ಕುಂದಾಪುರ: ಇಲ್ಲಿನ ಜ್ಯೂನಿಯರ್ ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ
ಅಗಲಿದ ಹೆಮ್ಮೆಯ ಕಲಾವಿದ ಅಭಿನವ ಸಾಲ್ವ
ಹುಡುಗೋಡು ಚಂದ್ರಹಾಸ ಇವರಿಗೆ ರವಿವಾರ ನುಡಿ ನಮನ ಸಲ್ಲಿಸಲಾಯಿತು.


ಯಕ್ಷಗಾನದ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ,ಚಂದ್ರಹಾಸರ ಒಡನಾಡಿ ಕಲಾವಿದ ತುಂಬ್ರಿ ಭಾಸ್ಕರ,ವಾಸ್ತುತಜ್ನ ಬಸವರಾಜ್ ಶೆಟ್ಟಿಗಾರ್, ಕಲಾಕ್ಷೇತ್ರ ಕುಂದಾಪುರದ ಅದ್ಯಕ್ಷ ಕಿಶೋರ ಕುಂದಾಪುರ , ರಂಗಸ್ಥಳ ಟ್ರಸ್ಟ್ ನ ಗೌರವ ಅದ್ಯಕ್ಷ ಉದಯ ಶೆಟ್ಟಿ ಪಡುಕೆರೆ, ಟ್ರಸ್ಟ್ ನ ಅದ್ಯಕ್ಷ ರಾಘವೇಂದ್ರ ಉಡುಪ, ಸ್ಥಾಪಕಾದ್ಯಕ್ಷ ಗಣೇಶ ಕಾಮತ್ ಉಳ್ಳೂರು, ಉಪಸ್ಥಿತರಿದ್ದರು ಯಕ್ಷಾಭಿಮಾನಿಗಳಿಗೆ ಗೌರವ ನಮನಕ್ಕೆ ಅವಕಾಶ ಕಲ್ಪಿಸಲಾಯಿತು. ರಾಘವೇಂದ್ರ ಚಾತ್ರಮಕ್ಕಿ ನಿರೂಪಿಸಿ, ಗಜೇಂದ್ರ ಆಚಾರ್ ಕೋಣಿ ವಂದಿಸಿದರು.