ಬ್ಲ್ಯಾಕ್‌ಮೇಲ್ ಸಹೋದರಿಯರಲ್ಲಿ ಒಬ್ಬಾಕೆ ಬಂಧನ,ಮತ್ತೊಬ್ಬಾಕೆಗೆ ಪೋಲಿಸರ ಹುಡುಕಾಟ.

ಕೋಟ: ಈ ಪರಿಸರದಲ್ಲಿ ಬ್ಲ್ಯಾಕ್‌ಮೇಲ್ ಸಹೋದರಿಯರೆಂದೆ ಕುಖ್ಯಾತಿಯಲ್ಲಿದ್ದ ಗಿಳಿಯಾರಿನ ಭಾರತಿ, ಆರತಿ ಸಹೋದರಿಯರಲ್ಲಿ ಭಾರತಿಯನ್ನು ಪೋಲಿಸರು ಬಂಧಿಸಿದ್ದಾರೆ, ಮತ್ತೊಬ್ಬಾಕೆ ಆರತಿ ತಲೆಮರೆಸಿಕೊಂಡಿದ್ದು ಆಕೆಯ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ.

ಈ ಹಿಂದೆ ಗಿಳಿಯಾರಿನಲ್ಲಿ ನಡೆದಿದ್ದ ಹೊಡೆದಾಟದ ಪ್ರಕರಣದಲ್ಲಿ ವಿಚಾರಾಣಾಧಿನ ಆರೋಪಿಗಳಾಗಿದ್ದ ಇರ್ವರೂ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆ ನ್ಯಾಯಾಧೀಶರು ಇಬ್ಬರಿಗೂ ಬಂಧನದ ಆದೇಶ ಹೊರಡಿಸಿದ್ದಾರೆ.

ಈ ಇಬ್ಬರೂ ಸಹೋದರಿಯರು ಕೋಟ ಪರಿಸರದಲ್ಲಿ ಅನೇಕರ ಮೇಲೆ ದಲಿತ ದೌರ್ಜನ್ಯ ಕೇಸು ದಾಖಲಿಸುತ್ತೇನೆ ಎಂದು ಬ್ಲ್ಯಾಕ್ ಮೇಲೆ ಮಾಡುತ್ತಲೇ ವಸೂಲಿ ಬಾಜಿ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇವರ ಮೇಲಿದೆ.

Leave a Comment