ಈ ನೆಲದ ಆಧ್ಯಾತ್ಮ ಇಡೀ ಜಗತ್ತಿಗೆ ಧಾರೆಯೂ ದಾರಿಯೂ ಆದದ್ದು..

ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ಒಂದಷ್ಟು ಪುಸ್ತಕವನ್ನ ಬಿಟ್ಟೂ ಬಿಡದೆ ಓದುತ್ತಿದ್ದೇನೆ.. ತೀರ್ಥರಾಮ ವಳಲಂಬೆ ಬರೆದಿರುವ ಅವಿಷ್ಟೂ ಪುಸ್ತಕಗಳು ಹೊಸ ಹೊಳಹಿನೊಂದಿಗೆ ಆಧ್ಯಾತ್ಮಿಕ ಜಗಕ್ಕೆ ಪ್ರವೇಶವನ್ನ ಕೊಡುತ್ತದೆ..  ನಿನ್ನೆಯಷ್ಟೇ  ’ದಿ ಹಾರ್ಟ್ ಫುಲ್ ನೆಸ್ ವೇ ’ ನನ್ನ ಬಂದು ತಲುಪಿದೆ.. ಹಿಮಾಲಯದ ಗುರುವಿನ ಗರಡಿಯಲ್ಲಿ, ಯೋಗಿಯ ಆತ್ಮಕಥೆ, ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ನಾನಿನ್ನೂ ಓದಿರಲೇ ಇಲ್ಲ!

ಈ ನಡುವೆ ಒಕಾವ ಬರೆಯುವ ಪುಸ್ತಕಗಳು ಇಷ್ಟವಾಗುತ್ತಿವೆ.. ನಿಮಗೆ ಓಂ ಸ್ವಾಮಿ ಗೊತ್ತಿರಲಿಕ್ಕೆ ಸಾಕು ಅವರ ಪುಸ್ತಕಗಳು, ರೇಣು ಮಹತಾನಿಯ ಪುಸ್ತಕ ಹೀಗೆ ನನ್ನ ಆಸಕ್ತಿ ಆಧ್ಯಾತ್ಮಿಕವಾಗಿ ಬದಲಾಗುತ್ತಿದೆ. ಮೊದಲಿಂದಲೂ ನಾನು ಆ ಬಗ್ಗೆ ಆಸಕ್ತನೇ.. ಕೆಲವು ಮಂತ್ರಗಳ ಬಗ್ಗೆಲ್ಲ ಭ್ರಮೆಗಳಿದ್ದಿದ್ದವು. ಆದರೆ ಮಂತ್ರಗಳೂ ಅದರದ್ದೇ ಆದ ಸ್ವರ ತರಂಗಗಳ ಮೂಲಕ ಪಠಿಸಿದರೆ ನಿಜಕ್ಕೂ ಅದ್ಭುತ ಪ್ರಭಾವಗಳನ್ನ ಬೀರಲಿವೆ..  ಹಿಂದೆದೋ ವೇದ ಹೇಳಿದ್ದನ್ನ ಇಂದು ಸೈಂಟಿಸ್ಟುಗಳು ಹೇಳುತ್ತಿದ್ದಾರೆ..

ವಿಷ್ಣು ಸಹಸ್ರನಾಮವನ್ನ ಸರಿಯಾಗಿ ಹೇಳಿದರೆ ಎಂಥಾ ರೋಗವನ್ನ ಬೇಕಿದ್ದರೂ ಗುಣಪಡಿಸಿಕೊಳ್ಳಬಹುದು ಎನ್ನುವುದಕ್ಕೆ ಆಧಾರಗಳಿವೆ.. ಜಿಸರ್ ಹದಿನೇಳು ವರ್ಷ ಭಾರತದಲ್ಲಿದ್ದ, ನಳಂದ, ತಕ್ಷಶಿಲದಲ್ಲಿ ಅಧ್ಯಯನ ನಡೆಸಿದ್ದ.. ಚರ್ಚುಗಳಲ್ಲಿರುವ ಬೆಲ್ ಏಸು ಭಾರತದಿಂದ ಕೊಂಡೊಯ್ದದ್ದು! ಗಂಟೆಯನ್ನ ಬಳಸುತ್ತಿದ್ದವರು ಭೌದ್ಧರು!.. ಜೀಸಸ್ ಹುಟ್ಟಿದಾಗ ಪೂರ್ವದೇಶದಿಂದ ಮೂವರು ಮಹಾಪಂಡಿತರು ಬಂದು ಆತನನ್ನ ಕಂಡು ಆಶಿರ್ವದಿಸಿ ಹೋಗುತ್ತಾರೆ ಎನ್ನುವುದು ಬೈಬಲ್ಲಿನಲ್ಲೇ ಉಲ್ಲೇಖವಿದೆ ಎನ್ನಲಾಗುತ್ತದೆ! ಆ ಪಂಡಿತರು ಋಷಿಗಳಾಗಿದ್ದರು..

 ಜೀಸಸ್ ರೇಖಿಯನ್ನ ಕಲಿತಿದ್ದ ಅದನ್ನ ಭಾರತದಿಂದ ಕಲಿತು ಹೋಗಿ ರೋಗಗಳನ್ನ ಗುಣಪಡಿಸುತ್ತಿದ್ದ..  ಭಾರತೀಯತೆ ಇಷ್ಟವಾಗುವುದು ಇಂಥಹುದೇ ಕಾರಣಕ್ಕೆ.. ಪ್ಲಾಸ್ಟಿಕ್ ಸರ್ಜರಿಯನ್ನ ಜಗತ್ತಿಗೆ ಕಲಿಸಿದ್ದು ಭಾರತ.. ಜಗತ್ತಿನ ಜನರೆಲ್ಲಾ ಮರ ಪೊಟರೆಗಳಲ್ಲಿದ್ದಾಗ ನಾವು ಹರಪ್ಪ, ಮೆಹಂಜೋದಾರೋದಂತಹ ಅರಮನೆಗಳಲ್ಲಿ ಬದುಕು ಕಟ್ಟಿಕೊಂಡ ನಾಗರೀಕತೆಯನ್ನ ಬದುಕುತ್ತಿದ್ದವರು. ಹೋಮವನ್ನ ಕಂಡಾತುಂಡವಾಗಿ ಅಪಹಾಸ್ಯ ಮಾಡುವವರಿದ್ದಾರೆ ಆದರೆ ಅಗ್ನಿಹೋತ್ರ ಮಾಡಿದ ಮನೆಯಲ್ಲಿ ನೆಗಿಟೀವ್ ಎನರ್ಜಿ ನಾಶವಾಗುತ್ತದೆ..

ಭೂಪಾಲ್ ಅಗ್ನಿ ದುರಂತವಾದಾಗ ಹೋಮ ಮಾಡುತ್ತಿದ್ದ ಮನೆಯಲ್ಲಿ ಏನೂ ಆಗದೆ ಬದುಕುಳಿದರು ಎನ್ನುವ ಕಥೆ ನಾವು ಓದಿದವರೇ.. ಯಾವ ದಿವಸ ಗ್ರಹಣ ಎನ್ನುವುದನ್ನ ಗ್ರಹಿಸುವುದು ನಮ್ಮ ಪೂರ್ವಜರಿಗೆ ಅತ್ಯಂತ ಸುಲಭವಾಗಿತ್ತು.. ಚರ್ಮದ ಪದರಗಳು ಐದು ಎಂದವರು ನಾವು! ಆಧುನಿಕ ವಿಜ್ಞಾನವಿನ್ನೂ ಅದರ ಅನ್ವೇಶಣೆಯಲ್ಲಿದೆ.. ಪುಷ್ಪಕ ವಿಮಾನ ಬರಿಯ ಕಲ್ಪನೆ ಅಲ್ಲವೋ ಅಣ್ಣ! ಸಸ್ಯಕ್ಕೆ ಜೀವವಿದೆ ಎನ್ನುವುದನ್ನ ಜಗಧೀಶ್ ಚಂದ್ರ ಬೋಸ್ ಸಾಬೀತು ಪಡಿಸುವ ತನಕ ಜಗತ್ತಿಗೆ ಆ ಸತ್ಯವೇ ಗೊತ್ತಿರಲಿಲ್ಲ! ಆದರೆ ಬೋಸ್ ಹುಟ್ಟುವ ಹಲವು ಸಾವಿರ ವರುಷಗಳ ಹಿಂದೇ ಸಸ್ಯಗಳಿಗೂ ಜೀವವಿದೆ ಎನ್ನುವುದನ್ನ ಈ ಮಣ್ಣು ಸಾರಿತ್ತು. ಭೂಮಿಯ ಹುಟ್ಟು, ಬ್ರಹ್ಮಾಂಡದ ಸೃಷ್ಠಿಯ ಬಗ್ಗೆ ಆಧುನಿಕ ವಿಜ್ಞಾನ ಏನು ಹೇಳುತ್ತಿದೆಯೋ ? ಅದನ್ನ ವೇದ ಎಂದೋ ಸ್ಪಷ್ಟವಾಗಿ ಹೇಳಿದ್ದನ್ನ ಯಾರಿಂದಲೂ ನಿರಾಕರಿಸುವುದು ಸಾಧ್ಯವಿಲ್ಲ!

ಕೋರ್ಪನಿಕಸ್ ಮತ್ತು ಗೆಲಿಲಿಯೋ ಭೂಮಿ ಚಪ್ಪಟೆಯಾಗಿಲ್ಲ ದುಂಡಗಿದೆ ಎಂದಿದ್ದಕ್ಕೆ ಅವರನ್ನ ಶಿಕ್ಷಿಸಲಾಯಿತು! ಆದರೆ ಭೂಮಿ ಗುಂಡಗಿದೆ ಎನ್ನುವುದನ್ನ ವರಹವತಾರದ ಪರಿಕಲ್ಪನೆಯೇ ಕಟ್ಟಿಕೊಡುತ್ತದೆ. ಚಂಡಿನಂತಹ ಭೂಮಿಯನ್ನ ವರಹ ತನ್ನ ಕೋರೆ ದಾಡೆಯಲ್ಲಿ ಮೇಲೆತ್ತಿ ತರುತ್ತಾನೆ..  ನಮ್ಮನ್ನ ಮೀರಿದ ಜಗತ್ತು ಇನ್ನೂ ಇದೆ. ಅನ್ಯಗ್ರಹ ಜೀವಿಗಳೂ ಇದ್ದಾರೆ ಎನ್ನುವುದರ ಬಗ್ಗೆ ಇಂದು ಗಟ್ಟಿಯಾದ ಚರ್ಚೆಗಳು ನಡೆಯುತ್ತಿವೆ ಆದರೆ ಅಖಿಲಾಂಡಕೋಟಿ ಬ್ರಹ್ಮಾಂಡ ಎನ್ನುವ ಪರಿಕಲ್ಪನೆಯನ್ನ ನಮ್ಮ ಸ್ತೋತ್ರಗಳಲ್ಲಿ ನೀವು ಗಮನಿಸಿರಬಹುದು.. ಈ ನೆಲದ ಆಧ್ಯಾತ್ಮ ಅಸಾಮಾನ್ಯವಾದದ್ದು. ಇಡೀ ಜಗತ್ತಿಗೆ ಧಾರೆಯೂ ದಾರಿಯೂ ಆದದ್ದು..  ಹಾಗಾಗಿ ಈ ದೇಶದ ಮಣ್ಣ ಕಣ ಕಣವೂ ಪವಿತ್ರವಾದದ್ದು.. 

-ವಸಂತ್ ಗಿಳಿಯಾರ್

Leave a Comment