ಮಂಗಳೂರಲ್ಲಿ ಮತ್ತೆ ಮೊರೆಯಿತು ಗುಂಡು!

ಇಂದು ಮಂಗಳೂರಿನ ಅಡ್ಯಾರ್ ಬಳಿ ಮತ್ತೊಂದು ಶೂಟ್ ಔಟ್ ಆಗಿದೆ.  ರೌಡಿ ಶೀಟರ್ ಭವಿತ್ ರಾಜ್ ಶೂಟ್ ಔಟಿಗೆ ಗುರಿಯಾದವ. ಕಂಕನಾಡಿ ಪೊಲೀಸರು ಭವಿತ್ ರಾಜ್ ನನ್ನು ಬಂಧಿಸಲು ಹೊರಟಾಗ ಪೊಲೀಸರ ಮೇಲೇ ಅಟ್ಯಾಕ್ ಮಾಡಲು ಮುಂದಾಗಿದ್ದಾನೆ! ಕಂಕನಾಡಿ ಪೊಲೀಸ್ ಇನ್ಸಪೆಕ್ಟರ್ ಅಶೋಕ್ ಭವಿತ್ ರಾಜ್ ನನ್ನು ಬಂಧಿಸಲು ತೆರಳಿದಾಗ ನಡೆದ ಘಟನೆ ಇದು! ಭವಿತ್ ರಾಜ್ ಮೇಲೆ ಎಂಟು ಪ್ರಕರಣಗಳಿವೆ. ಮಂಗಳೂರಿನ ನಟೋರಿಯಸ್ ರೌಡಿ ಪಾಳಯದಲ್ಲಿ ಭವಿತ್ ಗುರುತಿಸಿಕೊಂಡಿದ್ದ..

ಈ ಹಿಂದೆ ಮೇ ಹತ್ತರಂದು  ಸಿಸಿಬಿ ಸಬ್ ಇನ್ಸಪೆಕ್ಟರ್ ಸೂಪರ್ ಕಾಪ್ ಕಬ್ಬಾಳ್ ರಾಜ್ ರೌಡಿ ಗೌರಿ ಶಂಕರನ ಮೇಲೆ ಶೂಟ್ ಮಾಡಿ ಆತನ ಕಾಲಿಗೆ ಏಟು ಬಿದ್ದಿತ್ತು. ನಂತರ ಮೇ ಇಪ್ಪತ್ತೆಂಟರಂದು ಕಂಕನಾಡಿ ಪಿ.ಎಸ್.ಐ. ಪ್ರದೀಪ್ ರೌಡಿ ಫರೂಕ್ ಮೇಲೆ ಪಯರ್ ಮಾಡಿದ್ದರು! ಮಂಗಳೂರಿಗೆ ಕಮೀಷನರ್ ಆಗಿ ಸಂದೀಪ್ ಪಾಟೀಲ್ ಬಂದ ಮೂರೂವರೆ ಚಿಲ್ಲರೆ ತಿಂಗಳ ಅವಧಿಯಲ್ಲೇ ಮೂರು ಪಯರಿಂಗ್ ಆಗಿರುವುದು ಪಾತಕಿಗಳ ಎದೆ ನಡುಗಿಸಿದೆ..

ಬಂಧಿಸಲ್ಪಟ್ಟ ರೌಡಿಶೀಟರ್ ಭವಿತ್ ರಾಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಭೇಟಿ ನೀಡಿ ಮಾಹಿತಿಯನ್ನ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಮಾರಕಾಯುಧವನ್ನೂ ವಶಪಡಿಸಿಕೊಳ್ಳಲಾಗಿದೆ

ಭವಿತ್ ರಾಜ್ ಬೆನ್ನು ಹತ್ತಿದ್ದ ಪೊಲೀಸರು

ಜು.7ರಂದು ಮುಂಜಾನೆ 4 ಗಂಟೆಗೆ ಉಮರ್ ಫಾರೂಕ್, ಅಶ್ಪಕ್, ಲತೀಫ್ ಎನ್ನುವವರು 407 ವಾಹನದಲ್ಲಿ ಮಾವಿನ ಹಣ್ಣಿನ ಬಾಕ್ಸನ್ನು ತುಂಬಿಸಿ ಉಳಾಯಿಬೆಟ್ಟುವಿನಿಂದ ಮಂಗಳೂರು ಮಾರ್ಕೆಟ್‌ನ ಬರುತ್ತಿದ್ದರು. ಇದನ್ನು ನೋಡಿದ ಮೂವರು ದುಷ್ಕರ್ಮಿಗಳು ಅಕ್ರಮ ದನದ ಸಾಗಾಟ ವಾಹನವೆಂದು ಭಾವಿಸಿ ವಾಹನವನ್ನು ಬೆನ್ನಟ್ಟಿಕೊಂಡು ಬಂದಿದ್ದರು. ಈ ಸಂದರ್ಭ 407 ವಾಹನದಲ್ಲಿದ್ದವರು ಮಾವಿನ ಹಣ್ಣು ಎಂದು ಹೇಳಿದ್ದರೂ ಯುವಕರು ಮಾತ್ರ ಬೆನ್ನುಬಿಡದೆ ವಾಹನಕ್ಕೆ ತಡೆಯೊಡ್ಡಿದ್ದರು. ಅಪಾಯವನ್ನು ಅರಿತ ಚಾಲಕ ಸೇರಿದಂತೆ ಇಬ್ಬರು ಟೆಂಪೋವನ್ನು ಕುಲಶೇಖರ ಚೌಕಿ ಬಳಿ ನಿಲ್ಲಿಸಿ ಓಡಿ ಹೋಗಿದ್ದು, ಟೆಂಪೋದಲ್ಲಿದ್ದ ಫಾರೂಕ್ ಎಂಬವರಿಗೆ ದುಷ್ಕರ್ಮಿಗಳು ಹಲ್ಲೆಗೈದು ದರೋಡೆ ಮಾಡಿದ್ದರು. ಬಳಿಕ ದುಷ್ಕರ್ಮಿಗಳು 407 ಟೆಂಪೋವನ್ನು ಚಾಲನೆ ಮಾಡಿಕೊಂಡು ಕುಲಶೇಖರ ಚೌಕಿಯಿಂದ ಕುಲಶೇಖರ ಚರ್ಚ್ ಸಮೀಪ ಕೊಂಡೊಯ್ದು ನಿಲ್ಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದರು.

Leave a Comment