ರಾಜಶೇಖರ್ ರೆಡ್ಡಿ ಜೊತೆ ಪೋನ್ ಸಂಭಾಷಣೆಯೇ ಮುಳುವಾಯಿತು ಜಿಲ್ಲಾಪಂಚಾಯತ್ ಸದಸ್ಯನಿಗೆ!!

ಕೋಟ ಅವಳಿ ಕೊಲೆಯ ಪಾತಕಿಗಳನ್ನ ಬಂಧಿಸುವಲ್ಲಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರ್ಗಿಯವರ ನೇತೃತ್ವದ ತಂಡ ಬಹುತೇಕ ಯಶಕಂಡಿದೆ..

ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತದ್ದೇ. ಜಿಲ್ಲಾಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಂಧನದ ನಂತರ.

ಕೇವಲ ಟಾಯ್ಲೆಟ್ ಫಿಟ್ ವಿವಾದಕ್ಕೆ ಸಂಬಂಧಿಸಿದ ಗಲಾಟೆ ಎಂದು ಸುದ್ದಿಯಾಗಿದ್ದ ಈ ಪ್ರಕರಣದಲ್ಲಿ ಕಾಣದ ಕೈಗಳಿವೆ ಎಂದೂ ಸಾಮಾಜಿಕ ತಾಣಗಳಲ್ಲಿ ಒಂದು ವರ್ಗದ ಯುವಕರು ಸಂದೇಶಗಳನ್ನ ಹರಿಯ ಬಿಟ್ಟಿದ್ದರು. ಈಗ ಜಿಲ್ಲಾ ಪಂಚಾಯತ್ ಸದಸ್ಯನ ಭಾಗಿ ಎನ್ನುವುದು.

ಹಾಫ್ ಮರ್ಡರಿಗೆ ಪ್ರಚೋದನೆ!

ಯಾವಾಗ ಲೋಹಿತ್ ಪೂಜಾರಿ ಮತ್ತು ರಾಜಶೇಖರ ರೆಡ್ಡಿ ನಡುವೆ ವಿವಾದಗಳಾದವೋ ಆಗ ರಾಜಶೇಖರ್ ರೆಡ್ಡಿ ರಾಘವೇಂದ್ರ ಕಾಂಚನ್ ಸಂಪರ್ಕಕ್ಕೆ ಬಂದಿದ್ದಾನೆ.. ಲೋಹಿತ್ ಪೂಜಾರಿಯನ್ನ ನಾನು ಸುಮ್ಮನೆ ಬಿಡೋದಿಲ್ಲ. ನಮ್ಮ ಮನೆ ವಿಷಯಕ್ಕೆ ಬರ್ತಾ ಇದಾನೆ.. ಆತನನ್ನ ಎತ್ತಿ ಬಿಡ್ತೇನೆ ಎಂದಿದ್ದಾನೆ ರೆಡ್ಡಿ! ಆಗ ರಾಘವೇಂದ್ರ ಕಾಂಚನ್ ಸಮಜಾಯಿಶಿ ನಡೆಸಿ “ಹಾಗೆಲ್ಲ ಮಾಡೋಕೆ ಆ ಹುಡುಗರೇನು ರೌಡಿಗಳಲ್ಲಾ! ಬೇಕಿದ್ದರೆ ನಾಲ್ಕು ಬಾರಿಸಿ, ’ ಎಂದಿದ್ದು ರಾಘವೇಂದ್ರ ಕಾಂಚನ್! ಇದೇ ಕಾಂಚನ್ ಜೀವನಕ್ಕೇ ಮುಳುವಾಗಿ ಪರಿಣಾಮ ಬೀರಿದೆ! ಕೊಲೆ ನಡೆದ ನಂತರವೂ ರಾಜಶೇಖರ್ ರೆಡ್ಡಿ ಮೊದಲು ಕರೆ ಮಾಡಿದ್ದು ರಾಘವೇಂದ್ರ ಕಾಂಚನ್ ಮೊಬೈಲಿಗೆ! ಆದರೆ ಕಾಂಚನ್ ತಕ್ಷಣವೇ ಬ್ರಹ್ಮಾವರದ ಸರ್ಕಲ್ ಇನ್ಸ್ಪೆಕ್ಟರ್  ನಂಬರಿಗೆ ಕರೆ ಮಾಡಿ ವಿಷಯ ತಿಳಿರುವುದಾಗಿ ತಿಳಿದು ಬಂದಿದೆ! ಈ ಆಧುನಿಕ ಯುಗದಲ್ಲಿ ಕ್ರಿಮಿನಲ್ ಹಿನ್ನೆಯುಳ್ಳ ವ್ಯಕ್ತಿಗಳ ಜೊತೆ ಮೊಬೈಲ್ ಸಂಪರ್ಕ ಇರಿಸಿಕೊಂಡರೆ ಅದು ಎಂದಿಗೂ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಈ ಪ್ರಕರಣವೊಂದು ತಾಜಾ ಉದಾಹರಣೆಯಾಗಿದೆ! ಆದರೆ ಜನಪ್ರತಿನಿಧಿಯೊಬ್ಬನಿಗೆ ಮತದಾರ ಯಾವ ಹೊತ್ತಿನಲ್ಲಿಯೂ ಕರೆ ಮಾಡುತ್ತಾನೆ. ಅದರಲ್ಲಿಯೂ ರಾಜಶೇಖರ್ ರೆಡ್ಡಿ ಕಳೆದ ಇಪ್ಪತ್ತು ವರ್ಷದಿಂದಲೂ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದವನಲ್ಲ! ತನ್ನ ಕುಟುಂಬದ ವಿಚಾರಕ್ಕೆ ಬಂದಾಗ ರೆಡ್ಡಿ ಸಹೋದರರು ಕೆರಳಿದ್ದರು ಎನ್ನಲಾಗಿದೆ..! ಒಟ್ಟಾರೆ ಈ ಕೊಲೆ ಪ್ರಕರಣ ಇನ್ನಷ್ಟು ಟ್ವಿಷ್ಟ್ ಪಡೆಯುವುದರಲ್ಲಿಯೂ ಸಂಶಯವಿಲ್ಲ!


ರಾಘವೇಂದ್ರ ಕಾಂಚನ್

ಬಡ್ಡಿ ಮಾಫಿಯಾಕ್ಕೆ ಬ್ರೇಕ್!

ಕೋಟದ ಎಲ್ಲಾ ಕೈಮ್ ಹಿನ್ನೆಲೆಯೂ ಬಡ್ಡಿ ಮಾಫಿಯಾದ ಹಿನ್ನೆಲೆಯಲ್ಲಿ ನಡೆದಿದೆ. ಕೊಲೆಯಾದ ಭರತ್ ಲೋಹಿತ್ ಪೂಜಾರಿಯ ಜೊತೆ ಒಡನಾಟ ಇರಿಸಿಕೊಂಡಿದ್ದು ಲೋಹಿತ್ ಭರತನನ್ನು ತನ್ನ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದ. ಭರತ್ ಜೊತೆ ಹತ್ಯೆಯಾದ ಯತೀಶ್ ಅತ್ಯಂತ ಸೌಮ್ಯ ಸ್ವಭಾದ ಹುಡುಗನಾಗಿದ್ದು ಊರಿಗೆ ಬಂದವನು ಬೆಂಗಳೂರಿಗೆ ತೆರೆಳುವುದರೊಳಗೆ ಈ ಪ್ರಕರಣ ನಡೆದಿದೆ! ಲೋಹಿತ್ ತನ್ನ ಬೆನ್ನು ಹತ್ತಿ ಬಂದವರು ನಟೋರಿಯಸ್ ಗಳು ಎಂದು ಗೊತ್ತಿದ್ದೂ ಪೊಲೀಸರಿಗೆ ಕರೆ ಮಾಡದೆ ತನ್ನ ಗೆಳೆಯರಿಗೆ ಕರೆ ಮಾಡಿದ್ದೇ ಬಹು ದೊಡ್ಡ ಪ್ರಮಾದಕ್ಕೆ ಕಾರಣವಾಗುತ್ತದೆ.. ತಾನು ಮನೆಯೊಳಗೆ ಹೋಗಿ ಸೇಫ್ ಆಗಿ ತನ್ನ ರಕ್ಷಣೆಗೆ ಬಂದವರ ಜೀವವನ್ನ ಬಲಿ ಕೊಟ್ಟದ್ದು ಲೋಹಿತ್! ನಟೋರಿಯಸ್ ರೆಡ್ಡಿ ಗ್ಯಾಂಗಿನ ಅಟ್ಟಹಾಸ ಹೇಗಿತ್ತೆಂದರೆ ಅವತ್ತು ಇನ್ನೂ ಯಾರೇ ಬಂದಿದ್ದರೂ ಕೊಲೆಯಾಗಿ ಹೋಗುವ ಸಾಧ್ಯತೆಗಳಿದ್ದಿದ್ದವು! ಕೊಲೆಯಾದ ಕೆಲವೇ ದಿನಗಳಲ್ಲಿ ಎಲ್ಲಾ ಕೊಲೆಗಡುಕರನ್ನ ಪತ್ತೆ ಮಾಡಿ ಹೆಡೆಮುರಿ ಕಟ್ಟಿದ ಜಿಲ್ಲಾ ಪೊಲೀಸ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಿಂದ ಶ್ಲಾಘನೆಗೆ ಪಾತ್ರವಾಗಿದೆ!

ಕೋಟಕ್ಕೆ  ಹೊಸ ಪಿ.ಎಸ್.ಐ. ಬೇಕು

ಇತ್ತೀಚಿನ ದಿನದಲ್ಲಿ ಕೋಟದಲ್ಲಿ ಹೆಚ್ಚಿನ ಅಪರಾಧ ಪ್ರಕರಣಗಳು ನಡೆಯುತ್ತಿರುವುದಕ್ಕೆ ಕೋಟದಲ್ಲಿ ಕಟ್ಟು ನಿಟ್ಟಿನ ಪೊಲೀಸಿಂಗ್ ವ್ಯವಸ್ಥೆ ಜಾರಿಯಲ್ಲಿ ಇಲ್ಲದೇ ಇರುವುದೂ ಒಂದು ಕಾರಣವಾಗಿದೆ! ಹಾಗಾಗಿ ಕೋಟಕ್ಕೆ ಹೊಸ ಪಿ.ಎಸ್.ಐ. ಬೇಕು ಎನ್ನುವುದಾಗಿ ಪೊಲೀಸ್ ಹಿರಿಯ ಅಧಿಕಾರಿಗಳಲ್ಲಿ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಮನವಿ ಮಾಡಿಕೊಂಡಿದೆ. ಅದರ ಜೊತೆಗೆ ಇಲ್ಲಿ ಸಂಜೆಯಾಗುತ್ತಿದ್ದಂತೆಯೇ ಗಾಂಜ ವ್ಯಸನಿ ಹುಡುಗರಿಂದಲೂ ಹೆಚ್ಚಿನ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಮುಖ್ಯವಾಗಿ ಬಡ್ಡಿ ದಂಧೆ ಮತ್ತು ಗಾಂಜ ಮಾಫಿಯಾ ಕೋಟದಿಂದ ಅಂತ್ಯವಾದರೆ  ಅದೇ ಕಾರಂತರ ಕೋಟ, ಅದೇ ಸಾಂಸ್ಕೃತಿಕ ರಾಜಧಾನಿ ಎನ್ನುವ ಹೆಗ್ಗಳಿಕೆಯ ಕೋಟ ಮತ್ತು ಅದೇ ಅಮೃತ್ತೇಶ್ವರಿ ಅಮ್ಮನ ಮಡಿಲೂರು ಕೋಟ ಎಂದು ಸಾರ್ವಜನಿಕರು ಕರೆದಾರು.. ಇಲ್ಲದಿದ್ದರೆ ಮತ್ತಿದು ಕ್ರೈಮ್ ಕೋಟ! ಎನ್ನುವುದು ಸಾರ್ವಜನಿಕರ ಅಭಿಪ್ರಾಯ..

ನಿಮ್ಮ ಅಭಿಮತ ನ್ಯೂಸ್ ಬ್ಯೂರೋ.

Leave a Comment