ಉಮೇಶ್ ಶೆಟ್ಟಿ ಕಲ್ಗದ್ದೆಗೆ ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನ ಸಾಧ್ಯತೆ…

ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಎರಡೂವರೆ ವರ್ಷದ ಅವಧಿ ಈಗಾಗಲೇ ಮುಗಿದಿದ್ದು ಈ ಹಿಂದೆ ಅಧ್ಯಕ್ಷರಾಗಿದ್ದ ಜಯಶ್ರೀ ಮತ್ತು ಉಪಾಧ್ಯಕ್ಷರಾಗಿದ್ದ ಪ್ರವೀಣ್ ಶೆಟ್ಟಿ ತಮ್ಮ ಹುದ್ದೆಗೆ ರಾಜಿನಾಮೆಯನ್ನ ಕೊಟ್ಟಾಗಿದೆ. ಇನ್ನು ಮುಂದಿನ ಎರಡೂವರೆ ವರ್ಷದ ಅವಧಿಗೆ ಕೋಟೇಶ್ವರದ ರೂಪ ಪೈ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣದ ಉಮೇಶ್ ಶೆಟ್ಟಿ ಕಲ್ಗದ್ದೆ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.. ಉಮೇಶ್ ಶೆಟ್ಟಿ ಕಲ್ಗದ್ದೆ ರಾಜಕೀಯವಾಗಿಯೂ, ಸಾಮಾಜಿಕವಾಗಿಯೂ ಅತ್ಯಂತ ಕ್ರಿಯಾಶೀಲ ಯುವರಾಜಕಾರಣಿಯಾಗಿದ್ದು ತೀರ ಇತ್ತೀಚೆಗಷ್ಟೇ ಶಂಕರನಾರಾಯಣದ ಅತ್ಯಂತ ಬಡ ಮಹಿಳೆ ಸಾಂತು ಬಾಯಿಗೆ ಸೂರು ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಪಬ್ಲಿಕ್ ಹೀರೋ ಅಂತಲೇ ಗುರುತಿಸಿಕೊಂಡವರು.  ಇದರ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಉಮೇಶ್ ಶೆಟ್ಟರು ’ಶಾಸಕರಾದ ಬಿ.ಎಮ್. ಸುಕುಮಾರ್ ಶೆಟ್ಟರ ಮತ್ತು ಹಾಲಾಡಿ ಶ್ರೀನಿವಾಸ ಶೆಟ್ಟರ ನಿರ್ದೇಶನಕ್ಕೆ ಸರ್ವತಾ ನಾವೆಲ್ಲ ಬದ್ಧರಿದ್ದೇವೆ.. ಒಂದು ವೇಳೆ ನನಗೆ ಅವಕಾಶ ಸಿಕ್ಕಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ನಾನೂ ಉತ್ಸುಕನಿದ್ದೇನೆ.. ಹುದ್ದೆ ಸಿಗಲಿ, ಸಿಗದೇ ಇರಲಿ ಜನರ ಕಷ್ಟ, ಕಾರ್ಪಣ್ಯಗಳ ಜೊತೆಗೆ ಸದಾ ನಾನು ಇದ್ದೇ ಇರುತ್ತೇನೆ ಎಂದಿದ್ದಾರೆ

-ಪ್ರವೀಣ್ ಶೆಟ್ಟಿ ಕರ್ಜೆ

Leave a Comment