಾಪಟ್ಟೆ ಬಡಿದುಕೊಂದು ಆತನ ದೇಹವನ್ನ ತುಂಡು ತುಂಡು ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದು ಹೋಗಿದ್ದು ಕಿನ್ನಿಗೋಳಿ ಸಪ್ವಾನ್ ತಂಡ…

ಕಿನ್ನಿಗೋಳಿ ಸಪ್ವಾನ್ ಕೊಲ್ಲಿಸಿದ್ದನಾ?

ಕಾಟಿಪಳ್ಳ ಸಪ್ವಾನ್ ಕೊಲೆಯ ನಂತರ ಕಿನ್ನಿಗೋಳಿ ಸಪ್ವಾನಿಗೋಸ್ಕರ ಮಂಗಳೂರು ಪೊಲೀಸರು ಬಲೆ ಬೀಸಿದ್ದರೂ ಸಪ್ವಾನ್ ಸಿಕ್ಕಿ ಬೀಳಲಿಲ್ಲ..  ಒಂದು ವೇಳೆ ಸಪ್ವಾನನ್ನ ಬಂಧಿಸಿದ್ದರೆ ಕಾಟಿಪಳ್ಳದ ದೀಪಕ್ ಕೊಲೆಯೂ ನಡೆಯುತ್ತಿರಲಿಲ್ಲ ಎನ್ನಲಾಗುತ್ತಿದೆ! ಕಾಟಿಪಳ್ಳದ ಸಪ್ವಾನ್ ಕೊಲೆಯಲ್ಲಿದ್ದ ಪಿಂಕಿ ನವಾಜ್ ದೀಪಕ್ ಕೊಲೆ ಪ್ರಕರಣದಲ್ಲಿಯೂ ಇದ್ದಿದ್ದ.. ಒಂದು ವೇಳೆ ಕಿನ್ನಿಗೋಳಿ ಸಪ್ವಾನ್ ಸಿಗೇಬಿದ್ದಿದ್ದರೆ ಈ ಪಾಪಿ ಇಲ್ಯಾಸ್ ಕೂಡ ಬದುಕಿಕೊಂಡು ಬಿಡುತ್ತಿದ್ದನಾ? ಅದಕ್ಕೆ ದಾವೋದ್ ಅವಕಾಶ ಕೊಡುತ್ತಿದ್ದನಾ ? ಗೊತ್ತಿಲ್ಲ. ಆದರೂ ಸಪ್ವಾನನ್ನ ಹಿಡಿಯುವಲ್ಲಿ ಮಂಗಳೂರು ಪೊಲೀಸರು ಸೋತಿದ್ದಂತೂ ನಿಜ.       ಸಪ್ವಾನ್, ದಾವೋದ್ ಮತ್ತು ಇಲ್ಯಾಸ್ ಒಂದಾನೊಂದು ಕಾಲದಲ್ಲಿ ಅಣ್ಣ ತಮ್ಮಂದಿರಂತೆ ಇದ್ದವರು. ಇವನು ಇಲ್ಯಾಸ್ ತನ್ನ ಹದಿನೆಂಟನೆ ವಯಸ್ಸಿನಲ್ಲೇ ಮಾಸ್ತಿಕಟ್ಟೆಯ ಬಳಿ “ಟಾರ್ಗೆಟ್” ಹೆಸರಿನಲ್ಲಿ ಟ್ರಾವೆಲ್ಸ್ ಲಿಂಕ್ಸ್ ಆರಂಬಿಸಿ ಕಾರುಗಳನ್ನ ಬಾಡಿಗೆ ಕೊಡುವ ವ್ಯವಹಾರ ನಡೆಸಲು ಶುರುವಿಟ್ಟುಕೊಳ್ಳುತ್ತಾನೆ. ಅಲ್ಲಿ ಇವನಿಗೆ ಜೊತೆಯಾದವರೇ ದಾವೋದ್ ಮತ್ತು ಸಫ್ವಾನ್ ಕಿನ್ನಿಗೋಳಿ..

ಹನಿಟ್ರ್ಯಾಪ್ ದಂಧೆ

ಟಾರ್ಗೆಟ್ ತಂಡ ಮೊದಲು ಹನಿಟ್ರ್ಯಾಪ್ ಧಂದೆಗಿಳಿಯುತ್ತದೆ, ಹುಡುಗಿಯರನ್ನ ಬಿಟ್ಟು  ಶ್ರೀಮಂತ ಉಧ್ಯಮಿಗಳನ್ನ ಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡುತ್ತಿತ್ತು ಈ ಗ್ಯಾಂಗ್.. ಟಾರ್ಗೆಟ್ ಹೆಸರಲ್ಲಿ ಸುಸಜ್ಜಿತವಾದ ಕಛೇರಿಯನ್ನೇ ಮಾಡಿಕೊಂಡು ವ್ಯವಹಾರ ಕುದುರಿಸುತ್ತಿದ್ದರು. ಮಂಗಳೂರಿನ ಹೆಸರಾಂತ ಮೀನು ಉಧ್ಯಮಿಗೆ ಈಗ್ಗೆ ಆರು ವರ್ಷದ ಹಿಂದೆ “ಹನಿಟ್ರ್ಯಾಪ್” ನಡೆಸಿ ಅವರಿಂದ ಅಂದಾಜು ಮೊವ್ವತ್ತು ಲಕ್ಷ ಹಣವನ್ನ  ವಸೂಲಿ ಮಾಡಿತ್ತು. ದೇರಳಕಟ್ಟೆಯ ಮೆಡಿಕಲ್ ವಿಧ್ಯಾರ್ಥಿಗಳನ್ನ ಅಪಹರಿಸಿ  ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಕೂಡ ಇದೇ ಟಾರ್ಗೆಟ್ ಟೀಮು. ಹಿಗೆ ಇವರ ಕುಕೃತ್ಯಗಳಿಗೆ ಮಂಗಳೂರಿನ ಕೆಲವು ಐನಾತಿ ರಾಜಕಾರಣಿಗಳು ಕಾವಲುಗಾರರಂತೆ ನಿಂತರು.. ಹಣದ ವಿಚಾರದಲ್ಲಿ ವಿವಾದಗಳಾಗಿ ದಾವೋದ್ ಮತ್ತು ಕಿನ್ನಿಗೋಳಿ ಸಪ್ವಾನ್ ಬೇರೆ ಬೇರೆಯಾಗಿದ್ದರು.. ಬಂಟ್ವಾಳದ ಪರಂಗಿ ಪೇಟೆಯ ಗಾರ್ಡನ್ ಹೋಟೆಲ್ ಬಳಿ  ಝಿಯಾ ಮತ್ತು ಪಯಾಝ್ ಮೇಲೆ ಧಾಳಿ ನಡೆಸಿದ್ದ ಇಲ್ಯಾಸ್ ತಂಡ ಅವರಿಬ್ಬರನ್ನೂ ಅವತ್ತು ಕೊಚ್ಚಿ ಕೊಲೆ ಮಾಡಿತ್ತು

 ೨೦೧೩ ರಲ್ಲಿ ಮೇಲ್ಕಾರಿನ ಬದ್ರಿಯಾ ನಗರದ ಯುವಕನೊಬ್ಬನನ್ನ ಇಲ್ಯಾಸ್ ತಂಡ ಅಪಹರಣ ನಡೆಸಿ ಯುವತಿಯೊಬ್ಬಳನ್ನ  ಆತನ ರೂಮಿಗೆ ಕಳುಹಿಸಿ ಅವಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿ ಬೆದರಿಕೆ ಹಾಕಿತ್ತು.. ನಂತರ ಅದನ್ನ ರೆಕಾರ್ಡ್ ಮಾಡಿ  ಇಪ್ಪತ್ತೈದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಇದೇ ಇಲ್ಯಾಸನ ಟಾರ್ಗೆಟ್ ತಂಡ.. ಆತನ ಮೇಲೆ ಗೋಂಡಾ ಕಾಯ್ದೆಯನ್ನೂ ಹಾಕಿ ಜೈಲಿಗೆ ಬಿಟ್ಟು ಬರಲಾಗಿತ್ತು.. ಗೋಂಡಾ ಕಾಯ್ದೆ ಅಡಿಯಲ್ಲಿ ಇಲ್ಯಾಸನನ್ನ ಬಂಧಿಸಿದ  ಪೊಲೀಸರು ಆತನನ್ನ ಬಳ್ಳಾರಿ ಜೈಲಿಗೆ ಬಿಟ್ಟು ಬಂದಿದ್ದರು. ಅಲ್ಲಿ ಪ್ರತ್ಯೇಕ ಸೆಲ್ಲಿನ ಸಮಸ್ಯೆಯ ಕಾರಣದಿಂದಾಗಿ ಇಲ್ಯಾಸನನ್ನು ಮಂಗಳೂರು ಜೈಲಿಗೆ ತಂದು ಬಿಡಲಾಗಿತ್ತು. ಇಲ್ಲಿ ಪ್ರತ್ಯೇಕ ಸೆಲ್ಲಿನ ಸಮಸ್ಯೆಯೋ ಅಥವಾ ರಾಜಕಾರಣದ ಪ್ರಭಾವವೋ ಗೊತ್ತಿಲ್ಲ.. ಕೊನೆಗೂ ಇಲ್ಯಾಸ್ ಮಂಗಳೂರು ಜೈಲಿಗೆ ಬರುತ್ತಾನೆ ಬಂದವನಿಗೆ ಜಾಮೀನು ಮಂಜೂರಾಗಿ ಇಲ್ಯಾಸ್ ಬಿಡುಗಡೆಯೂ ಆಗುತ್ತಾನೆ ಆತ ಬಿಡುಗಡೆಯಾಗಿ ನೇರವಾಗಿ ವಿಸ್ತಾಹ್ ಗ್ಯಾಲೋರ್ ಪ್ಲ್ಯಾಟಿನ ರೋಮ್ ಸಂಖ್ಯೆ ೩೦೩ ರಲ್ಲಿ ತನ್ನ ಹೆಂಡತಿ ಪಝೀನಾ ಜೊತೆಗಿರುತ್ತಾನೆ.. ಅಲ್ಲಿಗೆ ಶತ್ರುಗಳ ನಜರು ನೆಟ್ಟಾಗಿತ್ತು. ಇಲ್ಯಾಸನನ್ನ ಕೊಂದು ಕೆಡಹುವ ಹುಕಿಯೊಂದಿಗೆ ಒಂದು ಕಡೆ ಕಿನ್ನಿಗೋಳಿ ಸಪ್ವಾನ್ ಕಾದು ಕುಳಿತಿದ್ದರೆ ಆತನಿಗೆ ದಾವೋದ್ ಕೂಡ ಜೊತೆಯಾದನಲ್ಲಾ ? ಇಲ್ಯಾಸ್ ಬಂದು ಬರೇ ಒಂದು ವಾರವೂ ಹೆಂಡತಿಯ ಜೊತೆ ಸುಖವಾಗಿ ಬದುಕಿರಲು ಬಿಡಲಿಲ್ಲ ಹಂತಕರು. ಪ್ಲಾಟಿನ ಕೆಳಗೆ ಮೂವರು ನಿಂತಿದ್ದರೆ ನೇರವಾಗಿ ಪ್ಲ್ಯಾಟಿನ ಕಾಲಿಂಗ್ ಬೆಲ್ ಬಡಿದ ಹಂತಕರು ಇಬ್ಬರು. ಒಬ್ಬ ದಾವೋದ್ ಮತ್ತೊಬ್ಬ ಸಮೀರ್..  ಗಂಡನ ಜಿವಕ್ಕೇ ಹಸಿದು ಬಂದವರಿಗೆ ಬಾಗಿಲು ತೆರೆದವಳು ಫಝೀನಾ.. ಪಾಪ ಅವಳಿಗೇನು ಗೊತ್ತು ? ಬಂದವರು ತನ್ನ ಗಂಡನ ಎದೆಗೆ ಇರಿಯುವ ಹಂತಕರೆಂಬುದು ? ಸಾಯುವುದಕ್ಕೂ ಮೊದಲು ಇಲ್ಯಾಸ್ ತನ್ನ ಹೆಂಡತಿಗೆ ಮಾತು ಕೊಟ್ಟಿದ್ದ.. “ನಾನು ಅನಿವಾರ್ಯವಾಗಿ ಅದನ್ನೆಲ್ಲ ಮಾಡಿದೆ.. ಇನ್ನು ಮುಂದೆ ಯಾವ ಕ್ರಿಮಿನಲ್ ಕೆಲಸವನ್ನೂ ಮಾಡಲಾರೆ” ಎಂದಿದ್ದನಂತೆ..

ಸತ್ತ ಇಲ್ಯಾಸ್ ಹೆಂಗೆ ಮಂತ್ರಿ ಯು.ಟಿ ಖಾದರ್ ಆಪ್ತ ವಲಯದಲ್ಲಿದ್ದನೋ ಕೊಂದ ದಾವೋದ್ ಕೂಡ ಯು.ಟಿ. ಖಾದರ್ ಆಪ್ತ ವಲಯದಲ್ಲೇ ಇರುವ ಹಂತಕ.. ಆ ಶನಿವಾರದ ಮುಂಜಾವಿನ ೮.೪೫ ಕ್ಕೆ ಇನ್ನೂ ಇಲ್ಯಾಸ್ ಹಾಸಿಗೆಯಲ್ಲೇ ಇದ್ದ, ರಾತ್ರಿಯೆಲ್ಲಾ ಹೆಂಡತಿಯೊಡನೆ ನಿದ್ದೆಗೆಟ್ಟ  ಶೃಂಗಾರದ ನಿದ್ದೆಯ ಮಂಪರೋ ಏನೋ ? ಪಝೀನಾ ಬಾಗಿಲು ತೆರೆಯುತ್ತಿದ್ದಂತೆಯೇ ಒಳಕ್ಕೆ ನುಗ್ಗಿದ ಹಂತಕರು ಇಲ್ಯಾಸನ ಎದೆಗೇ ಇರಿದು ಬಿಟ್ಟಿದ್ದಾರೆ.. ಎದೆಗಿರಿದ ಬಿಸುಪಿಗೆ ಯಾವ ವೈಧ್ಯನೂ ಇಲ್ಯಾಸನನ್ನ ಬದುಕಿಸುವುದೇ ಸಾಧ್ಯವಿರಲಿಲ್ಲ..  ಅದಕ್ಕೆ ಇಲ್ಯಾಸ್ ಸಮಯವನ್ನೂ ಕೊಡಲಿಲ್ಲ ವೈಧ್ಯರಲ್ಲಿ ಹೋಗುವುದರೊಳಗೆ ಇಲ್ಯಾಸ್ ಹೆಣವಾಗಿ ಹೋಗಿದ್ದ.. ಖೇಲ್ ಖತಮ್!

ಸಹಚರರೊಂದಿಗೆ ಇಲ್ಯಾಸ್ ಉಳ್ಳಾಲ್

ಮುಸ್ಲೀಮ್ ಗ್ಯಾಂಗ್ ವಾರ್

ಸತ್ತ ಇಲ್ಯಾಸನ ಸಾವಿನ ಬಗ್ಗೆ ನಿಜಕ್ಕೂ ಯಾರಿಗೂ ಬೇಸರವಿಲ್ಲ.. ಆದರೆ ಆತನ ಬದುಕಿನ ಬಗ್ಗೆ ಬೇಸರವಿದೆ.. ಹದಿನೆಂಟರ ಹರಯದಲ್ಲಿ ಇಲ್ಯಾಸ್ ಬೇರೆಯದೇ ಜಗತ್ತಿಗೆ ಹೋಗಿದ್ದರೆ ಹೀಗೆ ಸತ್ತು ಮಣ್ಣಾಗಬೇಕಿರಲಿಲ್ಲ. ಮಂಗಳೂರಿನ ಪಾತಕ ಪಾಳಯದಲ್ಲಿ ತನ್ನ ನೆತ್ತರಗಾಥೆ ಬರೆಯಬೇಕಿರಲಿಲ್ಲ, ಇಲ್ಯಾಸನ ಹೆಂಡತಿ ಹೀಗೆ ಕೊಲೆಗಾರನೊಬ್ಬನ ಹೆಂಡತಿ ಎನ್ನುವ ಪಟ್ಟಿ ಕಟ್ಟಿಕೊಳ್ಳಬೇಕಿರಲಿಲ್ಲ, ಆತನ ಅಮಾಯಕ ತಂದೆ, ತಾಯಿ ಎಂಥಾ ಮಗನನ್ನ ಹೆತ್ತು ಬಿಟ್ಟೆವಲ್ಲಾ ? ಎಂದು ಸಂಕಟ ಪಡಬೇಕಿರಲಿಲ್ಲ. ಶೋಕಿ ಜೀವನ ಮತ್ತು ದುಡ್ಡಿನ ಹಪ ಹಪಿ ಇಲ್ಯಾಸನ ದಾರಿ ತಪ್ಪಿಸಿತ್ತು. ಕೊನೆಗೆ ಯಾವುದೂ ಬೇಡ ಉಳ್ಳಾಲದಲ್ಲಿ ರಾಜಕೀಯ ಮಾಡಿಕೊಂಡು ನೆಮ್ಮದಿಯಲ್ಲಿ ಇದ್ದು ಬಿಡುತ್ತೇನೆ ಎಂದುಕೊಂಡು ಸೆಟಲ್ ಮೆಂಟ್ ಮಾತುಕಥೆಗೂ ಮುಂದಾಗಿದ್ದ ಇಲ್ಯಾಸ್.

ಶತ್ರುಗಳಿಗೆ ರಾಜಿ ಬೇಕಿರಲಿಲ್ಲ ಅವರಿಗೆ ಬೇಕಿದ್ದದ್ದು ಅವನ ಪ್ರಾಣ.. ಇಲ್ಯಾಸ್ ಕೂಡ ಹಲವರ ಮರಣ ಶಾಸನ ಬರೆಸಿದವ.ನಾನು ಮಾತ್ರ ಇಲ್ಲಿ ಶಾಶ್ವತ ಎಂಬಂತೆ ಬೀಗಿದವ.. ಟಾರ್ಗೇಟ್ ತಂಡದ ಮೂಲಕ ನೂರಾರು ಜನರ ಬಾಳನ್ನ ನರಕ ಮಾಡಿದವ. ಮಂತ್ರಿ ಖಾದರ್ ತರಹದ ನಾಜೂಕಯ್ಯಗಳು ಮುಖವಾಡವನ್ನ ಹಾಕಿಕೊಂಡೇ ತನ್ನ ರಾಜಕಾರಣಕ್ಕೆ ಇಲ್ಯಾಸ್, ದಾವೂದ್ ಹಾಗಿನವರನ್ನ ಬಳಸಿಕೊಳ್ಳುತ್ತಲೇ ಇರುತ್ತಾರೆ..   ಇಲ್ಯಾಸ್ ಸತ್ತನಲ್ಲಾ? ಮುಂದಿನ ಸರದಿ ದಾವೋದ್ ನದ್ದು.. ದಾವೋದ್ ಉಳ್ಳಾಲ್ ಇನ್ನೂ ಹೆಚ್ಚು ದಿವಸ ಬದುಕಲಿಕ್ಕಿಲ್ಲ.. ಮುಸ್ಲೀಮ್ ಭೂಗತ ಜಗತ್ತು ಮತ್ತೆ ಅಲರ್ಟ್ ಆಗಿದೆ.. ನೀವು ನಂಬಲಿಕ್ಕಿಲ್ಲ ದಾವೋದ್ ಜೀವಕ್ಕೆ ಇಲ್ಯಾಸ್ ಗ್ಯಾಂಗು ಮೊಹೂರ್ತವಿಟ್ಟಿದೆ..  ಮುಸ್ಲೀಮ್ ಪಾತಕ  ಯಾವ ಕುಲುಮೆಯಲ್ಲಿ ಕಾಯುತ್ತಿದೆಯೋ  ದಾವೋದ್ ನೆತ್ತರ ಹಸಿವಿರುವ ಆ ಹತಾರು!!

-ವಸಂತ್ ಗಿಳಿಯಾರ್                                                                                                                                       

Leave a Comment