ಮಾಯಕದ ರೂಪಸಿ

ದೇವಲೋಕದಿ ಇಳಿದ ಅಪ್ಸರೆಯ ಚಂದ

ಕೆಂಪೇರಿದ ತುಟಿಗಳಲಿ ಇಣುಕುವ ಮುಗುಳ್ನಗೆಯ ಅಂದ

ಗುಳಿಕೆನ್ನೆಯ ಬೆಡಗಿ, ನಾಗರ ಜಡೆಯ ಸುಂದರಿ

ಕೋಲ್ಮಿಂಚಿನ ತೀಕ್ಷ್ಣತೆಯ ನಿನ್ನ ಕಣ್ಣೋಟಕ್ಕೆ ಸೋತೆ…

ಸುಗಂಧಿನಿಯೇ ತಾಳ್ಮೆಯೇ ನಿನಗೆ ಆಭರಣ

ಮಾತು ಕತ್ತಿಯ ಅಲಗು ಅದರೊಳಗಿದೆ ಪ್ರೀತಿಯ ಸೆರಗು

ನಿಷ್ಠುರಿ ನೀನು…  ಆದರೂ ಮಮತೆಯ ಮಡಿಲು.

ಮಂದಸ್ಮಿತ ಹೃದಯೇಶ್ವರೀ.. ನನ್ನಾಳುವ ರೂಪಸಿ

ಮಾಯಕದ ನೋಟ ಬೀರಿ ಕ್ಷಣ ಕ್ಷಣಕ್ಕೂ ಮಾಯವಾಗುವ ಮಾಯೆ

ಆದರೂ ಮನಸಿಗೆ ಮುದ ನೀಡುವ ರೂಪದರಸಿ

-ಹರೀಶ್‌ ಕಿರಣ್‌ ತುಂಗ

Leave a Comment