” ಕರ್ಜೆ ಕ್ಷೇತ್ರ ಮಹಾತ್ಮೆ ” ಪ್ರಸಂಗ ಬಿಡುಗಡೆ

ಕರ್ಜೆ: ಇತಿಹಾಸ ಪ್ರಸಿದ್ಧ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುರಾಣವನ್ನು ಸಾರುವ ” ಕರ್ಜೆ ಕ್ಷೇತ್ರ ಮಹಾತ್ಮೆ ” ಪ್ರಸಂಗ ಬಿಡುಗಡೆ ಮತ್ತು ಯಕ್ಷಗಾನ ಪ್ರದರ್ಶನ ಜರಗಿತು.

ಸಭಾ ಕಾರ್ಯಕ್ರಮದ ಮುಂಚಿತವಾಗಿ ಶ್ರೀ ಮಹಾಲಿಂಗೇಶ್ವರನಿಗೆ ಮಹಾ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ಜರಗಿತು‌. ಸುಮಾರು 2 ಸಾವಿರ ಭಕ್ತಾದಿಗಳು ಅನ್ನದಾನವನ್ನು ಸ್ವೀಕರಿಸಿದರು.

ರಾತ್ರಿ 9.00 ಗಂಟೆಗೆ ನೆಡೆದ ಸಭಾ ಕಾರ್ಯಕ್ರಮದಲ್ಲಿ ಕರ್ಜೆ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಅತಿಥಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿತು.ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್ ರವರನ್ನು ಸನ್ಮಾನಿಲಾಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿಯವರು ಮಾತನಾಡಿ ಕರ್ಜೆ ದೇವಸ್ಥಾನಕ್ಕೆ ಹೊರ ಊರಿನಲ್ಲಿ ಒಳ್ಳೆಯ ಹೆಸರಿಸಿದೆ,ಆದರೆ ಇಲ್ಲಿನ ಒಂದು ಮನೆಯವರಿಗೆ ಕೆಲವು ಜನ ಬೆಂಬಲ ನೀಡಿ ದೇವಸ್ಥಾನದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ದೇವಸ್ಥಾನದಹತ್ತಿರ ಸಮುದಾಯ ಭವನ ನಿರ್ಮಾಣ ಮಾಡಿ ಬಡ ಜನರ ಮದುವೆ ಇನ್ನಿತರ ಸಮಾರಂಭ ಗಳಿಗೆ ಉಚಿತವಾಗಿ ನೀಡಲಾಗುವುದು.ಫೇ.3 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿರವರು ಕರ್ಜೆಗೆ ಆಗಮಿಸುತ್ತಾರೆಂದು ತಿಳಿಸಿದರು.

ಸಭಾ ಕಾರ್ಯಕ್ರಮದ ನಂತರ ಹಾಲಾಡಿ ಮೇಳ ಮತು ತೆಂಕು ತಟ್ಟಿನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಜರಗಿತು.3 ಸಾವಿರಕ್ಕೂ ಅಧಿಕ ಮಂದಿ ಯಕ್ಷಗಾನ ವೀಕ್ಷಿಸಿದರು.
ಪ್ರವೀಣ್ ಕನ್ನಾರ್

Leave a Comment