ಪಾಂಡೇಶ್ವರದ ಸಾಂಪ್ರದಾಯಿಕ ಕೃಷಿ ಸಂತ – ಮೋಹನ್ ಪೂಜಾರಿ

ನಮ್ಮೂರು ಸಾಸ್ತಾನ.. ಈ ಸಾಸ್ತಾನ ಸಾಧಕರನ್ನು ಹಾಗೂ ಉದ್ಯಮಿ, ಕೃಷಿಕರನ್ನು    ಸೃಷ್ಟಿಸಿದ ಊರು . ಇಂದಿನ ಅಂಕಣ ದಲ್ಲಿ ನಮ್ಮೂರಿನ ಪಾಂಡೇಶ್ವರ ಸಾಸ್ತಾನ ದ ಮೂಡಹಡು ಗ್ರಾಮದ  ಪ್ರಗತಿಪರ ಸಾಂಪ್ರದಾಯಿಕ ಕೃಷಿಕ ಮೋಹನ ಪೂಜಾರಿಯವರ ಕುರಿತು ಬರೆಯುತ್ತಿದ್ದೇನೆ.

ಮೂಡಹಡು ಪರಿಸರದ ಬಡ ಕುಟುಂಬದ ದಂಪತಿಗಳಾದ ಬಡಿಯ ಹಾಗೂ ಸರ್ವ ಪೂಜಾರ್ತಿಯ ದ್ವಿತೀಯ ಪುತ್ರನಾಗಿ ಜನಿಸಿದ ಇವರು ಮೂಲ ಶಿಕ್ಷಣ ವನ್ನು ಮೂಡಹಡು 3ನೇ ತರಗತಿ ತನಕ ಓದಿದರು.. ಮತ್ತೆ ಹೋಗಿದ್ದು ತಂದೆಯ ಜೊತೆಗೆ ಗದ್ದೆಯಲ್ಲಿ ಕೃಷಿಗೆ.

ಆ ಕಾಲದಲ್ಲಿ ತೀರ ಬಡತನವಾದ  ಕುಟುಂಬ ಅವಲಂಬಿಸಿದ್ದು ಕೃಷಿ ಯನ್ನ. ಮೂರನೇ ಕ್ಲಾಸಿಗೆ ಶಾಲೆ ಬಿಟ್ಟ ಮೋಹನ,  ತಂದೆಯ ಎರಡು ಮುದ್ದಾದ ಕೋಣಗಳ ಲಾಲನೆ ಪೋಷಣೆ ಜತೆ ತಂದೆಯೊಂದಿಗೆ ದುಡಿದರು. ಅಂದಿನಿಂದಲೂ ಇಂದಿನವರೆಗೂ ಸಾಂಪ್ರದಾಯಿಕ ಕೃಷಿಕನಾಗಿ ಬೆಳೆದುಬಂದವವರು ಮೋಹನ್‍ ಪೂಜಾರಿ.

ಎಲ್ಲ ಕೃಷಿಯ ಗದ್ದೆಗಳ ದಶ ದಿಕ್ಕುಗಳಲ್ಲಿ ವೈಜ್ಞಾನಿಕ ಯಾಂತ್ರಿಕ ಯಂತ್ರ ಟಿಲ್ಲರ್ ಸದ್ದು ಮೊಳಗುತ್ತಿದ್ದರೆ, ಅವುಗಳ ನಡುವೆ ಮೋಹನ್‍ ಪೂಜಾರಿಯವರ ಜೋಡ್ ಕೋಣಗಳ  ಹೆಜ್ಜೆಯ ಉಳಮೆಯ ಸೊಬಗು, ಕೋಣಗಳ ಜೊತೆ ಮಾತಿನ ದಾಟಿಯ ಕೂಗು ನೋಡುವುದೆ ಚಂದ. ಕೋಣಗಳ ಮೇಲೆ ಅಪಾರ ಪ್ರೀತಿ , ತನ್ನ ಪೂರ್ವಜರ ಆಚರಣೆಯ ಪ್ರತೀಕವಾಗಿ ಇಂದೂ ನಮ್ಮೂರ ಪ್ರಗತಿಪರ ಕೃಷಿಯಲ್ಲಿ ತೊಡಗಿಸಿ, ಸ್ಥಳೀಯರ ಪ್ರೀತಿಗಳಿಸಿದ್ದಾರೆ.

ಮೋಹನ ಪೂಜಾರಿಯವರು ತನ್ನ ಇಳಿ ವಯಸ್ಸಿನಲ್ಲಿಯೂ  ಕೂಡ ತನ್ನ ಬಲಿಷ್ಟವಾದ ಕೋಣಗನ್ನು ಪಳಗಿಸಿ , ಮಳೆ ಬಿಸಿಲು ಲೆಕ್ಕಿಸದೇ ಕೃಷಿಯಲ್ಲಿ ತೊಡಗಿಸಿಕೊಂಡು, ತನಗೇ ಬಂದ ಆದಾಯದಲ್ಲಿ ತನ್ನ ಮೂರು ಮಕ್ಕಳಿಗೆ ಪ್ರತಿಷ್ಠಿತ ವಿದ್ಯಾಸಂಸ್ಥೆಯಲಿ ಶಿಕ್ಷಣ ಕೊಟ್ಟು ಉತ್ತಮ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಆದರೂ ಇವರು ಈಗಲೂ ಕೃಷಿಭೂಮಿಯಲ್ಲಿ ದುಡಿಯುತ್ತಾರೆ.  ಕೋಣಗಳ ನಿತ್ಯ ಆರೈಕೆ ಮಾಡುತ್ತಾರೆ. ಇವರ ಕೃಷಿ ಪ್ರೀತಿಯೆನ್ನುವುದು ಇಂದಿನ ಯುವ ಸಮುದಾಯಕ್ಕೆ ಆದರ್ಶನೀಯ.

 ಅಭಿಜಿತ್ ಪಾಂಡೇಶ್ವರ್

Leave a Comment