ಕಂಬಿಕಲ್ಲು ಶ್ರೀ ಮಹಾಗಣಪತಿ ದೇವಸ್ಥಾನ: ಧಾರ್ಮಿಕ ವಿಧಿ ವಿಧಾನಗಳ ಆರಂಭ


ಅಭಿಮತ ನ್ಯೂಸ್ ರೂಮ್ :ಕಂಬಿಕಲ್ಲು ಮಹಾಗಣಪತಿ ದೇಬಸ್ಥಾನದ ಧಾರ್ಮಿಕ ವಿಧಿವಿಧಾನಗಳ ಎರಡನೇ ದಿನವಾದ ಇಂದು ಗಣಪತಿ ಮೂರ್ತಿಗೆ ಜೀವಕುಂಭಷೇಚನ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಿತು…

ಬೆಳಿಗ್ಗೆ ಸಮಯ 8 ರಿಂದ ಗುರುಗಣೇಶ ಪೂಜೆ ಆರಂಭವಾಗಿದ್ದು ಫಲದಾನಾದಿ ಮಂಗಳಾಷ್ಠಕ ಪಠಣ, ಬೆಳಿಗ್ಗೆ 11.10 ರ ಮೀನ ಲಗ್ನದಲ್ಲಿ ಉಧ್ಭವ ಗಣಪತಿಯ ಬಿಂಬಕ್ಕೆ ಜೀವಕುಂಭಶೇಚನ, ಅಷ್ಠಬಂಧ ಲೇಪನ,ನ್ಯಾಸಾದಿಗಳನ್ನ ನೆರವೇರಿಸಲಾಯಿತು..

ತದನಂತರ ಪ್ರಯಿಷ್ಠಾಕಲಶ, ತತ್ವಾಧಿವಾಸಾದಿ, ತತ್ವಕಲಾಶಭಿಷೇಕ ಮಹಾಪೂಜೆ ನೆರವೇರಿತು. ಈ ಸಂದರ್ಭ ದೇವಸ್ಥಾನದ ಜೀರ್ಣೋಧ್ಧಾರ ಸಮೀತಿಯ ಪದಾಧಿಕಾರಿಗಳು ಮತ್ತು ಊರ ಹಾಗು ಪರಊರ ಭಕ್ತಾಭಿಮಾನಿಗಳು ನೆರೆದಿದ್ದರು.

ಗಮನ ಸೆಳೆದ ಅಲಂಕಾರ

ದೇವಸ್ಥಾನವು ಸಂಪೂರ್ಣ ಹೂವಿನಿಂದ ಅಲಂಕೃತಗೊಂಡಿದ್ದು ಎಲ್ಲರ ಗಮನ ಸೆಳೆಯಿತು. ನಾಳೆ ನಡೆಯುವ ಧಾರ್ಮಿಕ ಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಆಗಮಿಸುವ ಹಿನ್ನೆಲೆಯಲ್ಲಿ ಕಕ್ಕುಂಜೆಯ ಕಂಬಿಕಲ್ಲು ಅತ್ಯಂತ ಸಂಭ್ರಮದಲ್ಲಿ ಖಾವಂದರ ಸ್ವಾಗತಕ್ಕೆ ಸಜ್ಜಾಗಿದೆ. ದೇವಸ್ಥಾನದ ನಮಸ್ಕಾರ ಮಂಟಪದ ಮೇಲ್ಛಾವಣಿಯ ಹೂವಿನ ಅಲಂಕಾರ ಗಮನ ಸೆಳೆಯುವಂತಿತ್ತು. ತೆಂಗಿನ ಗರಿಯ ಚಪ್ಪರದಿಂದ ಕಂಗಿನ ಕಂಬಗಳಿಂದ ಅಲಂಕೃತಕಗೊಂಡಿದ್ದ ಚಪ್ಪರದ ಕಂಬಗಳಿಗೆ ಹಣ್ಣಡಿಕೆಯನ್ನೊಳಗೊಂಡ ಹಸಿರು ತಳಿರುಗಳ ಅಲಂಕಾರ ಕಾರ್ಯಕ್ರಮದ ಕಳೆ ಹೆಚ್ಚಿಸಿದೆ..

ಅನ್ನಪ್ರಸಾದ

ಮಧ್ಯಾಹ್ನ ಕ್ಷೇತ್ರದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮಹಾಪೂಜನ ಕಾರ್ಯಕ್ರಮ ನಡೆದಿದ್ದು ತದನಂತರ ಅಂದಾಜು ಆರುನೂರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು

Leave a Comment