38 ನೇ ಕಳ್ತೂರು: ಗ್ರಾಮಪಂಚಾಯತ್ ಸದಸ್ಯನಿಂದಲೇ ಸೌಭಾಗ್ಯ ಲಕ್ಷ್ಮೀ ಯೋಜನೆಯ ದುರುಪಯೋಗ

ಮೆಸ್ಕಾಂ ಅದಿಕಾರಿಗಳೇ ಇತ್ತ ತಿರುಗಿ ನೋಡಿ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಬಡವರ ಪಾಲಿನ ನಂದಾದೀಪವಾಗಿರುವ ಸೌಭಾಗ್ಯಲಕ್ಷ್ಮಿ ಯೋಜನೆಯನ್ನು ಅಕ್ರಮ ಶೆಡ್ ಮಾಡಿಕೊಂಡು ಕಮರ್ಷಿಯಲ್ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿರುವ ಅಕ್ರಮ ಕಳ್ತೂರು ಗ್ರಾಮಪಂಚಾಯತ್ ಸದಸ್ಯನಿಂದಲೇ ನಡೆಯುತ್ತಿದ್ದರೂ ಮೆಸ್ಕಾಂ ಅದಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಕಳ್ತೂರು ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಕಾಮತ್ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಡೋರ್ ನಂಬರ್ ಇಲ್ಲದೆ ಇರುವ ತಾತ್ಕಾಲಿಕ್ ಶೆಡ್ ನಿರ್ಮಿಸಿಕೊಂಡು ಅದಕ್ಕೆ ಅಕ್ರಮವಾಗಿ ಸರಕಾರದ ಸೌಭಾಗ್ಯಲಕ್ಷ್ಮಿ ಯೋಜನೆ ಮೂಲಕ ವಿದ್ಯುತ್ ಸಂಪರ್ಕ ಪಡೆದು ವಂಚಿಸಿರುವ ಘಟನೆ ಹಲವು ದಿನಗಳಿಂದ ನಡೆಯುತ್ತಿದ್ದರೂ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ಗಿರೀಶ್ ಕಾಮತ್ ಈ ಹಿಂದೆ ಆತನ ಅಕ್ರಮಗಳ ವಿರುದ್ದ ವರದಿ ಮಾಡಲು ತೆರಳಿದ್ದ ವರದಿಗಾರನ ಮೇಲೆ ಹಲ್ಲೆ ನಡೆಸಿ ಕೇಸು ದಾಖಲಾಗಿ ತಲೆತಪ್ಪಿಸಿಕೊಂಡಿದ್ದ..
ಗ್ರಾಮ ಪಂಚಾಯತ್ ಸದಸ್ಯನ ಈ ಅಕ್ರಮಗಳಿಗೆ ಇಂಧನ ಇಲಾಖೆ ಕಡಿವಾಣ ಹಾಕಲಿ ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನ್ಯೂಸ್ ಬ್ಯೂರೋ .
ನಿಮ್ಮ ಅಭಿಮತ.

Leave a Comment