ಕರ್ಜೆ: ಇತಿಹಾಸ ಪ್ರಸಿದ್ಧ ಕರ್ಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕ್ಷೇತ್ರ ಮಹಾತ್ಮೆಯನ್ನು ಸಾರುವ ಪ್ರಸಂಗ ಜ.12ರಂದು ಬಿಡುಗಡೆಗೊಳ್ಳಲಿದೆ.
ಕರ್ಜೆಗೆ ಸಾಕಷ್ಟು ಪೌರಾಣಿಕ ಹಿನ್ನೆಲೆಯಿರುವ ಈ ಕ್ಷೇತ್ರ ಜೀರ್ಣೋದ್ಧಾರಗೊಂಡು ನವ ಮಾಸಗಳು ಕಳೆದಿವೆ. ಅಂದು ಅಜೀರ್ಣಾವಸ್ದೆಯಲ್ಲಿದ್ದ ದೇವಸ್ಥಾನವನ್ನು ಸುಗ್ಗಿ ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಊರ,ಪರ ಊರ ದಾನಿಗಳ ನೆರವಿನಿಂದ ಸುಮಾರು 2.75 ಕೋಟಿ ವೆಚ್ಚದಲ್ಲಿ ಭವ್ಯವಾದ ದೇಗುಲವನ್ನು ನಿರ್ಮಿಸಿದ್ದರು. ಇದೀಗ ಕ್ಷೇತ್ರದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೇಳುವ ಪ್ರಸಂಗವನ್ನು ಬಸವರಾಜ್ ಶೆಟ್ಟಿಗಾರ್ ಅವರು ರಚಿಸಿದ್ದಾರೆ.


ಪ್ರಸಂಗದಲ್ಲಿ ಏನಿದೆ!
ಅವಳಿ ಶಿವಲಿಂಗವಿರುವ ಅಪರೂಪದ ದೇವಸ್ಥಾನವಾದ ಕರ್ಜೆ ಶ್ರೀ ಮಹಾಲಿಂಗೇಶ್ವರನಿಗೂ ಮತ್ತು ಕಾಶಿ ವಿಶ್ವನಾಥನಿಗೂ ಇರುವ ಸಂಬಂಧ. ಕಾಶಿಯಿಂದ ಶ್ರೀ ಮಹಾಲಿಂಗೇಶ್ವರ ದೇವರು ಕರ್ಜೆಗೆ ಬಂದ ಕಥೆ ಗಳನ್ನು ಪ್ರಸಂಗ ಒಳಗೊಂಡಿದೆ.
ಅಂದು ಹಲವು ಗಣ್ಯರ ಸಮ್ಮುಖದಲ್ಲಿ ಈ ಪ್ರಸಂಗ ಬಿಡುಗಡೆಗೊಳ್ಳಲಿದ್ದು, ಹಾಲಾಡಿ ಮೇಳ ಮತ್ತು ಪ್ರಸಿದ್ಧ ತೆಂಕು ತೆಟ್ಟಿನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
✍ಪ್ರವೀಣ್ ಕನ್ನಾರ್