ಕೋಟದಲ್ಲಿ ಜೋಡಿ ಕೊಲೆ!!

ಕೋಟ: ತಂಡಾಸು ಹೊಂಡಕ್ಕೆ‌ ಸಂಬಂದಿಸಿದಂತೆ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೋಟದಲ್ಲಿ ಸಂಭವಿಸಿದೆ.

ಕೋಟ ನಿವಾಸಿಗಳಾದ ಭರತ್ ಮತ್ತು ಯತೀಶ್ ಕೊಲೆಗಿಡಾದವರಾಗಿದ್ದು, ಮೃತ ಯತೀಶ್ ಕಳೆದ ವಿ.ಸ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದ. ಭರತ್ ಕೋಟದಲ್ಲಿ ಆಟೋ ಚಾಲಕನಾಗಿದ್ದ

ಘಟನೆ ವಿವರ

ಸ್ನೇಹಿತ ಲೋಹಿತ್ ಮನೆಯಲ್ಲಿನ ತಂಡಾಸು ಹೊಂಡದ ವ್ಯಾಜ್ಯಕ್ಕೆ ಸಂಬಂದಿಸಿದಂತೆ ಭರತ್ ಮತ್ತು ಯತೀಶ್ ಸಹಕಾರ ಮಾಡಿದ್ದೇ ಕೊಲೆಗೆ ಪ್ರೇರಣೆ ಎನ್ನಲಾಗಿದ್ದು. ಈ ಹಿನ್ನೆಲೆ ಯಲ್ಲಿ ರೌಡಿಶೀಟರ್ ಹರೀಶ್ ರೆಡ್ಡಿ ಸಹಚರರು ಕೋಟದ ರಾಜಲಕ್ಷ್ಮಿ ಸಭಾಂಗಣದ ಮುಂದೆ ರಾತ್ರಿ 10.30ರ ಸುಮಾರಿಗೆ ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ಮಹೇಶ್ ಮತ್ತು ಮಣಿಪಾಲ್ ಆಸ್ಪತ್ರೆ ಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment