ಲವ್ ಕಾಲಂ.. ಇವುಳೆ ಹುಡುಗಿ!

ನಿನ್ನ ನೆನೆಪು ಉಬುಕಿ ಬರುವಾಗಲೆಲ್ಲಾ ನಾನು ಆಕಾಶದೆಡೆಗೆ ಮುಖ ಮಾಡಿ ನೋಡುತ್ತೇನೆ. ಇವತ್ತು ಮಳೆಯಿಲ್ಲ ಎಂದು ನಕ್ಷತ್ರ ಥಳಕ್ಕನೆ ನಕ್ಕು ಮಿನುಗುತ್ತದೆ..!! ಮೋಡದ ಮರೆಯ ಸರಿಸಿ ಓಡೋಡಿ ಬರುವ ಶಿಶಿರಚಂದ್ರ ಬೆಳ್ಳಿ ಕಿರಣಗಳದ್ದೇ ಬಾಣ ಹೂಡಿ ನಿಲ್ಲುತ್ತಾನೆ ..!! ಮತ್ತೆ ಪುನಃ ದಟ್ಟ ಮಳೆಯ ದಿನದಲ್ಲಿ ನಾವಿಬ್ಬರೂ ಜೊತೆಗಿದ್ದದ್ದು ನೆನಪಾಗುತ್ತದೆ!!
ಹೇ ಹುಡುಗಿ…,
ಯಾಕೆ ನೀ ಹೀಗೆ ನೆನಪಾಗಿ ಕಾಡುತ್ತೀ ಹೇಳು..??
ಹೆಣ್ಣೇ
ನಿನಗೆ ಗೊತ್ತಾ?? ಉತ್ಸವದ ದಿವಸ ದೇವರ ಹೊತ್ತು ತರುವ ಬೆಳ್ಳಿ ರಥದಂತವನು ನಾನಾದರೆ,
ನೀನು ಒಳಗೆ ಕುಳಿತಿರುವ ದೇವರು.‌!! ಯಾವಗಲೋ ಖುಷಿಯಲ್ಲಿದ್ದಾಗ ಮುದ್ದು ಹಸುಗೂಸೊಂದು ಹಲ್ಲಿಲ್ಲದ ಬಾಯಿಂದ ಆಡುವ ಬೊಚ್ಚು ನಗುವಿನಂತಹ ನಿನ್ನ ನಗು ನನಗೆ ತುಂಬಾ ಇಷ್ಟ ಕಣೇ..!! ಮಾತುಗಳಿಲ್ಲದ ಗಳಿಗೆಯಲ್ಲಿ ನಮ್ಮವು ನಾಲ್ಕು ಕಂಗಳು ಸೇರಿ ಆರಂಬಿಸುವ ಕನ್ವರ್ಸೇಷನ್ನು ಕೂಡ ನನಗೆ ತಿಂದು ಬಿಡುವಷ್ಟು ಇಷ್ಟ.! ಅಪರೂಪಕ್ಕೆ ನೀನು ನೆರಿಗೆ ಒದೆಯುತ್ತಾ ಬರುವ ಕನಕಾಂಬರ ಬಣ್ಣದ ಸೀರೆ ಕೂಡ ನಂಗಿಷ್ಟವೇ..!!
ಇಂತಹ ಸಾವಿರ ಇಷ್ಟಗಳೆ ಅಲ್ಲವಾ ನನ್ನೊಳಗೆ ಸೇರಿಕೊಂಡು ಕದಮುಚ್ಚಿ ಕೊಂಡಿರುವುದು !! ಇಂತಹುದೇ ಹುಚ್ಚು ಖುಷಿಗಳನ್ನೆಲ್ಲಾ ನೀ ಸಹಿಸಿ ಕೊಳ್ಳುವಿಯಂತಾದರೆ ಈ
ಜನ್ಮಕ್ಕೆ ನನಗಷ್ಟು ಸಾಕು ಕಣೆ..!!
ಹೇ ಒಲವು ಬಾಚಿ ಕೊಟ್ಟ ಹುಡುಗಿಯೇ,
ಕಣ್ಣ ರೆಪ್ಪೆ ಮಗುಚಿ ಬಿದ್ದುಬಿಡುವ ಗಳಿಗೆಯಲ್ಲೂ ನೀನು ನನಗೆ ಬಿಡದೇ ನೆನಪಾಗಬೇಕು ..!! ಆಗ್ತೀಯಲ್ವಾ..??

ಇತೀ
ನಿನ್ನವ ರಣ್ವೀರ್

ಪ್ರವೀಣ್ ಯಕ್ಷಿಮಠ.

Leave a Comment