ಕೋಟ ಜೋಡಿ ಕೊಲೆ ಪ್ರಕರಣ ಐವರಿಗೆ ಜಾಮೀನು!

ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಕೋಟದ ಭರತ್-ಯತೀಶ್ ಜೋಡಿಕೊಲೆಯ ಆರೋಪಿಗಳ ಪೈಕಿ ಐವರಿಗೆ ಜಾಮೀನು ಮಂಜೂರಾಗಿದ್ದು ಪ್ರಕರಣದ ಒಂಬತ್ತನೆ ಆರೋಪಿ ಎಂದು ಆಪಾದಿಸಲಾದ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಗೆ ಈಗಾಗಲೇ ಜಾಮೀನು ಮಂಜೂರಾಗಿದ್ದು. ಇಂದು ಮಿಕ್ಕ ಐವರಿಗೂ ಕೂಡ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4-11-2019 ರಂದು ಶರತ್ತುಬಧ್ಧ ಜಾಮೀನು ಮಂಜೂರು ಮಾಡಿದೆ.

ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು ಆಶ್ರಯ ನೀಡಿದ್ದ ವಿಚಾರವಾಗಿ ಆರೋಪ ಹೊತ್ತು ಬಂಧನದಲ್ಲಿದ್ದ ಪೊಲೀಸ್ ಸಿಬ್ಬಂಧಿಗಳಾದ ಪವನ್ ಅಮೀನ್, ವೀರೆಂದ್ರ ಆಚಾರ್ಯ, ಹಾಗೆಯೇ ಕಾಲೇಜು ವಿಧಾರ್ಥಿ ಪ್ರಣವ್ ರಾವ್, ಮಹಮ್ಮದ್ ತೌಫಿಕ್ ಹಾಗೆಯೇ ಸಂತೋಷ್ ಕುಂದರ್ ಇವರುಗಳಿಗೆ ಜಾಮೀನು ಮಂಜೂರಾಗಿದೆ

ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್

ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 212 ರ ಕೆಳಗೆ ಆರೋಪ ಮಾಡಲಾಗಿದ್ದು ಎಲ್ಲರೂ ಹಿರಿಯಡ್ಕ ಜೈಲಿನಲ್ಲಿದ್ದರು. ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲು ಅಭಿಯೋಜನೆಯು ತೀವ್ರವಾಗಿ ಖಂಡಾತುಂಡವಾಗಿ ವಿರೋಧಿಸಿತ್ತು!ನ್ಯಯಾಧೀಶ ನರಹರಿ ಮರಾಠೆಯವರು ಜಾಮೀನು ನೀಡಿದ ಈ ಪ್ರಕರಣದಲ್ಲಿ ಆರೋಪಿ ಪವನ್ ಅಮೀನ, ಪ್ರಣವ್ ರಾವ್ ಹಾಗೂ ಸಂತೋಷ್ ಕುಂದರ್ ಪರವಾಗಿ ಕುಂದಾಪುರದ ಪ್ರಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ವಾದಿಸಿದ್ದರು.

-ಅಭಿಮತ ಡೆಸ್ಕ್

Leave a Comment