ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿರುವ ಕೆಜಿಎಫ್

ಸಿನಿಡೆಸ್ಕ್‍: ರಾಷ್ಟ್ರಾಧ್ಯಂತ ಸದ್ದು ಮಾಡಿದ ಕೆಜಿಎಫ್‍ ಇದೀಗ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಸದ್ದು ಮಾಡಲಾರಂಭಿಸಿದೆ.

ವಿಶ್ವಾದ್ಯಂತ ಸದ್ದು ಮಾಡಿದ ದಕ್ಷಿಣ ಭಾರತ ಮೂಲದ ಸಿನಿಮಾಗಳೆಂದರೆ ರೋಬೋಟ್‍, ಬಾಹುಬಲಿ ಮತ್ತು ಬಾಹುಬಲಿ -2 ಆ ಬಳಿಕ ವಿಶ್ವಾದ್ಯಂತ ಭಾರಿ ಸದ್ದು ಮಾಡಿದ ಚಿತ್ರವೆಂದರೆ ಕನ್ನಡದ ಯಶ್‍ ಅಭಿನಯದ ಕೆಜಿಎಫ್‍.

ಈ ಚಿತ್ರ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಭರ್ಜರಿಯಾಗಿ ಓಡುತ್ತಿದ್ದು. ಕೆಜಿಎಫ್‍ನ ಹಿಂದಿ ಅವತರಣಿಕೆ ಇದೀಗ ಪಾಕಿಸ್ತಾನದಲ್ಲಿ ಹೌಸ್‍ಫುಲ್‍ ಪ್ರದರ್ಶನ ಕಾಣುತ್ತಿದೆ.

Leave a Comment